ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಿನ ಭವಿಷ್ಯ,ಅಕ್ಟೋಬರ್ 16, 2026: ಉದ್ಯೋಗದಲ್ಲಿ ಪರಿಶ್ರಮಕ್ಕೆ ಮೆಚ್ಚುಗೆ!

Horoscope Today October 16th: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ವರ್ಷಋತು, ಅಶ್ವಯುಜ ಮಾಸ, ಶುಕ್ಲ ಪಕ್ಷದ, ಷಷ್ಠಿ ತಿಥಿ, ಜೇಷ್ಠ ನಕ್ಷತ್ರದ ಅಕ್ಟೋಬರ್‌ 16ನೇ ತಾರೀಖಿನ ಶುಕ್ರವಾರದ ಈ ದಿನ ನವರಾತ್ರಿಯ ಆರನೆ ದಿನ, ಈ ದಿನದ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ.

ಹಣಕಾಸಿನ ವಿಚಾರದಲ್ಲಿ ಸೂಕ್ತ ಯೋಜನೆ ರೂಪಿಸಿ!

ಇಂಟರ್ ನೆಟ್ ಚಿತ್ರ -

Profile
Pushpa Kumari Oct 16, 2026 6:01 AM

ಬೆಂಗಳೂರು: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಅಶ್ವಯುಜ ಮಾಸ, ಶುಕ್ಲ ಪಕ್ಷದ, ಜೇಷ್ಠ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ.

ಮೇಷ ರಾಶಿ: ಈ ರಾಶಿಗೆ ಶುಭದಾಯಕವಾದ ದಿನವಾಗಿದೆ.‌ ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು,ಅವಕಾಶಗಳು ಸಿಗಬಹುದು. ಆದರೆ ಹಣಕಾಸಿ‌ನ ವಿಚಾರದಲ್ಲಿ ಬಹಳಷ್ಟು ಜಾಗೃತಿ ವಹಿಸಿ.

ವೃಷಭ ರಾಶಿ: ಈ ರಾಶಿಗೆ ಕೆಲಸ ಕಾರ್ಯಗಳಲ್ಲಿ ಪ್ರಗತಿ ಕಾಣುವ ಸಾಧ್ಯತೆಯಿದೆ. ಬಿಸಿನೆಸ್ ವ್ಯವಹಾರದಲ್ಲಿ ಹೊಸ ಅವಕಾಶಗಳು ಸಿಗಬಹುದು. ನೀವು ಇಂದು ಸ್ನೇಹಿತರ ಜೊತೆಗೂ ಖುಷಿಯಾದ ದಿನವನ್ನು ಕಳೆಯುತ್ತೀರಿ‌.

ಮಿಥುನ ರಾಶಿ: ನಿಮ್ಮ ಮಾತಿನ ಕೌಶಲ್ಯತೆಯಿಂದ ಇಂದು ಕೆಲಸಗಳು ಸುಲಭವಾಗಿ ನೀವು ಕೈಗೊಳ್ಳಬಹುದು. ಹೊಸ ಯೋಜನೆಗಳನ್ನು ರೂಪಿಸಲು ಇದು ಸರಿಯಾದ ಸಮಯವಾಗಿದೆ.

ಕರ್ಕಾಟಕ ರಾಶಿ: ಕುಟುಂಬದಲ್ಲಿ ಮದುವೆ ಶುಭ ಕಾರ್ಯಗಳು ನಡೆಯಬಹುದು. ನಿಮ್ಮ ಪರಿಶ್ರಮಕ್ಕೆ ಇಂದು ಅದೃಷ್ಟ ಸಿಗುವ ದಿನವಾಗಿದೆ.

