ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ತಿರುಮಲದಲ್ಲಿ ಮತ್ತೊಂದು ಭಾರಿ ವಂಚನೆ: ರೇಷ್ಮೆ ಹೆಸರಿನಲ್ಲಿ ಪಾಲಿಸ್ಟರ್‌ ಬಟ್ಟೆ ಮಾರಾಟ; ಟಿಟಿಡಿಗೆ 54 ಕೋಟಿ ರೂ. ನಷ್ಟ

ತಿರುಪತಿ ದೇವಸ್ಥಾನದ ಲಡ್ಡುಗಳಲ್ಲಿ ಕಲಬೆರಕೆ ತುಪ್ಪ ಬಳಕೆ ವಿಚಾರವಾಗಿ ಕಳೆದ ಒಂದು ವರ್ಷದಿಂದ ತನಿಖೆ, ವಿಚಾರಣೆಗಳು ನಡೆಯುತ್ತಿದ್ದು, ಇದರ ಮಧ್ಯೆಯೇ ಈಗ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. ಇದರಿಂದ ದೇವಸ್ಥಾನದ ಬೊಕ್ಕಸಕ್ಕೆ ಬರೋಬ್ಬರಿ 54 ಕೋಟಿ ರೂ. ನಷ್ಟವಾಗಿದೆ ಎಂದು ವಿಜಿಲೆನ್ಸ್ ವಿಚಾರಣೆ ವರದಿ ತಿಳಿಸಿದೆ.

ಟಿಟಿಡಿಯಿಂದ ಮತ್ತೊಂದು ಹಗರಣ

(ಸಂಗ್ರಹ ಚಿತ್ರ) -

ತಿರುಪತಿ: ಕಳೆದ ಒಂದು ವರ್ಷದಿಂದ ತಿರುಪತಿಯ (Tirupati) ಲಡ್ಡು (Tirupati laddu) ವಿಚಾರ ಚರ್ಚೆಯಲ್ಲಿದ್ದರೆ ಇದೀಗ ಮತ್ತೊಂದು ಹಗರಣ (tirupati scam) ಎಲ್ಲರನ್ನೂ ಬೆಚ್ಚಿ ಬೀಳುವಂತೆ ಮಾಡಿದೆ. ತಿರುಪತಿ ಲಡ್ಡಿನಲ್ಲಿ ಕಲಬೆರಕೆಯ ತುಪ್ಪ ಬಳಕೆ ವಿಚಾರವಾಗಿ ತನಿಖೆ ನಡೆಯುತ್ತಿರುವ ಮಧ್ಯೆಯೇ ಇದೀಗ ತಿರುಮಲ ತಿರುಪತಿ ದೇವಸ್ಥಾನಗಳ (TTD) ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. ದೇವಾಲಯದ ವಿವಿಧ ಆಚರಣೆಗಳಿಗೆ ಬಳಸುವ ರೇಷ್ಮೆ ಉಡುಪುಗಳ (Silk Garments) ಖರೀದಿ ವಿಚಾರದಲ್ಲಿ ಬಹುದೊಡ್ಡ ಹಗರಣವಾಗಿದೆ ಎಂಬುದು ವಿಜಿಲೆನ್ಸ್ ವಿಚಾರಣೆಯಲ್ಲಿ (vigilance inquiry) ತಿಳಿದು ಬಂದಿದೆ. ಇದು ಇಂದು, ನಿನ್ನೆ ನಡೆದಿರುವ ಹಗರಣವಲ್ಲ ಹತ್ತು ವರ್ಷಗಳ ನಡೆದಿರುವ ಹಗರಣವಾಗಿದೆ.

ತಿರುಪತಿ ದೇವಸ್ಥಾನದ ಲಡ್ಡುಗಳಲ್ಲಿ ಕಲಬೆರಕೆ ತುಪ್ಪ ಬಳಕೆ ವಿಚಾರ ಕಳೆದ ಒಂದು ವರ್ಷಗಳಿಂದ ತನಿಖೆಯಲ್ಲಿದೆ. ಈ ನಡುವೆಯೇ ಇದೀಗ ಮತ್ತೊಂದು ಪ್ರಮುಖ ಹಗರಣ ಬೆಳಕಿಗೆ ಬಂದಿದೆ. ದೇವಾಲಯದ ವಿವಿಧ ಆಚರಣೆಗಳಿಗಾಗಿ ಬಳಸುವ ರೇಷ್ಮೆ ಉಡುಪುಗಳ ಖರೀದಿಯಲ್ಲಿ ಭಾರಿ ಪ್ರಮಾಣದ ಹಗರಣ ನಡೆದಿದ್ದು, ಇದರಿಂದ ದೇವಸ್ಥಾನದ ಬೊಕ್ಕಸಕ್ಕೆ ಬರೋಬ್ಬರಿ 54 ಕೋಟಿ ರೂ. ನಷ್ಟವಾಗಿದೆ ಎಂದು ಆರೋಪಿಸಲಾಗಿದೆ.

BBK 12: ʻಬಿಗ್‌ ಬಾಸ್‌ʼ ಕೊಟ್ಟ ಡೀಲ್‌ನ ಸಕ್ಸಸ್‌ಫುಲ್‌ ಆಗಿ ಮುಗಿಸಿದ ಗಿಲ್ಲಿ ನಟ; ಕ್ಯಾಪ್ಟನ್ಸಿ ರೇಸ್‌ಗೆ ಮಾತಿನ ಮಲ್ಲನ ಡೈರೆಕ್ಟ್‌ ಎಂಟ್ರಿ?

