ದಿನ ಭವಿಷ್ಯ, ಜುಲೈ 18, 2026: ಇಂದು ಈ ರಾಶಿಯವರಿಗೆ ಸಂಸಾರದ ಜವಾಬ್ದಾರಿಗಳು ಹೆಚ್ಚಾಗುತ್ತವೆ!
Horoscope Today July 18th ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಡ ಮಾಸ, ಶುಕ್ಲ ಪಕ್ಷದ, ತೃತೀಯ ತಿಥಿ,ಮಘಾ ನಕ್ಷತ್ರದ, ಜುಲೈ 18ನೇ ತಾರೀಖಿನ ಶನಿವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಹೀಗಿದೆ..
ಇಂಟರ್ ನೆಟ್ ಚಿತ್ರ -
ಬೆಂಗಳೂರು: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷದ, ಮಘಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಇಲ್ಲಿದೆ.
ಮೇಷ ರಾಶಿ: ಇಂದು ರವಿ ಕಟಕ ರಾಶಿಯನ್ನು ಪ್ರವೇಶ ಮಾಡುತ್ತಿದ್ದಾನೆ. ಹೀಗಾಗಿ ಹೆಚ್ಚಿನ ಜನರಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ರಾಶಿಗೆ ಇಂದು ಮನೆಯ ವಿಚಾರ ಹಾಗೂ ಆಸ್ತಿ ಪಾಸ್ತಿ ವಿಚಾರವಾಗಿ ಮುಖ್ಯ ಗಮನ ನೀಡಬೇಕು. ಹಾಗೆಯೇ ತಾಯಿಯ ಆರೋಗ್ಯ ಬಗ್ಗೆಯೂ ಯೋಚಿಸಿ.
ವೃಷಭ ರಾಶಿ: ಈ ರಾಶಿಯವರಿಗೆ ಅತ್ಯುತ್ತಮವಾ ದಿನವಾಗಿದೆ. ಎಲ್ಲ ರೀತಿಯಿಂದಲೂ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಮಾಧ್ಯಮದಲ್ಲಿ ಕೆಲಸ ಮಾಡೋರಿಗೆ ಹಾಗೂ ಸೇಲ್ಸ್ ಮಾರ್ಕೆಟಿಂಗ್ ವ್ಯವಹಾರದಲ್ಲೂ ಅಭಿವೃದ್ಧಿ ಕಾಣುತ್ತೀರಿ.
ಮಿಥುನ ರಾಶಿ: ಇಂದು ಈ ರಾಶಿಗೆ ಇಂದು ಸಂಸಾರದ ತಾಪತ್ರಯಗಳು ಹೆಚ್ಚಾಗುತ್ತವೆ. ಮನೆಯ ಬಗ್ಗೆ ಹಾಗೂ ಹಣ ಕಾಸಿನ ಬಗ್ಗೆ ಜವಾಬ್ದಾರಿಯನ್ನು ನೀಡಬೇಕಾಗುತ್ತದೆ. ಹಣ ವ್ಯಯ ಆಗುವ ಸಾಧ್ಯತೆ ಕೂಡ ಇದೆ.
ಕಟಕ ರಾಶಿ: ಕಟಕ ರಾಶಿ ಅವರಿಗೆ ನಿಮ್ಮ ರಾಶಿಗೆ ಚಂದ್ರ ಬಂದಿರುವುದರಿಂದ ವೈಯಕ್ತಿಕ ಬದಲಾವಣೆಗಳು ಬೇಕು. ಇತರರಿಂದ ಟೀಕೆಗಳು ಕೇಳಬೇಕಾಗಿ ಬರಬಹುದು.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಕಷ್ಟಕರವಾದ ದಿನವಾಗಿದೆ. ಅಧಿಕಾರಿಗಳು, ಹಿರಿಯ ಉದ್ಯೋಗಿಗಳಿಂದ ತೊಂದರೆ ಎದುರಾಗಬಹುದು. ಮುಖ್ಯವಾದ ಕೆಲವು ಸಂಬಂಧದಲ್ಲಿ ಒಡಕು ಕಾಣಬಹುದು.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗಲಿದ್ದು ಇಷ್ಟಾರ್ಥ ಸಿದ್ದಿ ಯಾಗಲಿದೆ. ಆದರೆ ದಾಂಪತ್ಯದಲ್ಲಿ ನೆಮ್ಮದಿ ಇರುವುದಿಲ್ಲ
ತುಲಾ ರಾಶಿ: ತುಲಾ ರಾಶಿ ಅವರಿಗೆ ಇಂದು ಕೆಲಸ ಕಾರ್ಯದಲ್ಲಿ ಯಶಸ್ಸು ಹಾಗೂ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಅದೇ ರೀತಿ ಕೆಲಸ ಕಾರ್ಯದಲ್ಲಿ ಕೆಲವೊಂದು ತೊಂದರೆಯನ್ನು ನೋಡಬೇಕಾಗಿ ಬರಬಹುದು.
Vastu Tips: ಈ ವಸ್ತುಗಳನ್ನು ಉಡುಗೊರೆಗಳನ್ನು ನೀಡಬೇಡಿ ಎನ್ನುತ್ತದೆ ವಾಸ್ತು ಶಾಸ್ತ್ರ!
ವೃಶ್ಚಿಕ ರಾಶಿ: ಈ ರಾಶಿಗೆ ಇಂದು ಉತ್ತಮ ದಿನವಾಗಿದೆ. ಹಿಂದಿನ ದಿನದಲ್ಲಿ ಇದ್ದು ಮನಸ್ಸಿನ ಬೇಸರ ಇಂದು ಮಾಯವಾಗುತ್ತದೆ. ಹಿರಿಯರ ಆಶೀರ್ವಾದ ನಿಮಗೆ ಸಿಗಲಿದೆ.
ಧನಸ್ಸು ರಾಶಿ: ಧನಸ್ಸು ರಾಶಿಗೆ ಇಂದು ಕಷ್ಟಕರವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಪ್ರೇಮ ಪ್ರೀತಿ ಪ್ರಕರಣದಲ್ಲಿ ಇಂದು ತೊಂದರೆ ಎದುರಾಗಬಹುದು.
ಮಕರ ರಾಶಿ: ಮಕರ ರಾಶಿಯವರಿಗೆ ಇಂದು ಅತೀ ಕಷ್ಟಕರವಾದ ದಿನವಾಗಿದೆ. ಮುಖ್ಯವಾದ ಸಂಬಂಧದಲ್ಲಿ ಒಡಕು ಉಂಟಾಗಬಹುದು. ನಿಮಗೆ ವೈಯಕ್ತಿಕವಾಗಿ ತೊಂದರೆ ಉಂಟಾಗಬಹುದು.
ಕುಂಭರಾಶಿ: ಈ ರಾಶಿಯವರಿಗೆ ಉತ್ತಮವಾದ ದಿನವಾಗಿದೆ.. ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿ ಹಾಗೂ ಸಾಮಾಜಿಕ ಚಟುವಟಿಕೆಯಲ್ಲಿ ಅಭಿವೃದ್ಧಿ ಸಿಗುತ್ತದೆ.
ಮೀನ ರಾಶಿ: ಮೀನ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಆದರೆ ವೈಯಕ್ತಿಕವಾಗಿ ಬದಲಾವಣೆ ಮಾಡಿಕೊಳ್ಳಬೇಕು. ಆದರೆ ಪ್ರೇಮ ಪ್ರೀತಿ ಹಾಗೂ ದಾಂಪತ್ಯದಲ್ಲಿ ಬೇಸರ ಇರಬಹುದು.