ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ಈ ದಿನದ ಜೇಷ್ಠ ನಕ್ಷತ್ರದಿಂದ ಯಾವ ರಾಶಿಗೆಲ್ಲ ಲಾಭ?

ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಶುಕ್ಲ ಪಕ್ಷದ ಜೇಷ್ಠ ನಕ್ಷತ್ರದ ಸೆಪ್ಟೆಂಬರ್‌1ನೇ ತಾರೀಕಿನ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದು ಹೀಗೆ...

ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

Horoscope -

ಬೆಂಗಳೂರು: ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಶುಕ್ಲ ಪಕ್ಷದ ಜೇಷ್ಠ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ (Daily Horoscope) ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

ಮೇಷ ರಾಶಿ: ಇಂದು ಮೇಷ ರಾಶಿಯವರಿಗೆ ಅಷ್ಟೊಂದು ಒಳ್ಳೆಯ ದಿನವಲ್ಲ. ಮನಸ್ಸಿಗೆ ನೂರಾರು ಯೋಚನೆಗಳು ಕಾಡುವ ಸಾಧ್ಯತೆ ಇದೆ. ನಿಮ್ಮ ಪ್ರೀತಿ ಪಾತ್ರರಿಂದ ನಿಮಗೆ ಬೇಕಾದ ಯಾವುದೇ ಸಹಕಾರಗಳು ಇಂದು ಸಿಗಲು ಸಾಧ್ಯವಿಲ್ಲ. ಹಾಗಾಗಿ ಇಂದು ಯಾವುದೇ ಮುಖ್ಯ ನಿರ್ಧಾರಗಳನ್ನು ಇಂದು ತೆಗೆದುಕೊಳ್ಳಬೇಡಿ. ಎರಡು ದಿನಗಳ ಬಳಿಕ ಎಲ್ಲವೂ ಸರಿಯಾಗಲಿದ್ದು ಆ ಸಂದರ್ಭದಲ್ಲಿ ಮುಖ್ಯ ನಿರ್ಧಾರಗಳನ್ನು ಮಾಡಿಕೊಳ್ಳಿ.

ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಶುಭ ಫಲದ ಜತೆಗೆ ಅತ್ಯುತ್ತಮ ದಿನವಾಗಲಿದೆ. ಎಲ್ಲರರಿಂದಲೂ ಸಹಕಾರ ಪ್ರಾಪ್ತಿಯಾಗಲಿದೆ. ದಾಂಪತ್ಯ ಜೀವನದಲ್ಲಿ ಹಾಗೂ ಮಿತೃತ್ವದಲ್ಲಿ ಯಶಸ್ಸು ಕಾಣಲಿದ್ದೀರಿ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿರುರುವವರಿಗೆ ಇಂದು ಒಳ್ಳೆಯ ದಿನವಾಗಲಿದೆ. ಸಾಮಾಜಿಕ ವ್ಯವಹಾರಗಳಲ್ಲೂ ಲಾಭ ಗಳಿಸುತ್ತೀರಿ. ಆತ್ಮವಿಶ್ವಾಸ ಚೆನ್ನಾಗಿ ಇರಲಿದ್ದು ಆರೋಗ್ಯದಲ್ಲಿ ಸುಧಾರಣೆ ಕಾಣಲಿದ್ದೀರಿ. ವ್ಯವಹಾರದಲ್ಲಿ ಇರುವವರಿಗೂ ಉತ್ತಮ ದಿನವಾಗಲಿದೆ.

ಕಟಕ ರಾಶಿ: ಕಟಕ ರಾಶಿಯವರಿಗೆ ಇಂದು ಸಂಸಾರದಲ್ಲಿ ಕಿರಿ ಕಿರಿ ಇರುವ ದಿನವಾಗಿದೆ. ಮಕ್ಕಳಿದ್ದ ಪೋಷಕರಿಗೂ ಸ್ವಲ್ಪ ಕಿರಿ ಕಿರಿ ಉಂಟಾಗುವ ಸಾಧ್ಯತೆ ಇದೆ. ವ್ಯವಹಾರಕ್ಕೆ ಉತ್ತಮದಿನವಲ್ಲ. ಆದರೆ ನಿಮ್ಮ ಬುದ್ದಿವಂತಿಕೆ ಮತ್ತು ಕಾರ್ಯ ಕೌಶ್ಯಲ ಹಾಗೂ ಮಾತಿನಿಂದದಿಂದ ಎಲ್ಲರನ್ನು ಗೆಲ್ಲಲಿದ್ದೀರಿ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಚತುರ್ಥ ಭಾವದಲ್ಲಿ ಚಂದ್ರ ಇರುವುದರಿಂದ ತಾಯಿಯ ಆರೋಗ್ಯ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ವ್ಯವಹಾರದಲ್ಲಿ ಇರುವವರಿಗೆ ಸ್ವಲ್ಪ ಕಠಿಣ ದಿನ ಆಗಲಿದೆ. ಹಾಗಾಗಿ ಮುಖ್ಯ ನಿರ್ಧಾರಗಳು ಇಂದು ಬೇಡ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇದು ಉತ್ತಮ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ, ಬಂಧು ಬಾಂಧವರಿಂದ ಮನಸ್ಸಿಗೆ ಖುಷಿಯನ್ನು ಕಾಣುತ್ತೀರಿ. ಮೀಡಿಯಾ, ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ಉತ್ತಮ ಸಮಯ.

