ಬದ್ಧವೈರಿ ಬಿಜೆಪಿಯೊಂದಿಗೆ ಕೈ ಜೋಡಿಸಿದ ಕಾಂಗ್ರೆಸ್ ನಾಯಕರು; ಕೇರಳದಲ್ಲೊಂದು ಅಪರೂಪದ ಘಟನೆ
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ತಾವು ವಿರೋಧಿಗಳೆಂದು ಮರೆತು ಕೈ ಮಿಲಾಯಿಸಿಕೊಂಡ ಅಪರೂಪದ ಘಟನೆ ಕೇರಳದಲ್ಲಿ ನಡೆದಿದೆ. ರಾಜಕೀಯ ಇತಿಹಾಸದಲ್ಲಿ ಇದೊಂದು ಅತ್ಯಂತ ಮಹತ್ವದ ರಾಜಕೀಯ ಬೆಳವಣಿಗೆಯಾಗಿ ಗುರುತಿಸಿಕೊಂಡಿದೆ. ಮತ್ತತ್ತೂರು ಗ್ರಾಮ ಪಂಚಾಯತ್‌ನ ಅಧ್ಯಕ್ಷರ ಆಯ್ಕೆಗೆ ಕಾಂಗ್ರೆಸ್ ನ ಎಂಟು ಕೌನ್ಸಿಲರ್ ಗಳು ಬಿಜೆಪಿ ನಾಯಕರೊಂದಿಗೆ ಕೈ ಜೋಡಿಸಿದ್ದಾರೆ.
(ಸಂಗ್ರಹ ಚಿತ್ರ) -
ತ್ರಿಶೂರ್: ಮತ್ತತ್ತೂರು ಗ್ರಾಮ ಪಂಚಾಯತ್ (Mattathur Gram Panchayat) ಅಧ್ಯಕ್ಷರ (village president) ಆಯ್ಕೆಗೆ ಕಾಂಗ್ರೆಸ್ (congress) ನಾಯಕರು ಬಿಜೆಪಿಯೊಂದಿಗೆ (BJP) ಕೈಜೋಡಿಸಿದ ಅಪರೂಪದ ಘಟನೆ ಕೇರಳದ (kerala) ತ್ರಿಶೂರ್ (thrissur) ನಲ್ಲಿ ನಡೆದಿದೆ. ಸ್ವತಂತ್ರ ಅಭ್ಯರ್ಥಿ ಟೆಸ್ಸಿ ಜೋಸ್ ಕಲ್ಲರಕ್ಕಲ್ ಅವರನ್ನು ಗ್ರಾಮ ಪಂಚಾಯತ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಪಕ್ಷಕ್ಕೆ ರಾಜೀನಾಮೆ ನೀಡಿದ ಎಂಟು ಕಾಂಗ್ರೆಸ್ ಕೌನ್ಸಿಲರ್‌ಗಳು ಬಿಜೆಪಿಯೊಂದಿಗೆ ಕೈಜೋಡಿಸಿದರು. ಈ ಮೂಲಕ ರಾಜಕೀಯ ಇತಿಹಾಸದಲ್ಲಿ ಇದೊಂದು ಅತ್ಯಂತ ಮಹತ್ವದ ರಾಜಕೀಯ ಬೆಳವಣಿಗೆಯಾಗಿ ಗುರುತಿಸಿಕೊಂಡಿತು.
ಚುನಾವಣೆಯಲ್ಲಿ ಏನಾಯಿತು?
24 ವಾರ್ಡ್‌ಗಳನ್ನು ಹೊಂದಿರುವ ಮತ್ತತ್ತೂರು ಗ್ರಾಮ ಪಂಚಾಯತ್ ನಲ್ಲಿ 8 ಯುಡಿಎಫ್, 10 ಎಲ್‌ಡಿಎಫ್ ಮತ್ತು 4 ಎನ್‌ಡಿಎ ನಾಯಕರು ವಿಜಯಿಯಾದರು. ಇದರೊಂದಿಗೆ ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಗೆಲುವು ದಾಖಲಿಸಿದರು.
ವಿಮಾನದ ಕಿಟಕಿ ಗ್ಲಾಸ್ ಮೇಲೆ ತನ್ನದೇ ಹೆಸರು ಕೆತ್ತಿದ ಪ್ರಯಾಣಿಕ; ನೆಟ್ಟಿಗರು ಫುಲ್ ಗರಂ!
