ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಿನ ಭವಿಷ್ಯ, ಮಾರ್ಚ್ 18, 2026: ಗುರುವಿನ ಪ್ರಭಾವದಿಂದ ಈ ರಾಶಿಗಳಿಗೆ ನಿರೀಕ್ಷೆಗೂ ಮೀರಿದ ಯಶಸ್ಸು

Horoscope Today March 18: ಇಂದು ವಿಶ್ವಾವಸು ನಾಮ ಸಂವತ್ಸರದ, ಉತ್ತರಾಯಣ, ಶರದೃತು ಫಾಲ್ಗುಣ ಮಾಸೆ, ಕೃಷ್ಣೆ ಪಕ್ಷದ, ಚತುರ್ದಶಿ ತಿಥಿ, ಪೂರ್ವ ಭದ್ರಾಪದ ನಕ್ಷತ್ರದ ಮಾರ್ಚ್ 18ನೇ ತಾರೀಖಿನ ಬುಧವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ.

ಈ  ರಾಶಿಗೆ ಇಂದು ಗುರುವಿನಿಂದ ಒಳಿತು

ಇಂಟರ್ ನೆಟ್ ಚಿತ್ರ -

Profile
Pushpa Kumari Mar 18, 2026 7:00 AM

ಬೆಂಗಳೂರು: ಇಂದು ವಿಶ್ವಾವಸು ನಾಮ ಸಂವತ್ಸರದ ಉತ್ತರಾಯಣ ಶರದೃತು, ಫಾಲ್ಗುಣ ಮಾಸೆ, ಪೂರ್ವಭದ್ರಾ ಪದ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಪೂರ್ವಭದ್ರಾಪದ ನಕ್ಷತ್ರದ ಅಧಿಪತಿ ಗುರು ಆಗಿದ್ದಾನೆ‌. ಹಾಗಾಗಿ ಹೆಚ್ಚಿನವರಿಗೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಮೇಷ ರಾಶಿಯವರಿಗೆ ಉತ್ತಮವಾಗಿದ್ದು ಇಷ್ಟಾರ್ಥ ಸಿದ್ದಿಯಾಗುತ್ತದೆ. ಅತೀ ಹೆಚ್ಚಿನ ಗೌರವ ನಿಮಗೆ ಇಂದು ಸಿಗುತ್ತದೆ.

ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಕಾರ್ಯಕ್ಷೇತ್ರದಲ್ಲಿ ಕೂಡ ಅತೀ ಹೆಚ್ಚಿನ ಯಶಸ್ಸು ಸಿಗುತ್ತದೆ. ಅದೇ ರೀತಿ ಹೆಚ್ಚಿನ ಗೌರವ ಕೂಡ ಪ್ರಾಪ್ತಿಯಾಗುತ್ತದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಭಾಗ್ಯೋದಯವಾದ ದಿನವಾಗಿದೆ. ನಿಮಗೆ ಬೇಕಾದಂತಹ ಪ್ರಮುಖ ನಿರ್ಧಾರವನ್ನು ಇಂದು ನೀವು ಕೈಗೊಳ್ಳುತ್ತೀರಿ.

ಕಟಕ ರಾಶಿ: ಕಟಕ ರಾಶಿ ಅವರಿಗೆ ಇಂದು ಉತ್ತಮವಾದ ದಿನವಾಗಿದೆ. ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಬಹಳ ದೊಡ್ಡ ಬದಲಾವಣೆ ಕಂಡು ಬರುತ್ತದೆ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಪಾರ್ಟ್ನರ್ಸ್ ಶೀಪ್ ವ್ಯವಹಾರದಲ್ಲಿ ಒಳಿತಗಾಲಿದೆ. ಹೊಸ ಸ್ನೇಹಿತರ ಪರಿಚಯ ನಿಮಗೆ ಆಗಬಹುದು.‌ ಯಶಸ್ಸಿನ ದಿನವಾಗಿ ಇಂದು ಕಳೆಯಲಿದ್ದೀರಿ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಉತ್ತಮವಾದ ದಿನವಾಗಿದೆ. ಸಾಮಾಜಿಕ ಚಟುವಟಿಕೆಯಲ್ಲಿ ಜಯವನ್ನು ಕಾಣುವ ದಿನವಾಗಿದೆ. ಅತೀ ಮುಖ್ಯವಾದ ಗೆಲುವು ನಿಮ್ಮದು ಆಗುತ್ತದೆ.

