Astro Tips: ಸುರಕ್ಷಿತ ಪ್ರಯಾಣ ನಿಮ್ಮದಾಗಬೇಕೆ?; ಹಾಗಾದ್ರೆ ಕಾರಿನಲ್ಲಿ ತಪ್ಪದೇ ಈ ವಸ್ತುಗಳನ್ನು ಇಡಿ
ಇತ್ತೀಚೆಗೆ ಹೆಚ್ಚುತ್ತಿರುವ ಕಾರು ಅಪಘಾತಗಳನ್ನು ತಪ್ಪಿಸಲು ವೈದಿಕ ಜ್ಯೋತಿಷ್ಯ ಕೆಲವು ಪರಿಹಾರಗಳನ್ನು ಸೂಚಿಸುತ್ತದೆ. ಕಾರಿನಲ್ಲಿ ಗಣೇಶ ಅಥವಾ ಹನುಮಂತನ ವಿಗ್ರಹ, ಕಲ್ಲುಪ್ಪು, ಕಪ್ಪು ಆಮೆ, ಕೆಂಪು ಹವಳ, ನಿಂಬೆ–ಹಸಿರು ಮೆಣಸಿನಕಾಯಿ ಹಾಗೂ ಶ್ರೀ ಅಥವಾ ನವಗ್ರಹ ಯಂತ್ರವನ್ನು ಇಡುವುದರಿಂದ ನಕಾರಾತ್ಮಕ ಶಕ್ತಿ ದೂರವಾಗಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಈ ವಸ್ತುಗಳು ಪ್ರಯಾಣದ ವೇಳೆ ಮನಸ್ಸಿಗೆ ಶಾಂತಿ ನೀಡುವ ಜೊತೆಗೆ ಅಪಘಾತಗಳಿಂದ ರಕ್ಷಣೆ ಒದಗಿಸುತ್ತವೆ ಎಂಬ ನಂಬಿಕೆ ಇದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ರಸ್ತೆ ಅಪಘಾತಗಳ(Accident) ಪ್ರಮಾಣ ಗಮನಾರ್ಹವಾಗಿ ಏರಿಕೆಯಾಗಿದೆ. ವಿಶೇಷವಾಗಿ ಕಾರು ಅಪಘಾತಗಳು ಹೆಚ್ಚುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ತಿರುವುಗಳು ಹೆಚ್ಚು ಇರುವ ರಸ್ತೆಗಳು ಅಥವಾ ಅತಿವೇಗದ ಚಾಲನೆ ಟ್ರಿಲ್ ನೀಡಿದರೂ, ಅಪಾಯದ ಸಾಧ್ಯತೆಯೂ ಅಷ್ಟೇ ಹೆಚ್ಚಾಗಿರುತ್ತದೆ. ಹೀಗಾಗಿ, ನಿಮ್ಮ ಪ್ರಯಾಣವನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಮತ್ತು ಅನಾಹುತಗಳನ್ನು ತಪ್ಪಿಸಲು ಯಾವುದೇ ಪರಿಹಾರವಿದೆಯೇ ಎಂದು ಯೋಚಿಸುತ್ತಿದ್ದರೆ, ಅದಕ್ಕೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಸಲಹೆಗಳು(Astro Tips) ಇವೆ.
ಹೌದು ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕಾರಿನೊಳಗೆ ಕೆಲವು ಶಕ್ತಿಶಾಲಿ ವಸ್ತುಗಳನ್ನು ಇಟ್ಟುಕೊಂಡರೆ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಮತ್ತು ಅಪಘಾತಗಳ ಸಂಭವ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ. ನಿಮ್ಮ ಪ್ರಯಾಣಕ್ಕೆ ಸುರಕ್ಷಿತ ಹಾಗೂ ಮನಸ್ಸಿಗೆ ನೆಮ್ಮದಿ ನೀಡುವ ಹಾಗೆ ಇರಬೇಕೆಂದರೆ ಈ ಪರಿಹಾರಗಳನ್ನು ಪಾಲಿಸಿ.
ಗಣೇಶನ ವಿಗ್ರಹ:
ಅಡೆತಡೆಗಳನ್ನು ನಿವಾರಿಸುವ ದೇವರಾಗಿರುವ ಗಣೇಶನನ್ನು ಶುಭಾರಂಭದ ಸಂಕೇತವಾಗಿ ಪರಿಗಣಿಸಲಾಗುತ್ತದೆ. ಕಾರಿನಲ್ಲಿ ಸಣ್ಣ ಗಣೇಶನ ವಿಗ್ರಹವನ್ನು ಇಡುವುದರಿಂದ ಪ್ರಯಾಣದ ವೇಳೆ ಎದುರಾಗುವ ಅಡಚಣೆಗಳು ದೂರವಾಗುತ್ತವೆ ಹಾಗೂ ಅಪಘಾತಗಳಿಂದ ರಕ್ಷಣೆ ದೊರೆಯುತ್ತದೆ ಎಂಬ ನಂಬಿಕೆ ಇದೆ.