ಅಧ್ಯಕ್ಷೀಯ ಸ್ಥಾನಕ್ಕಾಗಿ ಓರ್ವ ಸ್ವತಂತ್ರ ಅಭ್ಯರ್ಥಿ ಔಸೆಫ್ ಅವರನ್ನು ಎಲ್‌ಡಿಎಫ್ ಕಣಕ್ಕೆ ಇಳಿಸಿದರೆ, ಇನ್ನೋರ್ವ ಸ್ವತಂತ್ರ ಅಭ್ಯರ್ಥಿ ಟೆಸ್ಸಿಯನ್ನು ಯುಡಿಎಫ್ ಕಣಕ್ಕೆ ಇಳಿಸಿತು. ಯುಡಿಎಫ್‌ನ ಎಂಟು ಮತಗಳು ಮತ್ತು ಬಿಜೆಪಿಯ ಮೂರು ಮತಗಳ ಬೆಂಬಲದೊಂದಿಗೆ ಟೆಸ್ಸಿ ಅಧ್ಯಕ್ಷರಾಗಿ ಆಯ್ಕೆಯಾದರು. ಇವರ ಆಯ್ಕೆಗೆ ಕಾಂಗ್ರಸ್ ಮತ್ತು ಬಿಜೆಪಿ ಕೈ ಜೋಡಿಸಿತ್ತು.
ಮೈತ್ರಿ ಯಾಕಾಯಿತು?
ಬಿಜೆಪಿ ಜೊತೆ ಕಾಂಗ್ರೆಸ್ ನಾಯಕರು ಮೈತ್ರಿ ಮಾಡಿಕೊಂಡಿರುವ ಕುರಿತು ಮಾತನಾಡಿದ ಕಾಂಗ್ರೆಸ್ ವಾರ್ಡ್ ಸದಸ್ಯ ಲಿಂಟೊ ಪಲ್ಲಿಪರಂಬಿಲ್, ಪಂಚಾಯತ್ ನ ಆಂತರಿಕ ವಿವಾದವನ್ನು ಬಗೆ ಹರಿಸಲು ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ನಾಯಕರು ಮುಂದೆ ಬಂದಿಲ್ಲ. ಹೀಗಾಗಿ ನಾವು ಪ್ರತಿಭಟನೆಯಾಗಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇವೆ. ಇಲ್ಲಿ ಅಭ್ಯರ್ಥಿ ಆಯ್ಕೆ ಹಂತದಿಂದಲೇ ಸಮಸ್ಯೆಗಳಿತ್ತು. ಫಲಿತಾಂಶ ಬಂದ ಮೇಲೆ ಇದು ಮತ್ತಷ್ಟು ಹದಗೆಟ್ಟಿತ್ತು. ಈ ಸಂದರ್ಭದಲ್ಲಿ ಜಿಲ್ಲಾ ನಾಯಕರು ಬರುತ್ತಾರೆ, ಸಮಸ್ಯೆ ಬಗೆ ಹರಿಸುತ್ತಾರೆ ಎಂದುಕೊಂಡಿದ್ದೆವು. ಆದರೆ ಅದು ಆಗಿಲ್ಲ. ಹೀಗಾಗಿ ರಾಜೀನಾಮೆ ನೀಡಿದ್ದೇವೆ ಎಂದು ತಿಳಿಸಿದರು.
Toxic: ಟಾಕ್ಸಿಕ್ ಅಂಗಳಕ್ಕೆ ಎಲಿಜಬೆತ್ ಎಂಟ್ರಿ: ಹುಮಾ ಖುರೇಷಿ ಫಸ್ಟ್ ಲುಕ್ ಹೇಗಿದೆ ನೋಡಿ
ಪರಿಣಾಮ ಏನು?
ಪಕ್ಷದ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಡಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ. ಚಂದ್ರನ್ ಮತ್ತು ಮಂಡಲ ಅಧ್ಯಕ್ಷ ಶಫಿ ಕಲ್ಲುಪರಂಬಿಲ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಕಾಂಗ್ರೆಸ್ ನಾಯಕರು ನೀಡಿರುವ ರಾಜಿನಾಮೆಯನ್ನು ಅಂಗೀಕರಿಸಲಾಗಿಲ್ಲ. ಅವರ ಮನವೊಲಿಸುವ ಕಾರ್ಯ ನಡೆಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್ ತಿಳಿಸಿದ್ದಾರೆ.