Winter Styling 2026: ಚಿಣ್ಣರ ಚಳಿಗಾಲದ ಆಕರ್ಷಕ ಸ್ಟೈಲಿಂಗ್ಗೆ ಇಲ್ಲಿವೆ ಟಿಪ್ಸ್
ವಿಂಟರ್ನಲ್ಲಿ ಮಕ್ಕಳ ಡ್ರೆಸ್ ಸ್ಟೈಲಿಂಗ್ಗಾಗಿ ಪೋಷಕರು ಒಂದಿಷ್ಟು ಸೂತ್ರಗಳನ್ನು ಪಾಲಿಸಲೇಬೇಕು. ವಿಂಟರ್ ಸೀಸನ್ನಲ್ಲಿ ಆದಷ್ಟೂ ಈ ಸೀಸನ್ಗೆ ಹೊಂದುವಂತಹ ಉಡುಗೆಗಳನ್ನು ಆಯ್ಕೆ ಮಾಡಿ. ಚಳಿಗಾಳಿಯಿಂದ ದೇಹವನ್ನು ಬೆಚ್ಚಗಿಡುವ ಡ್ರೆಸ್ಗಳನ್ನು ಖರೀದಿಸಿ ಹಾಗೂ ಮಕ್ಕಳಿಗೆ ಈ ಬಗ್ಗೆ ತಿಳುವಳಿಕೆ ನೀಡಿ, ಪ್ರೇರೇಪಿಸಿ. ಈ ಕುರಿತು ಸ್ಟೈಲಿಸ್ಟ್ಗಳು ಒಂದಿಷ್ಟು ಸಿಂಪಲ್ ಟಿಪ್ಸ್ ನೀಡಿದ್ದಾರೆ.
ಮಕ್ಕಳ ಡ್ರೆಸ್ (ಚಿತ್ರಕೃಪೆ: ಪಿಕ್ಸೆಲ್) -
ಚಳಿಗಾಲದಲ್ಲಿ ಮಕ್ಕಳಿಗೆ ಇಷ್ಟವಾಗುವಂತೆ ಡ್ರೆಸ್ಗಳನ್ನು ಸ್ಟೈಲಿಂಗ್ ಮಾಡಿದಾಗ ಮಾತ್ರ ಮಕ್ಕಳು ನೋಡಲು ಆಕರ್ಷಕವಾಗಿ ಕಾಣಿಸುತ್ತಾರೆ. ಈ ಕುರಿತಂತೆ ಕಿಡ್ಸ್ ಸ್ಟೈಲಿಸ್ಟ್ಗಳು ಒಂದಿಷ್ಟು ಸಿಂಪಲ್ ಟಿಪ್ಸ್ ನೀಡಿದ್ದಾರೆ.
ವಿಂಟರ್ ಸೀಸನ್ಗೆ ತಕ್ಕಂತೆ ಆಯ್ಕೆ ಇರಲಿ
ವಿಂಟರ್ ಸೀಸನ್ನಲ್ಲಿ ಆದಷ್ಟೂ ಈ ಸೀಸನ್ಗೆ ಹೊಂದುವಂತಹ ಉಡುಗೆಗಳನ್ನು ಆಯ್ಕೆ ಮಾಡಿ. ಚಳಿಗಾಳಿಯಿಂದ ದೇಹವನ್ನು ಬೆಚ್ಚಗಿಡುವ ಡ್ರೆಸ್ಗಳನ್ನು ಖರೀದಿಸಿ ಹಾಗೂ ಮಕ್ಕಳಿಗೆ ಈ ಬಗ್ಗೆ ತಿಳುವಳಿಕೆ ನೀಡಿ, ಪ್ರೇರೇಪಿಸಿ.
