ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Astro Tips : ಬೆಳಿಗ್ಗೆ ಎದ್ದು ಕನ್ನಡಿ ನೋಡುವ ಅಭ್ಯಾಸ ನಿಮಗಿದ್ಯಾ? ಹಾಗಾದ್ರೆ ಸಂಕಷ್ಟ ತಪ್ಪಿದ್ದಲ್ಲ

ಮುಂಜಾನೆ ಎದ್ದ ಕೂಡಲೇ ಮಾಡುವ ಕೆಲವು ಅಭ್ಯಾಸಗಳು ನಮ್ಮ ದಿನದ ಯಶಸ್ಸು– ವಿಫಲತೆಯನ್ನು ನಿರ್ಧರಿಸುತ್ತವೆ ಎಂಬ ನಂಬಿಕೆ ಇದೆ. ಎದ್ದು ಮತ್ತೆ ಮಲಗುವುದು, ಆಕಳಿಸುವುದು, ಕನ್ನಡಿಯಲ್ಲಿ ಮುಖ ನೋಡುವುದು, ಹಿಂಸಾತ್ಮಕ ಚಿತ್ರಗಳು ಅಥವಾ ಸ್ವಂತ ನೆರಳನ್ನು ನೋಡುವುದು ಅಶುಭವೆಂದು ಜ್ಯೋತಿಷ್ಯ– ಶಾಸ್ತ್ರಗಳು ಹೇಳುತ್ತವೆ.

ಮುಂಜಾನೆ ಮಾಡುವ ಈ ತಪ್ಪುಗಳು ದಿನವನ್ನೇ ಹಾಳು ಮಾಡುತ್ತವೆ!

ಸಾಂದರ್ಭಿಕ ಚಿತ್ರ -

Profile
Sushmitha Jain Jan 14, 2026 8:05 AM

ಬೆಂಗಳೂರು: ನಾವು ಮಾಡುವ ಪ್ರತಿಯೊಂದು ಕಾರ್ಯದಲ್ಲೂ ಸಂಪೂರ್ಣ ಯಶಸ್ಸು (Success) ಸಿಗಬೇಕು ಎಂಬ ಆಸೆ ಎಲ್ಲರ ಮನಸ್ಸಲ್ಲೂ ಸಹಜವಾಗಿಯೇ ಇರುತ್ತದೆ. ಇಂದು ಅಂದುಕೊಂಡಂತೆ ದಿನ ಸಾಗಬೇಕು, ನಮ್ಮ ಆಲೋಚನೆಗಳು ಫಲ ಕೊಡಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ಅನೇಕ ಬಾರಿ ಪರಿಸ್ಥಿತಿಗಳು ನಮ್ಮ ಕೈಮೀರಿದಂತೆ ನಡೆಯುತ್ತವೆ. ಕೆಲವೊಮ್ಮೆ ಗ್ರಹಗತಿಗಳ ಪ್ರಭಾವ, ಇನ್ನೊಮ್ಮೆ ನಾವು ತಿಳಿಯದೆ ಮಾಡುವ ಸಣ್ಣ ತಪ್ಪುಗಳು ನಮ್ಮ ದಿನವನ್ನೇ ಹಾಳು ಮಾಡುತ್ತವೆ.

ವಿಶೇಷವಾಗಿ ಮುಂಜಾನೆ ಎದ್ದ ಕೂಡಲೇ ಮಾಡುವ ಕೆಲವು ಅಭ್ಯಾಸಗಳು ನಮ್ಮ ಸಂಪೂರ್ಣ ದಿನದ ಮೇಲೆ ಪರಿಣಾಮ ಬೀರುತ್ತವೆ ಎಂಬುದು ಜ್ಯೋತಿಷ್ಯ ಶಾಸ್ತ್ರದ (Astrology) ನಂಬಿಕೆ. ಹಾಗಾದ್ರೆ ಮುಂಜಾನೆ ಎದ್ದು ಏನು ಮಾಡಬಾರದು..? ಏನು ಮಾಡಬೇಕು..? ಈ ಬಗ್ಗೆ ಜ್ಯೋತಿಷ್ಯ ಶಾಸ್ತ್ರದ (Astro Tips) ಸಲಹೆ ಏನು..? ಈ ಕುರಿತಾದ ಮಾಹಿತಿ ಇಲ್ಲಿದೆ..

ಬೆಳಿಗ್ಗೆ ಎದ್ದು ಈ ಕೆಲಸಗಳನ್ನು ಮಾಡಬೇಡಿ


ಕೆಲವರು ಬೆಳಿಗ್ಗೆ ಎದ್ದು ಮತ್ತೆ ಮಲಗುವ ಅಭ್ಯಾಸ ಹೊಂದಿರುತ್ತಾರೆ. ಆದರೆ ಈ ತಪ್ಪನ್ನು ಮರೆತೂ ಮಾಡಬಾರದು ಎಂದು ಹಿರಿಯರು ಹೇಳುತ್ತಾರೆ. ಮುಂಜಾನೆ ಎದ್ದು ಆಕಳಿಕೆ ಮಾಡುವುದು ಆಲಸ್ಯವನ್ನು ಹೆಚ್ಚಿಸುತ್ತದೆ ಹಾಗೂ ದಿನವಿಡೀ ನಿರಾಸೆ ಉಂಟಾಗುವ ಸಾಧ್ಯತೆ ಇರುತ್ತದೆ. ಅದಕ್ಕಿಂತ ಮೊದಲು ಎದ್ದ ಕೂಡಲೇ ಕೈಗಳ ಅಂಗೈಗಳನ್ನು ನೋಡಿ, ಭೂಮಿ ತಾಯಿಗೆ ನಮಸ್ಕರಿಸುವುದು ಶುಭಕರವೆಂದು ಪರಿಗಣಿಸಲಾಗಿದೆ.

