Winter Session 2025: ಸಂಸತ್ತಿಗೆ ನಾಯಿಯನ್ನು ಕರೆ ತಂದ ಕಾಂಗ್ರೆಸ್ ಸಂಸದೆ, ಬಿಜೆಪಿಯಿಂದ ತರಾಟೆ
ಚಳಿಗಾಲದ ಅಧಿವೇಶನದ ಮೊದಲ ದಿನವೇ ಕಾಂಗ್ರೆಸ್ ಸಂಸದೆ ವಿವಾದ ಸೃಷ್ಟಿ ಮಾಡಿದ್ದಾರೆ. ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಅವರು ಪುಟ್ಟ ನಾಯಿ ಮರಿಯನ್ನು ಸಂಸತ್ತಿನ ಆವರಣಕ್ಕೆ ಕರೆತಂದಿದ್ದು, ಕಚ್ಚುವವರು ನಿಜವಾಗಿಯೂ ಸಂಸತ್ತಿನ ಒಳಗೆ ಕುಳಿತಿದ್ದಾರೆ ಎಂದು ಹೇಳಿದರು. ಇದಕ್ಕೆ ಬಿಜೆಪಿ ನಾಯಕರು ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಸಂಸದೆ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ.
(ಸಂಗ್ರಹ ಚಿತ್ರ) -
ನವದೆಹಲಿ: ಚಳಿಗಾಲದ ಅಧಿವೇಶನದ (winter session) ಆರಂಭದ ದಿನವೇ ಕಾಂಗ್ರೆಸ್ ಸಂಸದೆ (congress MP) ವಿವಾದ ಸೃಷ್ಟಿಸಿದ್ದಾರೆ. ನಾಯಿ ಮರಿಯೊಂದನ್ನು ಸಂಸತ್ತಿಗೆ ಕರೆ ತಂದ ಸಂಸದೆಯನ್ನು ಬಿಜೆಪಿ ನಾಯಕರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ (MP Renuka chowdhury) ಅವರು ಸೋಮವಾರ ನಾಯಿ ಮರಿಯೊಂದಿಗೆ ಸಂಸತ್ತಿಗೆ ಬಂದಿದ್ದರು. ಇದು ಬಿಜೆಪಿಯಿಂದ (BJP) ತೀವ್ರ ಟೀಕೆಗೆ ಗುರಿಯಾಗಿದ್ದು, ವಿವಾದವನ್ನು ಉಂಟು ಮಾಡಿತು. ಇದಕ್ಕೆ ಪ್ರತಿಕ್ರಿಯಿಸಿರುವ ರೇಣುಕಾ ಚೌಧುರಿ, ಅಪಘಾತಗೊಂಡ ರಸ್ತೆಯಲ್ಲಿ ಪುಟ್ಟ ನಾಯಿ ಮರಿಯೊಂದು ಅಲೆದಾಡುತ್ತಿತ್ತು. ಆದ್ದರಿಂದ ಅದನ್ನು ಎತ್ತಿಕೊಂಡು ಬಂದಿದ್ದಾಗಿ ಅವರು ಹೇಳಿದರು.
ಸಂಸತ್ತಿಗೆ ನಾಯಿಯನ್ನು ಕರೆ ತಂದಿದ್ದು ಭದ್ರತಾ ಉಲ್ಲಂಘನೆ ಹೇಗೆ ಆಗುತ್ತದೆ ಎಂದು ಪ್ರಶ್ನಿಸಿದ ಅವರು, ಈ ಚರ್ಚೆಯಲ್ಲಿ ಯಾವುದೇ ಅರ್ಥವಿಲ್ಲ. ಕಚ್ಚುವವರು ನಿಜವಾಗಿಯೂ ಸಂಸತ್ತಿನ ಒಳಗೆ ಕುಳಿತಿದ್ದಾರೆ ಎಂದು ಹೇಳಿದರು.
ಯುವ ಸಂಸದರಿಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ಸಿಗುತ್ತಿಲ್ಲ: ಪ್ರಧಾನಿ ಮೋದಿ ಕಳವಳ
ನಾನು ದಾರಿಯಲ್ಲಿ ಬರುತ್ತಿದ್ದಾಗ ಸ್ಕೂಟರ್ ಮತ್ತು ಕಾರು ಅಪಘಾತಗೊಂಡ ರಸ್ತೆಯಲ್ಲಿ ಈ ಪುಟ್ಟ ನಾಯಿ ಮರಿ ರಸ್ತೆಯಲ್ಲಿ ಅಲೆದಾಡುತ್ತಿತ್ತು. ಅದು ಅಪಾಯದ ಸ್ಥಿತಿಯಲ್ಲಿತ್ತು. ಹೀಗಾಗಿ ನಾನು ಅದನ್ನು ಎತ್ತಿಕೊಂಡು ಕಾರಿನಲ್ಲಿ ಇರಿಸಿ ಸಂಸತ್ತಿಗೆ ಕರೆ ತಂದೆ. ಆದರೆ ಬಳಿಕ ಅದನ್ನು ವಾಪಸ್ ಕಳುಹಿಸಿದೆ ಎಂದು ರೇಣುಕಾ ಚೌಧುರಿ ಹೇಳಿದರು.
