ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

VastuTips: ನವವಿವಾಹಿತರ ಕೋಣೆ ಅಲಂಕಾರ; ಗಮನದಲ್ಲಿರಲಿ ಈ ವಿಚಾರ

ಏಪ್ರಿಲ್, ಮೇ ಎಂದರೆ ಮದುವೆಯ ಸೀಸನ್. ಹೀಗಾಗಿ ಈ ಸಂದರ್ಭದಲ್ಲಿ ನವವಿವಾಹಿತರು ಮಲಗುವ ಕೋಣೆಯ ಅಲಂಕಾರ ಮಹತ್ವದ ವಿಷಯವೇ ಆಗಿರುತ್ತದೆ. ನವ ದಂಪತಿಯ ಇಷ್ಟಕ್ಕೆ ಅನುಗುಣವಾಗಿ ಸುಂದರವಾಗಿ ಅಲಂಕಾರ ಮಾಡಿದರಾಯ್ತು ಎಂದು ಯೋಚಿಸುವುದು ತಪ್ಪಲ್ಲ. ಆದರೆ ಇಲ್ಲಿ ವಾಸ್ತು ವಿಚಾರವಾಗಿಯೂ ಕೆಲವೊಂದು ಅಂಶಗಳನ್ನು ಗಮನಿಸಬೇಕಿದೆ. ಅದೇನು ಎನ್ನುವ ವಿವರ ಇಲ್ಲಿದೆ.

ನವವಿವಾಹಿತರ ಕೋಣೆ ಅಲಂಕಾರದಲ್ಲೂ ಪಾಲಿಸಿ ವಾಸ್ತು ನಿಯಮ

ಬೆಂಗಳೂರು: ಏಪ್ರಿಲ್, ಮೇ ಎಂದರೆ ಮದುವೆಯ ಸೀಸನ್ (Wedding Season). ಹೀಗಾಗಿ ಈ ಸಂದರ್ಭದಲ್ಲಿ ನವವಿವಾಹಿತರು ಮಲಗುವ ಕೋಣೆಯ (vastu for newlywed couple room) ಅಲಂಕಾರ ಮಹತ್ವದ ವಿಷಯವೇ ಆಗಿರುತ್ತದೆ. ನವ ದಂಪತಿಯ ಇಷ್ಟಕ್ಕೆ ಅನುಗುಣವಾಗಿ ಸುಂದರವಾಗಿ ಅಲಂಕಾರ ಮಾಡಿದರಾಯ್ತು ಎಂದು ಯೋಚಿಸುವುದು ತಪ್ಪಲ್ಲ. ಆದರೆ ಇಲ್ಲಿ ವಾಸ್ತು (Vastu Tips) ವಿಚಾರವಾಗಿಯೂ ಕೆಲವೊಂದು ಅಂಶಗಳನ್ನು ಗಮನಿಸಬೇಕಾಗುತ್ತದೆ. ಮುಂದೆ ಸುಖ ದುಃಖದಲ್ಲಿ ಜತೆ ಜತೆಯಾಗಿ ಇರಬೇಕಾದ ದಂಪತಿಯ ಬದುಕು ಚೆನ್ನಾಗಿರಬೇಕು ಎಂದಾದರೆ ಅವರ ಮಲಗುವ ಕೋಣೆಯ ಅಲಂಕಾರದ ವೇಳೆ ಈ ಕೆಲವು ಅಂಶಗಳನ್ನು ನಿರ್ಲಕ್ಷಿಸುವಂತಿಲ್ಲ.