ತಿರುಮಲ ತಿರುಪತಿ ದೇವಸ್ಥಾನಗಳು ಕಳಪೆ ಗುಣಮಟ್ಟದ ಉಡುಪುಗಳನ್ನು ಖರೀದಿಗೆ ಹೆಚ್ಚಿನ ಹಣವನ್ನು ಪೋಲು ಮಾಡಿದೆ. ಟೆಂಡರ್ ಗುತ್ತಿಗೆದಾರನೊಬ್ಬ 100 ರೂ.ಗಿಂತ ಕಡಿಮೆ ಬೆಲೆಯ ಉಡುಪುಗಳನ್ನು ಟಿಟಿಡಿಗೆ 1,400 ರೂ. ಗೆ ಮಾರಾಟ ಮಾಡಿರುವುದನ್ನು ವಿಜಿಲೆನ್ಸ್ ತಂಡವು ಪತ್ತೆ ಮಾಡಿದೆ. ಬೆಲೆ ಮತ್ತು ಗುಣಮಟ್ಟದಲ್ಲಿ ವ್ಯತ್ಯಾಸವನ್ನು ಪತ್ತೆ ಮಾಡಿರುವ ವಿಜಿಲೆನ್ಸ್ ತಂಡ ಈ ಬಗ್ಗೆ ವಿವರವಾದ ತನಿಖೆಗೆ ಮುಂದಾಗಿದೆ.

ವಿಆರ್ ಎಸ್ ಎಕ್ಸ್‌ಪೋರ್ಟ್ಸ್ ಹಲವಾರು ವರ್ಷಗಳಿಂದ ಮಾಡಿರುವ ಒಪ್ಪಂದದ ಪ್ರಕಾರವಾಗಿ ದೇವಾಲಯಕ್ಕೆ ನಿಜವಾದ ರೇಷ್ಮೆಯಂತೆ ಕಾಣುವ ಪಾಲಿಸ್ಟರ್ ಬಟ್ಟೆಯನ್ನು ಪೂರೈಕೆ ಮಾಡಿದೆ. ಇದನ್ನು ದೇವಾಲಯದ ಪ್ರಮುಖ ಆಚರಣೆಗಾಗಿ ಪೂರೈಕೆ ಮಾಡಲಾಗಿದ್ದು ಇದನ್ನು ರೇಷ್ಮೆಯಿಂದ ಮಾಡಲಾಗಿಲ್ಲ ಎಂದು ಪ್ರಯೋಗಾಲಯದ ವರದಿಯಿಂದ ತಿಳಿದು ಬಂದಿದೆ.

ಯುನೆಸ್ಕೋ ಪರಂಪರೆಯ ಪಟ್ಟಿಗೆ ದೀಪಾವಳಿ ಸೇರ್ಪಡೆ; ಮೋದಿ ಸಂತಸ

2015 ರಿಂದ 2025 ರವರೆಗೆ ನಿರಂತರವಾಗಿ ದೇವಾಲಯಕ್ಕೆ ಈ ಬಟ್ಟೆಗಳನ್ನು ಸರಬರಾಜು ಮಾಡಲಾಗಿದೆ. ಇದರಿಂದ ಒಟ್ಟು ಹತ್ತು ವರ್ಷಗಳ ಅವಧಿಯಲ್ಲಿ ದೇವಾಲಯಕ್ಕೆ ಬರೋಬ್ಬರಿ 54 ಕೋಟಿ ರೂ. ನಷ್ಟವಾಗಿದೆ. ಕಳೆದ ಅಕ್ಟೋಬರ್‌ನಲ್ಲಿ ನಡೆದ ಮಂಡಳಿಯ ಸಭೆಯಲ್ಲಿ ಟಿಟಿಡಿ ಆಡಳಿತ ಮಂಡಳಿಯು ಈ ಪ್ರಕರಣವನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ವರ್ಗಾಯಿಸಿದ್ದು, ಇದರ ಕುರಿತು ವಿಚಾರಣೆ ನಡೆಸಲಾಗುತ್ತಿದೆ.

2019- 2024ರ ಅವಧಿಯಲ್ಲಿ ನಡೆದಿರುವ ತಿರುಪತಿ ಲಡ್ಡುಗಳಲ್ಲಿ ಕಳಪೆ ತುಪ್ಪ ಬಳಕೆ ಕುರಿತು ಇತ್ತೀಚೆಗೆ ಹೇಳಿಕೆ ನೀಡಿದ್ದ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅಧ್ಯಕ್ಷ ಬಿ.ಆರ್‌. ನಾಯ್ಡು ಅವರು ಈ ಅವಧಿಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ 11 ಕೋಟಿ ಭಕ್ತರಿಗೆ 48.76 ಕೋಟಿ ಲಡ್ಡು ವಿತರಿಸಲಾಗಿದೆ. ಇದರಲ್ಲಿ 20 ಕೋಟಿ ಲಡ್ಡುಗಳಲ್ಲಿ ಕಲಬೆರಕೆ ತುಪ್ಪ ಬಳಕೆಯಾಗಿದೆ ಎಂದು ತಿಳಿಸಿದ್ದರು.