ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಲಿತರ ಮೇಲೆ ದೌರ್ಜನ್ಯದಲ್ಲಿ ರಾಜ್ಯ 8ನೇ ಸ್ಥಾನ: NCRB ವರದಿ ಉಲ್ಲೇಖಿಸಿ ಸರ್ಕಾರದ ವಿರುದ್ಧ ನಿಖಿಲ್ ವಾಗ್ದಾಳಿ

Nikhil Kumaraswamy: ʼಅಹಿಂದʼ ಎಂಬುದು ನಿಜವಾದ ಬದ್ಧತೆಯಲ್ಲ, ಕೇವಲ ಚುನಾವಣಾ ಘೋಷಣೆ ಎಂಬುದು ಈಗ ಸ್ಪಷ್ಟವಾಗಿದೆ. ದಲಿತರ ಮೇಲಿನ ಪ್ರತಿಯೊಂದು ಹಲ್ಲೆಗೂ ಈ ಸರ್ಕಾರವೇ ನೇರ ಹೊಣೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.

ದಲಿತರ ಮೇಲೆ ದೌರ್ಜನ್ಯದಲ್ಲಿ ರಾಜ್ಯ 8ನೇ ಸ್ಥಾನ: ನಿಖಿಲ್

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (ಸಂಗ್ರಹ ಚಿತ್ರ) -

Profile
Siddalinga Swamy May 12, 2026 3:48 PM

ಬೆಂಗಳೂರು, ಮೇ 12: ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಕರ್ನಾಟಕವು ದೇಶದಲ್ಲಿ 8ನೇ ಸ್ಥಾನದಲ್ಲಿರುವುದಕ್ಕೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. NCRB 2024 ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಅವರು, ‘ಅಹಿಂದ’ ಸರ್ಕಾರ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದಲಿತರ ಸುರಕ್ಷತೆ ಪ್ರಶ್ನಾರ್ಥಕವಾಗಿದೆ ಎಂದು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಪ್ರತಿದಿನ ಸರಾಸರಿ 5 ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ. 2024ರಲ್ಲಿ ಒಟ್ಟು 2016 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 66 ಕೊಲೆ, 67 ಅತ್ಯಾಚಾರ, 109 ಪೋಕ್ಸೋ ಪ್ರಕರಣಗಳು ಸೇರಿವೆ ಎಂದು ಅವರು ತಿಳಿಸಿದ್ದಾರೆ.

ಶಿಕ್ಷೆ ಪ್ರಮಾಣ ಕೇವಲ 3.2% ಇರುವುದು ಕಾನೂನು ಸುವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿ. 809 ಪ್ರಕರಣ ಇತ್ಯರ್ಥವಾದರೂ, ಕೇವಲ 25ರಲ್ಲಿ ಮಾತ್ರ ಶಿಕ್ಷೆಯಾಗಿದೆ. 96%ಕ್ಕೂ ಹೆಚ್ಚು ಆರೋಪಿಗಳು ಖುಲಾಸೆಯಾಗಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ದಲಿತರ ರಕ್ಷಣೆಗೆ ಇರುವ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ, DCRE ಇಂದು ಹಲ್ಲಿಲ್ಲದ ಹಾವಾಗಿದೆ. ಅಧಿಕಾರಕ್ಕೆ ದಲಿತರ ಮತ ಬೇಕು, ಆದರೆ ಅವರ ಜೀವ, ಗೌರವ, ಸುರಕ್ಷತೆ ಕಾಯಲು ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

JDS ಹಳೇ ಮೈಸೂರಿಗೆ ಮಾತ್ರ ಸೀಮಿತವೇ?; ನಿಖಿಲ್ ಹೇಳಿದ್ದೇನು?

ʼಅಹಿಂದʼ ಎಂಬುದು ನಿಜವಾದ ಬದ್ಧತೆಯಲ್ಲ, ಕೇವಲ ಚುನಾವಣಾ ಘೋಷಣೆ ಎಂಬುದು ಈಗ ಸ್ಪಷ್ಟವಾಗಿದೆ. ದಲಿತರ ಮೇಲಿನ ಪ್ರತಿಯೊಂದು ಹಲ್ಲೆಗೂ ಈ ಸರ್ಕಾರವೇ ನೇರ ಹೊಣೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.