ನವ ವಿವಾಹಿತರ ಮಲಗುವ ಕೋಣೆಯ ಅಲಂಕಾರದಲ್ಲಿ ವಾಸ್ತು ತಜ್ಞರ ಸಲಹೆಗಳನ್ನು ಪಾಲಿಸುವುದು ಅವರ ಮುಂದಿನ ಜೀವನ ಪ್ರೀತಿ ಮತ್ತು ಸಮೃದ್ಧಿಯನ್ನಾಗಿಸಲು ಸಹಾಯ ಮಾಡಿದಂತಾಗುತ್ತದೆ. ಹೀಗಾಗಿ ನವವಿವಾಹಿತ ದಂಪತಿ ಮಲಗುವ ಕೋಣೆಯನ್ನು ಅಲಂಕರಿಸುವಾಗ ಕಾಳಜಿ ವಹಿಸಲೇ ಬೇಕಾದ ಕೆಲವೊಂದು ಅಂಶಗಳು ಇಲ್ಲಿವೆ.

wed

ಮಲಗುವ ಕೋಣೆ ಪ್ರತಿಯೊಬ್ಬರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಇಲ್ಲಿ ನಾವು ಅಲಂಕರಿಸುವ ರೀತಿ ಧನಾತ್ಮಕ ಪರಿಣಾಮ ಬೀರಿದರೆ ಮುಂದೆ ಎಲ್ಲವೂ ಒಳ್ಳೆಯದೇ ಆಗುತ್ತದೆ. ಆದರೆ ಋಣಾತ್ಮಕ ಪರಿಣಾಮ ಬೀರಿದರೆ ಭವಿಷ್ಯದಲ್ಲಿ ತೊಂದರೆಗಳು ತಪ್ಪುವುದಿಲ್ಲ. ಹೀಗಾಗಿ ಪ್ರತಿಯೊಬ್ಬರೂ ತಾವು ಮಲಗುವ ಕೋಣೆಯನ್ನು ಸರಿಯಾದ ರೀತಿಯಲ್ಲಿ ಅಲಂಕರಿಸುವುದು ಬಹಳ ಮುಖ್ಯ. ಅದರಲ್ಲೂ ನವ ದಂಪತಿಯ ಸಂಬಂಧ ಮತ್ತು ಯೋಗಕ್ಷೇಮದ ಮೇಲೆ ಇದು ಯಾವುದೇ ರೀತಿಯಲ್ಲಿ ಋಣಾತ್ಮಕ ಪರಿಣಾಮ ಬೀರುವಂತೆ ಇರಬಾರದು.

ವಾಸ್ತು ಶಾಸ್ತ್ರದ ಪ್ರಕಾರ ದಾಂಪತ್ಯ ಜೀವನದಲ್ಲಿ ಸಂತೋಷ ಮತ್ತು ಸಾಮರಸ್ಯ ಬಹಳ ಮುಖ್ಯವಾಗಿರುತ್ತದೆ. ಹೀಗಾಗಿ ನವವಿವಾಹಿತರ ಮಲಗುವ ಕೋಣೆಯನ್ನು ಅಲಂಕರಿಸುವಾಗ ಅನುಸರಿಸಬೇಕಾದ ವಾಸ್ತು ನಿಯಮಗಳ ಬಗ್ಗೆ ಖ್ಯಾತ ಸಂಖ್ಯಾಶಾಸ್ತ್ರಜ್ಞರಾದ ಸಿದ್ಧಾರ್ಥ್ ಎಸ್. ಕುಮಾರ್ ಹೇಳಿರುವುದು ಹೀಗೆ...

wed (2)

ವಾಸ್ತು ಪ್ರಕಾರ ನವವಿವಾಹಿತರ ಮಲಗುವ ಕೋಣೆ ಸರಿಯಾದ ದಿಕ್ಕಿನಲ್ಲಿರಬೇಕು. ದಂಪತಿಯ ನಡುವೆ ಶಾಂತಿಯನ್ನು ಕಾಪಾಡಿಕೊಳ್ಳಲು ವಾಯುವ್ಯ ದಿಕ್ಕು ಸೂಕ್ತವಾಗಿದೆ. ಈ ದಿಕ್ಕಿನಲ್ಲಿ ನವವಿವಾಹಿತರ ಮಲಗುವ ಕೋಣೆಯನ್ನು ನಿರ್ಮಿಸಬಹುದು. ಇದು ಅವರ ವೈವಾಹಿಕ ಜೀವನದಲ್ಲಿ ಉನ್ನತಿ, ಸಂತೋಷವನ್ನು ಖಾತ್ರಿ ಪಡಿಸುತ್ತದೆ ಮತ್ತು ಎದುರಾಗುವ ಎಲ್ಲ ತೊಂದರೆಗಳನ್ನು ದೂರ ಮಾಡುತ್ತದೆ.