Vastu Tips: ವಾಸ್ತು ಸಲಹೆಯಂತೆ ಮನೆಯಲ್ಲಿ ಕರಿಬೇವು ಗಿಡ ನೆಟ್ಟರೆ ಹಣಕಾಸು ಸಮಸ್ಯೆಯೇ ಬರದು!

ತುಲಾ ರಾಶಿ: ತುಲಾ ರಾಶಿಯವರಿಗೆ ಇಂದು ಅತ್ಯುತ್ತಮವಾದ ದಿನವಾಗಿದೆ. ಪ್ರೇಮ, ಪ್ರೀತಿ ದಾಂಪತ್ಯದಲ್ಲಿ ಒಳಿತು ಆಗಬಹುದು. ಧಾರ್ಮಿಕ ಕೆಲಸಗಳಿಗೆ ಇಂದು ಹೆಚ್ಚಿನ ಒತ್ತು ನೀಡುತ್ತೀರಿ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ನಿಮ್ಮ ಆಸ್ತಿ ಪಾಸ್ತಿ ವಿಚಾರಕ್ಕೆ ಹಾಗೂ ತಾಯಿಗೆ ಸಂಬಂಧಿಸಿದ ವಿಚಾರವಾಗಿ ಮುಖ್ಯವಾದ ನಿರ್ಧಾರ ತೆಗೆದುಕೊಳ್ಳಬಹುದು. ಕೋರ್ಟ್, ಕಛೇರಿ ವ್ಯವಹಾರದಲ್ಲಿ ಕೂಡ ಪಾಲ್ಗೊಳ್ಳಬಹುದು.

ಧನಸ್ಸು ರಾಶಿ: ಧನಸ್ಸು ರಾಶಿಗೆ ಅತೀ ಮುಖ್ಯವಾದ ಕೆಲಸವನ್ನು ಮಾಡುತ್ತಿರಿ‌. ಸಾಮಾಜಿಕ ಚಟುವಟಿಕೆಯಲ್ಲಿ ಯಶಸ್ಸು ಕಾಣುತ್ತೀರಿ. ಮಾಧ್ಯಮ, ಸೋಷಿಯಲ್ ಮೀಡಿಯಾದಲ್ಲಿ ಇರೋರಿಗೆ ಅತೀ ಉತ್ತಮವಾಗಿದೆ.

ಮಕರ ರಾಶಿ: ಮಕರ ರಾಶಿಯವರಿಗೆ ನಿಮ್ಮ ಮನೆಯಲ್ಲಿ ಬಹಳನೇ ಉತ್ತಮವಾದ ವಾತಾವರಣ ಇರುತ್ತದೆ. ನೀವು ಅಂದುಕೊಳ್ಳದಷ್ಟು ಒಳ್ಳೆಯದು ಇಂದು ಆಗುತ್ತದೆ. ಸಂಸಾರದ ವಿಚಾರದಲ್ಲೂ ಒಳಿತು ಆಗುತ್ತದೆ.

ಕುಂಭರಾಶಿ: ಈ ರಾಶಿಯವರಿಗೆ ವೈಯಕ್ತಿಕ ಬದಲಾವಣೆ ಆಗಬಹುದು. ಇದರಿಂದ ಮುಂದಿನ ಜೀವನಕ್ಕೆ ಮಾರ್ಗದರ್ಶನ ನಿಮಗೆ ಸಿಗುತ್ತದೆ.

ಮೀನ ರಾಶಿ: ಮೀನ ರಾಶಿಗೆ ಆಧ್ಯಾತ್ಮಿಕ ವಿಚಾರವಾಗಿ ದೊಡ್ಡ ಬದಲಾವಣೆ ಆಗುತ್ತದೆ. ಹಣ ಕಾಸಿನ ವಿಚಾರವಾಗಿಯೂ ಒಳಿತು ಆಗುತ್ತದೆ.