Horoscope Today December 5th: ಇಂದು ಶುಭ ಶುಕ್ರವಾರ; ಮನಸ್ಸಿಗೆ ನೆಮ್ಮದಿ, ಕಾರ್ಯ ಕ್ಷೇತ್ರದಲ್ಲಿ ಯಶಸ್ಸು
ನಿತ್ಯ ಭವಿಷ್ಯ ಡಿಸೆಂಬರ್ 5, 2025: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು ಮಾರ್ಗಶಿರಾ ಮಾಸೆ ಕೃಷ್ಣ ಪಕ್ಷದ ಪ್ರತಿಭಾ ತಿಥಿ, ರೋಹಿಣಿ ನಕ್ಷತ್ರದ ಡಿಸೆಂಬರ್ 5 ತಾರೀಖಿನ ಈ ದಿನ ಗುರುವು ವಕ್ರಿಯಾಗಿದ್ದು ಮಿಥುನ ರಾಶಿಯನ್ನು ಪ್ರವೇಶ ಮಾಡಲಿದ್ದಾನೆ. ಗುರುವು ವಕ್ರಿಯಾಗಿರುವ ಕಾರಣ ಅನೇಕ ರಾಶಿ ಮೇಲೆ ಗುರು ಬಲ ಪರಿಣಾಮ ಬೀರಲಿದೆ. ಈ ದಿನದ ಭವಿಷ್ಯ ಹೇಗಿರಲಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಡಿ. 5: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು ಮಾರ್ಗಶಿರಾ ಮಾಸೆ ಕೃಷ್ಣ ಪಕ್ಷದ ಪ್ರತಿಭಾ ತಿಥಿ, ರೋಹಿಣಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದು ಹೀಗೆ:
ಮೇಷ ರಾಶಿ: ಗುರು ವಕ್ರಿ ಇರುವುದು ಮೇಷ ರಾಶಿಯವರಿಗೆ ಯಾವುದೆ ಸಮಸ್ಯೆ ಇರುವುದಿಲ್ಲ. ಸಹೋದರ, ಸಹೋದರಿಯರ ನಡುವೆ ಇದ್ದ ವೈಮನಸ್ಸು, ಭಿನ್ನಾಭಿಪ್ರಾಯ ಎಲ್ಲವೂ ದೂರಾಗಲಿದೆ. ಮುಖ್ಯವಾದ ವಿಚಾರಗಳಿಗೆ ನಿಮಗೆ ಬೇಕಾದ ಸಹಕಾರ ಇಂದು ಅಲ್ಪ ಮಟ್ಟಿಗೆ ಸಿಗಲಿದೆ. ಈ ದಿನ ಮೇಷ ರಾಶಿಯವರಿಗೆ ಮಿಶ್ರ ಫಲ ಇರಲಿದೆ. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಜಾಗೃತಿ ಅಗತ್ಯ.
ವೃಷಭ ರಾಶಿ: ಇಂದು ವೃಷಭ ರಾಶಿಯವರ ಮೇಲೆ ಗುರು ಧನಾತ್ಮಕ ಪರಿಣಾಮ ಬೀರಲಿದೆ. ಈ ದಿನ ಮುಖ್ಯವಾದ ತೊಂದರೆ, ತಾಪತ್ರಯ ಎಲ್ಲವೂ ಬಗೆಹರಿಯಲಿದೆ. ಹೀಗಾಗಿ ಇದು ನಿಮಗೆ ಅತ್ಯುತ್ತಮ ದಿನವಾಗಲಿದೆ. ಸುಖ, ಶಾಂತಿ ಎಲ್ಲವೂ ಒದಗಿ ಬರಲಿದೆ. ಮನಸ್ಸಿಗೆ ನೆಮ್ಮದಿ, ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ನಿಮಗೆ ಸಿಗಲಿದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಈ ದಿನ ಕಷ್ಟದ ದಿನವಾಗಲಿದೆ. ಹೊಸ ವಿಚಾರ, ಹೊಸ ವ್ಯಕ್ತಿಯ ಪರಿಚಯದ ಬಗ್ಗೆ ಅನೇಕ ಗೊಂದಲಗಳು ನಿಮ್ಮನ್ನು ಕಾಡಲಿದೆ. ದಾಂಪತ್ಯ ಜೀವನ, ಪ್ರೇಮ, ಪ್ರೀತಿ ಇತ್ಯಾದಿ ವಿಚಾರದಲ್ಲಿ ಜಾಸ್ತಿ ಕಿರಿಕಿರಿ ಉಂಟಾಗಲಿದೆ. ನೀವು ಅಂದುಕೊಂಡ ಕೆಲಸಗಳಿಗೆ ಅನಗತ್ಯ ಸಮಸ್ಯೆ, ಗೊಂದಲ ಏರ್ಪಡಲಿದೆ. ಯಾವುದೆ ಹೊಸ ಯೋಜನೆ ಈ ದಿನ ಮಾಡುವುದು ಬೇಡ.
