Horoscope Today January 7th: ಈ ರಾಶಿಯವರಿಗೆ ಇಂದು ಕೇತುವಿನ ದೆಸೆಯಿಂದ ಮುಟ್ಟಿದ್ದೆಲ್ಲ ಚಿನ್ನ
ನಿತ್ಯ ಭವಿಷ್ಯ ಜನವರಿ 7, 2026: ವಿಶ್ವವಸು ನಾಮ ಸಂವತ್ಸರದ, ದಕ್ಷಿಣಾಯನ ಹಿಮದೃತು ಪೌಸ ಮಾಸೆ, ಕೃಷ್ಣ ಪಕ್ಷ, ಚತುರ್ಥಿ ತಿಥಿ, ಮಖ ನಕ್ಷತ್ರದ ಜನವರಿ 7ನೇ ತಾರೀಖಿನ ಈ ದಿನದ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಮಾಹಿತಿ ನೀಡಿದ್ದಾರೆ.
ಸಂಗ್ರಹ ಚಿತ್ರ -
ಬೆಂಗಳೂರು, ಜ. 7: ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು, ಪೌಸ ಮಾಸೆ, ಕೃಷ್ಣ ಪಕ್ಷ, ಚತುರ್ಥಿ ತಿಥಿ, ಮಖ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಗಳ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.
ಮೇಷ ರಾಶಿ: ಇಂದು ಮಖ ನಕ್ಷತ್ರ ಇದ್ದು, ಇದರ ಅಧಿಪತಿ ಕೇತು. ಹೀಗಾಗಿ ಎಲ್ಲ ರಾಶಿಗಲ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಇಂದು ಸ್ವಲ್ಪ ಕಷ್ಟದ ದಿನವಾಗಲಿದೆ. ವ್ಯವಹಾರ ಮಾಡುವವರಿಗೆ ಉತ್ತಮ ದಿನ ಅಲ್ಲ. ಮಕ್ಕಳ ಜತೆ ಸಮಾಧಾನದಿಂದ ವ್ಯವಹಾರ ಮಾಡಬೇಕಾಗುತ್ತದೆ
ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ತಾಯಿ ಹಾಗೂ ಸಂಸಾರದ ತಾಪತ್ರಯಗಳು ಹೆಚ್ಚಾಗುವ ಸಾಧ್ಯತೆ ಇದೆ. ಕೋರ್ಟ್, ಕಚೇರಿ ವ್ಯವಹಾರದಲ್ಲಿರುವವರಿಗೆ ಕಷ್ಟದ ದಿನವಾಗಲಿದೆ.
ಮಿಥುನ ರಾಶಿ: ಮಿಥುನ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಪ್ರಾಪ್ತಿಯಾಗಲಿದ್ದು, ಮನೆಯವರು ಬಹಳ ಅಕ್ಕರೆಯಿಂದ ನಿಮ್ಮನ್ನು ಕಾಣುತ್ತಾರೆ. ಬಹಳ ಆತ್ಮವಿಶ್ವಾಸ ನಿಮಗೆ ಇರುತ್ತದೆ. ಸೋಶಿಯಲ್ ಮೀಡಿಯಾ, ಪತ್ರಿಕೋದ್ಯಮದಲ್ಲಿ ಇರುವವರಿಗೆ ಉತ್ತಮ ದಿನವಾಗಲಿದೆ.
ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ ದಿನ ಭವಿಷ್ಯ:
ಕಟಕ ರಾಶಿ: ಕಟಕ ರಾಶಿಯವರಿಗೆ ಸಂಸಾರದ ತಾಪತ್ರಯಗಳು, ಜವಾಬ್ದಾರಿಗಳು ಹೆಚ್ಚಾಗುತ್ತವೆ. ಕುಟುಂಬದ ಕಡೆಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ನೆಮ್ಮದಿಯ ದಿನವಾಗಲಿದ್ದು, ಹಿಂದಿನ ಎರಡು ಮೂರು ದಿನಗಳ ತೊಂದರೆ ಇಂದು ಬಗೆಹರಿಯಲಿದೆ.
ಮನೆಯಲ್ಲಿ ಬಾಲ್ಕನಿ ನಿರ್ಮಿಸುವ ಮುನ್ನ ಈ ವಾಸ್ತು ನಿಯಮ ತಿಳಿದಿರಲಿ
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಮುಖ್ಯವಾದ ಯಾವುದೇ ನಿರ್ಧಾರಗಳು ಬೇಡ. ಮಿತೃತ್ವದಲ್ಲಿ ಕೂಡ ಯಾವುದೇ ಸಹಕಾರ ಸಿಗುವುದಿಲ್ಲ. ದಾಂಪತ್ಯ ಹಾಗೂ ಮಿತ್ರತ್ವದಲ್ಲಿ ಮನಸ್ಸಿಗೆ ಕ್ಷೇಷ ಆಗುವ ಸಾಧ್ಯತೆ ಇದೆ.
ತುಲಾ ರಾಶಿ: ತುಲಾ ರಾಶಿಗೆ ಅತೀ ಉತ್ತಮ ದಿನವಾಗಲಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು, ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಮಿತ್ರರಿಂದ, ಗುಂಪುಗಳಿಂದ ಧನಾಗಮನವಾಗಲಿದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗಲಿದ್ದು ಜವಾಬ್ದಾರಿಗಳು ಕೂಡ ಹೆಚ್ಚಾಗುತ್ತವೆ. ಇತರರಿಂದ ಅವಮಾನ ಎದುರಿಸಬೇಕಾಗಬಹುದು.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಮನಸ್ಸಿನ ಕ್ಷೇಷ ಜಾಸ್ತಿಯಾಗಿರುತ್ತದೆ. ಹಾಗಾಗಿ ಧ್ಯಾನಾದಿಗಳನ್ನು ಮಾಡಿ ಸಮಯ ಕಳೆಯಬೇಕಾಗುತ್ತದೆ.
ಮಕರ ರಾಶಿ: ಮಕರ ರಾಶಿಯವರಿಗೂ ಮನಸ್ಸಿಗೆ ಕ್ಷೇಷ ತರುವ ದಿನವಾಗುತ್ತದೆ. ಮುಖ್ಯವಾದ ಯಾವುದೇ ನಿರ್ಧಾರಗಳು ಇಂದು ಬೇಡ... ಮನಸ್ಸಿಗೆ ಹೆಚ್ಚು ನೋವು ಉಂಟು ಮಾಡುವ ಸಾಧ್ಯತೆ ಇದೆ.
ಕುಂಭರಾಶಿ: ಈ ರಾಶಿಯವರಿಗೆ ಅತೀ ಉತ್ತಮ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಇದ್ದು ಮಿತ್ರರಿಂದ ಹಾಗೂ ದಾಂಪತ್ಯ ಜೀವನದಲ್ಲಿ ಕೂಡ ಸಾಮರಸ್ಯ ಸಿಗುತ್ತದೆ.
ಮೀನ ರಾಶಿ: ಮೀನ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಶತ್ರುಗಳು ಹಿಮ್ಮೆಟ್ಟಬಹುದು. ಆತ್ಮವಿಶ್ವಾಸ ಚೆನ್ನಾಗಿ ಇರಲಿದ್ದು ಆರೋಗ್ಯದಲ್ಲೂ ಸುಧಾರಣೆ ಕಾಣುತ್ತೀರಿ. ಕೆಲಸ ಕಾರ್ಯದಲ್ಲಿ ಯಶಸ್ಸು ಕಾಣುತ್ತೀರಿ.