ದಿನ ಭವಿಷ್ಯ,ಅಕ್ಟೋಬರ್ 27, 2026: ಹಣಕಾಸಿನ ವಿಚಾರದಲ್ಲಿ ಆತುರದ ನಿರ್ಧಾರ ಬೇಡ
Horoscope Today October 27th: ಪರಾಭವ ಸಂವತ್ಸರ, ದಕ್ಷಿಣಾಯಣ, ವರ್ಷಋತು, ಅಶ್ವಯುಜ ಮಾಸ, ಶುಕ್ಲ ಪಕ್ಷದ, ಪೌರ್ಣಮಿ ತಿಥಿ, ಅಶ್ವಿನಿ ನಕ್ಷತ್ರದ ಅಕ್ಟೋಬರ್ 27ನೇ ತಾರೀಕಿನ ಈ ದಿನದ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಅಶ್ವಯುಜ ಮಾಸ, ಶುಕ್ಲ ಪಕ್ಷದ, ಅಶ್ವಿನಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಗಳ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
ಮೇಷ ರಾಶಿ: ಇಂದು ಉತ್ತಮ ದಿನವಾಗಲಿದ್ದು, ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಸಿಗಬಹುದು. ಆದರೆ ಹಣಕಾಸಿನ ವಿಚಾರದಲ್ಲಿ ನೀವು ಬಹಳಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ.
ವೃಷಭ ರಾಶಿ: ಇಂದು ಅಭಿವೃದ್ಧಿ ಕಾಣುವ ದಿನವಾಗಿದ್ದು ಹೆಚ್ಚಿನ ಪ್ರಗತಿ ಕಂಡುಬರಲಿದೆ. ಬಹಳ ದಿನಗಳಿಂದ ಬಾಕಿ ಉಳಿದಿದ್ದ ಕೆಲಸಗಳು ಪೂರ್ಣಗೊಳ್ಳಬಹುದು. ಆದರೆ ಅನಗತ್ಯ ಖರ್ಚು ವೆಚ್ಚಗಳಿಗೆ ನೀವು ಕಡಿವಾಣ ಹಾಕಬೇಕಾಗುತ್ತದೆ.
ಮಿಥುನ ರಾಶಿ: ಇಂದು ಉದ್ಯೋಗದಲ್ಲಿ ನೀವು ತೊಂದರೆ ಎದುರಿಸಬೇಕಾಗಿ ಬರಬಹುದು. ಸ್ನೇಹಿತರ ಸಹಕಾರವು ಸಿಗಲಿದ್ದು, ಮಾತನಾಡುವಾಗ ತಾಳ್ಮೆ ಇದ್ದರೆ ಒಳಿತು.
ಕಟಕ ರಾಶಿ: ಇಂದು ನಿಮ್ಮ ಕುಟುಂಬದ ವಿಚಾರದಲ್ಲಿ ಹೆಚ್ಚಿನ ನೆಮ್ಮದಿ ಕಾಣುತ್ತೀರಿ. ಆದರೆ ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿ ನಿರ್ಧಾರ ಕೈಗೊಳ್ಳಿ.
ಸಿಂಹ ರಾಶಿ: ಇಂದು ನಿಮ್ಮ ಪ್ರತಿಭೆಗೆ ತಕ್ಕ ಫಲ ದೊರೆಯಬಹುದು. ಅದೇ ರೀತಿ ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ಹೊಸ ಯೋಜನೆಗಳನ್ನು ಆರಂಭಿಸುವ ಮೊದಲು ಸೂಕ್ತವಾಗಿ ಯೋಚನೆ ಮಾಡಿ.
ಕನ್ಯಾ ರಾಶಿ: ನಿಮ್ಮ ಕೆಲಸಗಳನ್ನು ಮಾಡಲು ಸರಿಯಾಗಿ ಯೋಜನೆ ಹಾಕಿಕೊಳ್ಳಿ. ಕುಟುಂಬದವರ ಜತೆಗೆ ಸಂಯಮದಿಂದ ವರ್ತಿಸಿ.
ಮನೆಗೆ ಸುಖ, ಸಮೃದ್ಧಿ ತರಲು ಪಾಲಿಸಬೇಕಾದ ಪ್ರಮುಖ ನಿಯಮಗಳು
ತುಲಾ ರಾಶಿ: ಇಂದು ನಿಮ್ಮ ಪ್ರಯತ್ನಕ್ಕೆ ಸರಿಯಾದ ಫಲ ಸಿಗಲಿದೆ. ವ್ಯಾಪಾರ ಹಾಗೂ ವ್ಯವಹಾರದಲ್ಲಿ ಹೊಸ ಅವಕಾಶಗಳು ಎದುರಾಗಬಹುದು.
ವೃಶ್ಚಿಕ ರಾಶಿ: ಉದ್ಯೋಗ ಹಾಗೂ ವ್ಯವಹಾರದಲ್ಲಿ ನೀವು ತಾಳ್ಮೆಯಿಂದ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಕುಟುಂಬದ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆಹರಿಸಬಹುದು
ಧನು ರಾಶಿ: ಇಂದು ಉತ್ತಮ ದಿನವಾಗಲಿದ್ದು, ಏಕಾಗ್ರತೆ ಹೆಚ್ಚಿಸಿಕೊಳ್ಳಲು ಸರಿಯಾದ ಸಮಯ. ನಿಮ್ಮ ಸ್ನೇಹಿತರೊಂದಿಗೆ ಇಂದು ಸಂತಸದ ಕ್ಷಣ ದೊರೆಯಲಿದೆ.
ಮಕರ ರಾಶಿ: ನಿಮ್ಮ ಕ್ಷೇತ್ರದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ದಿನವಾಗಲಿದೆ. ಮನೆಯಲ್ಲಿ ಹಿರಿಯರ ಸಲಹೆ ಪಡೆಯಿರಿ. ಮಾನಸಿಕ ನೆಮ್ಮದಿಗಾಗಿ ವಿಶ್ರಾಂತಿ ಪಡೆಯಿರಿ.
ಕುಂಭ ರಾಶಿ: ಇಂದು ಉತ್ತಮ ದಿನವಾಗಲಿದ್ದು, ಹೊಸ ಆಲೋಚನೆಗಳು, ಉತ್ಸಾಹ ತುಂಬಬಹುದು. ಅದೇ ರೀತಿ ಉದ್ಯೋಗ ಮತ್ತು ವ್ಯವಹಾರದಲ್ಲಿ ಬದಲಾವಣೆಗೆ ಅವಕಾಶ ಸಿಗಬಹುದು.
ಮೀನ ರಾಶಿ: ಇಂದು ಉತ್ತಮ ದಿನವಾಗಲಿದ್ದು, ಸೃಜನಶೀಲ ಕೆಲಸಗಳಲ್ಲಿ ಆಸಕ್ತಿ ಹೆಚ್ಚಾಗಬಹುದು. ಉದ್ಯೋಗದಲ್ಲಿ ಸಹೋದ್ಯೋಗಿಗಳ ಬೆಂಬಲ ದೊರೆಯುವ ಸಾಧ್ಯತೆ ಇದೆ.