ದಿನ ಭವಿಷ್ಯ ನವೆಂಬರ್ 27, 2026: ಹೊಸ ಪ್ರಯತ್ನಗಳಿಗೆ ಉತ್ತಮ ದಿನ; ಮನಸ್ಸಿಗೆ ನೆಮ್ಮದಿ
Horoscope Today November 27, 2026: ಕಾರ್ತಿಕ ಮಾಸ, ಕೃಷ್ಣ ಪಕ್ಷ, ಆರ್ದ್ರ ನಕ್ಷತ್ರದ ಶುಕ್ರವಾರದ ಈ ದಿನ ಯಾವ ರಾಶಿಯವರಿಗೆ ಶುಭ ಫಲವಿದೆ? ಯಾರು ಎಚ್ಚರಿಕೆಯಿಂದ ಇರಬೇಕು? ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು: ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರ ಭವಿಷ್ಯ ಹೇಗಿರಲಿದೆ ಎನ್ನುವ ವಿವರ ಇಲ್ಲಿದೆ:
ಮೇಷ ರಾಶಿ: ಕೆಲಸದಲ್ಲಿ ಪ್ರಗತಿ ಕಂಡುಬರಲಿದೆ. ಆರ್ಥಿಕ ವಿಚಾರದಲ್ಲಿ ಎಚ್ಚರಿಕೆ ಇರಲಿ. ಕುಟುಂಬದಲ್ಲಿ ಸಂತೋಷ ಕಂಡು ಬರಲಿದೆ. ನಿಮ್ಮ ಮನಸ್ಸು ತುಂಬಾ ಖುಷಿಯಾಗಿರುತ್ತೆ. ಒಂದು ಒಳ್ಳೆಯ ಸುದ್ದಿ ಕೇಳ್ತೀರಿ.
ವೃಷಭ ರಾಶಿ: ಹಣಕಾಸಿನ ವಿಚಾರದಲ್ಲಿ ಶುಭ ಸುದ್ದಿ ಸಿಗಲಿದೆ. ಹೊಸ ಪ್ರಯತ್ನಗಳಿಗೆ ಉತ್ತಮ ದಿನ. ನಿಮ್ಮ ರಾಶಿಯ ಅಧಿಪತಿ ಶುಕ್ರ. ಹೀಗಾಗಿ ನಿಮ್ಮದೇ ದಿನ.
ಮಿಥುನ ರಾಶಿ: ಉದ್ಯೋಗದಲ್ಲಿ ಹೊಸ ಅವಕಾಶಗಳು ಬರಬಹುದು. ಮಾತಿನ ಮೇಲೆ ಹಿಡಿತವಿರಲಿ. ಹಣದ ವಿಷಯದಲ್ಲಿ ಒಳ್ಳೆಯ ದಿನ. ಬಾಕಿ ಇದ್ದ ಹಣ ಬರುತ್ತೆ.
ಕಟಕ ರಾಶಿ: ಕುಟುಂಬದವರ ಸಹಕಾರ ದೊರೆಯಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಸಿಂಹ ರಾಶಿ: ನಿಮ್ಮ ಪ್ರತಿಭೆಗೆ ಮೆಚ್ಚುಗೆ ಸಿಗಲಿದೆ. ಕೆಲಸದಲ್ಲಿ ಯಶಸ್ಸು. ಕೆಲಸದಲ್ಲಿ ಹೊಸ ಜವಾಬ್ದಾರಿ ಸಿಗಲಿದೆ. ಅದನ್ನು ಸದುಪಯೋಗಪಡಿಸಿ.
ಶುಕ್ರವಾರ ಒಂದು ರೂಪಾಯಿ ನಾಣ್ಯದಿಂದ ಮಾಡುವ ಈ ಒಂದು ಆಚರಣೆ ನಿಮ್ಮ ಅದೃಷ್ಟವನ್ನೇ ಬದಲಾಯಿಸುತ್ತೆ!
ಕನ್ಯಾ ರಾಶಿ: ಕೈಗೊಂಡ ಕಾರ್ಯಗಳಲ್ಲಿ ಪ್ರಗತಿ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ನಿಮ್ಮ ಬುದ್ಧಿವಂತಿಕೆಗೆ ಎಲ್ಲರೂ ಮೆಚ್ಚುತ್ತಾರೆ.
ತುಲಾ ರಾಶಿ: ವ್ಯಾಪಾರದಲ್ಲಿಉತ್ತಮ ಬೆಳವಣಿಗೆ. ಸ್ನೇಹಿತರ ಭೇಟಿ ಸಂತೋಷ ತರಲಿದೆ. ನಿಮ್ಮ ರಾಶಿಗೂ ಶುಕ್ರನೇ ಅಧಿಪತಿ. ಹೀಗಾಗಿ ನಿಮ್ಮದೇ ದಿನ.
ವೃಶ್ಚಿಕ ರಾಶಿ: ಆತ್ಮವಿಶ್ವಾಸ ಹೆಚ್ಚಾಗಲಿದೆ. ಹಳೆಯ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಆರೋಗ್ಯದಲ್ಲಿ ಸ್ವಲ್ಪ ಎಚ್ಚರಿಕೆ ಅಗತ್ಯ.
ಧನು ರಾಶಿ: ಪ್ರಯಾಣದ ಯೋಗವಿದೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಸಿಗಬಹುದು. ನಿಮ್ಮ ಸ್ನೇಹಿತ ನಿಮಗೆ ಒಂದು ಸರ್ಪ್ರೈಸ್ ಕೊಡ್ತಾನೆ.
ಮಕರ ರಾಶಿ: ಆರ್ಥಿಕ ಸ್ಥಿತಿ ಸುಧಾರಿಸುವ ಸಾಧ್ಯತೆ. ಕುಟುಂಬದಲ್ಲಿ ನೆಮ್ಮದಿ ಇರಲಿದೆ. ಕೆಲಸದಲ್ಲಿ ಒಳ್ಳೆಯ ದಿನ. ಒಂದು ದೊಡ್ಡ ಡೀಲ್ ಸಕ್ಸಸ್ ಆಗುತ್ತೆ.
ಕುಂಭ ರಾಶಿ: ಹೊಸ ಯೋಜನೆಗಳಿಗೆ ಚಾಲನೆ ನೀಡುವ ಸಾಧ್ಯತೆ. ಹಿರಿಯರ ಸಲಹೆ ಉಪಯುಕ್ತವಾಗಲಿದೆ. ನಿಮ್ಮ ರಾಶಿಗೆ ಚಂದ್ರ ಬರಲಿದ್ದಾನೆ.
ಮೀನ ರಾಶಿ: ಶುಭ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ. ಪ್ರೀತಿ ಮತ್ತು ಕುಟುಂಬ ಜೀವನದಲ್ಲಿ ಸಂತೋಷ. ಇಂದು ನೀವು ಭಾವುಕರಾಗಿರ್ತೀರಿ.