ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Astro Tips: ಇಂದು ವರ್ಷದ ಮೊದಲ ಹುಣ್ಣಿಮೆ; ಈ ದೇವರ ಪೂಜೆ ಮಾಡಿದ್ರೆ ಅಷ್ಟೈಶ್ವರ್ಯ ಪ್ರಾಪ್ತಿ!

ಜ್ಯೋತಿಷ್ಯ ಶಾಸ್ತ್ರ ಪ್ರಕಾರ ಪುಷ್ಯ ನಕ್ಷತ್ರದೊಂದಿಗೆ ಬರುವ ಪೂರ್ಣಿಮೆಯನ್ನು ಭಗವಾನ್ ವಿಷ್ಣು ಮತ್ತು ತಾಯಿ ಲಕ್ಷ್ಮಿಗೆ ಸಮರ್ಪಿತ ದಿನವೆಂದು ಭಕ್ತರು ನಂಬುತ್ತಾರೆ. ಈ ಕಾರಣದಿಂದ ಪ್ರತಿವರ್ಷ ಪುಷ್ಯ ಪೂರ್ಣಿಮೆಯನ್ನು ಅಪಾರ ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಲಾಗುತ್ತದೆ. ಹಾಗಾದ್ರೆ ಬನ್ನಿ ಈ ದಿನ ಏನೆಲ್ಲ ಮಾಡಬೇಕು..? ಯಾವ ರೀತಿ ಕ್ರಮಪೂರ್ವಕವಾಗಿ ಆಚರಿಸಬೇಕು ಎಂದು ತಿಳಿಯೋಣ.

ಹುಣ್ಣಿಮೆಯಂದು ಹೀಗೆ ದಾನ ಮಾಡಿ, ನಿಮಗೇ ಬರುತ್ತೆ ಸಂಪತ್ತು!

ಹುಣ್ಣಿಮೆ -

Profile
Sushmitha Jain Jan 3, 2026 7:53 AM

ಬೆಂಗಳೂರು: ಹಿಂದೂ ಧರ್ಮದಲ್ಲಿ (Hindu Religion) ಹುಣ್ಣಿಮೆ (Purnima) ದಿನಕ್ಕೆ ಬಹಳ ವಿಶೇಷ ಮಹತ್ವ ಎಂದು ಪರಿಗಣಿಸಲಾಗಿದೆ. ಈ ಬಾರಿ ಪುಷ್ಯ ಮಾಸದ ಹುಣ್ಣಿಮೆಯನ್ನು 2026 ರ ಜನವರಿ 3 ರಂದು ಶುಕ್ರವಾರ ಆಚರಿಸಲಾಗುತ್ತದೆ. ಇದು 2026 ರ ಮೊದಲ ಹುಣ್ಣಿಮೆಯಾಗಿದೆ. ಹುಣ್ಣಿಮೆಯ ದಿನ, ಚಂದ್ರನು ಪೂರ್ಣ ಗಾತ್ರದಲ್ಲಿರುತ್ತಾನೆ. ಪುಷ್ಯ ಮಾಸವನ್ನು ಭಗವಾನ್ ಸೂರ್ಯನ ತಿಂಗಳು ಎಂದು ಕರೆಯಲಾಗುತ್ತದೆ, ಆದ್ದರಿಂದ ಈ ತಿಂಗಳಲ್ಲಿ ಬರುವ ಹುಣ್ಣಿಮೆಯನ್ನು ಪುಷ್ಯ ಪೂರ್ಣಿಮಾ ಎಂದು ಕರೆಯಲಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರ (Astro Tips) ಪ್ರಕಾರ ಪುಷ್ಯ ನಕ್ಷತ್ರದೊಂದಿಗೆ ಬರುವ ಪೂರ್ಣಿಮೆಯನ್ನು ಭಗವಾನ್ ವಿಷ್ಣು ಮತ್ತು ತಾಯಿ ಲಕ್ಷ್ಮಿಗೆ ಸಮರ್ಪಿತ ದಿನವೆಂದು ಭಕ್ತರು ನಂಬುತ್ತಾರೆ. ಈ ಕಾರಣದಿಂದ ಪ್ರತಿವರ್ಷ ಪುಷ್ಯ ಪೂರ್ಣಿಮೆಯನ್ನು ಅಪಾರ ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಲಾಗುತ್ತದೆ. ಈ ದಿನ ಪವಿತ್ರ ನದಿಯಲ್ಲಿ ಸ್ನಾನ ಮಾಡಿ ದಾನ ಮಾಡುವುದರಿಂದ ಪುಣ್ಯಫಲ ದೊರೆಯುತ್ತದೆ ಎನ್ನುವ ಧಾರ್ಮಿಕ ನಂಬಿಕೆಯಿದೆ. ಗಂಗಾ ಸ್ನಾನ ಮತ್ತು ಪೂಜೆಯಿಂದ ಪಾಪನಾಶವಾಗುತ್ತದೆ, ಜೊತೆಗೆ ಜೀವನದಲ್ಲಿ ಶಾಂತಿ, ಸುಖ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಲಕ್ಷ್ಮಿ ದೇವಿಯ ಕೃಪೆಯಿಂದ ಆರ್ಥಿಕ ಸ್ಥಿತಿಯೂ ಉತ್ತಮವಾಗುವ ಸಾಧ್ಯತೆ ಇದೆ.

