ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Astro Tips: ಅಧಿಕ ಮಾಸದಲ್ಲಿ ತುಳಸಿಗೆ ಸಂಬಂಧಿಸಿದ ಈ ಕೆಲಸಗಳನ್ನು ಮಾಡಬೇಡಿ; ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

ಅಧಿಕ ಮಾಸದಲ್ಲಿ ತುಳಸಿ ಪೂಜೆಗೆ ವಿಶೇಷ ಮಹತ್ವವಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ಅವಧಿಯಲ್ಲಿ ತುಳಸಿಯನ್ನು ಮುಟ್ಟುವುದು, ಎಲೆಗಳನ್ನು ತಪ್ಪಾಗಿ ಕೀಳುವುದು, ಭಾನುವಾರ ಮತ್ತು ಏಕಾದಶಿಯಂದು ನೀರು ಅರ್ಪಿಸುವುದು ಸೇರಿದಂತೆ ಕೆಲವು ಕಾರ್ಯಗಳನ್ನು ತಪ್ಪಿಸಬೇಕು. ಈ ನಿಯಮಗಳನ್ನು ಪಾಲಿಸಿದರೆ ವಿಷ್ಣು ಹಾಗೂ ಲಕ್ಷ್ಮೀ ದೇವಿಯ ಕೃಪೆ ದೊರೆಯುತ್ತದೆ ಎನ್ನಲಾಗುತ್ತದೆ.

ಅಧಿಕ ಮಾಸದಲ್ಲಿ ತುಳಸಿ ಪೂಜೆಗೆ ಸಂಬಂಧಿಸಿದ ಈ ನಿಯಮಗಳನ್ನು ಮರೆಯದಿರಿ..!

ಅಧಿಕ ಮಾಸ -

Profile
Sushmitha Jain Jun 11, 2026 10:00 AM

ಬೆಂಗಳೂರು: ಸನಾತನ ಧರ್ಮದಲ್ಲಿ ಅಧಿಕ ಮಾಸ ಅಥವಾ ಪುರುಷೋತ್ತಮ ಮಾಸಕ್ಕೆ ವಿಶೇಷ ಮಹತ್ವವಿದೆ. ಈ ಮಾಸವನ್ನು ಭಗವಾನ್ ವಿಷ್ಣುವಿಗೆ ಸಮರ್ಪಿತವಾದ ಪವಿತ್ರ ಕಾಲವೆಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಮಂಗಳ ಕಾರ್ಯಗಳನ್ನು ಸಾಮಾನ್ಯವಾಗಿ ನಡೆಸುವುದಿಲ್ಲ. ಈ ಬಾರಿ ಶ್ರಾವಣ ಮಾಸದೊಂದಿಗೆ ಅಧಿಕ ಮಾಸದ ಅಪರೂಪದ ಸಂಯೋಗ ಉಂಟಾಗಿದ್ದು, ಇದು ಸುಮಾರು 19 ವರ್ಷಗಳಿಗೊಮ್ಮೆ ಮಾತ್ರ ಸಂಭವಿಸುತ್ತದೆ. ಈ ಪವಿತ್ರ ಮಾಸದಲ್ಲಿ ತುಳಸಿ ಪೂಜೆಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ಪಾಲಿಸುವುದು ಅತ್ಯಂತ ಮುಖ್ಯವೆಂದು ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.

ಹಾಗಾದರೆ ಜ್ಯೋತಿಷ್ಯ ಶಾಸ್ತ್ರದ ಸಲಹೆಯಂತೆ (Astro Tips) ಅಧಿಕ ಮಾಸದಲ್ಲಿ ತುಳಸಿಗೆ ಸಂಬಂಧಿಸಿದ ಯಾವ ಕೆಲಸಗಳನ್ನು ಮಾಡಬಾರದು ಎಂಬುದನ್ನು ತಿಳಿಯೋಣ..

ಸಂಜೆ ಸಮಯದಲ್ಲಿ ತುಳಸಿಯನ್ನು ಸ್ಪರ್ಶಿಸಬೇಡಿ

ಧಾರ್ಮಿಕ ನಂಬಿಕೆಗಳ ಪ್ರಕಾರ, ಸಂಜೆ ವೇಳೆಯಲ್ಲಿ ತುಳಸಿ ಪೂಜೆ ಮಾಡಿದ ಬಳಿಕ ಗಿಡವನ್ನು ಅನಗತ್ಯವಾಗಿ ಮುಟ್ಟುವುದನ್ನು ತಪ್ಪಿಸಬೇಕು. ಇದರಿಂದ ಲಕ್ಷ್ಮೀ ದೇವಿಯ ಅಸಮಾಧಾನಕ್ಕೆ ಕಾರಣವಾಗಬಹುದು ಎಂಬ ನಂಬಿಕೆ ಇದೆ.

