ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

14 ವರ್ಷದ ವಿದ್ಯಾರ್ಥಿನಿಯ ಜೀವನವನ್ನೇ ಕತ್ತಲಿಗೆ ದೂಡಿದ ಶಿಕ್ಷಕಿ; ಹೋಮ್‌ ವರ್ಕ್‌ ಮಾಡದ್ದಕ್ಕೆ ಕಪಾಳಕ್ಕೆ ಹೊಡೆದ ಪೆಟ್ಟಿಗೆ ಶಾಶ್ವತವಾಗಿ ಕಿವುಡಾದ ಬಾಲಕಿ

ಗಾಂಧಿನಗರದ ಸೆಕ್ಟರ್–28ರಲ್ಲಿರುವ ಖಾಸಗಿ ಶಾಲೆಯಲ್ಲಿ ವಿಜ್ಞಾನ ಶಿಕ್ಷಕಿ ಪಾರುಲ್‌ಬೆನ್, ಹೋಮ್‌ವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ 14 ವರ್ಷದ ವಿದ್ಯಾರ್ಥಿನಿಯ ಎಡಗೆನ್ನೆಗೆ ಜೋರಾಗಿ ಕಪಾಳಮೋಕ್ಷ ಮಾಡಿದ್ದಾಳೆ. ಆ ಹೊಡೆತದಿಂದ ವಿದ್ಯಾರ್ಥಿನಿಯ ಕಿವಿಯ ತಮಟೆ ಹರಿದು ಹೋಗಿದೆ. ನಂತರ ವೈದ್ಯರು ಬಾಲಕಿಯು ಶಾಶ್ವತವಾಗಿ ಶ್ರವಣಶಕ್ತಿ ಕಳೆದುಕೊಂಡಿದ್ದಾಳೆ ಎಂದು ದೃಢಪಡಿಸಿದ್ದಾರೆ.

ಶಿಕ್ಷಕಿ ಹೊಡೆದ ಏಟಿಗೆ ಬಾಲಕಿಯ ಕಿವಿ ಡಮಾರ್

ಸಾಂದರ್ಭಿಕ ಚಿತ್ರ -

Profile
Sushmitha Jain Feb 4, 2026 8:43 PM

ಗಾಂಧಿನಗರ, ಫೆ. 4: ಶಿಕ್ಷಕಿಯ ಕ್ಷಣಿಕ ಕೋಪದಿಂದಾಗಿ ಪುಟ್ಟ ಬಾಲಕಿಯೊಬ್ಬಳು ಶಾಶ್ವತವಾಗಿ ಕಿವುಡಿಯಾಗಿದ್ದಾಳೆ. ಹೌದು...ಹೋಮ್‌ವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ 9ನೇ ತರಗತಿ ವಿದ್ಯಾರ್ಥಿನಿಗೆ ಖಾಸಗಿ ಶಾಲಾ ಶಿಕ್ಷಕಿಯು ಕಪಾಳಮೋಕ್ಷ ಮಾಡಿದ್ದು, ಇದರ ರಭಸಕ್ಕೆ ಬಾಲಕಿಯ ಕಿವಿಯ ತಮಟೆ ಹರಿದು ಹೋಗಿ, ಶಾಶ್ವತವಾಗಿ ಶ್ರವಣಶಕ್ತಿ ಕಳೆದುಕೊಂಡಿದ್ದಾಳೆ ಎಂದು ವರದಿಗಳು ತಿಳಿಸಿವೆ.

ವರದಿಗಳ ಪ್ರಕಾರ, ಗಾಂಧಿನಗರದ ಸೆಕ್ಟರ್–28ರಲ್ಲಿರುವ ಖಾಸಗಿ ಶಾಲೆಯಲ್ಲಿ ವಿಜ್ಞಾನ ಶಿಕ್ಷಕಿ ಪಾರುಲ್‌ಬೆನ್, ಹೋಮ್‌ವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ 14 ವರ್ಷದ ವಿದ್ಯಾರ್ಥಿನಿಯ ಎಡಗೆನ್ನೆಗೆ ಜೋರಾಗಿ ಕಪಾಳಮೋಕ್ಷ ಮಾಡಿದ್ದಾಳೆ. ಆ ಹೊಡೆತದಿಂದ ವಿದ್ಯಾರ್ಥಿನಿಯ ಕಿವಿಯ ತಮಟೆ ಹರಿದು ಹೋಗಿದೆ. ನಂತರ ವೈದ್ಯರು ಬಾಲಕಿಯು ಶಾಶ್ವತವಾಗಿ ಶ್ರವಣ ಶಕ್ತಿ ಕಳೆದುಕೊಂಡಿದ್ದಾಳೆ ಎಂದು ದೃಢಪಡಿಸಿದ್ದಾರೆ.

