ವೃಷಭ ರಾಶಿಗೆ ಗುರು ಬಲ ಇಲ್ಲದಿದ್ದರೂ ಯಶಸ್ಸಿನ ಹೊಸ ಬಾಗಿಲುಗಳು ತೆರೆದುಕೊಳ್ಳಲು ಸರಿಯಾದ ಸಮಯ!
Guru Graha Effect: ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರುವಿನ ಬದಲಾವಣೆಯೂ ಅತೀ ಪ್ರಮುಖ ಎಂದು ಪರಿಗಣಿಸಲಾಗುತ್ತದೆ. ಇದರ ಪರಿಣಾಮವಾಗಿ ಶನಿಯ ಮೇಲೆ ಪ್ರಭಾವ ಬೀರಲಿದ್ದು ಜೀವನದಲ್ಲಿ ಧನಾತ್ಮಕ ಬದಲಾವಣೆಗಳನ್ನು ಪಡೆಯಬಹುದು. ಆರ್ಥಿಕವಾಗಿ, ಆರೋಗ್ಯದಲ್ಲಿ ಹೀಗೆ ಸಕಾರಾತ್ಮಕ ವಾಗಿ ಜಯ ಉಂಟು ಮಾಡಬಹುದು. ಅದರಲ್ಲೂ ವೃಷಭ ರಾಶಿಗೆ ಗುರುವಿನ ಬದಲಾವಣೆ ಯಾವ ರೀತಿಯಾಗಿ ಇರುತ್ತದೆ? ಏನೆಲ್ಲಾ ಲಾಭ ಉಂಟು ಮಾಡಬಹುದು ಎಂದು ಖ್ಯಾತ ಜ್ಯೋತಿಷ್ಯರಾದ ಶ್ರೀ ದೇವದತ್ತ ಶರ್ಮ ಗುರೂಜಿ ಮಾಹಿತಿ ನೀಡಿದ್ದಾರೆ...
ಖ್ಯಾತ ಜ್ಯೋತಿಷ್ಯರಾದ ಶ್ರೀ ದೇವದತ್ತ ಶರ್ಮ ಗುರೂಜಿ -
ಬೆಂಗಳೂರು, ಮೇ 23: ಒಂದು ವರ್ಷದ ನಂತರದಲ್ಲಿ ವೃಷಭ ರಾಶಿಗೆ (Vrishabha Rashi) ಗುರುವಿನ ಬದಲಾವಣೆ ಆಗುತ್ತಿದೆ. ಅಂದ್ರೆ ಕರ್ಕಾಟಕ ರಾಶಿಗೆ ಗುರುವು ಪ್ರವೇಶ ಮಾಡಿದ ನಂತರ ವೃಷಭ ರಾಶಿಗೆ ಗುರು ಬಲ ಇರುವುದಿಲ್ಲ. ಹಾಗಂತ ಈ ರಾಶಿಗೆ ಗುರುವಿನ ಪ್ರಭಾವವೇ ಇಲ್ಲ ಎಂದು ಹೇಳಲಾಗದು. ಗುರು ಉಚ್ಚ ಸ್ಥಾನಕ್ಕೆ ಪ್ರವೇಶ ನೀಡುವುದರಿಂದ ಬಹಳಷ್ಟು ಒಳ್ಳೆಯ ಪ್ರತಿಫಲ ನೀಡುತ್ತಾನೆ ಎಂದು ಜ್ಯೋತಿಷ್ಯರು ವಿವರಿಸಿದ್ದಾರೆ.
