Daily Horoscope: ಚಿತ್ತ ನಕ್ಷತ್ರದ ಅಧಿಪತಿ ಕುಜನಿಂದ ಇಂದು ಈ ರಾಶಿಯವರಿಗೆ ಅದೃಷ್ಟ
ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಶ್ವಯುಜ ಮಾಸದ ಶುಕ್ಷ ಪಕ್ಷದ ತೃತೀಯ ತಿಥಿ, ಚಿತ್ತ ನಕ್ಷತ್ರದ ಸೆಪ್ಟೆಂಬರ್ 24ನೇ ತಾರೀಕು ನವರಾತ್ರಿಯ ಮೂರನೇ ದಿನ. ಈ ದಿನದ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

Daily Horoscope -

ಬೆಂಗಳೂರು: ವಿಶ್ವ ವಸುನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಶ್ವಯುಜ ಮಾಸದ ಶುಕ್ಷ ಪಕ್ಷದ, ತೃತೀಯ ತಿಥಿ, ಚಿತ್ತ ನಕ್ಷತ್ರದ ಸೆಪ್ಟೆಂಬರ್ 24ನೇ ತಾರೀಕಿನ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯ (Daily Horoscope) ಹೇಗಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.
ಮೇಷ ರಾಶಿ: ಇಂದು ಚಿತ್ತ ನಕ್ಷತ್ರ ಇದ್ದು, ಇದರ ಅಧಿಪತಿ ಕುಜ. ಆದ್ದರಿಂದ ಎಲ್ಲ ರಾಶಿಯವರಿಗೂ ಅತೀ ಹೆಚ್ಚು ಸಾಧನೆ ಮಾಡುತ್ತೀವಿ ಎನ್ನುವ ಆತ್ಮ ವಿಶ್ವಾಸ ಇರುತ್ತದೆ. ಮೇಷ ರಾಶಿಯವರಿಗೆ ಬೆಳಗ್ಗೆಯಿಂದ ಮಧ್ಯಾಹ್ನವರೆಗೂ ಮನಸ್ಸಿಗೆ ನೆಮ್ಮದಿ ಇರುತ್ತದೆ. ನಿಮ್ಮ ಬಂಧು ಮಿತ್ರರ ಜತೆ ಉತ್ತಮ ಸಮಯವನ್ನು ಕಳೆಯುತ್ತೀರಿ. ಮಧ್ಯಾಹ್ನ ಬಳಿಕವೂ ನೀವು ಅಂದುಕೊಂಡ ಕೆಲಸ ಕಾರ್ಯಗಳು ನೆರವೇರಲಿದೆ.
ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಮಧ್ಯಾಹ್ನವರೆಗೂ ನಾನಾ ರೀತಿಯ ಯೋಚನೆಗಳು ಕಾಡುತ್ತವೆ. ಮಧ್ಯಾಹ್ನ ಬಳಿಕ ಹೆಚ್ಚಿನ ಸಮಸ್ಯೆಗಳಿಗೆ ಪರಿಹಾರ ಸಿಗುತ್ತವೆ. ಇದರಿಂದ ಏನು ಬೇಕಾದರೂ ಸಾಧಿಸಬಲ್ಲೆ ಎನ್ನುವ ಆತ್ಮವಿಶ್ವಾಸ ನಿಮಗೆ ಮೂಡಲಿದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಮಧ್ಯಾಹ್ನವರೆಗೂ ಸಂಸಾರದ ತಾಪತ್ರಯಗಳು ಕಾಡುತ್ತಿರುತ್ತದೆ. ಮಧ್ಯಾಹ್ನ ಬಳಿಕ ನಿಮ್ಮ ಪ್ರೀತಿ ಪಾತ್ರರ ಜತೆ ಉತ್ತಮ ಸಮಯ ಕಳೆದು ಖುಷಿಯಾಗಿ ಇರುತ್ತೀರಿ.
ಕಟಕ ರಾಶಿ: ಕಟಕ ರಾಶಿಯವರಿಗೆ ಇಂದು ಮಧ್ಯಾಹ್ನವರೆಗೂ ಬಹಳ ಉತ್ತಮವಿದ್ದು, ಸಾಮಾಜಿಕ ಕೆಲಸ ಕಾರ್ಯದಲ್ಲಿ ಜಯವನ್ನು ಕಾಣುತ್ತೀರಿ. ಆದರೆ ಮಧ್ಯಾಹ್ನ ಬಳಿಕ ಮನೆ, ಸಂಸಾರದ ಕಡೆಯೂ ಹೆಚ್ಚು ಗಮನ ನೀಡಬೇಕಾಗುತ್ತದೆ. ಎರಡು ಕಡೆ ಸರಿಯಾಗಿ ಸಮಯ ಹೊಂದಿಸಬೇಕಾಗುತ್ತದೆ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಮಧ್ಯಾಹ್ನವರೆಗೂ ಸಂಸಾರದ ಗೋಜು ಹೆಚ್ಚು ಇರುತ್ತದೆ. ಮಧ್ಯಾಹ್ನ ಬಳಿಕ ಬಂಧು ಮಿತ್ರರಿಂದ ಮನಸ್ಸಿಗೆ ಖುಷಿ ಸಿಗಲಿದ್ದು ಮನಸ್ಸು ಆಹ್ಲಾದಕರವಾಗಲಿದೆ. ಮಿತ್ರರ ಜತೆ ಖುಷಿಯಾಗಿ ದಿನವನ್ನು ಕಳೆಯಲಿದ್ದೀರಿ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಮಧ್ಯಾಹ್ನವರೆಗೂ ಕೂಡ ಮನಸ್ಸಿಗೆ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಹಿಂದಿನ ನಾಲ್ಕು- ಐದು ದಿನಗಳ ತೊಂದರೆ ಬಗೆಹರಿಯುತ್ತದೆ. ಮಧ್ಯಾಹ್ನ ಬಳಿಕ ಸಂಸಾರದ ವಿಚಾರದಲ್ಲಿ ಬಹಳಷ್ಟು ಬ್ಯುಸಿಯಾಗಿ ಇರುತ್ತೀರಿ. ನಿಮ್ಮ ಮನೆಗೆ ಅತಿಥಿಗಳ ಆಗಮನ ಕೂಡ ಆಗಬಹುದು.
