ದಿನ ಭವಿಷ್ಯ, ಜೂನ್ 30, 2026: ಇಂದು ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ; ಉದ್ಯೋಗಿಗಳಿಗೆ ಬಡ್ತಿ ಭಾಗ್ಯ
Horoscope Today July 1, 2026: ಇಂದು (ಜುಲೈ 1) ಆಷಾಢ ಮಾಸದ 2ನೇ ದಿನ. ಬುಧವಾರ ಗಣಪತಿ, ವಿಷ್ಣು ಮತ್ತು ಬುಧ ಗ್ರಹಕ್ಕೆ ಮೀಸಲು. ಹೀಗಾಗಿ ಇಂದು ಗಣಪತಿಗೆ ಗರಿಕೆ, ಮೋದಕ ನೈವೇದ್ಯ ಮಾಡಿದರೆ ವಿಘ್ನ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಇದೆ. ವಿಷ್ಣು ಸಹಸ್ರನಾಮ ಪಠಣಕ್ಕೂ ಉತ್ತಮ ದಿನ. ಇನ್ನು ಪ್ರತಿ ರಾಶಿಯ ದಿನ ಭವಿಷ್ಯ ಹೇಗಿರಲಿದೆ ಎನ್ನುವ ವಿವರ ಇಲ್ಲಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು: ಆಷಾಢ ಮಾಸ ಆರಂಭವಾಗಿದ್ದು, ಇಂದು (ಜುಲೈ 1) 2ನೇ ದಿನ. ಈ ದಿನದ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಗಳ ಭವಿಷ್ಯ (Horoscope Today July 1, 2026) ಹೇಗಿರಲಿದೆ ಎನ್ನುವ ವಿವರ ಇಲ್ಲಿದೆ.
ಮೇಷ: ಹೊಸ ಕೆಲಸಗಳಿಗೆ ಉತ್ತಮ ಆರಂಭ ಸಿಗಲಿದೆ. ಉದ್ಯೋಗದಲ್ಲಿ ನಿಮ್ಮ ಕಾರ್ಯಕ್ಷಮತೆಗೆ ಮೆಚ್ಚುಗೆ ಸಿಗಬಹುದು. ಹಣಕಾಸಿನ ವಿಚಾರದಲ್ಲಿ ಲಾಭದ ಸೂಚನೆ. ಕುಟುಂಬದಲ್ಲಿ ಸಂತಸದ ವಾತಾವರಣ ಕಂಡು ಬರಲಿದೆ. ಕೋಪವನ್ನು ನಿಯಂತ್ರಿಸಬೇಕು. ಸಣ್ಣ ವಿಷಯಕ್ಕೂ ಉದ್ವೇಗ ಬೇಡ.
ವೃಷಭ: ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ. ಹಳೆಯ ಸ್ನೇಹಿತರ ಭೇಟಿ ಸಂತೋಷ ತರಲಿದೆ. ಆರೋಗ್ಯದ ಕಡೆ ಗಮನ ಹರಿಸಿ. ಹಠ ಒಳ್ಳೆಯದಲ್ಲ. ಹಳೆಯ ಹೂಡಿಕೆಯಿಂದ ಲಾಭ ದೊರೆಯಲಿದೆ.
ಮಿಥುನ: ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ವ್ಯಾಪಾರದಲ್ಲಿ ಲಾಭ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಶುಭ ದಿನ. ಒಂದೇ ಬಾರಿಗೆ ಹಲವು ಕೆಲಸದಲ್ಲಿ ತೊಡಗಿಸಿಕೊಳ್ಳಬೇಡಿ. ಉದ್ಯೋಗ ಬದಲಾವಣೆಗೆ ಉತ್ತಮ ಸಮಯ. ಬುಧ ಲಗ್ನದಲ್ಲಿರುವುದರಿಂದ ಪ್ರಗತಿಗೆ ಹೊಸ ಅವಕಾಶ.
ಕಟಕ: ಕುಟುಂಬದ ಜವಾಬ್ದಾರಿ ಹೆಚ್ಚಾಗಬಹುದು. ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಖರ್ಚುಗಳನ್ನು ನಿಯಂತ್ರಿಸದಿದ್ದರೆ ಕಷ್ಟ. ಹೊಸ ಆರಂಭಕ್ಕೆ ಮನಸ್ಸು ತೆರೆದುಕೊಳ್ಳಿ. ಗುರು ಲಗ್ನದಲ್ಲಿರುವುದರಿಂದ ಆರ್ಥಿಕವಾಗಿ ಅನುಕೂಲವಾಗಲಿದೆ.
