Daily Horoscope: ಶನಿವಾರದ ಈ ದಿನ ಸಪ್ತಮಿ ತಿಥಿಯಂದು ಯಾವ ರಾಶಿಗೆ ಶುಭ ಫಲವಾಗಲಿದೆ?
ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿ, ವಿಶಾಖ ನಕ್ಷತ್ರದ ಆಗಸ್ಟ್ 30ನೇ ತಾರೀಖಿನ ಶನಿವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ.

-

ಬೆಂಗಳೂರು: ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿ, ವಿಶಾಖ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಇಂದು ಬುಧ ಸಿಂಹ ರಾಶಿಯನ್ನು ಪ್ರವೇಶ ಮಾಡುತ್ತಿದ್ದು ಮೇಷ ರಾಶಿ ಅವರಿಗೆ ಇಂದು ಸಾಧಾರಣ ಫಲ ಇರಲಿದೆ. ನೀವು ಆಡುವ ಮಾತಿನ ಬಗ್ಗೆ ಸ್ವಲ್ಪ ಗಮನವನ್ನು ನೀಡಬೇಕಾ ಗುತ್ತದೆ. ಇಲ್ಲದಿದ್ದಲ್ಲಿ ನಿಮ್ಮ ಪ್ರೀತಿ ಪಾತ್ರರ ಜೊತೆ ಅಡಚಣೆಗಳು ಜಾಸ್ತಿಯಾಗುತ್ತವೆ. ಹಾಗಾಗಿ ಬಹಳ ವಿನಯ ಪೂರ್ವಕವಾಗಿ ಯೋಚನೆ ಮಾಡಿ ಮಾತನಾಡಬೇಕಾಗುತ್ತದೆ.
ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಶುಭ ಫಲದ ಜೊತೆಗೆ ಅತ್ಯುತ್ತಮ ವಾದ ದಿನ ವಾಗಲಿದೆ. ಆಸ್ತಿ ಪಾಸ್ತಿ ವಿಚಾರದಲ್ಲಿ ನೆಮ್ಮದಿ. ಮನೆಯಲ್ಲಿ ಐಷಾರಾಮಿ ಸುಖ ಸಂತೋಷ ನೆಮ್ಮದಿ ಎಲ್ಲವೂ ಪ್ರಾಪ್ತಿಯಾಗಲಿದೆ. ಹೊಸ ಮನೆ, ಕಾರು ಇತ್ಯಾದಿ ಖರೀದಿ ಮಾಡುವ ದಿನವಾಗಲಿದೆ. ಈ ದಿನ ಅತೀ ಸುಖಕರವಾದ ದಿನ ಆಗಲಿದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಇಮೇಲ್, ಡ್ಯಾಕುಮೆಂಟ್ ಇತ್ಯಾದಿ ಕಳುಹಿಸುವ ಸಂದರ್ಭದಲ್ಲಿ ಜಾಗರೂಕತೆಯಿಂದ ಇರಬೇಕು. ಇಲ್ಲದಿದ್ದಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ.
ಕಟಕ ರಾಶಿ: ಕಟಕ ರಾಶಿ ಅವರಿಗೆ ಮನೆ ಸಂಸಾರದಲ್ಲಿ ನೆಮ್ಮದಿ ಇದ್ದು ಅತ್ಯುತ್ತಮವಾದ ಫಲವನ್ನು ಬುಧ ನಿಮಗೆ ತಂದು ಕೊಡಲಿದ್ದಾನೆ. ಇದರಿಂದ ಒಳ್ಳೆಯದಾಗಲಿದೆ. ಅದರ ಜೊತೆ ಧನ ಆಗಮನ ಕೂಡ ಆಗಲಿದೆ. ಅತ್ಯುತ್ತಮ ವಾದ ದಿನ ನಿಮ್ಮದಾಗಲಿದೆ.
ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಇಂದು ಇತರರು ನಿಮ್ಮನ್ನು ತಪ್ಪಾಗಿ ಅರ್ಥೈಸಿ ಕೊಳ್ಳಬಹುದು. ಅದರ ಜೊತೆ ನಿಮನ್ನು ಹೀಯಾಳಿಕೆ ಮಾಡುವವರು ಜಾಸ್ತಿಯಾಗಬಹುದು. ನಿಮ್ಮ ಮಾತಿನಲ್ಲಿ ನೀವು ಅನೇಕ ರೀತಿಯ ಬದಲಾವಣೆಗಳನ್ನು ಕೂಡ ಮಾಡಬೇಕಾಗುತ್ತದೆ.
ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಈ ದಿನ ಸ್ವಲ್ಪ ಕಷ್ಟಕರವಾದ ಗೋಚರ ಪ್ರಾಪ್ತಿ ಯಾಗಲಿದೆ. ಇಲ್ಲಿಯವರೆಗೆ ಬುಧ ಒಳ್ಳೆಯ ಫಲ ನೀಡಿದ್ದು, ಆದರೆ ಇಂದು ಅಷ್ಟು ಸುಖಕರವಾದ ದಿನ ಆಗಿಲ್ಲ. ಕೆಲವೊಂದು ವಿಚಾರದಲ್ಲಿ ಅಷ್ಟೊಂದು ಉತ್ತಮವಾಗಿ ಇರುವುದಿಲ್ಲ. ಆದರೆ ಧ್ಯಾನ, ಆಧ್ಯಾತ್ಮಿ ಕತೆಯ ಮೂಲಕ ಪರಿಹಾರ ಕಂಡುಕೊಳ್ಳಬಹುದು.