ತುಳಸಿ ಎಲೆಗಳನ್ನು ಸರಿಯಾದ ರೀತಿಯಲ್ಲಿ ಕೀಳಿರಿ

ತುಳಸಿ ಎಲೆಗಳನ್ನು ಕೀಳುವಾಗ ಉಗುರುಗಳನ್ನು ಬಳಸಬಾರದು. ಉಂಗುರದ ಬೆರಳು ಮತ್ತು ಹೆಬ್ಬೆರಳಿನ ಸಹಾಯದಿಂದ ಎಲೆಗಳನ್ನು ನಿಧಾನವಾಗಿ ಕೀಳಬೇಕು. ಗಿಡಕ್ಕೆ ಯಾವುದೇ ಹಾನಿಯಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ.

ತುಳಸಿಗೆ ಹೊದಿಸಿರುವ ಚುನ್ರಿಯನ್ನು ಬದಲಾಯಿಸಿ

ಹಲವರು ತುಳಸಿ ಗಿಡಕ್ಕೆ ಚುನ್ರಿ ಹೊದಿಸುತ್ತಾರೆ. ಆದರೆ ಅದನ್ನು ದೀರ್ಘಕಾಲ ಬದಲಾಯಿಸದೆ ಇಡುವುದು ಸರಿಯಲ್ಲ. ಇತರ ದೇವತೆಗಳ ಅಲಂಕಾರದಂತೆ ತುಳಸಿಗೆ ಹೊದಿಸಿರುವ ಚುನ್ರಿಯನ್ನೂ ಕಾಲಕಾಲಕ್ಕೆ ಬದಲಾಯಿಸುವುದು ಶುಭಕರವೆಂದು ಹೇಳಲಾಗುತ್ತದೆ.

Astro Tips: ದೇವರಿಗೆ ನೈವೇದ್ಯ ಅರ್ಪಿಸುವಾಗ ಈ ತಪ್ಪುಗಳನ್ನು ಮಾಡಬೇಡಿ; ಪೂಜೆ ಸಂಪೂರ್ಣವಾಗುವುದಿಲ್ಲ!

ಪೂಜೆಯ ನಂತರ ಪ್ರದಕ್ಷಿಣೆ ಮಾಡುವುದು ಮುಖ್ಯ

ತುಳಸಿ ಪೂಜೆಯ ನಂತರ ಕನಿಷ್ಠ ಮೂರು ಬಾರಿ ಪ್ರದಕ್ಷಿಣೆ ಅಥವಾ ಪರಿಕ್ರಮೆ ಮಾಡಬೇಕು ಎಂದು ಧಾರ್ಮಿಕ ಗ್ರಂಥಗಳು ತಿಳಿಸಿವೆ. ಇದು ಪೂಜೆಯ ಸಂಪೂರ್ಣತೆಯನ್ನು ಸೂಚಿಸುವ ಆಚರಣೆಯಾಗಿದೆ.

ಭಾನುವಾರ ಮತ್ತು ಏಕಾದಶಿಯಂದು ನೀರು ಅರ್ಪಿಸಬೇಡಿ

ಧಾರ್ಮಿಕ ನಂಬಿಕೆಯಂತೆ, ಭಾನುವಾರ ಹಾಗೂ ಏಕಾದಶಿ ದಿನಗಳಲ್ಲಿ ತುಳಸಿ ಮಾತೆಗೆ ನೀರು ಅರ್ಪಿಸುವುದನ್ನು ತಪ್ಪಿಸಬೇಕು. ಈ ದಿನಗಳಲ್ಲಿ ತುಳಸಿ ದೇವಿ ವಿಷ್ಣುವಿಗಾಗಿ ವಿಶೇಷ ವ್ರತ ಆಚರಿಸುತ್ತಾಳೆ ಎಂದು ನಂಬಲಾಗುತ್ತದೆ. ಆದ್ದರಿಂದ ಆಕೆಯ ವ್ರತಕ್ಕೆ ಅಡ್ಡಿಯಾಗದಂತೆ ಈ ನಿಯಮವನ್ನು ಪಾಲಿಸುವುದು ಒಳಿತು.

ತುಳಸಿ ಪೂಜೆಯಲ್ಲಿ ಭಕ್ತಿ ಮತ್ತು ಶ್ರದ್ಧೆ ಮುಖ್ಯ

ಅಧಿಕ ಮಾಸದಲ್ಲಿ ತುಳಸಿ ಪೂಜೆಯನ್ನು ಭಕ್ತಿ, ಶ್ರದ್ಧೆ ಮತ್ತು ನಿಯಮಬದ್ಧವಾಗಿ ನೆರವೇರಿಸಿದರೆ ಭಗವಾನ್ ವಿಷ್ಣು ಹಾಗೂ ಮಹಾಲಕ್ಷ್ಮಿಯ ಕೃಪೆ ಲಭಿಸುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ ಈ ಪವಿತ್ರ ಮಾಸದಲ್ಲಿ ತುಳಸಿ ಆರಾಧನೆಗೆ ವಿಶೇಷ ಮಹತ್ವ ನೀಡುವುದು ಉತ್ತಮ.