ಕಟಕ ರಾಶಿ: ಕಟಕ ರಾಶಿಯವರಿಗೆ ಈ ದಿನ ಮಿಶ್ರ ಫಲ ಸಿಗಲಿದೆ. ಈ ಹಿಂದಿನ ಗೊಂದಲ, ವೈಮಸ್ಸು ಸೇರಿದಂತೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ನಿಮ್ಮ ಮನೆ ಹಾಗೂ ನಿಮಗೆ ಸಂಬಂಧಿಸಿದ್ದ ಹಳೆಯ ಒಂದು ಸಮಸ್ಯೆ ಈಗ ಪುನಃ ಕಾಡಲಿದೆ. ಕುಟುಂಬದ ವ್ಯಾಜ್ಯ ಬಗೆಹರಿಯಲಿದೆ. ಅನಿರೀಕ್ಷಿತ ಧನಾಗಮನ. ಆರೋಗ್ಯ ಸಮಸ್ಯೆ ಈ ದಿನ ಕಾಡುವ ಸಾಧ್ಯತೆ ಇದ್ದು ಈ ಬಗ್ಗೆ ಹೆಚ್ಚಿನ ಗಮನಹರಿಸುವುದು ಅಗತ್ಯ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಗುರು ವಕ್ರಿಯಾಗಿದ್ದು ಈ ದಿನ ಸಂತಸ ದೊರೆಯಲಿದೆ. ಹಳೆ ಸ್ನೇಹಿತರ ದಿಢೀರ್ ಭೇಟಿ ಮನಸ್ಸಿಗೆ ಖುಷಿ ನೀಡಲಿದೆ. ವ್ಯಾಪಾರ, ವ್ಯವಹಾರ, ಕುಟುಂಬ ಸಂಬಂಧಗಳಿಂದ ಅನೇಕ ವಿಚಾರದಲ್ಲಿ ಉತ್ತಮವಾಗಿ ಇರಲಿದೆ. ವ್ಯಾಪಾರ ವ್ಯವಹಾರದಲ್ಲಿ ನಷ್ಟವಾಗುವ ಸಾಧ್ಯತೆ ಇದೆ. ಮಾತುಕತೆಯಲ್ಲಿ ಆದಷ್ಟು ಜಾಗೃತಿಯಿಂದ ಮುನ್ನಡೆಯುವುದು ಉತ್ತಮ. ಕೆಲವು ಸಮಸ್ಯೆಗೆ ತಾತ್ಕಾಲಿಕವಾಗಿ ಪರಿಹಾರ ಈ ದಿನ ಸಿಗಲಿದೆ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಈ ದಿನ ಗುರು ವಕ್ರಿಯಾಗಿದ್ದು ಧನಾತ್ಮಕ ಫಲಿತಾಂಶ ಗೋಚರಿಸಲಿದೆ. ಹಿಂದಿನ ಯಾವುದೊ ಅವಕಾಶ ಈಗ ಪುನಃ ನಿಮಗೆ ಪ್ರಾಪ್ತಿಯಾಗಲಿದೆ. ಸಾಮಾಜಿಕ ಚಟುವಟಿಕೆಯಲ್ಲಿ ಉಂಟಾದ ಗೊಂದಲ, ವೈಮನಸ್ಸು ದೂರಾಗಲಿದ್ದು, ನೆಮ್ಮದಿ ಪ್ರಾಪ್ತಿಯಾಗಲಿದೆ. ಸಂಸಾರ ತಾಪತ್ರಯ ಇತ್ಯಾದಿ ಸಮಸ್ಯೆಗೆ ಪರಿಹಾರವಾಗಲಿದೆ.
ತುಲಾ ರಾಶಿ: ತುಲಾ ರಾಶಿಯವರಿಗೆ ಈ ದಿನ ಗುರು ವಕ್ರಿಯಾಗಿದ್ದು ಧನಾತ್ಮಕ ಫಲಿತಾಂಶ ಸಿಗಲಿದೆ. ನಾಲ್ಕೈದು ತಿಂಗಳಿಂದ ಬಾಕಿ ಇದ್ದ ಮದುವೆ ಪ್ರಪೋಸಲ್ ಮತ್ತೆ ಪುನಃ ಬರಬಹುದು. ಕೆಲಸದಲ್ಲಿ ಬಡ್ತಿ, ಗುರುಹಿರಿಯರಿಂದ ಗೌರವ ಪ್ರಾಪ್ತವಾಗಲಿದೆ. ಬೇರೆ ಗೋಚರಗಳು ಅಷ್ಟು ಅನುಕೂಲವಾಗಿಲ್ಲದ ಕಾರಣ ಇದರ ಗೋಚರ ಫಲ ನಿಮಗೆ ಸಂಪೂರ್ಣ ಯಶಸ್ಸು ಸಿಗಲಾರದು. ಸಂಸಾರ ವಿಚಾರಗಳಿಗೆ ಮಹತ್ವ ನೀಡಬೇಕು.
