ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಸುಖ, ಶಾಂತಿ, ಸಮೃದ್ಧಿಗಾಗಿ ಖಾಲಿ ಇರಲಿ ಮನೆಯ ಮಧ್ಯಭಾಗ

ವಾಸ್ತು ಶಾಸ್ತ್ರವು (Vastu Tips) ಮನೆಯಲ್ಲಿ ಯಾವ ವಸ್ತುವನ್ನು ಎಲ್ಲಿ ಇಡಬೇಕು ಅಥವಾ ಎಲ್ಲಿ ಇಡಬಾರದು, ಮನೆಯಲ್ಲಿ ಯಾವ ಸ್ಥಳವನ್ನು ಖಾಲಿ ಬಿಡಬೇಕು ಎಂಬುದನ್ನು ನಿಖರವಾಗಿ ಹೇಳುತ್ತದೆ. ಒಂದು ವೇಳೆ ಈ ನಿಯಮವನ್ನು ಅನುಸರಿಸದೆ ಇದ್ದರೆ ತೊಂದರೆಗಳು ಉದ್ಭವವಾಗುವುದು ಸಹಜ. ಮನೆಯ ಮಧ್ಯೆ ಪಾಲಿಸಬೇಕಾದ ಮತ್ತು ಪಾಲಿಸಲೇ ಬಾರದ ನಿಯಮಗಳಿವೆ. ಅವು ಯಾವುದು ಎನ್ನುವುದರ ಕುರಿತು ಇಲ್ಲಿದೆ ಮಾಹಿತಿ.

ಮನೆಯ ಮಧ್ಯೆ ನಿರ್ಮಾಣ ಸರಿಯೇ?

ಮನೆ ವಾಸ್ತು (vastu for home) ಪ್ರಕಾರ ಇದ್ದರೆ ಸಾಲದು ಮನೆಯಲ್ಲಿರುವ ಪ್ರತಿಯೊಂದು ವಸ್ತುಗಳನ್ನು ವಾಸ್ತು (Vastushastra) ಪ್ರಕಾರ ಇರಿಸಿಕೊಳ್ಳಬೇಕು. ಅಲ್ಲದೇ ಕೆಲವೊಂದು ಕಾರ್ಯಗಳಲ್ಲೂ ವಾಸ್ತು ನಿಯಮಗಳನ್ನು ಪಾಲಿಸಬೇಕು. ಹೀಗೆ ವಾಸ್ತು ಶಾಸ್ತ್ರವು (Vastu Tips) ಮನೆಗೆ ಸಂಬಂಧಿಸಿ ಅನೇಕ ಪ್ರಮುಖ ವಿಷಯಗಳನ್ನು ಹೇಳುತ್ತದೆ. ಅವುಗಳನ್ನು ಅನುಸರಿಸುವುದರಿಂದ ಮನೆಯಲ್ಲಿ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ ವಾಸ್ತು ದೋಷವು ಉದ್ಭವಿಸುವುದಿಲ್ಲ. ಮನೆಯಲ್ಲಿ ಸುಖ ಶಾಂತಿ ನೆಲೆಸಬೇಕು, ಆರ್ಥಿಕ ಸಮೃದ್ಧಿಯಾಗಬೇಕು ಜೊತೆಗೆ ಸಕಾರಾತ್ಮಕ ಶಕ್ತಿ ಸದಾ ತುಂಬಿರಬೇಕು ಎಂದಾದರೆ ವಾಸ್ತು ಹೇಳುವ ನಿಯಮಗಳ ಪಾಲನೆಯಾಗಬೇಕು.

ವಾಸ್ತು ಶಾಸ್ತ್ರವು ಮನೆಯಲ್ಲಿ ಯಾವ ವಸ್ತುವನ್ನು ಎಲ್ಲಿ ಇಡಬೇಕು ಅಥವಾ ಎಲ್ಲಿ ಇಡಬಾರದು, ಮನೆಯಲ್ಲಿ ಯಾವ ಸ್ಥಳವನ್ನು ಖಾಲಿ ಬಿಡಬೇಕು ಎಂಬುದನ್ನು ನಿಖರವಾಗಿ ಹೇಳುತ್ತದೆ. ಒಂದು ವೇಳೆ ಈ ನಿಯಮವನ್ನು ಅನುಸರಿಸದೆ ಇದ್ದರೆ ತೊಂದರೆಗಳು ಉದ್ಭವವಾಗುವುದು ಸಹಜ. ವಾಸ್ತು ತಜ್ಞರಾದ ರಾಧಾಕಾಂತ್ ವತ್ಸ್ ಅವರು ಮನೆಯ ಮಧ್ಯೆ ಪಾಲಿಸಬೇಕಾದ ಮತ್ತು ಪಾಲಿಸಲೇ ಬಾರದ ನಿಯಮಗಳ ಬಗ್ಗೆ ಹೇಳುವುದು ಹೀಗೆ..

ಜನರು ಹೆಚ್ಚಾಗಿ ಮನೆಯ ಮಧ್ಯದಲ್ಲಿ ಕಂಬ ಅಥವಾ ಕೋಣೆಯನ್ನು ನಿರ್ಮಿಸುತ್ತಾರೆ, ಇಲ್ಲವಾದರೆ ಯಾವುದಾರೂ ಭಾರವಾದ ಕೆಲವು ವಸ್ತುಗಳನ್ನು ಇಡುತ್ತಾರೆ. ಆದರೆ ಇದು ಸರಿಯಲ್ಲ. ಈ ರೀತಿ ಮಾಡುವುದರಿಂದ ಮನೆಯಲ್ಲಿ ವಾಸ್ತು ದೋಷವು ಬೆಳೆಯುತ್ತದೆ. ಮನೆಯ ಪ್ರಗತಿ ನಿಲ್ಲುತ್ತದೆ.

ಇದನ್ನೂ ಓದಿ: Vastu Tips: ಎಚ್ಚರ ಮನೆಯಲ್ಲಿ ಸಮಸ್ಯೆಗಳನ್ನು ಉಂಟು ಮಾಡಬಹುದು ಪೊರಕೆ

ho1

ಮನೆಯ ಮಧ್ಯದಲ್ಲಿ ಏನು ಇಡಬಹುದು?

ವಾಸ್ತು ಶಾಸ್ತ್ರ ಹೇಳುವ ಪ್ರಕಾರ ಮನೆಯ ಮಧ್ಯ ಭಾಗವನ್ನು ಬ್ರಹ್ಮ ಸ್ಥಾನ ಎಂದು ಕರೆಯಲಾಗುತ್ತದೆ. ಬ್ರಹ್ಮ ಸ್ಥಾನ ಎಂದರೆ ಸಕಾರಾತ್ಮಕ ಶಕ್ತಿಯ ಗರಿಷ್ಠ ಹರಿವು ಉಂಟಾಗುವ ಸ್ಥಳ. ಹೀಗಾಗಿ ಈ ಸ್ಥಳವನ್ನು ಖಾಲಿ ಬಿಡುವುದು ಮನೆಯ ಪ್ರಗತಿಗೆ ಬಹಳ ಒಳ್ಳೆಯದು. ಮನೆಯ ಮಧ್ಯದಲ್ಲಿರುವ ಜಾಗವನ್ನು ಖಾಲಿ ಇರಿಸುವುದರಿಂದ ದೈವಿಕ ಶಕ್ತಿಯು ಇಲ್ಲಿ ನೆಲೆಯಾಗುತ್ತದೆ. ಈ ಜಾಗದಲ್ಲಿ ಯಾವುದಾದರೂ ವಸ್ತುಗಳನ್ನು ಇಟ್ಟರೆ ಅಥವಾ ಏನಾದರೂ ನಿರ್ಮಾಣ ಕಾರ್ಯ ಮಾಡಿದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಸೃಷ್ಟಿಯಾಗುತ್ತದೆ. ಇದು ನಿರಂತರ ಹೆಚ್ಚಾಗುತ್ತಾ ಹೋಗುತ್ತದೆ.

ಮನೆಯ ಮಧ್ಯದಲ್ಲಿ ಏನನ್ನೂ ಇಡಬಾರದು ಎಂದಲ್ಲ. ಏನನ್ನು ಇಡಬಹುದು ಎಂಬುದನ್ನು ತಿಳಿದುಕೊಳ್ಳುವುದು ಒಳ್ಳೆಯದು. ಮನೆಯ ಮಧ್ಯದಲ್ಲಿ ಮೂರು ವಸ್ತುಗಳನ್ನು ಇಡಬಹುದು. ಅದರಲ್ಲಿ ಮೊದಲನೆಯದು ಸ್ಥಳದ ಗಾತ್ರಕ್ಕೆ ಅನುಗುಣವಾಗಿ ಶುಭ ಸಸ್ಯಗಳು. ಇದನ್ನು ಇಟ್ಟರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಹರಿವಿಗೆ ಯಾವುದೇ ತೊಂದರೆಯಾಗುವುದಿಲ್ಲ.ಎರಡನೆಯದಾಗಿ ಮನೆಯ ಮಧ್ಯದಲ್ಲಿ ಆನೆಯ ಪ್ರತಿಮೆಯನ್ನು ಇರಿಸಬಹುದು. ಇದು ಮನೆಗೆ ತುಂಬಾ ಪ್ರಯೋಜನಕಾರಿ. ಇದರಿಂದ ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚಾಗುವುದಲ್ಲದೆ ಮನೆಯ ಆರ್ಥಿಕ ಪರಿಸ್ಥಿತಿಯೂ ವೇಗವಾಗಿ ಸುಧಾರಿಸುತ್ತದೆ.

ಮೂರನೆಯದು ಮನೆಯ ಮಧ್ಯದಲ್ಲಿರುವ ಜಾಗವನ್ನು ನೀರಿನ ಅಂಶದಿಂದ ತುಂಬಿಸಬಹುದು. ಅಂದರೆ ಪುಟ್ಟ ಕಾರಂಜಿ ಅಥವಾ ಅಲಂಕಾರಿಕ ನೀರಿನ ತೊಟ್ಟಿಗಳು ಇತ್ಯಾದಿ. ಇದರಿಂದ ಮನೆಯಲ್ಲಿ ಸುಖ, ಶಾಂತಿ ನಿರಂತರ ಹೆಚ್ಚಾಗುತ್ತದೆ. ಜೀವನದಲ್ಲಿ ಪ್ರಗತಿಗೆ ಹೊಸ ಹಾದಿಗಳು ತೆರೆದುಕೊಳ್ಳುತ್ತದೆ ಎನ್ನುತ್ತಾರೆ ವಾಸ್ತು ತಜ್ಞರಾದ ರಾಧಾಕಾಂತ್ ವತ್ಸ್.