ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Astro Tips: ದಾಂಪತ್ಯ ಸುಖ, ಐಶ್ವರ್ಯ ಮತ್ತು ಅದೃಷ್ಟ ವೃದ್ಧಿಗಾಗಿ ಹೀಗೆ ಮಾಡಿ

ವಿವಾಹಿತರು ಶುಕ್ರವಾರ ಸಂಜೆ ಲಕ್ಷ್ಮಿ ದೇವಿಯನ್ನು ವಿಧಿವಿಧಾನಗಳೊಂದಿಗೆ ಪೂಜಿಸುವುದು ಅತ್ಯಂತ ಶುಭಕರವೆಂದು ಧರ್ಮಗ್ರಂಥಗಳು ಹೇಳುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರವಾರ ಈ 6 ಸರಳ ಉಪಾಯಗಳನ್ನು ಪಾಲಿಸಿದರೆ, ದಾಂಪತ್ಯ ಜೀವನದಲ್ಲಿ ನೆಮ್ಮದಿ ದೊರೆಯುವುದರ ಜೊತೆಗೆ ಹಣಕಾಸಿನ ಸ್ಥಿತಿಯೂ ಬಲವಾಗುತ್ತದೆ ಎಂದು ನಂಬಿಕೆ ಇದೆ.

ಲಕ್ಷ್ಮೀ ದೇವಿ

ಬೆಂಗಳೂರು: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರವಾರವು ಶುಕ್ರ ದೇವನಿಗೂ ಹಾಗೂ ಐಶ್ವರ್ಯ–ಸೌಂದರ್ಯದ ಅಧಿದೇವತೆಯಾದ ತಾಯಿ ಲಕ್ಷ್ಮಿ ದೇವಿಗೂ ಅತ್ಯಂತ ಪ್ರಿಯವಾದ ದಿನ. ಈ ದಿನ ಶ್ರದ್ಧೆಯಿಂದ ಪೂಜೆ ಮಾಡಿದರೆ ಜೀವನದಲ್ಲಿ ಸಂತೋಷ, ಐಶ್ವರ್ಯ, ಅದೃಷ್ಟ, ಪ್ರೀತಿ ಮತ್ತು ದಾಂಪತ್ಯ ಸುಖ ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ವಿಶೇಷವಾಗಿ ವಿವಾಹಿತರು ಶುಕ್ರವಾರ ಸಂಜೆ ಲಕ್ಷ್ಮಿ ದೇವಿಯನ್ನು ವಿಧಿವಿಧಾನಗಳೊಂದಿಗೆ ಆರಾಧಿಸುವುದು ಬಹಳ ಶುಭಕರ.


ವಿಶೇಷವಾಗಿ ವಿವಾಹಿತರು ಶುಕ್ರವಾರ ಸಂಜೆ ಲಕ್ಷ್ಮಿ ದೇವಿಯನ್ನು ವಿಧಿವಿಧಾನಗಳೊಂದಿಗೆ ಪೂಜಿಸುವುದು ಅತ್ಯಂತ ಶುಭಕರವೆಂದು ಧರ್ಮಗ್ರಂಥಗಳು ಹೇಳುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ(Astro Tips), ಶುಕ್ರವಾರ ಈ 6 ಸರಳ ಉಪಾಯಗಳನ್ನು ಪಾಲಿಸಿದರೆ, ದಾಂಪತ್ಯ ಜೀವನದಲ್ಲಿ ನೆಮ್ಮದಿ ದೊರೆಯುವುದರ ಜೊತೆಗೆ ಹಣಕಾಸಿನ ಸ್ಥಿತಿಯೂ ಬಲವಾಗುತ್ತದೆ ಎಂದು ನಂಬಿಕೆ ಇದೆ.

ಹಾಗಾದ್ರೆ ಇಂದು ಮಾಡಬೇಕಾದ ನಿಯಮಗಳು ಏನು..? ಆದರಿಂದ ಆಗುವ ಪ್ರಯೋಜನ ಏನು ಎಂಬುದನ್ನು ನೋಡೋಣ..

ಶುಕ್ರವಾರ ರಾತ್ರಿ ಈ ದೀಪ ಬೆಳಗಿಸಿ

ಸಾಮಾನ್ಯವಾಗಿ ಮಲಗುವ ಮುನ್ನ ಎಲ್ಲಾ ದೀಪಗಳನ್ನು ಆರಿಸುವ ಅಭ್ಯಾಸವಿದೆ. ಆದರೆ ಶುಕ್ರವಾರ ರಾತ್ರಿ ಈಶಾನ್ಯ ದಿಕ್ಕಿನಲ್ಲಿ ತುಪ್ಪದ ದೀಪವನ್ನು ಬೆಳಗಿಸಿ ಮಲಗಬೇಕು. ಸಾಧ್ಯವಿಲ್ಲದಿದ್ದರೆ, ಆ ದಿಕ್ಕಿನಲ್ಲಿ ಲೈಟ್‌ ಆನ್‌ ಇರಿಸಬಹುದು. ಇದರಿಂದ ಲಕ್ಷ್ಮಿ ದೇವಿಗೆ ಮನೆ ಪ್ರವೇಶಿಸಲು ದಾರಿ ಸಿಗುತ್ತದೆ ಹಾಗೂ ಆರ್ಥಿಕ ಸಮೃದ್ಧಿ ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ.

