ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Astro Tips; ಮಂಗಳವಾರ ಅರಿಸಿನ ಹಾಗೂ ಬಾಳೆ ಎಲೆಯಿಂದ ಮಾಡುವ ಪರಿಹಾರ ನಿಮ್ಮನ್ನು ಸಾಲದಿಂದ ಮುಕ್ತಿಗೊಳಿಸುತ್ತದೆ

ಮಂಗಳವಾರದಂದು ವಾಯುಪುತ್ರ ಹನುಮಾನ್ ಪೂಜಿಸುವುದರಿಂದ ಧೈರ್ಯ, ಶಕ್ತಿ ಮತ್ತು ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಹಾಗೇ ಕೆಲವು ವಿಶೇಷ ಜ್ಯೋತಿಷ್ಯ ಕ್ರಮಗಳನ್ನು ವಿಧಿಪೂರ್ವಕವಾಗಿ ಪಾಲಿಸಿದರೆ, ಮಾನಸಿಕ ಶಾಂತಿ, ಆರ್ಥಿಕ ಪ್ರಗತಿ, ಕುಟುಂಬ ಸುಖ ಮತ್ತು ವೈವಾಹಿಕ ಅಡೆತಡೆ ನಿವಾರಣೆಗೆ ಸಹಕಾರಿಯಾಗುತ್ತದೆ. ಇವುಗಳಲ್ಲಿ ಪ್ರಮುಖವಾದ ಕೆಲವು ಕ್ರಮಗಳು ಇಲ್ಲಿವೆ.

ಆಂಜನೇಯ ಸ್ವಾಮಿಯ ಕೃಪೆ ದೊರೆಯಬೇಕಾದರೆ ಹೀಗೆ ಮಾಡಿ

ಆಂಜನೇಯ -

Profile
Sushmitha Jain Jan 13, 2026 8:34 AM

ಬೆಂಗಳೂರು: ಹಿಂದೂ ಧರ್ಮದಲ್ಲಿ(Hindu Religion) ಮಂಗಳವಾರವನ್ನು(Tuesday) ಆಂಜನೇಯ ಸ್ವಾಮಿ (Anjaneya) ಆರಾಧನೆಗೆ ಅತ್ಯಂತ ಪವಿತ್ರವಾದ ಹಾಗೂ ಮಂಗಳಕಾರವಾದ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ವಾಯುಪುತ್ರ ಹನುಮಾನ್ ಪೂಜಿಸುವುದರಿಂದ ಧೈರ್ಯ, ಶಕ್ತಿ ಮತ್ತು ಆತ್ಮವಿಶ್ವಾಸ ವೃದ್ಧಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಜೊತೆಗೆ ಮಂಗಳ ದೇವರ ಅನುಗ್ರಹದಿಂದ ಜೀವನದಲ್ಲಿ ಭೌತಿಕ ಸುಖ-ಸೌಕರ್ಯಗಳು ಹೆಚ್ಚಾಗುತ್ತವೆ ಹಾಗೂ ಎದುರಾಗುವ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ(Astrology) ತಿಳಿಸುತ್ತದೆ.

ಹಾಗಾದ್ರೆ ಬನ್ನಿ ಮಂಗಳವಾರ ಜ್ಯೋತಿಷ್ಯ ಶಾಸ್ತ್ರ ಸಲಹೆ(Astro Tips) ಪ್ರಕಾರ ಮಾಡುವ ಯಾವ ಕೆಲಸಗಳು ನಿಮ್ಮ ಜೀವನದಲ್ಲಿ ಶುಭ ಫಲಗಳನ್ನು ನೀಡುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ಮಂಗಳವಾರದಂದು ಕೆಲವು ವಿಶೇಷ ಜ್ಯೋತಿಷ್ಯ ಕ್ರಮಗಳನ್ನು ವಿಧಿಪೂರ್ವಕವಾಗಿ ಪಾಲಿಸಿದರೆ, ಮಾನಸಿಕ ಶಾಂತಿ, ಆರ್ಥಿಕ ಪ್ರಗತಿ, ಕುಟುಂಬ ಸುಖ ಮತ್ತು ವೈವಾಹಿಕ ಅಡೆತಡೆ ನಿವಾರಣೆಗೆ ಸಹಕಾರಿಯಾಗುತ್ತದೆ. ಇವುಗಳಲ್ಲಿ ಪ್ರಮುಖವಾದ ಕೆಲವು ಕ್ರಮಗಳು ಇಲ್ಲಿವೆ.

