ದಿನ ಭವಿಷ್ಯ, ಸೆಪ್ಟೆಂಬರ್ 28, 2026: ಇಂದು ಯಾವುದೇ ವ್ಯವಹಾರದ ನಿರ್ಧಾರ ಒಳಿತಲ್ಲ!
Horoscope Today September 28th: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ದ್ವೀತಿಯ ತಿಥಿ, ರೇವತಿ ನಕ್ಷತ್ರದ, ಸೆಪ್ಟೆಂಬರ್ 28ನೇ ತಾರೀಖಿನ ಸೋಮವಾರದ ಈ ದಿನದ ಭವಿಷ್ಯದ ಮಾಹಿತಿ ಇಲ್ಲಿದೆ.
ಇಂಟರ್ ನೆಟ್ ಚಿತ್ರ -
ಬೆಂಗಳೂರು: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ರೇವತಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ.
ಮೇಷ ರಾಶಿ: ಈ ರಾಶಿಗೆ ಕಷ್ಟದ ದಿನವಾಗಲಿದೆ. ಇಂದು ಯೋಚನೆಗಳು ಹೆಚ್ಚಾಗಿ ಮನಸ್ಸಿಗೆ ಅಶಾಂತಿ ಮೂಡಬಹುದು. ಹೀಗಾಗಿ ಸ್ವಲ್ಪ ಜಾಗರೂಕತೆ ಅತೀ ಅವಶ್ಯಕ.
ವೃಷಭ ರಾಶಿ: ಇಂದು ಈ ರಾಶಿಗೆ ಅಂದುಕೊಂಡ ಕೆಲಸ ಕಾರ್ಯಗಳು ನಿಧಾನವಾಗಿ ಪೂರ್ಣಗೊಳ್ಳುತ್ತದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಧನ ಲಾಭದ ಸೂಚನೆಗಳು ಇವೆ. ಮಾತಿನಲ್ಲಿ ಎಚ್ಚರಿಕೆ ಅಗತ್ಯ.
ಮಿಥುನ ರಾಶಿ: ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸು,ತೃಪ್ತಿ ಸಿಗುತ್ತದೆ. ಅಂದುಕೊಂಡ ಕೆಲಸ ಕಾರ್ಯದಲ್ಲಿ ಜಯವನ್ನು ಕಾಣುತ್ತೀರಿ. ಸಂತೋಷದಿಂದ ಇಂದು ಸಮಯವನ್ನು ಕಳೆಯುತ್ತೀರಿ
ಕಟಕ ರಾಶಿ: ಇಂದು ಕಷ್ಟಕರವಾದ ದಿನವಾಗಿದೆ. ಸ್ನೇಹಿತರ ಜೊತೆಗೆ ಜಗಳ ಹಾಗೂ ವೈಷಮ್ಯ ಮೂಡಬಹುದು. ಹಿರಿಯರ ಜೊತೆ ವಿನಯತೆಯಿಂದ ವರ್ತನೆ ತೊರಬೇಕಾಗುತ್ತದೆ.
ಸಿಂಹ ರಾಶಿ: ಇಂದು ಮಾತಿನಿಂದ ನಿಮಗೆ ಹೆಚ್ಚಿನ ತೊಂದರೆ ಎದುರಾಗಬಹುದು. ಹಾಗಾಗಿ ಹೆಚ್ಚಿನ ನಿಗಾವಹಿಸಿ ಮಾತನಾಡಿಸಬೇಕಾಗುತ್ತದೆ.
ಕನ್ಯಾ ರಾಶಿ: ಈ ರಾಶಿಗೆ ಉತ್ತಮವಾದ ದಿನವಾಗಿದೆ. ಸಂಬಂಧ, ಪ್ರೀತಿಯಲ್ಲಿ ಒಳಿತು ಆಗಬಹುದು.ಕಾರ್ಯಕ್ಷೇತ್ರದಲ್ಲಿಯೂ ಹೆಚ್ಚಿನ ಯಶಸ್ಸು ನಿಮ್ಮದಾಗುತ್ತದೆ.
Vastu Tips: ನಿಮ್ಮ ಆದಾಯ ಹೆಚ್ಚಾಗಿ ಕೋಟ್ಯಾಧಿಪತಿ ಆಗಬೇಕಾ? ಹಾಗಾದ್ರೆ ಈ ವಸ್ತುವನ್ನು ಜೇಬಿನಲ್ಲಿರಿಸಿ!
ತುಲಾ ರಾಶಿ: ಇಂದು ಕಷ್ಟಕರವಾದ ದಿನವಾಗಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ತೊಂದರೆ ಎದುರಾಗಬಹುದು. ಮಾತು ಕತೆಯಲ್ಲಿ ಯಾರು ಕೂಡ ನಿಮ್ಮ ಪರವಾಗಿ ಇಂದು ನಿಲ್ಲುವುದಿಲ್ಕ
ವೃಶ್ಚಿಕ ರಾಶಿ: ಇಂದು ಕಷ್ಟಕರವಾದ ದಿನವಾಗಿದೆ. ಹಣಕಾಸಿನ ವಿಚಾರದಲ್ಲಿ ತೊಂದರೆ ಎದುರಾಗಬಹುದು. ಯಾವುದೇ ಇಂದು ಮುಖ್ಯ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ.
ಧನು ರಾಶಿ: ವೃತ್ತಿಯಲ್ಲಿ ಪ್ರಗತಿ ಕಾಣುತ್ತೀರಿ. ಮುಖ್ಯವಾದ ವಿಚಾರದಲ್ಲಿ ಯಶಸ್ಸು ನಿಮ್ಮದಾಗುತ್ತದೆ. ಕುಟುಂಬದ ವಿಚಾರದಲ್ಲೂ ನೆಮ್ಮದಿ
ಮಕರ ರಾಶಿ: ಇಂದು ನಿಮಗೆ ಪರಿಶ್ರಮಕ್ಕೆ ತಕ್ಕ ಫಲ ದೊರೆ ಯಬಹುದು. ಆರ್ಥಿಕವಾಗಿ ಸ್ಥಿರತೆ ಹೆಚ್ಚಾಗಲಿದೆ. ಬಂಧು ಬಾಂಧವರು ನಿಮ್ಮ ಪರವಾಗಿ ಇರುತ್ತಾರೆ.
ಕುಂಭ ರಾಶಿ: ಇಂದು ಕುಟುಂಬದ ವಿಚಾರದಲ್ಲಿ ನೆಮ್ಮದಿಯನ್ನು ಕಾಣುತ್ತೀರಿ. ಕೆಲಸ ಕಾರ್ಯದಲ್ಲೂ ಹೆಚ್ಚಿನ ಯಶಸ್ಸು, ಸಮೃದ್ಧಿ ನಿಮ್ಮದಾಗುತ್ತದೆ.
ಮೀನ ರಾಶಿ: ಇಂದು ಕಷ್ಟಕರವಾದ ದಿನವಾಗಿದೆ.ಯಾವುದೇ ಮುಖ್ಯ ನಿರ್ಧಾರ ಕೈಗೊಳ್ಳಲು ಹೋಗಬೇಡಿ. ಬಿಸಿನೆಸ್ ವ್ಯವಹಾರದಲ್ಲೂ ತೊಂದರೆ ಎದುರಾಗಬಹುದು.