ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಿನ ಭವಿಷ್ಯ,ಅಕ್ಟೋಬರ್ 15, 2026: ಇಂದು ಗಜಕೇಸರಿ ಯೋಗದ ಫಲ ಈ ರಾಶಿಗಿದೆ!

Horoscope Today October 15th: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ವರ್ಷಋತು, ಅಶ್ವಯುಜ ಮಾಸ, ಶುಕ್ಲ ಪಕ್ಷದ, ಪಂಚಮಿ ತಿಥಿ, ಜೇಷ್ಠ ನಕ್ಷತ್ರದ ಅಕ್ಟೋಬರ್‌ 15ನೇ ತಾರೀಖಿನ ಗುರುವಾರದ ಈ ದಿನ ನವರಾತ್ರಿಯ ಐದನೇ ದಿನ, ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

ನಾಯಕತ್ವ ತೆಗೆದುಕೊಳ್ಳುವ ಅವಕಾಶ ಸಿಗಲಿದೆ!

ಇಂಟರ್ ನೆಟ್ ಚಿತ್ರ -

Profile
Pushpa Kumari Oct 15, 2026 6:00 AM

ಬೆಂಗಳೂರು: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಅಶ್ವಯುಜ ಮಾಸ, ಶುಕ್ಲ ಪಕ್ಷದ, ಜೇಷ್ಠ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ.

ಮೇಷ ರಾಶಿ: ಜೇಷ್ಠ ನಕ್ಷತ್ರದ ಅಧಿಪತಿ ಬುಧ ಆಗಿದ್ದಾನೆ. ಹೀಗಾಗಿ ಹೆಚ್ಚಿನ ರಾಶಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ.‌ ಇಂದು ಉತ್ತಮವಾದ ದಿನವಾಗಿದೆ. ಹಿರಿಯರ ಆಶೀರ್ವಾದ ಪ್ರಾಪ್ತಿಯಾಗಲಿದ್ದು ಆಧ್ಯಾತ್ಮಿಕವಾಗಿಯೇ ಹೆಚ್ಚಿನ ಸಮಯ ಕಳೆಯಬಹುದು.

ವೃಷಭ ರಾಶಿ: ಈ ರಾಶಿಗೆ ಇಂದು ಅತೀ ಹೆಚ್ಚಿನ ಯಶಸ್ಸಿನ ದಿನವಾಗಿದೆ. ನಿಮ್ಮ ಪಾರ್ಟ್ನರ್ಸ್ ನಿಂದ ಶುಭ ಸುದ್ದಿಯನ್ನು ಕೇಳಬಹುದು. ಕಾರ್ಯಕ್ಷೇತ್ರದಲ್ಲೂ ಲಾಭದಾಯವಾದ ದಿನ ನಿಮ್ಮದಾಗುತ್ತದೆ.

ಮಿಥುನ ರಾಶಿ: ಇಂದು ಈ ರಾಶಿಗೆ ಉತ್ತಮವಾದ ದಿನವಾಗಿದೆ. ಸಾಮಾಜಿ‌ಕ ಚಟುವಟಿಕೆಗಳಲ್ಲಿ ಯಶಸ್ಸು ಕಾಣುತ್ತೀರಿ. ಸೋಷಿಯಲ್ ಮೀಡಿಯಾ ವ್ಯವಹಾರದಲ್ಲಿ ಅತೀ ಹೆಚ್ಚಿನ ಲಾಭವನ್ನು ನೀವು ಕಾಣುತ್ತೀರಿ.

ಕಟಕರಾಶಿ: ಇಂದು ಉತ್ತಮವಾದ ದಿನವಾಗಿದೆ. ಹಿಂದಿನ ದಿನದಲ್ಲಿ ಇದ್ದ ತೊಂದರೆ ಮಾಯವಾಗಬಹುದು..ಆದರೆ ಪ್ರೇಮ, ಪ್ರೀತಿ ಪ್ರಕರಣದಲ್ಲಿ ತೊಂದರೆಯನ್ನು ಎದುರುರಿಸಬೇಕಾಗಿ ಬರಬಹುದು.

