Vastu Tips: ಮನೆಯಲ್ಲಿ ಬಾಲ್ಕನಿ ನಿರ್ಮಿಸುವ ಮುನ್ನ ಈ ವಾಸ್ತು ನಿಯಮ ತಿಳಿದಿರಲಿ
ಬಾಲ್ಕನಿ ತಪ್ಪು ದಿಕ್ಕಿನಲ್ಲಿ ಇದ್ದರೆ, ಅದು ಮನೆಯ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ನಾವಿಂದು, ಮನೆಯ ಬಾಲ್ಕನಿ ಯಾವ ದಿಕ್ಕಿನಲ್ಲಿ ಇರಬೇಕು, ಯಾವ ರೀತಿಯ ವಾಸ್ತು ನಿಯಮಗಳನ್ನು ಪಾಲಿಸಬೇಕು ಮತ್ತು ಬಾಲ್ಕನಿಯಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ
ಸಾಂಧರ್ಬಿಕ ಚಿತ್ರ -
ಬೆಂಗಳೂರು: ಪ್ರತಿ ಮನೆಯಲ್ಲಿಯೂ ಬಾಲ್ಕನಿ (Balcony) ಒಂದು ವಿಶೇಷ ಮತ್ತು ಮಹತ್ವದ ಸ್ಥಳವಾಗಿದೆ. ವಿಶೇಷವಾಗಿ ಫ್ಲ್ಯಾಟ್‌ಗಳಲ್ಲಿ ವಾಸಿಸುವವರಿಗೆ, ಬಾಲ್ಕನಿ ಒಂದು ಸ್ವರ್ಗಸುಖ ಅನುಭವ ನೀಡುವ ತಾಣವಾಗಿದ್ದು, ಹೊರಗಿನ ಪ್ರಕೃತಿಯನ್ನು ಅನುಭವಿಸಲು ಇರುವ ಏಕೈಕ ಜಾಗ ಇದಾಗಿರುತ್ತದೆ. ಕೆಲವರಿಗೆ ಬೆಳಿಗ್ಗೆ ಈ ಜಾಗದಲ್ಲಿ ಒಂದು ಕಪ್ ಚಹಾನೋ ಅಥವಾ ಕಾಫಿಯನ್ನೋ ಹೀರುತ್ತಿದ್ದರೆ ಇಡೀ ಜಗತ್ತನೇ ಗೆದ್ದ ಖುಷಿ - ತೃಪ್ತಿ ಸಿಗುತ್ತದೆ. ಹೀಗೆ ನಿಮ್ಮ ಮನಸ್ಸನ್ನು ಸದಾ ಉಲ್ಲಾಸವಾಗಿ ಇಡುವ ಬಾಲ್ಕನಿಗೂ ವಾಸ್ತು ನಿಯಮ (Vastu Tips) ಅನ್ವಯ ಆಗಲಿದ್ದು, ಮನೆಯ ಭಾಗಗಳಲ್ಲಿ ಪ್ರಮುಖವಾದ ಈ ಭಾಗವನ್ನು ವಾಸ್ತು ಪ್ರಕಾರ ಇಟ್ಟುಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ಬಾಲ್ಕನಿ ತಪ್ಪು ದಿಕ್ಕಿನಲ್ಲಿ ಇದ್ದರೆ, ಅದು ಮನೆಯ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಆದ್ದರಿಂದ ನಾವಿಂದು, ಮನೆಯ ಬಾಲ್ಕನಿ ಯಾವ ದಿಕ್ಕಿನಲ್ಲಿ ಇರಬೇಕು, ಯಾವ ರೀತಿಯ ವಾಸ್ತು ನಿಯಮಗಳನ್ನು ಪಾಲಿಸಬೇಕು ಮತ್ತು ಬಾಲ್ಕನಿಯಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಬಾಲ್ಕನಿ ಇರಬೇಕಾದ ಸ್ಥಳ ಮತ್ತು ದಿಕ್ಕು ಅತ್ಯಂತ ಪ್ರಮುಖವಾಗಿದ್ದು, ಮನೆಯ ಉತ್ತರ ದಿಕ್ಕು ಬಾಲ್ಕನಿಗೆ ಅತ್ಯುತ್ತಮ ಸ್ಥಳವೆಂದು ಪರಿಗಣಿಸಲಾಗುತ್ತದೆ.