ಸಿಂಹ: ಆತ್ಮವಿಶ್ವಾಸ ಹೆಚ್ಚಲಿದೆ. ಹೊಸ ಯೋಜನೆ ಆರಂಭಿಸಲು ಉತ್ತಮ ಸಮಯ. ದಾಂಪತ್ಯ ಜೀವನದಲ್ಲಿ ನೆಮ್ಮದಿ ಸಿಗಲಿದೆ. ಕೆಲಸದಲ್ಲಿ ಬಡ್ತಿ ದೊರೆಯಲಿದೆ.
ಕನ್ಯಾ: ಕೆಲಸದಲ್ಲಿ ಒತ್ತಡ ಇದ್ದರೂ ಯಶಸ್ಸು ನಿಮ್ಮದಾಗುತ್ತದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಹಣಕಾಸಿನಲ್ಲಿ ಸ್ಥಿರತೆ ಕಂಡು ಬರಲಿದೆ. ಶಿಸ್ತಿನಿಂದ ಕೆಲಸ ಮಾಡಿದರೆ ಉತ್ತಮ ಫಲ. ದಾಂಪತ್ಯ ಜೀವನದಲ್ಲಿ ಸಂತೋಷ.
ಮುಂಜಾನೆ ಈ ಕೆಲಸ ಮಾಡಿದವರಿಗೆ ಸಿಗಲಿದೆ ಮುಕ್ಕೋಟಿ ದೇವರ ವಿಶೇಷ ಅನುಗ್ರಹ!
ತುಲಾ: ವೃತ್ತಿಯಲ್ಲಿ ಪ್ರಗತಿಯ ಸೂಚನೆ. ಹೊಸ ಪರಿಚಯ ಭವಿಷ್ಯದಲ್ಲಿ ಉಪಯೋಗಕ್ಕೆ ಬರಲಿದೆ. ಮನೆ ನಿರ್ಮಾಣ, ವಿವಾಹ ವಿಚಾರದಲ್ಲಿ ಮಿಶ್ರಫಲ.
ವೃಶ್ಚಿಕ: ಆತುರದಲ್ಲಿ ಪ್ರಮುಖ ನಿರ್ಧಾರಗಳನ್ನುತೆಗೆದುಕೊಳ್ಳಬೇಡಿ. ಕುಟುಂಬದ ಬೆಂಬಲ ಸಿಗಲಿದೆ. ಪ್ರೇಮ ಸಂಬಂಧಗಳಲ್ಲಿ ಸಂತಸ ಸಿಗಲಿದೆ. ಗುರು-ದೇವತಾನುಗ್ರಹವಿದ್ದರೆ ಯಶಸ್ಸು.
ಧನು: ಉದ್ಯೋಗದಲ್ಲಿ ಜವಾಬ್ದಾರಿ ಹೆಚ್ಚಾಗಬಹುದು. ಆರ್ಥಿಕವಾಗಿ ಮಿಶ್ರ ಫಲ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ. ಕೋಪ-ಅಹಂಕಾರ ನಿಯಂತ್ರಿಸಿ. ಮನೆಯಲ್ಲಿ ಶುಭ ಸಮಾರಂಭದ ಸಾಧ್ಯತೆ.
ಮಕರ: ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಹಿರಿಯರ ಸಲಹೆಯಿಂದ ಅನುಕೂಲವಾಗಲಿದೆ. ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಉಂಟಾಗಬಹುದು. ಉದ್ಯಮಿಗಳಿಗೆ ಶುಭ ಫಲ. ಉಳಿತಾಯದ ಮೇಲೆ ಗಮನ ಇರಲಿ.
ಕುಂಭ: ಹೊಸ ಆದಾಯದ ಮೂಲಗಳು ಕಂಡುಬರಬಹುದು. ವ್ಯಾಪಾರಿಗಳಿಗೆ ಉತ್ತಮ ದಿನ. ಆದಾಯ ತ್ವರಿತ ಹೆಚ್ಚಳ, ಅವಕಾಶಗಳಿಂದ ಲಾಭ.
ಮೀನ: ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಬಹುದು. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ. ಮೇಲಧಿಕಾರಿಗಳ ಬೆಂಬಲ ಸಿಗಲಿದೆ. ಸರ್ಕಾರಿ ನೌಕರರಿಗೆ ವರ್ಗಾವಣೆ ಭಾಗ್ಯ.
ಧಾರ್ಮಿಕ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.