‌ಸಿಂಹ ರಾಶಿ: ಇಂದು ಉತ್ತಮವಾದ ದಿನವಾಗಿದೆ. ನಿಮ್ಮ ಚತುರ್ಥ ಭಾವದಲ್ಲಿ ಇಂದು ಗಜಕೇಸರಿ ಯೋಗ ಪ್ರಾಪ್ತಿ ಯಾಗುತ್ತದೆ. ಬಿಸಿನೆಸ್ ವ್ಯವಹಾರದಲ್ಲಿ ಅಂದುಕೊಂಡ ಲಾಭವನ್ನು ನೀವುಗಳಿಸುತ್ತೀರಿ.

ಕನ್ಯಾರಾಶಿ: ಈ ದಿನ ಉತ್ತಮವಾದ ದಿನವಾಗಿದೆ. ಮನಸ್ಸಿಗೆ ಇಂದು ನೆಮ್ಮದಿ ಇದ್ದು ಮಾಧ್ಯಮ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಇರೋರಿಗೆ ಆರ್ಥಿಕವಾಗಿ ಪ್ರಗತಿ.

ತುಲಾ ರಾಶಿ: ಇಂದು ಉತ್ತಮವಾದ ದಿನವಾಗಿದೆ. ನಿಮ್ಮ ದ್ವೀತಿಯ ಸ್ಥಾನದಲ್ಲಿ ಚಂದ್ರ ಇದ್ದಾನೆ. ಹೀಗಾಗಿ ಹೆಂಗಸರ ಮೂಲಕ ನಿಮಗೆ ತೊಂದರೆ ಉಂಟಾಗಬಹುದು.

Vastu Tips: ವಾಸ್ತು ದೋಷ , ಆರೋಗ್ಯ: ಯಾವ ದಿಕ್ಕು ಯಾವ ಅನಾರೋಗ್ಯ ಸಮಸ್ಯೆಗೆ ಕಾರಣ? ಇಲ್ಲಿದೆ ಮಾಹಿತಿ

ವೃಶ್ಚಿಕ ರಾಶಿ: ಇಂದು ಉತ್ತಮವಾದ ದಿನವಾಗಿದೆ. ನಾಯಕತ್ವ ತೆಗೆದುಕೊಳ್ಳುವ ಅವಕಾಶಗಳು ಒದಗಿ ಬರಬಹುದು. ಬಹಳ ಒಳ್ಳೆಯ ರೀತಿಯಾಗಿ ಎಲ್ಲವನ್ನೂ ನಿಭಾಯಿಸುತ್ತೀರಿ‌

ಧನು ರಾಶಿ: ಇಂದು ಉತ್ತಮವಾದ ದಿನವಾಗಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ. ಆದರೆ ಆಧ್ಯಾತ್ಮಿಕವಾಗಿ ದಿನ ಕಳೆದರೆ ಮಾತ್ರ ಇವೆಲ್ಲವೂ ಸಿದ್ದಿಯಾಗಬಹುದು‌.

ಮಕರ ರಾಶಿ: ಇಂದು ಉತ್ತಮವಾದ ದಿನವಾಗಿದೆ. ಅಂದುಕೊಂಡ ಕೆಲಸ ಕಾರ್ಯದಲ್ಲಿ ಜಯ ಕಾಣುತ್ತೀರಿ. ಪಾರ್ಟ್ನರ್ಸ್ ಶೀಪ್ ವ್ಯವಹಾರದಲ್ಲಿ ಅಭಿವೃದ್ಧಿ

ಕುಂಭ ರಾಶಿ: ಇಂದು ಉತ್ತಮವಾದ ದಿನವಾಗಿದೆ. ಗಜಕೇಸರಿ ಯೋಗ ಇರಲಿದ್ದು ಹೆಚ್ಚಿನ ಪ್ರಗತಿ ಕಾಣುತ್ತೀರಿ. ಕೆಲಸದಲ್ಲಿ ಪ್ರಮೋಷನ್ ಸಿಗಬಹುದು‌

ಮೀನ ರಾಶಿ: ಇಂದು ಉತ್ತಮವಾದ ದಿನವಾಗಿದೆ.ಹಿರಿಯರ ಹಾಗೂ ಗುರುಗಳ ಆಶಿರ್ವಾದ ನಿಮಗೆ ಸಿಗಬಹುದು‌.ಯಾವುದೇ ಮುಖ್ಯ ನಿರ್ಧಾರ ಕೈಗೊಂಡರು ಜಯ ನಿಮ್ಮದಾಗುತ್ತದೆ