ಕಲ್ಲುಪ್ಪು:
ಕಲ್ಲುಪ್ಪು ನಕಾರಾತ್ಮಕ ಶಕ್ತಿಯನ್ನು ನಿಯಂತ್ರಿಸುವ ಗುಣ ಹೊಂದಿದೆ ಎಂದು ಹೇಳಲಾಗುತ್ತದೆ. ಸ್ವಲ್ಪ ಕಲ್ಲುಪ್ಪನ್ನು ಅಡುಗೆ ಸೋಡಾದೊಂದಿಗೆ ಮಿಶ್ರಣ ಮಾಡಿ, ಕಾಗದದಲ್ಲಿ ಸುತ್ತಿ ಕಾರಿನ ಸೀಟಿನ ಕೆಳಗೆ ಇಡುವುದರಿಂದ ದುಷ್ಟ ಶಕ್ತಿಯ ಪ್ರಭಾವ ಕಡಿಮೆಯಾಗುತ್ತದೆ. ಇದರಿಂದ ಪ್ರಯಾಣ ಹೆಚ್ಚು ಶಾಂತಿಯುತವಾಗುತ್ತದೆ.
ಕಪ್ಪು ಆಮೆ:
ವಾಸ್ತುಶಾಸ್ತ್ರದಲ್ಲಿ ಆಮೆ ಸ್ಥಿರತೆ ಮತ್ತು ದೀರ್ಘಾಯುಷ್ಯದ ಸಂಕೇತ. ಕಾರಿನಲ್ಲಿ ಸಣ್ಣ ಕಪ್ಪು ಆಮೆಯನ್ನು ಇಟ್ಟುಕೊಳ್ಳುವುದರಿಂದ ನಕಾರಾತ್ಮಕ ಶಕ್ತಿ ದೂರವಾಗಿ ಸಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ ಎಂದು ನಂಬಲಾಗುತ್ತದೆ. ಇದು ಸುರಕ್ಷಿತ ಪ್ರಯಾಣಕ್ಕೆ ಸಹಾಯಕ.
ಕೆಂಪು ಹವಳ:
ಮಂಗಳ ಗ್ರಹಕ್ಕೆ ಸಂಬಂಧಿಸಿದ ರತ್ನವಾಗಿರುವ ಕೆಂಪು ಹವಳವು ಶಕ್ತಿ ಮತ್ತು ಧೈರ್ಯವನ್ನು ಹೆಚ್ಚಿಸುತ್ತದೆ. ಈ ರತ್ನವನ್ನು ಕಾರಿನಲ್ಲಿ ಇಡುವುದರಿಂದ ಚಾಲನಾ ಆತ್ಮವಿಶ್ವಾಸ ಹೆಚ್ಚಾಗಿ, ಅಪಘಾತಗಳ ಸಾಧ್ಯತೆ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ.
Astro Tips: ಈ 5 ರಾಶಿಯವರು ನಾಯಕತ್ವ ಗುಣದಲ್ಲಿ ನಿಸ್ಸೀಮರು; ನಿಮ್ಮ ರಾಶಿ ಇದ್ಯಾ ಚೆಕ್ ಮಾಡಿ
ನಿಂಬೆ ಮತ್ತು ಹಸಿರು ಮೆಣಸಿನಕಾಯಿ:
ದುಷ್ಟ ದೃಷ್ಟಿ ಮತ್ತು ನಕಾರಾತ್ಮಕ ಶಕ್ತಿಯನ್ನು ತಡೆಗಟ್ಟಲು ನಿಂಬೆ–ಹಸಿರು ಮೆಣಸಿನಕಾಯಿ ಪರಿಣಾಮಕಾರಿಯಾಗಿದ್ದು, ಜ್ಯೋತಿಷ್ಯದಲ್ಲಿ ಇದಕ್ಕೆ ಮಹತ್ವದ ಸ್ಥಾನ ಇದೆ. ಕಾರಿನ ಒಳಗಿನ ಕನ್ನಡಿಯ ಬಳಿ ಇವುಗಳನ್ನು ನೇತುಹಾಕುವುದರಿಂದ ಅಪಘಾತಗಳಿಂದ ರಕ್ಷಣೆ ದೊರೆಯುತ್ತದೆ ಎಂದು ಹೇಳಲಾಗುತ್ತದೆ.
ಹನುಮಂತನ ವಿಗ್ರಹ:
ಶಕ್ತಿ ಮತ್ತು ರಕ್ಷಣೆಯ ಪ್ರತೀಕವಾಗಿರುವ ಹನುಮಂತನ ಸಣ್ಣ ಪ್ರತಿಮೆಯನ್ನು ಕಾರಿನಲ್ಲಿ ಇಡುವುದರಿಂದ ದುಷ್ಟ ಶಕ್ತಿ ದೂರವಾಗುತ್ತದೆ. ಇದೇ ಕಾರಣಕ್ಕೆ ಅನೇಕರು ತಮ್ಮ ವಾಹನಗಳಲ್ಲಿ ಹನುಮಂತನ ಚಿತ್ರ ಅಥವಾ ವಿಗ್ರಹವನ್ನು ಇಟ್ಟುಕೊಳ್ಳುತ್ತಾರೆ.
ಯಂತ್ರ:
ಶ್ರೀ ಯಂತ್ರ ಅಥವಾ ನವಗ್ರಹ ಯಂತ್ರದಂತಹ ಪವಿತ್ರ ಯಂತ್ರಗಳನ್ನು ಕಾರಿನಲ್ಲಿ ಇಡುವುದರಿಂದ ಗ್ರಹದೋಷಗಳ ಪ್ರಭಾವ ಕಡಿಮೆಯಾಗುತ್ತದೆ. ಇದು ಪ್ರಯಾಣದ ವೇಳೆ ರಕ್ಷಣಾ ಕವಚದಂತೆ ಕಾರ್ಯನಿರ್ವಹಿಸುತ್ತವೆ ಎಂಬ ವಿಶ್ವಾಸವಿದೆ.