ಲಕ್ಷ್ಮಿ ದೇವಿಗೆ ಮಲ್ಲಿಗೆ ಅಥವಾ ಗುಲಾಬಿ ಅರ್ಪಿಸಿ

ಶುಕ್ರವಾರ ರಾತ್ರಿ ನಿದ್ರೆಗೆ ಹೋಗುವ ಮೊದಲು ಲಕ್ಷ್ಮಿ ದೇವಿಯ ಚಿತ್ರ ಅಥವಾ ವಿಗ್ರಹಕ್ಕೆ ಮಲ್ಲಿಗೆ ಹೂವಿನ ಸುಗಂಧ ದ್ರವ್ಯ ಅಥವಾ ಹಾರವನ್ನು ಅರ್ಪಿಸಬೇಕು. ಇದರಿಂದ ಹಣದ ಕೊರತೆ ದೂರವಾಗುತ್ತದೆ.
ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಆಕರ್ಷಣೆ ಕಡಿಮೆಯಾಗಿದೆ ಎನ್ನುವವರು ಗುಲಾಬಿ ಸುಗಂಧವನ್ನು ಅರ್ಪಿಸುವುದು ಅತ್ಯಂತ ಲಾಭಕರವೆಂದು ಹೇಳಲಾಗುತ್ತದೆ.

ಪಂಚಮುಖಿ ದೀಪದ ಆರತಿ

ಮನೆಯೊಳಗಿನ ನಕಾರಾತ್ಮಕ ಶಕ್ತಿಯನ್ನು ನಿವಾರಿಸಲು ಶುಕ್ರವಾರ ಸಂಜೆ ಪಂಚಮುಖಿ ದೀಪದಿಂದ ಲಕ್ಷ್ಮಿ ದೇವಿಗೆ ಆರತಿ ಮಾಡಬೇಕು. ಈ ಆರತಿಯಿಂದ ಮನೆಗೆ ಸಕಾರಾತ್ಮಕತೆ ಹರಿದುಬರುತ್ತದೆ ಹಾಗೂ ಸಂಪತ್ತಿನ ವೃದ್ಧಿ ಆಗುತ್ತದೆ.

Astro Tips: ಸುರಕ್ಷಿತ ಪ್ರಯಾಣ ನಿಮ್ಮದಾಗಬೇಕೆ?; ಹಾಗಾದ್ರೆ ಕಾರಿನಲ್ಲಿ ತಪ್ಪದೇ ಈ ವಸ್ತುಗಳನ್ನು ಇಡಿ

ಕರ್ಪೂರ–ಕುಂಕುಮದ ವಿಶೇಷ ಆರತಿ

ಹಣ ಬರುತ್ತಿದ್ದರೂ ಉಳಿಯದೆ ಹೋಗುತ್ತಿದ್ದರೆ, ಶುಕ್ರವಾರ ಲಕ್ಷ್ಮಿ ದೇವಿಗೆ ಕರ್ಪೂರದ ಆರತಿ ಮಾಡಿ ಅದರಲ್ಲಿ ಸ್ವಲ್ಪ ಕುಂಕುಮವನ್ನು ಸೇರಿಸಬೇಕು.
ಆ ಕುಂಕುಮವನ್ನು ಕೆಂಪು ಕಾಗದದಲ್ಲಿ ಕಟ್ಟಿಕೊಂಡು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದರಿಂದ ಹಣದ ಹರಿವು ಸುಗಮವಾಗುತ್ತದೆ ಮತ್ತು ಯಶಸ್ಸು ಸಿಗುತ್ತದೆ ಎಂದು ನಂಬಿಕೆ ಇದೆ.

ಅಡಿಕೆ ಮತ್ತು ತಾಮ್ರ ನಾಣ್ಯದ ಉಪಾಯ

ಶುಕ್ರವಾರ ಅಡಿಕೆ ಮತ್ತು ತಾಮ್ರದ ನಾಣ್ಯವನ್ನು ಕೈಯಲ್ಲಿ ಹಿಡಿದು ಲಕ್ಷ್ಮಿ ದೇವಿಗೆ ಅರ್ಪಿಸಿ, ನಂತರ ಅವುಗಳನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳಬೇಕು. ಇದರಿಂದ ಆರ್ಥಿಕ ಸ್ಥಿರತೆ ಮತ್ತು ಅದೃಷ್ಟ ವೃದ್ಧಿಯಾಗುತ್ತದೆ.

ಪತ್ನಿಗೆ ಉಡುಗೊರೆ ನೀಡಿ

ಶಾಸ್ತ್ರಗಳ ಪ್ರಕಾರ, ಪತ್ನಿಯೇ ಮನೆಯ ಲಕ್ಷ್ಮಿ. ಶುಕ್ರವಾರ ಸಂಜೆ ಮನೆಗೆ ಬರುವಾಗ ಪತ್ನಿಗೆ ಸಣ್ಣ ಉಡುಗೊರೆ ಅಥವಾ ಸಿಹಿತಿಂಡಿ ನೀಡಬೇಕು. ಪತ್ನಿಯ ಸಂತೋಷವೇ ಲಕ್ಷ್ಮಿ ದೇವಿಯ ಕೃಪೆಗೆ ಕಾರಣವಾಗುತ್ತದೆ ಎಂದು ನಂಬಲಾಗುತ್ತದೆ.