ಈ ಸುದ್ದಿಯನ್ನೂ ಓದಿ:Daily Horoscope: ಶುಕ್ರವಾರದ ಈ ದಿನ ಯಾವ ರಾಶಿಗೆ ಶುಭ ಫಲವಾಗಲಿದೆ?
ತುಲಾ ರಾಶಿ: ತುಲಾ ರಾಶಿ ಅವರಿಗೆ ಈ ದಿನ ಉತ್ತಮವಾಗಲಿದ್ದು ಇಷ್ಟಾರ್ಥ ಸಿದ್ದಿ, ಮನಸ್ಸಿಗೆ ನೆಮ್ಮದಿ ಸಿಗಲಿದೆ. ನಿಮ್ಮ ಮಾತಿನಿಂದ ನಿಮಗೆ ಒಳ್ಳೆಯದು ಆಗಲಿದ್ದು, ಧನ ಆಗಮನ ಕೂಡ ಆಗಲಿದೆ. ಆದರೆ ಇತರರ ಜೊತೆ ನೀವು ಮಿತವಾಗಿ ಮಾತನಾಡುವುದು ಒಳ್ಳೆಯದು.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಈ ದಿನ ಉತ್ತಮವಾದ ದಿನ ಆಗಲಿದೆ. ಕಾರ್ಯ ಕ್ಷೇತ್ರದಲ್ಲೂ ಕೂಡ ಯಶಸ್ಸು ಪ್ರಾಪ್ತಿಯಾಗಲಿದೆ. ಆದರೆ ಇತರರ ಜೊತೆ ಮಾತನಾಡುವಾಗ ವಿನಯದಿಂದ ವರ್ತಿಸಿದರೆ ಮುಂದಿನ ದಿನಗಳಿಗೂ ಉತ್ತಮ.ಹಾಗಾಗಿ ಮಾತಿನ ಬಗ್ಗೆಯೂ ನಿಗಾವಹಿಸಿ.
ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಸಿಂಹ ರಾಶಿಯಲ್ಲಿ ಬುಧ ಬರುವುದರಿಂದ ಇದರಿಂದ ಸ್ವಲ್ಪ ತೊಂದರೆ ಯಾಗಲಿದೆ. ನಿಮ್ಮ ಹಿರಿಯರು, ಪ್ರೀತಿ ಪಾತ್ರರು ಅಥವಾ ಬೇಕಾದವರಿಂದಲೇ ಹೀಯಾಳಿ ಕೆಯ ಮಾತುಗಳು ಕೇಳಿ ಬರಬಹುದು.
ಮಕರ ರಾಶಿ: ಮಕರ ರಾಶಿ ಅವರಿಗೆ ಉತ್ತಮವಾದ ಫಲ..ಅನೇಕ ಕಷ್ಟಗಳು ದೂರವಾಗಲಿದ್ದು ಕಾರ್ಯ ಕ್ಷೇತ್ರದಲ್ಲಿ ಕೂಡ ಯಶಸ್ಸು ಸಿಗಲಿದೆ. ನಿಮ್ಮ ಮಾತಿನಿಂದ ಇತರರಿಗೂ ಒಳಿತು ಆಗಲಿದ್ದು ಭಾಗ್ಯೋದಯವಾದ ದಿನವಾಗಲಿದೆ.
ಕುಂಭರಾಶಿ: ಕುಂಭ ರಾಶಿ ಅವರಿಗೆ ಈ ದಿನ ಸ್ವಲ್ಪ ಕ್ಲಿಷ್ಟಕರವಾದ ಗೋಚರವಾಗಲಿದೆ. ನಿಮ್ಮ ಪ್ರೀತಿ ಪಾತ್ರರು, ಬೇಕಾದವರಿಂದ ಅವರ ಮಾತಿನಿಂದ ನಿಮಗೆ ನೋವಾಗಬಹುದು. ಸಮಾಧಾನ ರೀತಿಯಲ್ಲಿ ವ್ಯವಹಾರ ಮಾಡಿ. ಹೆಚ್ವು ಮಾತನಾಡದೇ ಸಮಾಧಾನ ರೀತಿಯಲ್ಲೇ ವರ್ತಿಸಿ.
ಮೀನ ರಾಶಿ: ಮೀನ ರಾಶಿ ಅವರಿಗೆ ಉತ್ತಮವಾದ ಫಲ ಇದ್ದು ಆರೋಗ್ಯದಲ್ಲೂ ಸುಧಾರಣೆ ಕಂಡು ಬರುತ್ತದೆ. ಸಾಮಾಜಿಕ ವ್ಯವಹಾರದಲ್ಲೂ ಕಾರ್ಯ ಕ್ಷೇತ್ರದಲ್ಲೂ ಯಶಸ್ಸು ಪ್ರಾಪ್ತಿ ಯಾಗಲಿದೆ. ಎಲ್ಲಾ ರಾಶಿಯವರು ನಿತ್ಯ ಶ್ಲೋಕ,ಪಠಣ ಅಭ್ಯಾಸ ಮಾಡುವ ಮೂಲಕ ಶುಭದಾಯಕ ದಿನವನ್ನು ಕಳೆಯಲಿದ್ದೀರಿ.