ನ್ಯಾಯಾಲಯದ ಮೊರೆ ಹೋದ ಪೋಷಕರು

ಶಾಲೆಗಳಲ್ಲಿ ದೈಹಿಕ ಹಿಂಸೆ ನೀಡುತ್ತಿರುವ ಘಟನೆಗಳು ಸಾಮಾನ್ಯವಾಗಿದ್ದರೂ ಅತಿ ಕಡಿಮೆ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರುತ್ತವೆ. ಈ ಪ್ರಕರಣದಲ್ಲಿ ಶಿಕ್ಷಕಿಯ ಆ ಹೊಡೆತದಿಂದ ಶ್ರವಣದೋಷಕ್ಕೆ ಜಾರಿದ ತಮ್ಮ ಮಗಳಿಗಾಗಿ ಪೋಷಕರು ಕಾನೂನು ಹೋರಾಟಕ್ಕೆ ನಿರ್ಧರಿಸಿ ಪೊಲೀಸರಿಗೆ ದೂರು ನೀಡಿದರು. ಬಳಿಕ ಈ ಪ್ರಕರಣವನ್ನು ಗಾಂಧಿನಗರ ನ್ಯಾಯಾಲಯದ ಅಂಗಳಕ್ಕೆ ಬಂದಿತು.

ದಾರುಣ ಘಟನೆ, ಮೂವರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ವಿಚಾರಣೆಯ ವೇಳೆ, ಸರ್ಕಾರಿ ಅಭಿಯೋಜಕರು ಬಾಲಕಿಯ ಕಿವಿಯ ತಮಟೆ ಹರಿದಿರುವುದನ್ನು ದೃಢಪಡಿಸುವ ವೈದ್ಯಕೀಯ ವರದಿಗಳು, ಸಾಕ್ಷಿದಾರರ ಹೇಳಿಕೆ ಹಾಗೂ ಶಾಲಾ ದಾಖಲೆಗಳನ್ನು ನ್ಯಾಯಾಲಯದ ಮುಂದಿಟ್ಟರು.

ಶಿಕ್ಷಕಿಯು ತನ್ನ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರ ನಂಬಿಕೆಗೆ ಧಕ್ಕೆ ತಂದಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಈ ದಾಳಿ ಅಪಘಾತವಲ್ಲ ಅಥವಾ ತೀರಾ ಸಣ್ಣ ವಿಷಯವಲ್ಲ. ಬದಲಾಗಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ನಡೆದ ಗಂಭೀರ ಅಪರಾಧವೆಂದು ಪರಿಗಣಿದ ನ್ಯಾಯಾಲಯವು, ಶಿಕ್ಷಕಿ ಪಾರುಲ್‌ಬೆನ್‌ಗೆ ಮೂರು ವರ್ಷ ಮೂರು ತಿಂಗಳು ಜೈಲುಶಿಕ್ಷೆ ಹಾಗೂ 50,000 ರೂ. ದಂಡ ವಿಧಿಸಿದೆ.

ಅಲ್ಲದೆ ʼʼಶಿಕ್ಷಕಿ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಅಮಾಯಕ ಮಗುವಿಗೆ ದೈಹಿಕ ಹಿಂಸೆ ನೀಡುವುದು ಸರಿಯಲ್ಲ, ಇಂತಹ ಕೃತ್ಯಗಳನ್ನು ಸಹಿಸಲಾಗದು. ಈ ತರಹದ ಪ್ರಕರಣಗಳಲ್ಲಿ ಕಠಿಣ ಸಂದೇಶ ನೀಡುವುದು ಅಗತ್ಯ” ಎಂದು ನ್ಯಾಯಾಲಯ ಹೇಳಿದೆ.

ಶಾಲೆಗಳಿಗೆ ಎಚ್ಚರಿಕೆ

ನ್ಯಾಯಾಲಯದ ಈ ತೀರ್ಪು ಗುಜರಾತ್‌ನ ಶಿಕ್ಷಣ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಶಾಲೆಗಳೊಗಿನ ಹಿಂಸೆಯನ್ನು ‘ಶಿಸ್ತು’ ಎಂದು ನಿರ್ಲಕ್ಷಿಸುವ ದಿನಗಳು ಮುಗಿದಿವೆ ಎಂಬ ಸಂದೇಶವನ್ನು ಈ ತೀರ್ಪು ನೀಡುತ್ತದೆ ಎಂದು ಅಧಿಕಾರಿಗಳು ಹಾಗೂ ಕಾನೂನು ತಜ್ಞರು ಹೇಳಿದ್ದಾರೆ. ಮಕ್ಕಳ ರಕ್ಷಣಾ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ತರಗತಿಗಳು ಭಯದ ಸ್ಥಳವಾಗದೇ, ಸುರಕ್ಷಿತ ವಾತಾವರಣವಾಗಿರಬೇಕು ಎಂದು ಶಾಲೆಗಳು ಹಾಗೂ ಶಿಕ್ಷಕರಿಗೆ ಎಚ್ಚರಿಕೆ ನೀಡಲಾಗಿದೆ.