ಆಕರ್ಷಕ ವಿಂಟರ್ ಉಡುಗೆ ಆಯ್ಕೆ ಮಾಡಿ
ಮಕ್ಕಳಿಗೆ ಆದಷ್ಟೂ ವಿಂಟರ್ ಉಡುಪುಗಳನ್ನು ಆಯ್ಕೆ ಮಾಡುವಾಗ ಅವರಿಗೆ ಇಷ್ಟವಾಗುವಂತಹ ಕಾರ್ಟೂನ್ ಕ್ಯಾರೆಕ್ಟರ್ ಇಲ್ಲವೇ ಅವರ ಚಾಯ್ಸ್ಗೆ ಹೊಂದುವಂತಹ ಚಿತ್ತಾರಗಳಿರುವಂತಹ ಉಡುಗೆಗಳನ್ನು ಆಯ್ಕೆ ಮಾಡಿ. ಇವು ಮಕ್ಕಳಿಗೆ ಚೆನ್ನಾಗಿ ಕಾಣಿಸುತ್ತವೆ.
ಲೇಯರ್ ಉಡುಪಿನ ಪ್ರಾಮುಖ್ಯತೆ ಬಗ್ಗೆ ತಿಳಿಸಿ
ವಿಂಟರ್ನಲ್ಲಿ ಬೆಚ್ಚಗಿನ ಉಡುಪು ಧರಿಸಬೇಕೆಂದು ತಿಳಿಸಿ. ಒಂದರ ಮೇಲೊಂದು ಅಂದರೇ ಸ್ವೆಟರ್, ಕಾರ್ಡಿಗಾನ್, ಕೋಟ್ ಹಾಗೂ ಟೋಪಿ ಸೇರಿದಂತೆ ಲೇಯರ್ ಲುಕ್ ಪ್ರಾಮುಖ್ಯತೆ ತಿಳಿಸಿ. ಅವನ್ನೇ ಸ್ಟೈಲಿಂಗ್ ಮಾಡಿ.
ವಿಂಟರ್ ಉಡುಪುಗಳು ಸಾಫ್ಟಾಗಿರಲಿ
ವಿಂಟರ್ನಲ್ಲಿ ದೇಹಕ್ಕೆ ಚುಚ್ಚುವ, ಕಿರಿಕಿರಿಯುಂಟಾಗುವ ಹಾಗೂ ಅಂಟುವ ಉಡುಪುಗಳು ಮಕ್ಕಳಿಗೆ ಖಂಡಿತ ಬೇಡ. ಇದರಿಂದ ನೋವು ಹಾಗೂ ಅಲರ್ಜಿ ಉಂಟಾಗಬಹುದು. ಉಡುಗೆಗಳು ಸಾಫ್ಟಾಗಿರಲಿ.
ಖುದ್ದು ಸ್ಟೈಲಿಂಗ್ ಮಾಡಿಕೊಳ್ಳಲು ಕಲಿಸಿ ಕೊಡಿ
ಮಕ್ಕಳಿಗೆ ಅವರಾಗಿಯೇ ಡ್ರೆಸ್ ಮಾಡಿಕೊಳ್ಳಲು ಬಿಟ್ಟುಬಿಡಿ. ತಪ್ಪಾದಲ್ಲಿ ತಿಳಿ ಹೇಳಿ, ತಿದ್ದಿ. ಇದರಿಂದ ಅವರು ಡ್ರೆಸ್ಸಿಂಗ್ ವಿಷಯದಲ್ಲಿ ಮುಂದೊಮ್ಮೆ ಪರಾವಲಂಬಿಯಾಗುವುದನ್ನೂ ತಪ್ಪಿಸಬಹುದು.
ಮಿನಿಮಲ್ ಆಗಿರಲಿ ಮಕ್ಕಳ ಆಕ್ಸೆಸರೀಸ್
- ಮಕ್ಕಳಿಗೆ ಕಿರಿಕಿರಿಯಾಗದಂತಹ ಮಿನಿಮಲ್ ಆಕ್ಸೆಸರೀಸ್ ಹಾಕಿಸಿ.
- ಚುಚ್ಚುವಂತಹ ಜ್ಯುವೆಲರಿಗಳನ್ನು ಕೊಡಸಲೇಬೇಡಿ. ಆದಷ್ಟೂ ಅವರ ಸ್ಟೈಲಿಂಗ್ನಲ್ಲಿ ಜ್ಯುವೆಲರಿ ಅವಾಯ್ಡ್ ಮಾಡಿ.