ತುಲಾ ರಾಶಿ: ತುಲಾ ರಾಶಿಯವರಿಗೆ ಸಂಸಾರ ಹಾಗೂ ಆರ್ಥಿಕ ವ್ಯವಹಾರ ಬಗ್ಗೆ ಬಹಳಷ್ಟು ಯೋಚನೆ ಇರುವ ದಿನ ಆಗಲಿದೆ. ಹಣಕಾಸಿನ ವೆಚ್ಚಗಳು ಇಂದು ಜಾಸ್ತಿಯಾಗಬಹುದು.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಈ ದಿನ ಉತ್ತಮವಾದ ದಿನ ಆಗಲಿದೆ. ನಿಮ್ಮ ರಾಶಿಯಲ್ಲಿ ಚಂದ್ರ ಬಂದಿರುವುದರಿಂದ ಎರಡು ದಿನಗಳ ಹಿಂದಿನ ಕಷ್ಟ ದೂರವಾಗಲಿದೆ. ಹಾಗಾಗಿ ಇಂದು ಬಹಳ ತಾಳ್ಮೆಯಿಂದ ನೀವು ಜೀವನ ನಡೆಸಬಹುದು‌. ಅತೀ ಸುಖದ ದಿನವೂ ನಿಮ್ಮದಾಗಲಿದೆ.

ಇದನ್ನು ಓದಿ:Daily Horoscope: ಭಾನುವಾರದ ಈ ದಿನ ಶನಿದೇವರ ಕೃಪೆಯಿಂದ ಯಾವ ರಾಶಿಗೆ ಶುಭ ಫಲವಾಗಲಿದೆ?

ಧನಸ್ಸು ರಾಶಿ: ಧನಸ್ಸು ರಾಶಿವರಿಗೆ ಮನಸ್ಸಿಗೆ ಹೆಚ್ಚು ಕ್ಷೇಶ ಉಂಟಾಗುವ ಸಾಧ್ಯತೆ ಇದೆ. ಇಂದು ಯಾವುದೇ ಮುಖ್ಯವಾದ ನಿರ್ಧಾರಗಳು ಬೇಡ. ಕಾರ್ಯ ಕ್ಷೇತ್ರದಲ್ಲಿ ಯಾವುದೇ ಮಿಟಿಂಗ್ ಇತ್ಯಾದಿ ಇದ್ದರೆ ಮುಂದಿನ ದಿನಗಳಿಗೆ ವರ್ಗಾಯಿಸಿ. ನೀವು ಯೋಚನೆ ಮಾಡಿದ ಕೆಲಸಗಳು ಇಂದು ಆಗದೇ ಇರಬಹುದು. ಹಾಗಾಗಿ ಎರಡು ದಿನಗಳ ಬಳಿಕ ಮುಖ್ಯ ನಿರ್ಧಾರಗಳನ್ನು ಮಾಡಿ.

ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮ ಫಲ ದೊರೆಯಲಿದೆ. ಮನಸ್ಸಿಗೆ ನೆಮ್ಮದಿ ಇದ್ದು ಇಷ್ಟಾರ್ಥ ಕೂಡ ಸಿದ್ದಿಯಾಗಲಿದೆ. ಗುಂಪು ಕೆಲಸಗಳಿಂದ ಮಿತ್ರರಿಂದ ಇಂದು ಧನಾಗಮನವಾಗುವ ಸಾಧ್ಯತೆ ಇದೆ. ಭಾಗ್ಯೋದಯ ದಿನ ಇಂದು ಆಗಲಿದೆ.

ಕುಂಭರಾಶಿ: ಕುಂಭ ರಾಶಿಯವರಿಗೆ ಈ ದಿನ ಒಳ್ಳೆಯದಾಗಲಿದೆ. ಕಾರ್ಯ ಕ್ಷೇತ್ರದಲ್ಲೂ ಯಶಸ್ಸು ಸಿಗಲಿದೆ. ಆದರೆ ಕೆಲಸ ಕಾರ್ಯದಲ್ಲಿ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಹಾಗಾಗಿ ನಿಗದಿತ ಸಮಯಕ್ಕೆ ಮುಖ್ಯವಾದ ಕೆಲಸಗಳನ್ನು ಪೂರೈಸಿಕೊಂಡರೆ ಉತ್ತಮ.

ಮೀನ ರಾಶಿ: ಮೀನ ರಾಶಿಯವರಿಗೆ ಭಾಗ್ಯೋದಯದ ದಿನವಾಗಲಿದ್ದು ಮನಸ್ಸಿಗೆ ನೆಮ್ಮದಿ ಪ್ರಾಪ್ತಿಯಾಗಲಿದೆ. ಎರಡು ಮೂರು ದಿನಗಳಿಂದ ಮನಸ್ಸಿಗೆ ಬೇಸರ, ನೋವು ಇತ್ತು. ಅದೆಲ್ಲವೂ ಇಂದು ನಿವಾರಣೆ ಯಾಗಲಿದೆ. ಇಂದು ಭಗವಂತನ ಆರಾಧನೆ, ಧ್ಯಾನ ಮಾಡುವ ಮೂಲಕ ಉತ್ತಮ ಫಲ ನೀವು ಪಡೆಯಬಹುದು. ಎಲ್ಲ ರಾಶಿಯವರು ನಿತ್ಯ ಶ್ಲೋಕ ಪಠಣ ಅಭ್ಯಾಸ ಮಾಡುವ ಮೂಲಕ ಶುಭದಾಯಕ ದಿನವನ್ನು ಕಳೆಯಲಿದ್ದೀರಿ.