ಹನ್ನೊಂದನೆ ಮನೆಯಲ್ಲಿ ಶನಿ ಇರುವುದರಿಂದ ಒಳ್ಳೆಯ ಕೆಲಸಗಳನ್ನೇ ಮಾಡುತ್ತಾನೆ. ಗುರು ಮೂರನೇ ಮನೆಗೆ ಬಂದಿರುವುದರಿಂದ ಗುರುವಿನ ದೃಷ್ಟಿಯೂ ಲಾಭ ಸ್ಥಾನದ ಮೇಲೆ ಪರಿಣಾಮ ಬೀರುತ್ತದೆ. ಕೆಲಸ ಕಾರ್ಯದಲ್ಲಿ ವ್ಯವಹಾರದಲ್ಲಿ ಏರು ಪೇರು ಆದರೂ ಗುರುವಿನಿಂದ ನಿಮಗೆ ಒಳಿತಾಗುತ್ತದೆ. ಯಾವುದೇ ಕೆಲಸ ಕಾರ್ಯದಲ್ಲಿ ಯಶಸ್ಸು ನಿಮ್ಮ ಪರವಾಗಿಯೇ ನಡೆಯಬಹುದು.
ವಿಡಿಯೋ ನೋಡಿ:
ಕೆಲಸ ಕಾರ್ಯದಲ್ಲಿ ಯಶಸ್ಸು, ವೈಯಕ್ತಿಕವಾಗಿ ಮನ್ನಣೆ ಎಲ್ಲವನ್ನು ಗಳಿಸಬಹುದು. ಹೆಚ್ಚಿನ ಸಮಯದಿಂದ ಕಾಯುತ್ತಿದ್ದ ಕೆಲಸಗಳಿಗೆ ಇಂದು ಸಂಪೂರ್ಣ ಪ್ರತಿಫಲ ಸಿಗಬಹುದು. ಮತ್ತು ಜೀವನದಲ್ಲಿ ಯಶಸ್ಸಿನ ಹೊಸ ಬಾಗಿಲುಗಳು ತೆರೆದುಕೊಳ್ಳಬಹುದು. ವ್ಯವಹಾರ ಕೆಲಸ ಕಾರ್ಯ ದಲ್ಲಿ ಹೊಸ ಅವಕಾಶ ಗಳು ಕೂಡ ಸಿಗಬಹುದು. ಅದೇ ರೀತಿ ಅನಿರೀಕ್ಷಿತ ಧನ ಲಾಭ ಕೂಡ ಉಂಟಾಗಬಹುದು.
Vastu Tips: ವೈವಾಹಿಕ ಜೀವನದಲ್ಲಿ ನೆಮ್ಮದಿ ಬೇಕಾ? ಬೆಡ್‌ರೂಂನಲ್ಲಿ ಹೀಗಿರಲಿ ವಾಸ್ತು
ವೈಯಕ್ತಿಕ ಜೀವನದಲ್ಲಿಯೂ ಖುಷಿಯಾದ ವಾತಾವರಣ ಉಂಟಾಗುವ ಸಾಧ್ಯತೆ ಇದೆ. ದಾಂಪತ್ಯ ದಲ್ಲಿಯೂ ನೆಮ್ಮದಿ ಸಿಗಲಿದ್ದು ತೀರ್ಥಯಾತ್ರೆ, ಪ್ರವಾಸ ಹೀಗೆ ಕೈಗೊಳ್ಳುವ ಸಾಧ್ಯತೆಗಳು ಇವೆ. ಶುಕ್ರನೊಂದಿಗೆ ಗುರುವು ಕೂಡ ಎಲ್ಲ ಕೆಲಸ ಕಾರ್ಯದಲ್ಲಿ ಸಾಥ್ ಕೊಟ್ಟು ವೃಷಭ ರಾಶಿಯವನ್ನು ಮುನ್ನಡೆಸುತ್ತಾನೆ. ಆದರೆ ಅನಾರೋಗ್ಯ ಸಮಸ್ಯೆ ವೃಷಭ ರಾಶಿಗೆ ಕಾಡಲಿದ್ದು ಇದ್ದಕ್ಕಿದ್ದಂತೆ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರಬಹುದು. ಪರಿಹಾರವಾಗಿ ಶಿವನ ದೇವಾಲಯದಲ್ಲಿ ಅಭಿಷೇಕ ಮಾಡಬಹುದು, ಪುಷ್ಪರ್ಚನೆಗಳನ್ನು ಅರ್ಪಿಸಬಹುದು...