ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ನಿತೀಶ್ ಕುಮಾರ್ ವೈದ್ಯೆಯ ಹಿಜಾಬ್‌ ಎಳೆದ ಪ್ರಕರಣ ಇನ್ನೂ ನಿಗಿನಿಗಿ ಕೆಂಡ; ಕರ್ತವ್ಯಕ್ಕೆ ಹಾಜರಾಗದ ವೈದ್ಯೆ

ನೇಮಕಾತಿ ಪತ್ರ ವಿತರಿಸುವಾಗ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹಿಜಾಬ್ ಎಳೆದ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ವೈದ್ಯೆ ಶನಿವಾರದೊಳಗೆ ಕರ್ತವ್ಯ ಹಾಜರಾಗಬೇಕಿತ್ತು. ಆದರೆ ಅವರು ಹಾಜರಾಗದೇ ಇರುವುದರಿಂದ ಅವರು ಸೇರುತ್ತಾರೆಯೇ ಇಲ್ಲವೇ ಎನ್ನುವ ಮಾಹಿತಿ ಇಲ್ಲ ಎಂದು ಪಾಟ್ನಾ ಸಿವಿಲ್ ಸರ್ಜನ್ ಅವಿನಾಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಹಿಜಾಬ್ ವಿವಾದ: ಕರ್ತವ್ಯಕ್ಕೆ ಹಾಜರಾಗದ ವೈದ್ಯೆ

-

ಪಾಟ್ನಾ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ (Bihar cm nitish kumar) ಅವರು ಆಯುಷ್ ವೈದ್ಯರಿಗೆ ನೇಮಕಾತಿ ಪತ್ರ ವಿತರಣೆ ಮಾಡುವಾಗ ಮುಸ್ಲಿಂ ಮಹಿಳೆಯೊಬ್ಬರ ಹಿಜಾಬ್ (Hijab) ಎಳೆದು ವಿವಾದಕ್ಕೆ ಕಾರಣವಾಗಿದ್ದರು. ಮಹಿಳೆ ಶನಿವಾರ ಸಂಜೆಯೊಳಗೆ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಆದರೆ ಅವರು ಹಾಜರಾಗಿಲ್ಲ. ಸೋಮವಾರ ಅವರು ಹಾಜರಾಗುತ್ತಾರೋ, ಇಲ್ಲವೋ ಎನ್ನುವ ಕುರಿತು ಯಾವುದೇ ಮಾಹಿತಿ ಕೂಡ ಇಲ್ಲ ಎಂದು ಪಾಟ್ನಾ (patna) ಸಿವಿಲ್ ಸರ್ಜನ್ ಅವಿನಾಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಇತ್ತೀಚೆಗೆ ನಡೆದ ಆಯುಷ್ ವೈದ್ಯರ ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ನುಸ್ರತ್ ಪರ್ವೀನ್ ಅವರ ಹಿಜಾಬ್ ಎಳೆದು ವಿವಾದ ಎಬ್ಬಿಸಿದ್ದರು. ನುಸ್ರತ್ ಪರ್ವೀನ್ ಅವರಿಗೆ ನೇಮಕಾತಿ ದಿನಾಂಕವನ್ನು ಶನಿವಾರದವರೆಗೆ ವಿಸ್ತರಿಸಲಾಗಿತ್ತು. ಆದರೆ ಅವರು ಶನಿವಾರವೂ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಪರ್ವೀನ್ ಅವರು ಸೋಮವಾರ ಕರ್ತವ್ಯಕ್ಕೆ ಸೇರುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕು ಎಂದು ಅವಿನಾಶ್ ಕುಮಾರ್ ತಿಳಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಕೊಲೆ ಪ್ರಕರಣ: ಹತ್ಯೆಯಾದ ದೀಪು ಚಂದ್ರದಾಸ್ ಯಾರು?

ಪಾಟ್ನಾದ ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಕಳೆದ ಸೋಮವಾರ ಆಯುಷ್ ವೈದ್ಯರು ತಮ್ಮ ನೇಮಕಾತಿ ಪತ್ರಗಳನ್ನು ಸ್ವೀಕರಿಸಲು ಸೇರಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ನಿತೀಶ್ ಕುಮಾರ್ ಅವರು ನುಸ್ರತ್ ಪರ್ವೀನ್ ಅವರ ಹಿಜಾಬ್ ಮುಟ್ಟಿ ಇದು ಏನು ಎಂದು ಕೇಳಿ ಅದನ್ನು ಕೆಳಗೆ ಎಳೆದಿದ್ದರು. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು.

ನುಸ್ರತ್ ಪರ್ವೀನ್ ಅವರು ಕರ್ತವ್ಯಕ್ಕೆ ಸೇರದೇ ಇರಲು ಕಾರಣ ಏನು ಎಂಬುದು ಗೊತ್ತಿಲ್ಲ. ಅವರು ಅಥವಾ ಅವರ ಕುಟುಂಬ ಸದಸ್ಯರು ಯಾರೂ ತಮ್ಮನ್ನು ಸಂಪರ್ಕಿಸಿಲ್ಲ ಎಂದು ಪಾಟ್ನಾ ಸದರ್‌ನ ಸಬಲ್ಪುರ್ ಪ್ರಾಥಮಿಕ ಆರೋಗ್ಯ ಕೇಂದ್ರದ ಶಸ್ತ್ರಚಿಕಿತ್ಸಕ ವಿಜಯ್ ಕುಮಾರ್ ದೃಢಪಡಿಸಿದ್ದಾರೆ.

ಕಿಂಡು ಏರ್‌ಪೋರ್ಟ್‌ನಲ್ಲಿ ಮೂಲ ಸೌಕರ್ಯದ ಕೊರತೆ: ವಿಮಾನದಿಂದ ಜಿಗಿದ ಪ್ರಯಾಣಿಕರು

ಸುಮಾರು ಐದಾರು ಮಂದಿ ಶನಿವಾರ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಆದರೆ ಪರ್ವೀನ್ ಬಂದಿರಲಿಲ್ಲ. ಅವರ ಹೆಸರು ಪಟ್ಟಿಯಲ್ಲಿದೆ. ಆದರೆ ಪಾಟ್ನಾದಲ್ಲಿರುವ ಸಿವಿಲ್ ಸರ್ಜನ್ ಕಚೇರಿಯಿಂದ ಅವರ ನೇಮಕಾತಿ ಪತ್ರ ನಮಗೆ ಬಂದಿಲ್ಲ ಎಂದು ಅವರು ತಿಳಿಸಿದರು.

ಘಟನೆ ಕುರಿತು ಪ್ರತಿಕ್ರಿಯಿಸಿದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ನಿತೀಶ್ ಕುಮಾರ್ ಅವರು ಹಿಜಾಬ್ ಎಳೆದಿರುವುದನ್ನು 'ವಿವಾದ' ಎಂಬ ಪದ ಕೇಳಲು ನೋವಾಗುತ್ತಿದೆ. ತಂದೆ ಮತ್ತು ಮಗಳ ನಡುವೆ ಯಾವುದಾದರೂ ಜಗಳ ಇರಬಹುದೇ ಎಂದು ಪ್ರಶ್ನಿಸಿದ್ದು, ನಿತೀಶ್ ಅವರು ಮಹಿಳಾ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಎಂದು ಪರಿಗಣಿಸುತ್ತಾರೆ ಎಂದು ಅವರು ಹೇಳಿದ್ದಾರೆ.