ತುಲಾ ರಾಶಿ: ತುಲಾ ರಾಶಿಯವರಿಗೆ ಮಧ್ಯಾಹ್ನವರೆಗೂ ನಾನಾ ರೀತಿಯ ಯೋಚನೆಗಳು ಬರಬಹುದು. ಮಧ್ಯಾಹ್ನ ಬಳಿಕ ಮನಸ್ಸು ತಿಳಿಯಾಗಿ ಹೆಚ್ಚಿನ ಆತ್ಮವಿಶ್ವಾಸ ನಿಮ್ಮಲ್ಲಿ ಮೂಡಲಿದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಮಧ್ಯಾಹ್ನವರೆಗೆ ದಿನ ಚೆನ್ನಾಗಿಯೇ ಇರುತ್ತದೆ. ಮಿತ್ರ ರೊಡನೆ ಉತ್ತಮ ಸಮಯ ಕಳೆಯುತ್ತೀರಿ. ಮಧ್ಯಾಹ್ನ ಬಳಿಕ ಸ್ನೇಹಿತರ ಜತೆ ವಾಗ್ವಾದ ಆಗಬಹುದು. ಮಿತ್ರರೊಂದಿಗೆ ಕಲಹ ಉಂಟಾಗಬಹುದು.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಮಧ್ಯಾಹ್ನವರೆಗೂ ಮನಸ್ಸಿಗೆ ನೆಮ್ಮದಿ ಅಷ್ಟಾಗಿ ಇರುವುದಿಲ್ಲ. ಇಂದು ಕಾರ್ಯ ಕ್ಷೇತ್ರದಲ್ಲಿ ಜವಾಬ್ದಾರಿ ಒತ್ತಡ ಹೆಚ್ಚಾಗಬಹುದು. ಮಧ್ಯಾಹ್ನ ಬಳಿಕ ಮಿತ್ರರ ಜತೆ ಉತ್ತಮ ಸಮಯ ಕಳೆಯುತ್ತೀರಿ. ಧನಾಗಮನ ಕೂಡ ಆಗಲಿದೆ.
ಇದನ್ನು ಓದಿ:Vastu Tips: ಮಲಗುವ ಕೋಣೆಯಲ್ಲಿ ರಾಧಾಕೃಷ್ಣರ ಚಿತ್ರ ಇಡಬಹುದೇ? ಏನು ಹೇಳುತ್ತದೆ ವಾಸ್ತು?
ಮಕರ ರಾಶಿ: ಮಕರ ರಾಶಿಯವರಿಗೆ ಮಧ್ಯಾಹ್ನವರೆಗೂ ಮನಸ್ಸಿನಲ್ಲಿ ಕ್ಷೇಷ ಇರುತ್ತದೆ. ಇತರರು ನಿಮ್ಮನ್ನು ಬಹಳಷ್ಟು ಟೀಕೆ ಮಾಡಬಹುದು. ಮಧ್ಯಾಹ್ನ ಬಳಿಕ ಕಾರ್ಯಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗಿಕೊಳ್ಳುತ್ತೀರಿ.
ಕುಂಭರಾಶಿ: ಕುಂಭ ರಾಶಿಯವರಿಗೂ ಮಧ್ಯಾಹ್ನವರೆಗೂ ಕ್ಷೇಷ ಇರಬಹುದು. ಮಧ್ಯಾಹ್ನ ಬಳಿಕ ಅದೃಷ್ಟ ಮೂಡಲಿದ್ದು, ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಭಗವಂತನ ಧ್ಯಾನ ಮಾಡೋದನ್ನು ಇಂದು ಮರಿಬೇಡಿ.
ಮೀನ ರಾಶಿ: ಮೀನ ರಾಶಿಯವರಿಗೆ ಮಧ್ಯಾಹ್ನವರೆಗೂ ಒಳ್ಳೆಯ ದಿನ. ಮಧ್ಯಾಹ್ನ ಬಳಿಕ ಮನಸ್ಸಿಗೆ ಬೇಸರವಾಗುತ್ತದೆ. ಮುಖ್ಯವಾದ ವಿಚಾರದಲ್ಲಿ ಬೇರೆಯವರ ಸಹಕಾರ ಇರುವುದಿಲ್ಲ. ಮಿತ್ರತ್ವದಲ್ಲಿ ಒಡಕು ಮೂಡಬಹುದು. ನವರಾತ್ರಿ ಉತ್ಸವದ ಈ ದಿನ ದೇವಿಯ ಆರಾಧನೆ ಮಾಡಿ.