Astro Tips: ಪ್ರತಿದಿನ ಈ ಮಂತ್ರ ಪಠಿಸುವುದರಿಂದ ಒತ್ತಡದಿಂದ ಮುಕ್ತರಾಗುತ್ತೀರಿ

ಇನ್ನೂ ಕೆಲವರು ಎದ್ದ ಕೂಡಲೇ ಕನ್ನಡಿಯ ಮುಂದೆ ನಿಂತು ತಮ್ಮ ಮುಖ ನೋಡುತ್ತಾರೆ. ಜ್ಯೋತಿಷ್ಯ ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ ಇದು ಶುಭಕರವಲ್ಲ. ಬೆಳಿಗ್ಗೆ ಮೊದಲ ದೃಷ್ಟಿ ದೇವರ ಮೇಲೆ ಬೀಳಬೇಕು ಎಂಬ ನಂಬಿಕೆ ಇದೆ. ಆದ್ದರಿಂದ ಎಚ್ಚರಗೊಂಡ ತಕ್ಷಣ ಮನೆಯ ಪೂಜಾ ಸ್ಥಳಕ್ಕೆ ಹೋಗಿ ದೇವರನ್ನು ಸ್ಮರಿಸಿ, ನಂತರ ದಿನಚರಿಯನ್ನು ಪ್ರಾರಂಭಿಸುವುದು ಒಳಿತು.

ಕೆಲವು ಮನೆಗಳಲ್ಲಿ ಹಿಂಸಾತ್ಮಕ ಪ್ರಾಣಿಗಳ ಚಿತ್ರಗಳು ಅಥವಾ ಮಕ್ಕಳ ಕೋಣೆಯಲ್ಲಿ ಅತಿಯಾಗಿ ವ್ಯಂಗ್ಯಚಿತ್ರಗಳ ಫೋಟೋಗಳನ್ನು ಹಾಕಿರುತ್ತಾರೆ. ಇಂತಹ ಚಿತ್ರಗಳನ್ನು ಮುಂಜಾನೆ ನೋಡುವುದು ಅಶುಭವೆಂದು ಹೇಳಲಾಗುತ್ತದೆ. ಹಾಗಾಗಿ ನಿಮ್ಮ ಮನೆಯಲ್ಲಿ ಅಂತಹ ಫೋಟೋಗಳು ಇದ್ದರೆ, ಅವುಗಳನ್ನು ತೆಗೆದುಹಾಕುವುದು ಉತ್ತಮ.

ಹಾಗೇ ಶಾಸ್ತ್ರಗಳ ಪ್ರಕಾರ, ಮುಂಜಾನೆ ತಮ್ಮ ಸ್ವಂತ ನೆರಳನ್ನು ನೋಡುವುದೂ ಅಶುಭವೆಂದು ಹೇಳಲಾಗುತ್ತದೆ. ವಿಶೇಷವಾಗಿ ಸೂರ್ಯೋದಯದ ಸಮಯದಲ್ಲಿ ನೆರಳು ಪಶ್ಚಿಮ ದಿಕ್ಕಿನಲ್ಲಿ ಕಾಣಿಸಿದರೆ ಅದನ್ನು ರಾಹು ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಂಥ ದಿನಗಳಲ್ಲಿ ಮಹತ್ವದ ನಿರ್ಧಾರಗಳು ಅಥವಾ ಹಣಕಾಸಿನ ವ್ಯವಹಾರಗಳನ್ನು ಮುಂದೂಡುವುದು ಒಳಿತು.

ಹೀಗೆ ಮಾಡಿ

ಬೆಳಿಗ್ಗೆ ಎದ್ದ ಕೂಡಲೇ ಎರಡೂ ಕೈಗಳ
ಅಂಗೈಗಳನ್ನು ನೋಡಿ, ಕೈಗಳನ್ನು ಒಟ್ಟಿಗೆ ಉಜ್ಜಿಕೊಂಡು ಮುಖಕ್ಕೆ ಹಿಡಿಯುವುದು ಅತ್ಯಂತ ಶುಭಕರವೆಂದು ಧರ್ಮಗ್ರಂಥಗಳು ಹೇಳುತ್ತವೆ. ಗೌರಿ, ಸರಸ್ವತಿ ಮತ್ತು ಲಕ್ಷ್ಮಿ ದೇವಿಯರು ಅಂಗೈಗಳಲ್ಲಿ ವಾಸಿಸುತ್ತಾರೆ ಎಂಬ ನಂಬಿಕೆ ಇದೆ. ಇದರಿಂದ ಸಕಾರಾತ್ಮಕ ಶಕ್ತಿ ನಮ್ಮೊಳಗೆ ಪ್ರವೇಶಿಸುತ್ತದೆ ಎನ್ನಲಾಗುತ್ತದೆ. ನಂತರ ಬೆಚ್ಚಗಿನ ನೀರಿಗೆ ನಿಂಬೆ ರಸ ಬೆರೆಸಿ ಕುಡಿಯುವುದರಿಂದ ದೇಹ ಮತ್ತು ಮನಸ್ಸು ತಾಜಾತನ ಪಡೆಯುತ್ತದೆ. ಈ ರೀತಿಯಾಗಿ ದಿನವನ್ನು ಆರಂಭಿಸಿದರೆ, ಯಶಸ್ಸು ಮತ್ತು ಶಾಂತಿ ದೊರಕುತ್ತದೆ ಎಂಬ ನಂಬಿಕೆ ಇದೆ.