ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಿನ ಭವಿಷ್ಯ, ಜೂನ್ 29, 2026: ಜೀವನ ಸಂಗಾತಿ ಜತೆ ವೈಮನಸ್ಸು ಉಂಟಾಗುವ ಸಾಧ್ಯತೆ; ಎಚ್ಚರಿಕೆಯಿಂದಿರಿ

Horoscope Today June 29th: ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷದ, ಪೌರ್ಣಮಿ ತಿಥಿ, ಮೂಲ ನಕ್ಷತ್ರದ, ಜೂನ್ 29ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿರಲಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಈ ರಾಶಿಯವರಿಗೆ ಮುಖ್ಯ ವಿಚಾರದಲ್ಲಿ ತೊಂದರೆ ಎದುರಾಗಬಹುದು

ಇಂಟರ್‌ನೆಟ್ ಚಿತ್ರ -

Profile
Pushpa Kumari Jun 29, 2026 6:00 AM

ಬೆಂಗಳೂರು, ಜೂ. 29: ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷದ, ಮೂಲ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿಗಳ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಮೇಷ ರಾಶಿ: ಇಂದು ಬುಧ ಕಟಕ ರಾಶಿಯಲ್ಲಿ ವಕ್ರಿಯಾಗಿದ್ದಾನೆ.‌ ಹೀಗಾಗಿ ಹೆಚ್ಚಿನ ರಾಶಿಯವರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ರಾಶಿಯವರಿಗೆ ಇಂದು ಕಷ್ಟದ ದಿನವಾಗಲಿದೆ. ನಿಮ್ಮ ಮಾತಿನಿಂದ ಇಂದು ತೊಂದರೆಯಾಗಬಹುದು. ಅದೇ ರೀತಿ ಆಸ್ತಿ -ಪಾಸ್ತಿ ವಿಚಾರವಾಗಿಯೂ ಎಚ್ಚರಿಕೆ ಅಗತ್ಯ.

ವೃಷಭ ರಾಶಿ: ಈ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಮನೆಯಲ್ಲೂ ಇದ್ದ ಸಮಸ್ಯೆಗೆ ಇಂದು ತಾತ್ಕಾಲಿಕ ಪರಿಹಾರ ಸಿಗಲಿದೆ. ಹಣಕಾಸಿನ ವಿಚಾರವಾಗಿಯೂ ತೊಂದರೆ ಬಗೆಹರಿಯಲಿದೆ.

ಮಿಥುನ ರಾಶಿ: ಈ ರಾಶಿಯವರಿಗೆ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ. ಯಾವುದೇ ಕೆಲಸ ಕಾರ್ಯದಲ್ಲಿ ಇಂದು ಜಯ ಉಂಟಾಗುವುದಿಲ್ಲ.

ಕಟಕ ರಾಶಿ: ಕಟಕ ರಾಶಿಯವರಿಗೆ ಇಂದು ಕಷ್ಟದ ದಿನವಾಗಿದೆ. ಪ್ರೀತಿ ಪ್ರೇಮ ವಿಚಾರವಾಗಿ ತೊಂದರೆ ಇರುತ್ತದೆ. ಪಾರ್ಟನರ್‌ಶಿಪ್ ವ್ಯವಹಾರ ಹಾಗೂ ಮಿತ್ರತ್ವದಲ್ಲಿ ಒಡಕು ಕಾಣಬಹುದು.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಅನೂಕೂಲದ ದಿನವಾಗಲಿದೆ. ನಿಮ್ಮನ್ನು ಬಿಟ್ಟು ಹೋದ ಜನರು ಇಂದು ನಿಮ್ಮ ಬಳಿಗೆ ಬರುತ್ತಾರೆ‌. ಸಂತೋಷದ ದಿನ ನಿಮ್ಮದಾಗಲಿದೆ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಆದರೆ ಕಾರ್ಯಕ್ಷೇತ್ರದ ಜವಾಬ್ದಾರಿ ಹೆಚ್ಚಾಗುತ್ತದೆ.‌ ಯೋಚಿಸಿ ಯಾವುದೇ ನಿರ್ಧಾರ ತೆಗೆದುಕೊಳ್ಳಿ.

ತುಲಾ ರಾಶಿ: ತುಲಾ ರಾಶಿಯವರಿಗೆ ಉತ್ತಮ ದಿನವಾಗಿದ್ದರೂ ಕೆಲವೊಂದು ಕೆಲಸ ಕಾರ್ಯದಲ್ಲಿ ಹೆಚ್ಚಿನ ಜವಾಬ್ದಾರಿ ನೀವು ತೆಗೆದು ಕೊಳ್ಳಬೇಕಾಗುತ್ತದೆ.

ಮನೆ ಖರೀದಿಸುವ ಮುನ್ನ ಈ ವಾಸ್ತು ನಿಯಮಗಳನ್ನು ತಿಳಿಯಿರಿ

ವೃಶ್ಚಿಕ ರಾಶಿ: ಈ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ನಿಮ್ಮ ಅದೃಷ್ಟ ಇಂದು ಹೆಚ್ಚಾಗುತ್ತದೆ. ಕೆಲಸ ಕಾರ್ಯದಲ್ಲಿ ಜಯ ಉಂಟಾಗಬಹುದು.

ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಇಂದು ಕಷ್ಟದ ದಿನವಾಗಲಿದೆ. ಮುಖ್ಯವಾದ ಕೆಲಸ ಕಾರ್ಯದಲ್ಲಿ ತೊಂದರೆ ಉಂಟಾಗಬಹುದು. ಜೀವನ ಸಂಗಾತಿ ಜತೆ ಜಗಳ ಎದುರಾಗಬಹುದು.

ಮಕರ ರಾಶಿ: ಮಕರ ರಾಶಿಯವರಿಗೆ ಇಂದು ಅದೃಷ್ಟದ ದಿನವಾಗಲಿದೆ. ಶತ್ರು ನಾಶವಾಗಲಿದೆ ಹಾಗೂ ಆರೋಗ್ಯದಲ್ಲೂ ಸುಧಾರಣೆ ಕಂಡು ಬರಲಿದೆ.

ಕುಂಭ ರಾಶಿ: ಈ ರಾಶಿಯವರಿಗೆ ಅದೃಷ್ಟದ ದಿನವಾಗಲಿದೆ. ಇಂದು ಬುದ್ದಿವಂತಿಕೆ ಉಪಯೋಗಿಸಿ ಮಾಡುವ ಕೆಲಸದಲ್ಲಿ ಜಯ ದೊರೆಯಲಿದೆ. ಮಕ್ಕಳ ವಿಚಾರದಲ್ಲಿ ಎಚ್ಚರಿಕೆ ಅಗತ್ಯ.

ಮೀನ ರಾಶಿ: ಮೀನ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಆಸ್ತಿ ಪಾಸ್ತಿ ವಿಚಾರ ಹಾಗೂ ಸಾಮಾಜಿಕ ಚಟುವಟಿಕೆಯಲ್ಲಿ ಹೆಚ್ಚಿನ ಯಶಸ್ಸು ನಿಮಗೆ ಸಿಗುತ್ತದೆ.