ಇದರೊಂದಿಗೆ ಪುಷ್ಯ ಪೂರ್ಣಿಮೆಯ ದಿನದಂದು ಶ್ರೀ ವಿಷ್ಣು ಮತ್ತು ಮಹಾಲಕ್ಷ್ಮಿಯನ್ನು ವಿಧಿ-ವಿಧಾನಗಳ ಪ್ರಕಾರ ಪೂಜಿಸುವುದರಿಂದ ಕುಟುಂಬದಲ್ಲಿ ಸಂತೋಷ ಮತ್ತು ಐಶ್ವರ್ಯ ನೆಲೆಸುತ್ತದೆ ಎಂಬ ನಂಬಿಕೆಯಿದೆ. ಈ ದಿನ ಸೂರ್ಯ ದೇವನ ಆರಾಧನೆಯಿಂದ ಮರಣಾನಂತರ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಶಾಸ್ತ್ರಗಳು ತಿಳಿಸುತ್ತವೆ. ಪೂಜೆ ಜೊತೆಗೆ ದಾನ ಮಾಡುವುದನ್ನು ಅತ್ಯಂತ ಫಲಪ್ರದವೆಂದು ಪರಿಗಣಿಸಲಾಗುತ್ತದೆ.

Astro Tips: ತಪ್ಪಿಯೂ ಪರ್ಸ್‌ನಲ್ಲಿ ಹಣದ ಜೊತೆ ಈ ವಸ್ತು ಇಟ್ಟುಕೊಳ್ಳಬೇಡಿ! ದಾರಿದ್ರ್ಯ ಕಾಡಬಹುದು

ಈ ಕಾರ್ಯಗಳನ್ನು ಮಾಡಿ

ಈ ಶುಭ ದಿನದಂದು ಲಕ್ಷ್ಮಿ ದೇವಿಗೆ ಖೀರ್ ನೈವೇದ್ಯ ಅರ್ಪಿಸಿ, ಅದನ್ನು ಕನ್ಯೆಯರಿಗೆ ಪ್ರಸಾದವಾಗಿ ವಿತರಿಸುವುದು ಶುಭಕರವೆಂದು ನಂಬಲಾಗುತ್ತದೆ. ಇದರಿಂದ ಧನಾಗಮನವಾಗುತ್ತದೆ ಎಂಬ ವಿಶ್ವಾಸವಿದೆ. ಜೊತೆಗೆ ಲಕ್ಷ್ಮಿ ದೇವಿಗೆ 11 ಹಳದಿ ಕವಡೆಗಳನ್ನು ಅರ್ಪಿಸಿ, ನಂತರ ಅವುಗಳನ್ನು ಕೆಂಪು ಅಥವಾ ಹಳದಿ ಬಟ್ಟೆಯಲ್ಲಿ ಕಟ್ಟಿ ತಿಜೋರಿ ಅಥವಾ ಹಣ ಇಡುವ ಸ್ಥಳದಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹ ಸದಾ ಲಭಿಸುತ್ತದೆ ಎಂದು ಹೇಳಲಾಗುತ್ತದೆ.

ಈ ವಿಷಯ ನೆನಪಿಟ್ಟುಕೊಳ್ಳಿ

ಹಾಗೇ ಈ ದಿನದಂದು ಲಕ್ಷ್ಮಿ ದೇವಿಗೆ ಕೆಂಪು ಚಂದನ, ಕೆಂಪು ಹೂವುಗಳು ಮತ್ತು ಸುಮಂಗಲಿ ವಸ್ತುಗಳನ್ನು ಅರ್ಪಿಸಿ.

