ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Astro Tips: ಹನುಮಂತನ ಪೂಜೆಗೆ ಮಂಗಳವಾರ ಶುಭ ದಿನ; ಪೂಜೆಯ ವಿಧಿ - ವಿಧಾನ ಹೇಗಿರಬೇಕು..?

Astro tips: ಮಂಗಳವಾರ ಹನುಮಾನ್ ಪೂಜೆಗೆ ಶುಭ ದಿನ ಆಗಿದ್ದು, ಹನುಮಂತನನ್ನು ಪೂಜಿಸುವಾಗ ಸರಿಯಾದ ವಿಧಿ - ವಿಧಾನಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಮನೆಯಲ್ಲೇ ಹನುಮಂತನನ್ನು ಪೂಜಿಸುವುದು ಹೇಗೆ..? ಮನೆಯಲ್ಲಿ ಹನುಮಂತನನ್ನು ಪೂಜಿಸುವಾಗ ಯಾವೆಲ್ಲಾ ನಿಯಮಗಳನ್ನು ಪಾಲಿಸಬೇಕು..? ಮಾಹಿತಿ ಇಲ್ಲಿದೆ

ಹನುಮಂತನನ್ನು ಪೂಜಿಸುವಾಗ ಈ ನಿಯಮ ಪಾಲಿಸಿ

ಹನುಮಾನ್ ಫೋಟೋ

Profile Sushmitha Jain Apr 22, 2025 8:28 AM

ಬೆಂಗಳೂರು: ಹಿಂದೂ ಧರ್ಮದ ಪ್ರಕಾರ ವಾರದ ಏಳು ದಿನಗಳಲ್ಲಿ ಒಂದೊಂದು ದಿನವೂ ಒಂದೊಂದು ದೇವರಿಗೆ ಸಮರ್ಪಿತ ಆಗಿದೆ. ಸೋಮವಾರ ಶಿವನಿಗೆ, ಮಂಗಳವಾರ(Tuesday) ಹನುಮಂತ(Hanumanta) ಬುಧವಾರ ವೆಂಕಟೇಶ್ವರ, ಗುರುವಾರ ಸಾಯಿಬಾಬಾ ಮತ್ತು ರಾಘವೇಂದ್ರ ಸ್ವಾಮಿ, ಶುಕ್ರವಾರ ಮಹಾಲಕ್ಷ್ಮೀ ಹಾಗೂ ಶನಿವಾರ ಶನೀಶ್ವರನನ್ನು ಪೂಜಿಸಲಾಗುತ್ತದೆ. ಆಯಾಯ ದಿನಕ್ಕನುಗುಣವಾಗಿ ದೇವರ ಪೂಜೆ ಹಾಗೂ ವೃತವನ್ನು ಕೈಗೊಳ್ಳಲಾಗುತ್ತದೆ. ಹಾಗಾಗಿ ವಾರದ ಮೂರನೇ ದಿನ ಮಂಗಳವಾರ ಹನುಮಂತನ ದಿನವನ್ನಾಗಿ ಪರಿಗಣಿಸಲಾಗುತ್ತದೆ. ಮಂಗಳವಾರದ ದಿನ ಹನುಮನನ್ನು ಧ್ಯಾನಿಸಿದರೆ, ಅದರಲ್ಲೂ ಮುಂಜಾನೆ ಹನುಮನ ಪೂಜೆ(Hanuman Pooje) ಮಾಡಿದರೆ ಫಲ ನೀಡುತ್ತದೆ ಎನ್ನಲಾಗುತ್ತದೆ.

ಮಂಗಳವಾರ ಉಪವಾಸ ಮಾಡುವುದರಿಂದಲೂ ಧೈರ್ಯ, ಎಲ್ಲವನ್ನೂ ಎದುರಿಸುವ ಸಾಮರ್ಥ್ಯ ಬೆಳೆಯುವುದಲ್ಲದೇ ಮಂಗಳವಾರದ ದಿನ ಈ ಪೂಜೆ ಮಾಡಿದರೆ ವ್ಯಕ್ತಿತ್ವದಲ್ಲಿ ಬದಲಾವಣೆಯಾಗಿ ಜೀವನದಲ್ಲಿ ಶಾಂತಿ, ನೆಮ್ಮದಿ ದೊರೆಯುವುದು. ಹಾಗಾದ್ರೆ ಜೋತಿಷ್ಯ ಶಾಸ್ತ್ರ(Astro Tips) ಪ್ರಕಾರ ಆಂಜನೇಯನನ್ನು ಪೂಜಿಸುವುದೇಗೆ ...? ಪಾಲಿಸಬೇಕಾದ ನಿಯಮಗಳನ್ನು ಎಂಬ ಮಾಹಿತಿ ಇಲ್ಲಿದೆ