ಮಾನಸಿಕ ಆರೋಗ್ಯ ಮತ್ತು ಬುದ್ಧಿಶಕ್ತಿ ವೃದ್ಧಿಗೆ

ಮನಸ್ಸು ಹಾಗೂ ಮಾನಸಿಕ ಆರೋಗ್ಯ ಸದೃಢವಾಗಿರಲು ಮಂಗಳವಾರ ಬೆಳಿಗ್ಗೆ ಸ್ನಾನ ಮಾಡಿ ಶುಭ್ರವಾದ ವಸ್ತ್ರಗಳನ್ನು ಧರಿಸಬೇಕು. ನಂತರ ಶ್ರೀ ಗಣೇಶನನ್ನು ವಿಧಿವಿಧಾನಗಳೊಂದಿಗೆ ಪೂಜಿಸಿ, ‘ಗಂ ಗಣಪತಯೇ ನಮಃ’ ಎಂಬ ಮಂತ್ರವನ್ನು 108 ಬಾರಿ ಜಪಿಸಬೇಕು. ಮಂಗಳವಾರ ಈ ಮಂತ್ರ ಜಪ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ, ಜೊತೆಗೆ ಏಕಾಗ್ರತೆ ಮತ್ತು ಬುದ್ಧಿ ಶಕ್ತಿ ಹೆಚ್ಚಾಗುತ್ತದೆ ಎನ್ನಲಾಗುತ್ತದೆ.

ಸಾಲ ಮುಕ್ತಿ ಮತ್ತು ವ್ಯವಹಾರ ಅಭಿವೃದ್ಧಿಗೆ

ಸಾಲದ ಒತ್ತಡದಿಂದ ಬಳಲುತ್ತಿದ್ದರೆ ಅಥವಾ
ವ್ಯಾಪಾರದಲ್ಲಿ ಅಡೆತಡೆಗಳು ಎದುರಾದರೆ, ಬಾಳೆ ಎಲೆಯನ್ನು ತೆಗೆದುಕೊಂಡು ಅದರ ಮೇಲೆ ಅರಿಶಿನದಿಂದ ತ್ರಿಕೋನ ಚಿಹ್ನೆಯನ್ನು ಬರೆಯಬೇಕು. ಅದರ ಮುಂದೆ ತುಪ್ಪದ ದೀಪವನ್ನು ಬೆಳಗಿಸಿ, ತ್ರಿಕೋನದ ಮಧ್ಯದಲ್ಲಿ 900 ಗ್ರಾಂ ಉದ್ದಿನ ಬೇಳೆ ಹಾಗೂ ಏಳು ಇಡೀ ಕೆಂಪು ಮೆಣಸಿನಕಾಯಿಗಳನ್ನು ಇರಿಸಬೇಕು. ನಂತರ ‘ಅಗ್ನೇ ಸಖಸ್ಯ ಬೋಧಿ ನಃ’ ಎಂಬ ಮಂತ್ರವನ್ನು 1008 ಬಾರಿ ಅಥವಾ ಕನಿಷ್ಠ 108 ಬಾರಿ ಜಪಿಸಬೇಕು. ಪೂಜೆ ಮುಗಿದ ಬಳಿಕ ಬಳಸಿದ ವಸ್ತುಗಳನ್ನು ನದಿ ಅಥವಾ ಕೆರೆಗೆ ಹರಿಬಿಟ್ಟರೆ, ವ್ಯಾಪಾರ ಸುಗಮವಾಗುತ್ತದೆ ಮತ್ತು ಸಾಲದಿಂದ ಮುಕ್ತಿ ಪಡೆಯಬಹುದು ಎನ್ನಲಾಗುತ್ತದೆ.