ದೇವರ ಕೋಣೆಯಲ್ಲಿ ತುಪ್ಪದ ದೀಪ ಹಚ್ಚಿ.

ಲಕ್ಷ್ಮಿ ನಾರಾಯಣರಿಗೆ ನೈವೇದ್ಯ ಸಮರ್ಪಿಸಿ
ಪುಷ್ಯ ಪೂರ್ಣಿಮಾ ವ್ರತ ಕಥೆಯನ್ನು ಓದಿ
ವಿಷ್ಣು ಮತ್ತು ಲಕ್ಷ್ಮಿ ಮಂತ್ರ ಜಪಿಸಿ.

ಪೂಜೆಯಲ್ಲಿ ನಡೆದ ತಪ್ಪುಗಳಿಗೆ ಕ್ಷಮೆ ಯಾಚಿಸಿ ಸಂಜೆ ಚಂದ್ರೋದಯ ಸಮಯದಲ್ಲಿ ಚಂದ್ರನಿಗೆ ರ್ಅಘ್ಯ ಅರ್ಪಿಸಿ

ಪಠಿಸಬಹುದಾದ ಮಂತ್ರ

ಓಂ ಶ್ರೀಂ ಹ್ರೀಂ ಕ್ಲೀಂ ತ್ರಿಭುವನ ಮಹಾಲಕ್ಷ್ಮಿಯೈ
ಅಸ್ಮಾಂಕ ದಾರಿದ್ರ್ಯ ನಾಶಾಯ ಪ್ರಚುರ ಧನ ದೇಹಿ ದೇಹಿ ಕ್ಲೀಂ ಹ್ರೀಂ ಶ್ರೀಂ ಓಂ
ಓಂ ಶ್ರೀ ಮಹಾಲಕ್ಷ್ಮ್ಯೈ ಚವಿದ್ಮಹೇ
ವಿಷ್ಣುಪತ್ನ್ಯೈಚ ಧೀಮಹಿ
ತನ್ನೋ ಲಕ್ಷ್ಮಿ ಪ್ರಚೋದಯಾತ್ ಓಂ
ಓಂ ಘೃಣಿಃ ಸೂರ್ಯಾಯ ನಮಃ

ಇನ್ನು ಪೂರ್ಣಿಮಾ ತಿಥಿಯಂದು ದಾನಕ್ಕೆ ವಿಶೇಷ ಮಹತ್ವವಿದೆ. ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿರುವವರು ಈ ದಿನದಂದು ಬಡವರಿಗೆ ಹಾಲು ಹಾಗೂ ಮೊಸರು ದಾನ ಮಾಡಿದರೆ ಚಂದ್ರನ ದೋಷ ಶಮನವಾಗಿ ಆರ್ಥಿಕ ಸುಧಾರಣೆ ಕಂಡುಬರುತ್ತದೆ ಎಂದು ನಂಬಲಾಗಿದೆ. ಇದರಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯೂ ವೃದ್ಧಿಯಾಗುತ್ತದೆ.
ದಾಂಪತ್ಯ ಜೀವನದಲ್ಲಿ ಶಾಂತಿ ಮತ್ತು ಪ್ರೀತಿಯನ್ನು ಬಯಸುವವರು ಪುಷ್ಯ ಪೂರ್ಣಿಮೆಯಂದು ಮಹಿಳೆಯರಿಗೆ ಸೌಂದರ್ಯವರ್ಧಕ ವಸ್ತುಗಳನ್ನು ದಾನ ಮಾಡಿ, ಪೂಜೆಯ ವೇಳೆ ದಾಂಪತ್ಯ ಸುಖಕ್ಕಾಗಿ ಪ್ರಾರ್ಥಿಸಬೇಕು. ಹೀಗೆ ಮಾಡುವುದರಿಂದ ಸಂಬಂಧದಲ್ಲಿ ಪ್ರೀತಿ, ಹೊಂದಾಣಿಕೆ ಮತ್ತು ಸಂತೋಷ ಹೆಚ್ಚಾಗುತ್ತದೆ ಎಂದು ಧಾರ್ಮಿಕ ನಂಬಿಕೆ ಇದೆ.