ವ್ರತಚಾರಣೆ 

ಶುಕ್ಲ ಪಕ್ಷದ ಮೊದಲ ಮಂಗಳವಾರದಿಂದ ಉಪವಾಸವನ್ನು ಪ್ರಾರಂಭಿಸಿದ್ದರೆ ಮಂಗಳಕರವೆಂದು ಹೇಳಲಾಗುತ್ತದೆ. ಮಂಗಳವಾರ ಉಪವಾಸವನ್ನು ಪ್ರಾರಂಭಿಸಿದರೆ, 21 ಅಥವಾ 45 ವಾರದವರೆಗೆ ಉಪವಾಸವನ್ನು ಮಾಡಬೇಕು. ಶಾಸ್ತ್ರಗಳ ಪ್ರಕಾರ, ಈ ವ್ರತಾಚರಣೆ ಮಾಡುವುದರಿಂದ ಶುಭ ಫಲಗಳು ಹಾಗೂ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಅನೇಕ ಜನರು ಮಂಗಳವಾರದ ಉಪವಾಸವನ್ನು ಜೀವನ ಇಡೀ ಆಚರಿಸುತ್ತಾರೆ.

ಹೀಗೆ ಪೂಜಿಸಿ

  • ಮಂಗಳವಾರದಂದು ನೀವು ಸೂರ್ಯೋದಯಕ್ಕೂ ಎದ್ದು ಸ್ನಾನ ಮಾಡಿ, ಉಪವಾಸ ವ್ರತವನ್ನು ಕೈಗೊಳ್ಳುವುದಾಗಿ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು.
  • ನಂತರ ಮನೆಯ ಈಶಾನ್ಯ ಮೂಲೆಯಲ್ಲಿ ಭಗವಾನ್‌ ಹನುಮನ ವಿಗ್ರಹವನ್ನು ಇರಿಸಬೇಕು. ಪೂಜೆಗೂ ಮುನ್ನ ಪೂಜಾ ಸ್ಥಳವನ್ನು ಶುದ್ದೀಕರಿಸಿಕೊಳ್ಳಬೇಕು.
  • ಬಳಿಕ ಹನುಮಾನ್‌ ವಿಗ್ರಹದ ಮುಂದೆ ತುಪ್ಪದ ದೀಪವನ್ನು ಬೆಳಗಿಸಿ ಕೆಂಪು ಹೂವುಗಳನ್ನು ಅಥವಾ ಹೂವಿನ ಹಾರವನ್ನು ಅರ್ಪಿಸಿ. ಧೂಪ ದೀಪವನ್ನು ಹಚ್ಚಿ ಮತ್ತು ಹನುಮಾನ್ ಚಾಲೀಸಾ ಪಠಿಸಿ. ಹೀಗೆ ಪೂಜೆ ಮಾಡುವುದರಿಂದ ಹನುಮಂತನ ಕೃಪೆ ದೊರೆತು ಎಲ್ಲಾ ಕೆಲಸಗಳು ಪೂರ್ಣಗೊಳ್ಳಲಿವೆ.

ಈ ಸುದ್ದಿಯನ್ನು ಓದಿ: Astro Tips: ಆರ್ಥಿಕ ಸಮಸ್ಯೆ ಕಾಡುತ್ತಿದ್ದರೆ ಮಂಗಳವಾರ ತಪ್ಪದೇ ಆಂಜನೇಯನಿಗೆ ಈ ವಸ್ತುಗಳನ್ನು ಅರ್ಪಿಸಿ

ಈ ವಿಷಯ ನೆನಪಿರಲಿ

  • ಹನುಮಂತನ ಪೂಜೆಯಲ್ಲಿ ಕೆಂಪು ಬಣ್ಣದ ಹೂಗಳನ್ನು ಮಾತ್ರ ಬಳಸಬೇಕು. 
  • ಮನೆಯಲ್ಲಿ ಹನುಮಂತನನ್ನು ಪೂಜಿಸುವುದಾದರೆ ಕೆಂಪು ದಾರದ ಬತ್ತಿಯ ಮೂಲಕ ದೀಪವನ್ನು ಬೆಳಗಿಸಿ. 
  • ಪೂಜೆಯ ಸಮಯದಲ್ಲಿ ಕಾಮಪ್ರಚೋದಕ ಆಲೋಚನೆಗಳು ಮನಸ್ಸಿಗೆ ಬರಲು ಬಿಡಬೇಡಿ.
  • ಮಂಗಳವಾರದಂದು ಮಾಂಸ - ಮದ್ಯ ಸೇವಿಸಬಾರದು.
  • ಮಹಿಳೆಯರು ಹನುಮಂತನ ವಿಗ್ರಹವನ್ನು ಮುಟ್ಟಬಾರದು.