ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Waqf Bill: ಕರ್ನಾಟಕದಲ್ಲಿ ವಕ್ಫ್‌ ಆಸ್ತಿ ಕಬಳಿಸಿದ ನಾಯಕರ ಹೆಸರು ಬಹಿರಂಗ; ಪಟ್ಟಿ ಇಲ್ಲಿದೆ

Radha Mohan Das Agarwal: ಸುದೀರ್ಘ ಚರ್ಚೆ ಬಳಿಕ ವಕ್ಫ್ ತಿದ್ದುಪಡಿ ಮಸೂದೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ. ಇದೇ ವೇಳೆ ಕರ್ನಾಟಕದ ಬಿಜೆಪಿ ಉಸ್ತುವಾರಿ ಹಾಗೂ ರಾಜ್ಯಸಭಾ ಸದಸ್ಯ ರಾಧಾ ಮೋಹನದಾಸ್‌‍ ಅಗರ್ವಾಲ್‌ ರಾಜ್ಯದಲ್ಲಿ ಯಾವ ಯಾವ ಕಾಂಗ್ರೆಸ್‌ ನಾಯಕರು ವಕ್ಫ್ ಆಸ್ತಿಯನ್ನು ಕಬಳಿಸಿದ್ದಾರೆ ಎನ್ನುವ ಪಟ್ಟಿ ಮಂಡಿಸಿದ್ದಾರೆ.

ಕರ್ನಾಟಕದಲ್ಲಿ ವಕ್ಫ್‌ ಆಸ್ತಿ ಕಬಳಿಸಿದ ನಾಯಕರ ಹೆಸರು ಬಹಿರಂಗ

ರಾಧಾ ಮೋಹನದಾಸ್‌‍ ಅಗರ್ವಾಲ್‌.

Profile Ramesh B Apr 4, 2025 5:43 PM

ಹೊಸದಿಲ್ಲಿ: ಸತತ 12 ಗಂಟೆಗಳ ಚರ್ಚೆಯ ನಂತರ ರಾಜ್ಯಸಭೆ (Rajya Sabha)ಯಲ್ಲಿ ಶುಕ್ರವಾರ (ಏ. 4) ಮುಂಜಾನೆ ಮತದಾನದ ಮೂಲಕ ವಕ್ಫ್ ತಿದ್ದುಪಡಿ ಮಸೂದೆ 2025 (Waqf Amendment Bill 2025) ಅಂಗೀಕರಿಸಲಾಗಿದೆ. ಮಸೂದೆಯ ಪರ 128 ಸದಸ್ಯರು ಮತ ಚಲಾಯಿಸಿದರೆ, 95 ಸದಸ್ಯರು ಈ ಮಸೂದೆಯನ್ನು ವಿರೋಧಿಸಿದರು. ಗುರುವಾರ ಈ ಮಸೂದೆಯು ಲೋಕಸಭೆಯಲ್ಲಿಯೂ ಅಂಗೀಕಾರವಾಗಿದ್ದು, ಎನ್‌ಡಿಎ ಮಿತ್ರಕೂಟ ಸೇರಿ 288 ಸಂಸದರು ಈ ಮಸೂದೆಯ ಪರವಾಗಿ ಮತ ಚಲಾಯಿಸಿದ್ದರು. ವಿಪಕ್ಷಗಳ 232 ಸದಸ್ಯರು ಈ ಮಸೂದೆಯ ವಿರುದ್ಧ ಮತ ಚಲಾಯಿಸಿದ್ದರು. ಇದೇ ವೇಳೆ ಕರ್ನಾಟಕದ ಬಿಜೆಪಿ ಉಸ್ತುವಾರಿ ಹಾಗೂ ರಾಜ್ಯಸಭಾ ಸದಸ್ಯ ರಾಧಾ ಮೋಹನದಾಸ್‌‍ ಅಗರ್ವಾಲ್‌ (Radha Mohan Das Agarwal), ರಾಜ್ಯದಲ್ಲಿ ಯಾವ ಯಾವ ಕಾಂಗ್ರೆಸ್‌ ನಾಯಕರು ವಕ್ಫ್ ಆಸ್ತಿಯನ್ನು ಕಬಳಿಸಿದ್ದಾರೆ ಎನ್ನುವ ಪಟ್ಟಿ ಮಂಡಿಸಿದರು.

ʼʼಕರ್ನಾಟಕದಲ್ಲಿ ಯಾರ‍್ಯಾರು ವಕ್ಫ್ ಆಸ್ತಿಯನ್ನು ಕಬಳಿಸಿದ್ದಾರೆ ಎನ್ನುವ ವಿವರ ಜಂಟಿ ಸದನ ಸಮಿತಿ (JPS) ಉಲ್ಲೇಖವಾಗಿದೆ. 14 ನಾಯಕರ ಹೆಸರಿದೆ. ಆ ವರದಿಯನ್ನು ನಾನು ಓದುತ್ತೇನೆʼʼ ಎಂದ ರಾಧಾ ಮೋಹನದಾಸ್‌‍, 13 ನಾಯಕರ ಹೆಸರು ಓದಿದರು.



