ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಿನ ಭವಿಷ್ಯ, ಮೇ 28, 2026: ಇಂದು ಆತುರದಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ

Horoscope Today May 28th: ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಷಪಕ್ಷದ, ದ್ವಾದಶಿ ತಿಥಿ, ಚಿತ್ತಾ ನಕ್ಷತ್ರದ ಮೇ 28ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಈ ರಾಶಿಯವರಿಗೆ ಇಂದು ವ್ಯವಹಾರದಲ್ಲಿ ಭರ್ಜರಿ ಲಾಭ

ಇಂಟರ್‌ನೆಟ್ ಚಿತ್ರ -

Profile
Pushpa Kumari May 28, 2026 6:00 AM

ಬೆಂಗಳೂರು, ಮೇ 28: ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷದ ,ದ್ವಾದಶಿ ತಿಥಿ, ಚಿತ್ತ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿಗಳ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

ಮೇಷ ರಾಶಿ: ಚಿತ್ತ ನಕ್ಷತ್ರದ ಅಧಿಪತಿ ಕುಜ. ಹೀಗಾಗಿ ಹೆಚ್ಚಿನವರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ‌. ಮೇಷ ರಾಶಿಯವರಿಗೆ ಉತ್ತಮ ದಿನವಾಗಿದ್ದು ಮನಸ್ಸಿಗೆ ನೆಮ್ಮದಿ ಇರುತ್ತದೆ. ಅದೇ ರೀತಿ ಶತ್ರು ನಾಶ ಹಾಗೂ ಶತ್ರು ಧ್ವಂಸ ಕೂಡ ಆಗುತ್ತದೆ.

ವೃಷಭ ರಾಶಿ: ಈ ರಾಶಿಯವರಿಗೆ ಮನಸ್ಸಿಗೆ ನೋವು ಉಂಟಾಗಲಿದೆ. ಮಧ್ಯಾಹ್ನ ಬಳಿಕ ಎಲ್ಲ ಅಡಚಣೆಗಳು ನಿವಾರಣೆಯಾಗಿ ಮನಸ್ಸಿಗೆ ನೆಮ್ಮದಿ ಸಿಗಲಿದೆ.

ಮಿಥುನ ರಾಶಿ: ಈ ರಾಶಿಯವರಿಗೆ ಮಧ್ಯಾಹ್ನವರೆಗೆ ಮನಸ್ಸಿನಲ್ಲಿ ಭಯ ಇರುತ್ತದೆ. ನಾನಾ ರೀತಿಯ ಕ್ಷೇಶಗಳು ಕಾಡುತ್ತಿರುತ್ತವೆ. ಆದರೆ ಮಧ್ಯಾಹ್ನ ಬಳಿಕ ನೀವು ಜಯ ಗಳಿಸಬಹುದು. ಕಲಾವಿದರಿಗೆ ಬಹಳ ಉತ್ತಮ ದಿನವಾಗಲಿದೆ.

ಕಟಕ ರಾಶಿ: ಮಧ್ಯಾಹ್ನವರೆಗೂ ಕಟಕ ರಾಶಿಯವರ ಪರವಾಗಿ ಎಲ್ಲವೂ ನಡೆಯುತ್ತದೆ. ಆತ್ಮವಿಶ್ವಾಸ ಕೂಡ ಚೆನ್ನಾಗಿರುತ್ತದೆ. ಆದರೆ ಮಧ್ಯಾಹ್ನ ಬಳಿಕ ಮುಖ್ಯವಾದ ವಿಚಾರದಲ್ಲಿ ಕೆಲವು ತಿರುವುಗಳು ಉಂಟಾಗಬಹುದು.