Astro Tips: ಪ್ರತಿದಿನ ಈ ಮಂತ್ರ ಪಠಿಸುವುದರಿಂದ ಒತ್ತಡದಿಂದ ಮುಕ್ತರಾಗುತ್ತೀರಿ

ಮಕ್ಕಳ ವಿವಾಹ ವಿಳಂಬ ಸಮಸ್ಯೆಗೆ ಪರಿಹಾರ

ಮಕ್ಕಳ ವಿವಾಹ ಕಾರ್ಯಗಳು ವಿಳಂಬವಾಗುತ್ತಿದೆಯಾದರೆ ಅಥವಾ ವಿವಾಹದಲ್ಲಿ ನಿರಂತರ ಅಡೆತಡೆಗಳು ಎದುರಾಗುತ್ತಿದ್ದರೆ, ಮಂಗಳವಾರ ಹರಿದ್ರಾ ಗಣಪತಿ ಮಂತ್ರ ಜಪಿಸುವುದು ಶ್ರೇಷ್ಠ. ‘ಓಂ ಹೂಂ ಗಂ ಗ್ಲೌಂ ಹರಿದ್ರಾ ಗಣಪತಯೇ ವರವರದ ಸರ್ವಜನ ಹೃದಯಂ ಸ್ತಂಭಯ ಸ್ತಂಭಯ ಸ್ವಾಹಾ’ ಎಂಬ ಮಂತ್ರವನ್ನು ಭಕ್ತಿಪೂರ್ವಕವಾಗಿ ಜಪಿಸುವುದರಿಂದ, ಮಗುವಿಗೆ ಯೋಗ್ಯ ವರ ಅಥವಾ ವಧು ಶೀಘ್ರವಾಗಿ ಸಿಗುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಕುಟುಂಬ ಕಲಹ ನಿವಾರಣೆಗೆ

ಕುಟುಂಬದಲ್ಲಿ ಪತಿ–ಪತ್ನಿ ಅಥವಾ ಮಕ್ಕಳ ನಡುವೆ ನಿರಂತರ ಭಿನ್ನಾಭಿಪ್ರಾಯಗಳು ಉಂಟಾಗುತ್ತಿದ್ದರೆ, ಮಂಗಳವಾರ ಮಾನಸಿಕವಾಗಿ ಮಂಗಳ ದೇವನ ಧ್ಯಾನ ಮಾಡಿ ‘ಓಂ ಕ್ರಮಂ ಕ್ರೀಂ ಕ್ರೌಂ ಸಃ ಭೌಮಾಯ ನಮಃ’ ಎಂಬ ಮಂತ್ರವನ್ನು 51 ಬಾರಿ ಜಪಿಸಬೇಕು. ಈ ಕ್ರಮದಿಂದ ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ ಶಾಸ್ತ್ರ ಹೇಳುತ್ತದೆ.

ಮಂಗಳ ದೋಷಕ್ಕೆ ಪರಿಹಾರ

ಜಾತಕದಲ್ಲಿ ಮಂಗಳ ದೋಷವಿದ್ದರೆ ಅಥವಾ ಮಂಗಳ ಗ್ರಹ ದುರ್ಬಲವಾಗಿದ್ದರೆ, ಮಂಗಳವಾರ ಬಾಳೆ ಎಲೆಯ ಮೇಲೆ ಅರಿಶಿನದಿಂದ ತ್ರಿಕೋನ ಗುರುತು ಮಾಡಿ, ಆ ತ್ರಿಕೋನದ ಮುಂದೆ 27 ಬೇವಿನ ಎಲೆಗಳನ್ನು ಇಟ್ಟು ತುಪ್ಪದ ದೀಪವನ್ನು ಬೆಳಗಿಸಬೇಕು. ಬಳಿಕ ‘ಅಗ್ನೇ ಸಖ್ಯಂ ವೃಣೀಮಹೇ’ ಎಂಬ ಮಂತ್ರವನ್ನು 108 ಬಾರಿ ಜಪಿಸಿ, ಪೂಜೆಯ ನಂತರ ಎಲ್ಲಾ ವಸ್ತುಗಳನ್ನು ನದಿ ಅಥವಾ ಕೆರೆಗೆ ಹರಿಬಿಟ್ಟರೆ ಮಂಗಳನ ಶುಭ ಫಲಗಳು ಲಭಿಸುತ್ತವೆ ಎಂಬ ನಂಬಿಕೆ ಇದೆ.

ಒಟ್ಟಾರೆ, ಮಂಗಳವಾರ ಆಂಜನೇಯ ಸ್ವಾಮಿ ಹಾಗೂ ಮಂಗಳ ದೇವರ ಆರಾಧನೆ ಮಾಡುವುದರಿಂದ ಜೀವನದಲ್ಲಿ ಶಕ್ತಿ, ಸಮೃದ್ಧಿ ಮತ್ತು ಸುಖ-ಶಾಂತಿ ಹೆಚ್ಚಾಗುತ್ತದೆ ಎಂಬುದು ಜ್ಯೋತಿಷ್ಯ ಶಾಸ್ತ್ರದ ಅಭಿಪ್ರಾಯವಾಗಿದೆ.