Vastu Tips: ನಿಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ನಿವಾರಿಸಲಿದೆ ಅಡುಗೆ ಮನೆಯ ಈ ಒಂದು ವಸ್ತು
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಸ್ನೇಹಿತರು, ಹಿತೈಷಿಗಳ ನಡುವೆ ವೈಮನಸ್ಸು ಮೂಡಲಿದೆ. ವೈಯಕ್ತಿಕ ಸಮಸ್ಯೆ, ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆ ಇದೆ. ಮಿತ್ರತ್ವ ಸಂಬಂಧ ಹಾಳಾಗಲಿದೆ. ಹಣ ವ್ಯಯ ಆಗುವ ಸಾಧ್ಯತೆ ಇದೆ. ಅನಗತ್ಯವಾಗಿ ನಿಂದನೆ, ಅಪಮಾನಗಳಿಗೆ ನೀವು ಗುರಿಯಾಗುವ ಸಾಧ್ಯತೆ ಇದೆ.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಇದು ಉತ್ತಮ ದಿನ. ವ್ಯಾಪಾರ, ಪ್ರೀತಿ ಸಂಬಂಧದಲ್ಲಿ ಜಗಳ, ಮನಸ್ತಾಪ ದೂರಾಗಲಿದೆ. ಮಿತ್ರರಿಂದ ಹಾಳಾಗಿದ್ದ ಹಳೆ ವೈಮನಸ್ಸು ದೂರಾಗಲಿದೆ. ಮನಸ್ಸಿಗೆ ನೆಮ್ಮದಿ ಸಿಗಲಿದೆ. ಕೆಲವು ಅವಕಾಶಗಳನ್ನು ಬಳಸುವ ವಿಚಾರಕ್ಕೆ ಸಾಕಷ್ಟು ಜಾಗೃತಿಯಿಂದ ಇರಬೇಕು.
ಮಕರ ರಾಶಿ: ಈ ದಿನ ಮಕರ ರಾಶಿಯವರಿಗೆ ಕಷ್ಟದ ದಿನ. ಸ್ನೇಹಿತರ ನಡುವೆ ವೈಮನಸ್ಸು ಮೂಡಲಿದೆ. ಮಿತ್ರತ್ವ ಸಂಬಂಧ ಹಾಳಾಗುವ ಸಾಧ್ಯತೆ ಇದೆ. ಹಣ ವ್ಯಯ ಆಗುವ ಸಾಧ್ಯತೆ ಇದೆ. ಹಳೆ ಆರೋಗ್ಯ ಸಮಸ್ಯೆ ಇದ್ದರೆ ಅದು ಮರುಕಳಿಸಲಿದೆ. ಹಳೆಯ ವೈಮನಸ್ಸು ಮನಸ್ಸಿನ ನೆಮ್ಮದಿ ಹಾಳು ಮಾಡಲಿದೆ.
ಕುಂಭರಾಶಿ: ಕುಂಭ ರಾಶಿಯವರಿಗೆ ಈ ದಿನ ಉತ್ತಮವಾಗಲಿದೆ. ಈ ದಿನ ನಿಮ್ಮ ಆಪ್ತರ ಸಹಕಾರ ಸಿಗಲಿದೆ. ಈ ದಿನ ಮಾತಿನ ಮೇಲೆ ಆದಷ್ಟು ಹಿಡಿತ ಕಾಯ್ದುಕೊಳ್ಳಬೇಕು. ಧ್ಯಾನ , ಯೋಗ, ಮಂತ್ರ ಪಠಣೆ ಇಂತವುಗಳನ್ನು ಮಾಡು ದರಿಂದ ಮಾನಸಿಕ ಖಿನ್ನತೆಯ ಸಮಸ್ಯೆ ದೂರಾಗಲಿದೆ.
ಮೀನ ರಾಶಿ: ಮೀನ ರಾಶಿಯವರಿಗೆ ಈ ದಿನ ಬಹಳ ಉತ್ತಮ ಫಲ ದೊರೆಯಲಿದೆ. ಮನಸ್ಸಿನ ಸಾಕಷ್ಟು ಗೊಂದಲಗಳು ದೂರಾಗಿ ನೆಮ್ಮದಿ ಪ್ರಾಪ್ತಿಯಾಗಲಿದೆ. ಹೊಸ ಮನೆ ಖರೀದಿ, ಆಸ್ತಿ ಖರೀದಿ ಮಾಡುವ ಸಾಧ್ಯತೆ ಇದೆ. ವ್ಯಾಪಾರ, ಇತರ ಮಾತುಕತೆಯಲ್ಲಿ ತುಂಬಾ ಜಾಗರೂಕತೆಯಿಂದ, ವಿವೇಕಯುತವಾಗಿ ನೀವು ವ್ಯವಹರಿಸಬೇಕು.