ಕಾಂಗ್ರೆಸ್ ಸಂಸದೆ ನಾಯಿ ಮರಿಯನ್ನು ಕರೆತಂದಿದ್ದಕ್ಕೆ ಬಿಜೆಪಿಯು ಭದ್ರತಾ ಉಲ್ಲಂಘನೆಯ ಕಾಳಜಿಗಳ ಕುರಿತು ಪ್ರಶ್ನೆ ಎತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸಂಸದೆ, ಕಚ್ಚುವವರು ಸಂಸತ್ತಿನ ಒಳಗೆ ಕುಳಿತಿದ್ದಾರೆ. ಅವರು ಸರ್ಕಾರವನ್ನು ನಡೆಸುತ್ತಾರೆ. ನಾವು ಮೂಕ ಪ್ರಾಣಿಯನ್ನು ನೋಡಿಕೊಳ್ಳುತ್ತೇವೆ. ನಾನು ನಾಯಿಯನ್ನು ಮನೆಗೆ ಕಳುಹಿಸಿ ಆಗಿದೆ. ಸಂಸತ್ತಿನಲ್ಲಿ ಕುಳಿತು ಪ್ರತಿದಿನ ನಮ್ಮನ್ನು ಕಚ್ಚುವವರ ಬಗ್ಗೆ ನಾವು ಮಾತನಾಡುವುದಿಲ್ಲ ಎಂದು ಹೇಳಿದರು.
#ParliamentWinterSession | Delhi: On the controversy over bringing a dog to Parliament, Congress MP Renuka Chowdhary said, "Is there any law? I was on my way. A scooter collided with a car. This little puppy was wandering on the road. I thought it would get hit. So I picked it… pic.twitter.com/fNPkCMfOyX
— ANI (@ANI) December 1, 2025
ರೇಣುಕಾ ಚೌಧರಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದೆ ಜಗದಾಂಬಿಕಾ ಪಾಲ್, ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ವಿಶೇಷ ಸವಲತ್ತುಗಳ ಬಳಕೆಯ ನಿಯಮಗಳನ್ನು ಉಲ್ಲಂಘಿಸಲು ಅಥವಾ ಸಾಕುಪ್ರಾಣಿಗಳನ್ನು ಸದನಕ್ಕೆ ತರಲು ಯಾರಿಗೂ ಅವಕಾಶ ಇಲ್ಲ ಎಂದು ಅವರು ತಿಳಿಸಿದರು.
ಎಐ ಕ್ರಾಂತಿಯಿಂದ ಉದ್ಯೋಗವೇ ಅನಗತ್ಯ: ಉದ್ಯಮಿ ಎಲಾನ್ ಮಸ್ಕ್
ಬಿಜೆಪಿ ವಕ್ತಾರೆ ಶೆಹಜಾದ್ ಪೂನಾವಾಲಾ ಮಾತನಾಡಿ, ಇದು ನಾಟಕ. ಚೌಧರಿ ಅವರು ಸಂಸತ್ತನ್ನು ಅವಮಾನಿಸಿದ್ದಾರೆ. ಕಾಂಗ್ರೆಸ್ ಸಂಸದೆ ತಮ್ಮ ಎಲ್ಲಾ ಸಹೋದ್ಯೋಗಿಗಳು ಮತ್ತುಸಂಸದೀಯ ಸಿಬ್ಬಂದಿಯನ್ನು ನಾಯಿಗೆ ಹೋಲಿಸಿದ್ದಾರೆ ಎಂದರು . ಈ ಹಿಂದೆ ರೇಣುಕಾ ಚೌಧುರಿ ಅವರು ಆಪರೇಷನ್ ಮಹಾದೇವ್ ಮತ್ತು ಆಪರೇಷನ್ ಸಿಂದೂರ್ ಅನ್ನು ಅಣಕಿಸಿದಾಗ ನಮ್ಮ ಸೈನಿಕರನ್ನು ಅವಮಾನಿಸಿದ್ದಾರೆ ಎಂದು ಪೂನಾವಾಲಾ ಹೇಳಿದ್ದರು.
ವಿರೋಧ ಪಕ್ಷಗಳು ಎಸ್‌ಐಆರ್ ಪ್ರಕ್ರಿಯೆಯ ಬಗ್ಗೆ ಚುನಾವಣಾ ವಂಚನೆ ಆರೋಪದ ಮೇಲೆ ಘೋಷಣೆಗಳನ್ನು ಕೂಗಿದ ಬಳಿಕ ಚಳಿಗಾಲದ ಅಧಿವೇಶನ ಪ್ರಾರಂಭವಾದ ಮೊದಲ ದಿನವೇ ಲೋಕಸಭೆಯ 15 ನಿಮಿಷಗಳ ವ್ಯವಹಾರದ ಬಳಿಕಸಭೆಯನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು.