ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜನರಿಗೆ ಮೂಲಭೂತ ಸೌಕರ್ಯ ಒದಗಿಸುವುದೇ ನನ್ನ ಮುಖ್ಯ ಗುರಿ: ಶಾಸಕ ಕೆ.ಎನ್. ರಾಜಣ್ಣ

Madhugiri News: ಈ ಹಿಂದೆ ಎಸ್.ಎಂ.ಕೃಷ್ಣ ಬಡಾವಣೆ ಹಾಗೂ ಕರಡಿಪುರದಲ್ಲಿ ಸಂಚಾರ ಮಾಡುವುದಕ್ಕೂ ಕಷ್ಟಕರವಾಗಿತ್ತು. ನಾನು ಶಾಸಕನಾದ ಮೇಲೆ ಆಧ್ಯತೆ ಮೇರೆಗೆ ರಸ್ತೆ , ಚರಂಡಿ ನಿರ್ಮಾಣವಾಗಿದೆ. ಈ ವಾರ್ಡ್ ಬಹಳ ದೊಡ್ಡದಾಗಿದೆ. ಮತ್ತಷ್ಟು ಮೂಲಭೂತ ಸೌಕರ್ಯಗಳನ್ನು ಒದಗಿಸುವುದಾಗಿ ಶಾಸಕ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.

ಜನರಿಗೆ ಮೂಲಭೂತ ಸೌಕರ್ಯ ಒದಗಿಸುವುದೇ ನನ್ನ ಮುಖ್ಯ ಗುರಿ: ಕೆ.ಎನ್. ರಾಜಣ್ಣ

-

Profile
Siddalinga Swamy Nov 11, 2026 8:20 PM

ಮಧುಗಿರಿ, ನ.11: ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದೇ ನನ್ನ ಮುಖ್ಯ ಗುರಿಯಾಗಿದೆ ಎಂದು ಶಾಸಕ ಕೆ.ಎನ್. ರಾಜಣ್ಣ (KN Rajanna) ತಿಳಿಸಿದರು. ಪಟ್ಟಣದ ಎಸ್.ಎಂ.ಕೃಷ್ಣ ಬಡಾವಣೆಯಲ್ಲಿ ಬುಧವಾರ ನಡೆದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿ ಅವರು ಮಾತನಾಡಿದರು. ಈ ಹಿಂದೆ ಎಸ್.ಎಂ.ಕೃಷ್ಣ ಬಡಾವಣೆ ಹಾಗೂ ಕರಡಿಪುರದಲ್ಲಿ ಸಂಚಾರ ಮಾಡುವುದಕ್ಕೂ ಕಷ್ಟಕರವಾಗಿತ್ತು. ನಾನು ಶಾಸಕನಾದ ಮೇಲೆ ಆಧ್ಯತೆ ಮೇರೆಗೆ ರಸ್ತೆ , ಚರಂಡಿ ನಿರ್ಮಾಣವಾಗಿದೆ. ಈ ವಾರ್ಡ್ ಬಹಳ ದೊಡ್ಡದಾಗಿದೆ. ಮತ್ತಷ್ಟು ಮೂಲಭೂತ ಸೌಕರ್ಯಗಳನ್ನು ಒದಗಿಸುವುದಾಗಿ ತಿಳಿಸಿದರು.

ಈ ಭಾಗಕ್ಕೆ ಶೀಘ್ರವಾಗಿ ಶುದ್ದ ಕುಡಿಯುವ ನೀರಿನ ಘಟಕವನ್ನು ನಿರ್ಮಾಣ ಮಾಡಲಾಗುವುದು ಹಾಗೂ ಹಟ್ಟಿ ಮಾರಮ್ಮ ದೇವಾಲಯದ ಕಾಂಪೌಂಡ್ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು ಎಂದು ತಿಳಿಸಿದರು. ನಿವೇಶನ ಹೊಂದಿರುವ ಫಲಾನುಭವಿಗಳಿಗೆ ಮನೆಯನ್ನು ನಿರ್ಮಿಸಿಕೊಡಲಾಗುವುದು ಮತ್ತು 4 ಎಕರೆ ಜಾಗವಿದ್ದು, ಶೀಘ್ರವಾಗಿ ಜಿಪಿಎಸ್ ಮನೆಗಳನ್ನು ನಿರ್ಮಿಸಿ ಬಡವರಿಗೆ ವಿತರಣೆ ಮಾಡಲಾಗುವುದು ಎಂದರು.

MLA KN Rajanna

ಈಗಾಗಲೇ ತಾಲ್ಲೂಕಿನಲ್ಲಿ ಸಾಕಷ್ಟು ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಯುತ್ತಿದೆ. ಪಟ್ಟಣದಲ್ಲಿ ಉತ್ತಮವಾದ ರಸ್ತೆ ಮತ್ತು ದೀಪದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಈ ರಸ್ತೆಯ ಅಭಿವೃದ್ದಿಯಿಂದ ಗೌರಿಬಿದನೂರು ಗೇಟ್ ಅಕ್ಕ - ಪಕ್ಕದ ವಾರ್ಡ್‌ಗಳು ಸಾಕಷ್ಟು ಅಭಿವೃದ್ದಿ ಹೊಂದುತ್ತಿದೆ ಎಂದರು.

ಮಂಡರ ಕಾಲೋನಿಯ ಜನರು ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದರು. 2013 ರಲ್ಲಿ ನಾನು ಶಾಸಕನಾದಾಗ ಆ ಪ್ರದೇಶಕ್ಕೆ ಭೇಟಿ ನೀಡಿ ಅವರಿಗೆಲ್ಲಾ ಮನೆಗಳನ್ನು ನಿರ್ಮಿಸಿಕೊಡಲಾಯಿತು. ಈಗ ಅಲ್ಲಿನ ಮಕ್ಕಳು ಉತ್ತಮವಾದ ವಿದ್ಯಾಭ್ಯಾಸ ಮಾಡಿ ಕೆಲಸ - ಕಾರ್ಯಗಳಿಗೆ ತೆರಳುತ್ತಿದ್ದಾರೆ. ಈ ರೀತಿಯ ಬದಲಾವಣೆಗಳು ಆದಾಗ ಮಾತ್ರ ನವ ಸಮಾಜ ನಿರ್ಮಾಣವಾಗುತ್ತದೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷರಾದ ಎಂ.ಕೆ.ನಂಜುಂಡಯ್ಯ , ಕೆ.ಪ್ರಕಾಶ್, ಎನ್.ಗಂಗಣ್ಣ , ಲಾಲಾಪೇಟೆ ಮಂಜುನಾಥ್ , ಕೆಪಿಸಿಸಿ ಸದಸ್ಯ ಎಂ.ಎಸ್.ಮಲ್ಲಿಕಾರ್ಜುನಯ್ಯ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ , ಪುರಸಭೆ ಮಾಜಿ ಸದಸ್ಯ ಎಂ.ವಿ.ಮಂಜುನಾಥ್ , ಸಾಧಿಕ್ , ಮುಖಂಡ ಎಂ.ವಿ.ಮೂಡ್ಲಗಿರೀಶ್ ಹಾಗೂ ಅಧಿಕಾರಿಗಳು, ಸಾರ್ವಜನಿಕರು ಇದ್ದರು.