ಸಿಂಹ ರಾಶಿ: ನಿಮ್ಮ ಕೌಶಲ್ಯ ಹಾಗೂ ಕಾರ್ಯಕ್ಷಮತೆಯಿಂದ ಯಶಸ್ಸು ಗಳಿಸುತ್ತೀರಿ. ವ್ಯಾಪಾರದಲ್ಲಿ ಕೂಡ ಹೊಸ ಅವಕಾಶಗಳು ಸಿಗಬಹುದು.

ಕನ್ಯಾ ರಾಶಿ: ನಿಮ್ಮ ಮಾತಿಗೆ ಇಂದು ಸರಿಯಾದ ಬೆಲೆ ಸಿಗಬಹುದು. ಆದರೆ ಹಣಕಾಸಿನ ವಿಚಾರದಲ್ಲಿ ಸೂಕ್ತ ಯೋಜನೆ ರೂಪಿಸಬೇಕಾಗುತ್ತದೆ. ಕುಟುಂಬದ ಜೊತೆ ಸಂಯಮದಿಂದ ವರ್ತಿಸಿ.

Vastu Tips: ಮನೆಯಲ್ಲಿ ನೀರಿನ ಟ್ಯಾಂಕ್ ಅನ್ನು ಯಾವ ದಿಕ್ಕಿನಲ್ಲಿಡಬೇಕು? ಈ ಕುರಿತು ಪಾಲಿಸಬೇಕಾದ ವಾಸ್ತು ನಿಯಮಗಳು ಇವು

ತುಲಾ ರಾಶಿ: ಇಂದು ನಿಮ್ಮ ಜೀವನದಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಮುಖ್ಯ. ಉದ್ಯೋಗದಲ್ಲಿ ಹೊಸ ಅಭಿವೃದ್ಧಿ ಹಾಗೂ ಬೆಳವಣಿಗೆ ಸಾಧ್ಯತೆ.

ವೃಶ್ಚಿಕ ರಾಶಿ: ಆಸ್ತಿ ಹಾಗೂ ಜಮೀನು ಖರೀದಿ ವಿಚಾರದಲ್ಲಿ ಶುಭ ಸುದ್ದಿ. ಬಹುದಿನಗಳಿಂದ ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಿ.

ಧನು ರಾಶಿ: ಹೊಸ ವಿಷಯಗಳನ್ನು ಕಲಿಯಲು ಸರಿಯಾದ ಸಮಯವಾಗಿದೆ. ಉದ್ಯೋಗದಲ್ಲಿ ಪ್ರಗತಿ ಸಿಗಲಿದ್ದು ಖರ್ಚುಗಳನ್ನು ನಿಯಂತ್ರಿಸಿ.

ಮಕರ ರಾಶಿ: ಕೆಲಸದಲ್ಲಿ ಒತ್ತಡ ಜೊತೆಗೆ ನಾನಾ ರೀತಿಯ ತೊಂದರೆ ಎದುರಾಗಬಹುದು. ಹಾಗಾಗಿ ಹಿರಿಯರ ಸಲಹೆಯಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

ಕುಂಭ ರಾಶಿ:ಹೊಸ ಕೌಶಲ್ಯಗಳು ನಿಮ್ಮನ್ನು ಅಭಿವೃದ್ಧಿ ಪಡಿಸಲಿವೆ.  ಉದ್ಯೋಗ ಮತ್ತು ವ್ಯಾಪಾರದಲ್ಲಿ ಹೊಸ ಅವಕಾಶ ಸಿಗುತ್ತದೆ.

ಮೀನ ರಾಶಿ: ಮನಸ್ಸಿಗೆ ನೆಮ್ಮದಿ ನೀಡುವ ದಿನವಾಗಿದೆ. ಕುಟುಂಬದವರ ಬೆಂಬಲ ಸಿಗಲಿದ್ದು ಆತ್ಮವಿಶ್ವಾಸ ಸಿಗಲಿದೆ. ಆರೋಗ್ಯದ ಕಡೆಗೆ ಗಮನ ಹರಿಸಬೇಕಾಗುತ್ತದೆ.