ಮಮತಾ ಬ್ಯಾನರ್ಜಿ ವಿರುದ್ಧ 100 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಹೂಡಿದ ಸುವೇಂದು ಅಧಿಕಾರಿ.. ಕಾರಣವೇನು?
ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ನೀಡಲಾದ ನೊಟೀಸ್ ಗೆ ಅವರು ಉತ್ತರಿಸದ ಕಾರಣ ಅಲಿಪೋರ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿರುವುದಾಗಿ ಅವರು ತಿಳಿಸಿದ್ದಾರೆ.
ಸಂಗ್ರಹ ಚಿತ್ರ -
ಪಶ್ಚಿಮ ಬಂಗಾಲ: ಪಶ್ಚಿಮ ಬಂಗಾಳದ (West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Chief Minister Mamata Banerjee) ವಿರುದ್ಧ ಕಲ್ಲಿದ್ದಲು ಹಗರಣಕ್ಕೆ (coal scam) ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರು 100 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ (Defamation case) ಹೂಡಿದ್ದಾರೆ. ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ಕಳುಹಿಸಲಾದ ನೊಟೀಸ್ ಗೆ ಉತ್ತರ ಸಿಗದ ಕಾರಣ ಅಲಿಪೋರ್ ನ್ಯಾಯಾಲಯದ ಹಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿರುವುದಾಗಿ ಅವರು ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ವಿರೋಧ ಪಕ್ಷದ ನಾಯಕ, ಬಿಜೆಪಿ ಶಾಸಕ ಸುವೇಂದು ಅಧಿಕಾರಿ, ಮಮತಾ ಬ್ಯಾನರ್ಜಿಯವರೇ ನೀವು ಸಮಸ್ಯೆಗಳ ಬಗ್ಗೆ ಜನರನ್ನುಗೊಂದಲಗೊಳಿಸುತ್ತಿರುವಾಗ ನಾನು ನನ್ನ ಬದ್ಧತೆಯನ್ನು ತೋರಬೇಕಿದೆ. ಕಲ್ಲಿದ್ದಲು ಹಗರಣದಲ್ಲಿ ನಾನು ಭಾಗಿಯಾಗಿದ್ದೇನೆ ಎಂಬುದು ನಿಮ್ಮ ಕಾಲ್ಪನಿಕ ಆರೋಪ. ಇದಕ್ಕೆ ಸಂಬಂಧಿಸಿ ಸಾಮಾಜಿಕ ಮಾಧ್ಯಮದಲ್ಲಿ ಕಳುಹಿಸಿರುವ ಮಾನನಷ್ಟ ನೊಟೀಸ್ ಗೆ ನಿಮ್ಮ ಮೌನವು ಈ ಪರಿಸ್ಥಿತಿಯಲ್ಲಿ ನಿಮಗ ಸಹಾಯ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
Uttara Kannada News: ಕಾರವಾರದ ಯುವತಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್, ಆರೋಪಿಯಿಂದ ನಡೆದಿತ್ತಾ ದೌರ್ಜನ್ಯ?
ನೀವು ಮಾಡಿರುವ ವಂಚನೆಯ ದುಸ್ಸಾಹಸಕ್ಕಾಗಿ ನಿಮ್ಮನ್ನು ನ್ಯಾಯಾಲಯಕ್ಕೆ ಕರೆಯುವುದಾಗಿ ನಾನು ಹೇಳಿದ್ದು, ಆ ಮಾತನ್ನು ಈಗ ಉಳಿಸಿಕೊಂಡಿದ್ದೇನೆ. ನಿಮ್ಮ ವಿರುದ್ಧ ಮೊಕದ್ದಮೆ ಹೂಡಿದ್ದೇನೆ ಎಂದು ಹೇಳಿರುವ ಅಧಿಕಾರಿ, ಅವರು ಸಲ್ಲಿಸಿದ ಹಕ್ಕು ಮೊಕದ್ದಮೆಯ ನೊಟೀಸ್ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
Smt. Mamata Banerjee, I honour my commitments while you obfuscate issues and people. Your deceptive silence to the defamation notice pertaining to your vile imaginary allegations of my involvement in some alleged coal scam will not help you salvage the situation.
— Suvendu Adhikari (@SuvenduWB) January 16, 2026
I kept my word… pic.twitter.com/Rfgjb0m5J0
ಇದರೊಂದಿಗೆ ಅವರು, ಆದಷ್ಟು ಬೇಗ ದಯವಿಟ್ಟು ನಿಮ್ಮ ಕಲಿತ ವಕೀಲರನ್ನು ಸಂಪರ್ಕಿಸಿ. ಇಲ್ಲದಿದ್ದರೆ ನೀವು ಶೀಘ್ರದಲ್ಲೇ ನನಗೆ 100 ಕೋಟಿ ರೂ.ಗಳನ್ನು ಪರಿಹಾರವಾಗಿ ಪಾವತಿಸಬೇಕಾಗುತ್ತದೆ. ಅದನ್ನು ನಾನು ದತ್ತಿ ಸಂಸ್ಥೆಗೆ ದೇಣಿಗೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.
ಈ ಹಿಂದೆ ತಮ್ಮ ವಕೀಲರ ಮೂಲಕ ಮಮತಾ ಬ್ಯಾನರ್ಜಿ ಅವರಿಗೆ ನೊಟೀಸ್ ಕಳುಹಿಸಿದ್ದ ಅಧಿಕಾರಿ, ಜನವರಿ 8 ಮತ್ತು 9ರಂದು ಮಮತಾ ಬ್ಯಾನರ್ಜಿಯವರು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಲ್ಲಿದ್ದಲು ಹಗರಣದ ಆರೋಪ ಮಾಡಿದ್ದಾರೆ ಎಂದು ಹೇಳಿದ್ದರು. ಆದರೆ ಇದಕ್ಕೆ ಯಾವುದೇ ದಾಖಲೆ ತೋರಿಸಿಲ್ಲ. ಹೀಗಾಗಿ ಅವರು ಮಾಡಿರುವ ಆರೋಪಗಳನ್ನು 72 ಗಂಟೆಗಳ ಒಳಗೆ ಸಾಬೀತುಪಡಿಸಬೇಕು. ಇದಕ್ಕೆ ವಿಫಲವಾದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದರು.
Puneeth Kerehalli: ಬನ್ನೇರುಘಟ್ಟದಲ್ಲಿ ಪುನೀತ್ ಕೆರೆಹಳ್ಳಿ ಆರೆಸ್ಟ್, ಯಾವ ಪ್ರಕರಣ?
2021ರ ವಿಧಾನಸಭಾ ಚುನಾವಣೆಗೆ ಮೊದಲು ಬಿಜೆಪಿಗೆ ಸೇರಿದ ಸುವೇಂದು ಅಧಿಕಾರಿ ಅವರು ಇದಕ್ಕೂ ಮೊದಲು ತೃಣಮೂಲ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದರು.