ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಿನ ಭವಿಷ್ಯ, ಮೇ 31, 2026: ಈ ರಾಶಿಯವರು ಇಂದು ವೃತ್ತಿಯ ಸ್ಥಳದಲ್ಲಿ ಬಹಳ ಜಾಗರೂಕರಾಗಿರಬೇಕು!

Horoscope Today May 31st: ಇಂದು ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಷಪಕ್ಷದ, ಪೌರ್ಣಮಿ ತಿಥಿ, ಅನುರಾಧ ನಕ್ಷತ್ರದ, ಮೇ 31ನೇ ತಾರೀಖಿನ ಭಾನುವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಹೀಗಿದೆ..

ಈ ರಾಶಿಯಯವರು ಇಂದು ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ

ಇಂಟರ್ ನೆಟ್ ಚಿತ್ರ -

Profile
Pushpa Kumari May 31, 2026 7:00 AM

ಬೆಂಗಳೂರು: ಇಂದು ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷದ ,ಪೌರ್ಣಮಿ ತಿಥಿ, ಅನುರಾಧ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಇಲ್ಲಿದೆ.

ಮೇಷ ರಾಶಿ: ಅನುರಾಧ ನಕ್ಷತ್ರದ ಅಧಿಪತಿ ಶನಿ ಆಗಿರುವುದರಿಂದ ಹೆಚ್ಚಿನವರಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಗೆ ಇಂದು ಉತ್ತಮ ಫಲ ಇದ್ದರೂ ಕೆಲವು ವಿಚಾರದಲ್ಲಿ ತೊಂದರೆ ಕಾಡಬಹುದು. ಪ್ರೀತಿ ಪಾತ್ರರಿಂದ ನಿಮಗೆ ಯಾವುದೇ ಸಹಕಾರ ಸಿಗದೇ ಇರಬಹುದು‌

ವೃಷಭ ರಾಶಿ: ಈ ರಾಶಿಯವರಿಗೆ ಕಾರ್ಯಕ್ಷೇತ್ರದಲ್ಲಿ ದೊಡ್ಡದಾದ ಯಶಸ್ಸು ಪ್ರಾಪ್ತಿಯಾಗುತ್ತದೆ. ಧನ ಆಗಮನ ಪ್ರಾಪ್ತಿಯಾಗಲಿದ್ದು ಮನೆಯಲ್ಲಿ ಸಂತೋಷ, ಸಂಭ್ರಮ ಮನೆ ಮಾಡಲಿದೆ.

ಮಿಥುನ ರಾಶಿ: ಈ ರಾಶಿಗೆ ನಿಮ್ಮ ವ್ಯಕ್ತಿತ್ವ ಕಡೆ ಹೆಚ್ಚಿನ ಗಮನವನ್ನು ನೀವು ನೀಡಬೇಕಾಗುತ್ತದೆ. ಶತ್ರು ನಾಶ,ಶತ್ರು ಧ್ವಂಸ ವಾಗಲಿದ್ದು ಆತ್ಮವಿಶ್ವಾಸ ಹೆಚ್ಚಾಗಲಿದೆ

ಕಟಕ ರಾಶಿ: ಕಟಕ ರಾಶಿ ಅವರಿಗೆ ಬಹಳನೇ ಕಷ್ಟಕರವಾದ ದಿನವಾಗಿದೆ. ಮನಸ್ಸಿಗೆ ಬಹಳಷ್ಟು ಬೇಸರ ಕಾಡುವ ಸಾಧ್ಯತೆ ಇರ ಲಿದ್ದು ಜೀವನದಲ್ಲಿ ಜಿಗುಪ್ಸೆ ಹೆಚ್ಚಾಗಲಿದೆ. ಹಾಗಾಗಿ ಯಾವುದೇ ರೀತಿ ಆತಂಕ ಪಡಬೇಡಿ.

Vastu tips: ಶೌಚಾಲಯ ಮನೆಯ ಯಾವ ದಿಕ್ಕಿನಲ್ಲಿ ಇರಬೇಕು? ವಾಸ್ತು ನಿಯಮ ತಪ್ಪಿದ್ರೆ ಸಮಸ್ಯೆಗಳು ಕಾಡೋದು ಖಂಡಿತಾ!

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಮಿತ್ರರಿಂದ ಬಹಳನೇ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಆದರೆ ತಾಯಿಯ ಆರೋಗ್ಯ ಬಗ್ಗೆ ನೀವು ಗಮನ ವಹಿಸಬೇಕಾಗುತ್ತದೆ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಅತ್ಯುತ್ತಮವಾದ ದಿನವಾಗಿದೆ. ಎಲ್ಲಾ ಕೆಲಸದಲ್ಲಿ ಯಶಸ್ಸಿನ ಫಲ ಉಂಟಾಗುತ್ತದೆ. ನಿಮ್ಮ ಪರಾಕ್ರಮದಿಂದ ಎಲ್ಲರನ್ನು ನೀವು ಇಂದು ಜಯಸಲಿದ್ದೀರಿ.

ತುಲಾ ರಾಶಿ: ತುಲಾ ರಾಶಿ ಅವರಿಗೆ ಸ್ವಲ್ಪ ಕಷ್ಟಕರವಾದ ದಿನವಾಗಿದೆ. ಮನೆಯವರ ಜೊತೆ ನೆಮ್ಮದಿಯಿಂದ ನೀವು ಸಮಯ ಕಳೆಯಬಹುದು. ಕೆಲಸ ಕಾರ್ಯದಲ್ಲೂ ನಿಮಗೆ ಯಶಸ್ಸು ಪ್ರಾಪ್ತಿಯಾಗುತ್ತದೆ.

ವೃಶ್ಚಿಕ ರಾಶಿ: ಈ ರಾಶಿಗೆ ನಿಮ್ಮ ರಾಶಿಗೆ ಚಂದ್ರ ಬಂದಿರುವುದರಿಂದ ಮನಸ್ಸಿಗೆ ನೆಮ್ಮದಿ. ಹಿಂದಿನ ಎರಡು ಮೂರು ದಿನದಲ್ಲಿ ಇದ್ದ ನೋವೆಲ್ಲ ಮಾಯವಾಗುತ್ತದೆ.

ಧನಸ್ಸು ರಾಶಿ: ಧನಸ್ಸು ರಾಶಿಗೆ ಕಷ್ಟಕರವಾದ ದಿನವಾಗಿದೆ. ಮುಖ್ಯವಾದ ಯಾವುದೇ ನಿರ್ಧಾರ ಬೇಡ. ಯಾರು ಕೂಡ ನಿಮ್ಮ ಪರವಾಗಿ ಇರುವುದಿಲ್ಲ. ನಿಮ್ಮ ಮಾತಿನಿಂದ ತೊಂದರೆ ಉಂಟಾಗುವ ಸಾಧ್ಯತೆ ಕೂಡ ಇದೆ.

ಮಕರ ರಾಶಿ: ಮಕರ ರಾಶಿಯವರಿಗೆ ಅತ್ಯುತ್ತಮವಾದ ದಿನವಾಗಿದೆ. ‌ಇಷ್ಟಾರ್ಥ ಸಿದ್ದಿಯಾಗಲಿದ್ದು ಧನ ಆಗಮನವಾಗುತ್ತದೆ.

ಕುಂಭರಾಶಿ: ಈ ರಾಶಿಗೆ ಅತೀ ಲಾಭದಾಯಕ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಕಾರ್ಯಕ್ಷೇತ್ರದಲ್ಲಿ ಯಶಸ್ಸು ಕಾಣುತ್ತೀರಿ.

ಮೀನ ರಾಶಿ: ಮೀನ ರಾಶಿಗೆ ಉತ್ತಮವಾದ ದಿನವಾಗಿದೆ. ಹಿಂದಿನ ದಿನದಲ್ಲಿ ಇದ್ದ ನೋವೆಲ್ಲ ಪರಿಹಾರವಾಗುತ್ತದೆ.‌ ಹಿರಿಯರ ಹಾಗೂ ದೇವರ ಆಶೀರ್ವಾದದಿಂದ ಇಂದು ಶುಭ ಪ್ರಾಪ್ತಿ.