ಈ ಸುದ್ದಿಯನ್ನು ಓದಿ: Astro Tips: ನಿಮ್ಮ ಆರ್ಥಿಕ ಸ್ಥಿತಿ ಕೆಟ್ಟದಾಗಿದ್ದರೆ ಶುಕ್ರವಾರ ಈ ಕೆಲಸಗಳನ್ನ ಮಾಡಿದ್ರೆ ಧನಾಗಮನ ಖಂಡಿತ
ಇದರ ಹೊರತಾಗಿ ಈಶಾನ್ಯ ಮೂಲೆಯು ಬಾಲ್ಕನಿಗೆ ಸೂಕ್ತವಾಗಿದ್ದು, ಈ ಭಾಗದಲ್ಲಿ ಹೆಚ್ಚಿನ ಸೂರ್ಯಕಿರಣ ಬೀಳುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ.
ಬಾಲ್ಕನಿ ವಿಶ್ರಾಂತಿಗೆ ಬಳಸುವ ಸ್ಥಳವಾಗಿರುವುದರಿಂದ, ಇಲ್ಲಿ ಇಡುವ ಪೀಠೋಪಕರಣಗಳ ಆಯ್ಕೆಗೂ ವಿಶೇಷ ಗಮನ ನೀಡಬೇಕಾಗುತ್ತದೆ. ಭಾರವಾದ ಪೀಠೋಪಕರಣಗಳನ್ನು ಬಾಲ್ಕನಿಯಲ್ಲಿ ಇಡುವುದು ಸೂಕ್ತವಲ್ಲ ಎಂದು ಹೇಳಲಾಗುತ್ತದೆ.
ನೀವು ಬಾಲ್ಕನಿಯಲ್ಲಿ ಉಯ್ಯಾಲೆ (swing) ಇಡಲು ಬಯಸಿದರೆ, ಅದನ್ನು ಉತ್ತರ ಅಥವಾ ದಕ್ಷಿಣ ದಿಕ್ಕಿನಲ್ಲಿ ಇಡುವುದು ವಾಸ್ತು ಪ್ರಕಾರ ಒಳ್ಳೆಯದು.
ಬಾಲ್ಕನಿ ಟೆರೇಸ್ ನಿರ್ಮಾಣಕ್ಕೆ ತವರ (ಟಿನ್ ಶೀಟ್) ಅಥವಾ ಕಬ್ಬಿಣದ ಛಾವಣಿ ಬಳಕೆ ಮಾಡುವುದು ನಿಷೇಧವಾಗಿದ್ದು, ಇದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ನಂಬಲಾಗುತ್ತದೆ.
ವಾಸ್ತು ಪ್ರಕಾರ ಬಾಲ್ಕನಿಯಲ್ಲಿ ಹೂವಿನ ಕುಂಡಗಳನ್ನು, ಗಿಡಗಳನ್ನು ಮತ್ತು ಸಸ್ಯಗಳನ್ನು ಇರಿಸುವುದು ಶುಭ. ಇವು ಧನಾತ್ಮಕ ಶಕ್ತಿ, ಶಾಂತಿ ಮತ್ತು ಸೌಂದರ್ಯವನ್ನು ಹೆಚ್ಚಿಸುತ್ತವೆ. ಇದರ ಹೊರತಾಗಿ ತಪ್ಪಿಯೂ ಬಾಲ್ಕನಿಯಲ್ಲಿ ದೊಡ್ಡ ಗಿಡಗಳು ಅಥವಾ ಬಳ್ಳಿ ಗಿಡಗಳನ್ನು ಇಡಬೇಡಿ. ಏಕೆಂದರೆ ಅವು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ.
ಇನ್ನು ತಪ್ಪಿಯೂ ಬಾಲ್ಕನಿಯನ್ನು ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲಿ ನಿರ್ಮಿಸುವುದು ವಾಸ್ತು ಪ್ರಕಾರ ಒಳ್ಳೆಯದಲ್ಲ ಎಂದು ಹೇಳಲಾಗಿದ್ದು, ಬಾಲ್ಕನಿಯು ಮನೆಯ ಇತರೆ ಭಾಗಗಳಿಗಿಂತ ಸ್ವಲ್ಪ ಕಡಿಮೆ ಎತ್ತರದಲ್ಲಿ ಇರಬೇಕು ಎಂಬುದು ಮುಖ್ಯ ನಿಯಮ ಆಗಿದೆ.