ಈ ಸುದ್ದಿಯನ್ನೂ ಓದಿ: Waqf Amendment Bill: ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮೇಲಿನ ಚರ್ಚೆ ಯಾವ ರೀತಿ ಇತ್ತು? ಇಲ್ಲಿದೆ ಸಂಪೂರ್ಣ ವರದಿ

ಪಟ್ಟಿಯಲ್ಲಿ ಯಾರ ಹೆಸರಿದೆ?

  1. ಖಮರುಲ್‌ ಇಸ್ಲಾಂ – ಮಾಜಿ ಸಚಿವ
  2. ನರಸಿಂಗರಾವ್‌ ಸೂರ್ಯವಂಶಿ – ಮಾಜಿ ಸಂಸದ
  3. ಸಿ.ಎಂ.ಇಬ್ರಾಹಿಂ – ಮಾಜಿ ಕೇಂದ್ರ ಸಚಿವ
  4. ಕೆ.ರೆಹಮಾನ್‌ ಖಾನ್‌ – ಮಾಜಿ ಕೇಂದ್ರ ಸಚಿವ
  5. ಅಬ್ದುಲ್ಲಾ ಸಲೀಂ – ವಕ್ಫ್ ಬೋರ್ಡ್‌ ಅಧಿಕಾರಿ
  6. ಎನ್‌.ಎ.ಹ್ಯಾರೀಸ್‌‍ – ಶಾಸಕ
  7. ಎಂ.ಎ.ಖಲೀದ್‌ – ಮಾಜಿ ಅಧಿಕಾರಿ
  8. ಮಮ್ತಾಜ್‌ ಅಹದ್‌ ಖಾನ್‌ – ಅಧ್ಯಕ್ಷ
  9. ಮೊಹಮದ್‌ ಸನುಲ್ಲಾ – ಐಎಎಸ್‌‍ ಅಧಿಕಾರಿ
  10. ಸಿಂಧೂಸ್‌‍ ಗಿರಿ – ಮಾಜಿ ಸಚಿವ
  11. ಎಂ.ಎಸ್‌‍. ಬಾಷಾ – ಐಎಂಐಸಿಎಸ್‌‍
  12. ಖನೀಜಾ ಫಾತಿಮಾ – ಶಾಸಕಿ
  13. ಸಿ.ಕೆ.ಜಾಫರ್‌ ಷರೀಫ್‌ – ಕೇಂದ್ರದ ಮಾಜಿ ಸಚಿವ

ಈ ವೇಳೆ ಅವರು 1 ಹೆಸರನ್ನು ಬಹಿರಂಗಪಡಿಸಲಿಲ್ಲ. ʼʼಆ ಹೆಸರು ಎಲ್ಲರಿಗೂ ಗೊತ್ತಿದೆ. ನಾನು ಸದನದ ಮರ್ಯಾದೆ ಕಾರಣಕ್ಕೆ ನಾನು ಆ ಹೆಸರು ತಿಳಿಸುವುದಿಲ್ಲʼʼ ಎಂದು ರಾಧಾ ಮೋಹನದಾಸ್‌ ಅಗರ್ವಾಲ್‌ ವಿವರಿಸಿದರು. ಸದ್ಯ ವಕ್ಫ್‌ ತಿದ್ದುಪಡಿ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿ, ಕೇಂದ್ರದ ವಿರುದ್ದ ಕಿಡಿಕಾರುತ್ತಿರುವ ಕಾಂಗ್ರೆಸ್‌ ರಾಧಾ ಮೋಹನದಾಸ್‌‍ ಅವರ ಹೇಳಿಕೆಯಿಂದ ತೀವ್ರ ಮುಜುಗರಕ್ಕೀಡಾಗಿದೆ.

ಸಚಿವ ಕಿರಣ್ ರಿಜಿಜು ಹೇಳಿದ್ದೇನು?

ರಾಜ್ಯಸಭೆಯಲ್ಲಿ ಮಾತನಾಡಿದ ಸಚಿವ ಕಿರಣ್‌ ರಿಜಿಜು ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿದರು. “ವಕ್ಫ್ (ತಿದ್ದುಪಡಿ) ಮಸೂದೆಯ ಬಗ್ಗೆ ವಿರೋಧ ಪಕ್ಷಗಳು ಜನರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿವೆ. ಇದು ಮುಸ್ಲಿಂ ಸಮುದಾಯದ ಕೋಟ್ಯಂತರ ಜನರಿಗೆ ಪ್ರಯೋಜನವಾಗಲಿದೆ. ಜಂಟಿ ಸಂಸದೀಯ ಸಮಿತಿಯು ನೀಡಿರುವ ಸಲಹೆಗಳನ್ನು ಆಧರಿಸಿ ಮಸೂದೆಯನ್ನು ಪರಿಷ್ಕರಿಸಲಾಗಿದೆ. ವಕ್ಫ್ ಆಸ್ತಿಯಲ್ಲಿ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ಒಂದು ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸಿದ ನಂತರ, ಅದರ ಸ್ಥಿತಿಯನ್ನು ಬದಲಾಯಿಸಲಾಗುವುದಿಲ್ಲ” ಎಂದು ರಿಜಿಜು ಹೇಳಿದರು.