ಉತ್ತರ, ದಕ್ಷಿಣ, ಈಶಾನ್ಯ ಅಥವಾ ಆಗ್ನೇಯ ದಿಕ್ಕಿನಲ್ಲಿ ನವ ವಿವಾಹಿತರು ಮಲಗುವ ಕೋಣೆಯನ್ನು ಎಂದಿಗೂ ನಿರ್ಮಿಸಬಾರದು. ಏಕೆಂದರೆ ಇದು ದಂಪತಿಯ ನಡುವೆ ಅನಗತ್ಯ ಜಗಳಗಳಿಗೆ ಕಾರಣವಾಗುತ್ತದೆ. ಒಂದು ವೇಳೆ ನಿರ್ಮಿಸಿದ್ದರೆ ನವವಿವಾಹಿತ ದಂಪತಿಯು ಮದುವೆಯ ಅನಂತರ ಸ್ವಲ್ಪ ಸಮಯದವರೆಗೆ ಈ ದಿಕ್ಕುಗಳಲ್ಲಿ ನಿರ್ಮಿಸಲಾದ ಕೋಣೆಯಲ್ಲಿ ಹೋಗಿ ಒಟ್ಟಿಗೆ ಮಲಗಬಾರದು.

ಇದನ್ನೂ ಓದಿ: Vastu Tips: ಮನೆಯಲ್ಲಿ ನೀವು ಹಣವಿಡುವ ಜಾಗ ಸರಿಯಾಗಿದೆಯೇ?

ನವ ವಿವಾಹಿತರು ಮಲಗುವ ಕೋಣೆಯ ದಿಕ್ಕು ಮಾತ್ರವಲ್ಲ ಇನ್ನು ಕೆಲವು ಅಂಶಗಳನ್ನು ಗಮನಿಸಬೇಕು. ಮುಖ್ಯವಾಗಿ ನವವಿವಾಹಿತರು ಮಲಗುವ ಮಂಚ ಕಬ್ಬಿನದ್ದು ಆಗಿರಬಾರದು. ಮರದಿಂದ ಮಾಡಿರುವ ಮಂಚವೇ ಸೂಕ್ತ. ಚೌಕಾಕಾರವಲ್ಲದ ಮರದ ಮಂಚವನ್ನೂ ಬಳಸಬಾರದು. ಹಾಸಿಗೆಯ ಕೆಳಗೆ ಯಾವುದೇ ಲೋಹದ ವಸ್ತುಗಳು, ಉಡುಗೊರೆಗಳು ಅಥವಾ ಪಾತ್ರೆಗಳನ್ನು ಇರಿಸಬಾರದು.

ನವವಿವಾಹಿತರ ಮಲಗುವ ಕೋಣೆಗೆ ತಿಳಿ ಬಣ್ಣದ ಆಯ್ಕೆ ಮಾಡಬೇಕು. ಇದು ಅವರ ದಾಂಪತ್ಯದಲ್ಲಿ ಶಾಂತಿಯನ್ನು ತರುತ್ತದೆ. ದಂಪತಿಯ ಕೋಣೆಯ ಪೂರ್ವ ಗೋಡೆಯ ಮೇಲೆ ತಮ್ಮ ಚಿತ್ರಗಳನ್ನು ನೇತು ಹಾಕಬಾರದು. ಮಲಗುವಾಗ ದಂಪತಿ ತಮ್ಮ ತಲೆಯನ್ನು ಪೂರ್ವ ಅಥವಾ ಪಶ್ಚಿಮ ದಿಕ್ಕುಗಳ ಕಡೆಗೆ ಇರುವಂತೆ ಮಲಗಬೇಕು.