ಸಿಂಹ ರಾಶಿ: ಸಿಂಹ ರಾಶಿಯವರು ಮಧ್ಯಾಹ್ನವರೆಗೂ ಮನೆಯವರ ಜತೆ ಸಮಯ ಕಳೆಯುತ್ತೀರಿ. ಇಂದು ಸಂಸಾರದ ಜವಾಬ್ದಾರಿಗಳು ಹೆಚ್ಚಾಗಬಹುದು. ಬಂಧು-ಬಾಂಧವರ ಜತೆಯೂ ಉತ್ತಮ ಸಮಯವನ್ನು ನೀವು ಕಳೆಯಬಹುದು.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಮಧ್ಯಾಹ್ನವರೆಗೂ ಮನಸ್ಸಿಗೆ ನೆಮ್ಮದಿ ಇರುತ್ತದೆ. ಅದೇ ರೀತಿ ಹಣಕಾಸಿನ ವಿಚಾರವಾಗಿಯೂ ಲಾಭವನ್ನು ಕಾಣುತ್ತೀರಿ.

ವೈವಾಹಿಕ ಜೀವನದಲ್ಲಿ ನೆಮ್ಮದಿ ಬೇಕಾ? ಬೆಡ್‌ರೂಂನಲ್ಲಿ ಹೀಗಿರಲಿ ವಾಸ್ತು

ತುಲಾ ರಾಶಿ: ತುಲಾ ರಾಶಿಯವರಿಗೆ ಮಧ್ಯಾಹ್ನವರೆಗೂ ಮನಸ್ಸಿಗೆ ಕ್ಷೇಶ ಉಂಟಾಗುವ ದಿನವಾಗಲಿದೆ. ಇಂದು ಯಾವುದೇ ಪ್ರಮುಖ ನಿರ್ಧಾರಗಳನ್ನು ಮಾಡಲು ಹೋಗಬೇಡಿ.

ವೃಶ್ಚಿಕ ರಾಶಿ: ಈ ರಾಶಿಯವರಿಗೆ ಮಧ್ಯಾಹ್ನವರೆಗೂ ಎಲ್ಲವೂ ನಿಮ್ಮ ಪರವಾಗಿ ನಡೆಯುತ್ತಿರುತ್ತದೆ. ಇಷ್ಟಾರ್ಥ ಸಿದ್ದಿಯಾಗಲಿದೆ. ಮಧ್ಯಾಹ್ನ ಬಳಿಕ ನಿಮ್ಮ ಸ್ನೇಹ ಸಂಬಂಧದಲ್ಲಿ ಬಿರುಕು ಉಂಟಾಗಬಹುದು.

ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಮಧ್ಯಾಹ್ನವರೆಗೂ ಕಾರ್ಯ ಕ್ಷೇತ್ರದ ಜವಾಬ್ದಾರಿ ಜಾಸ್ತಿಯಾಗುತ್ತವೆ. ಮಧ್ಯಾಹ್ನ ಬಳಿಕ ನೀವು ಸಂತೋಷದಿಂದ ದಿನ ಕಳೆಯಬಹುದು.

ಮಕರ ರಾಶಿ: ಮಕರ ರಾಶಿಯವರಿಗೆ ಅದೃಷ್ಟದ ದಿನವಾಗಲಿದೆ. ಮಧ್ಯಾಹ್ನ ಬಳಿಕ ಕಾರ್ಯಕ್ಷೇತ್ರದಲ್ಲಿ ಒಮ್ಮೆಲೆ ಯಶಸ್ಸು ಸಿಗುತ್ತದೆ.

ಕುಂಭರಾಶಿ: ಈ ರಾಶಿಯವರಿಗೆ ಕೆಲಸ ಕಾರ್ಯದಲ್ಲಿ ಅಡಚಣೆ ಉಂಟಾಗಿ ತೊಂದರೆಯಾಗಬಹುದು. ಹಾಗಾಗಿ ಯಾವುದೇ ನಿರ್ಧಾರವನ್ನು ತಾಳ್ಮೆಯಿಂದ ತೆಗೆದುಕೊಳ್ಳಿ.

ಮೀನ ರಾಶಿ: ಮೀನ ರಾಶಿಯವರಿಗೆ ಮಧ್ಯಾಹ್ನವರೆಗೂ ನಾನಾ ರೀತಿಯ ತೊಂದರೆ ಕಾಡಬಹುದು. ಮಧ್ಯಾಹ್ನ ಬಳಿಕ ಇದ್ದ ಸಮಸ್ಯೆಗಳು ನಿವಾರಣೆಯಾಗಿ ಯಶಸ್ಸು ಗಳಿಸುತ್ತೀರಿ.