ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಿನ ಭವಿಷ್ಯ, ಸೆಪ್ಟೆಂಬರ್ 19, 2026: ಈ ರಾಶಿಗೆ ನಿಮ್ಮ ಪ್ರಯತ್ನಕ್ಕೆ ಉತ್ತಮ ಫಲ ಸಿಗುವ ದಿನ!

Horoscope Today September 19th: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ದಶಮಿ ತಿಥಿ, ಉತ್ತರಾಷಢ ನಕ್ಷತ್ರದ, ಸೆಪ್ಟೆಂಬರ್ 19 ನೇ ತಾರೀಖಿನ ಶನಿವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

ಉದ್ಯೋಗದಲ್ಲಿ ಜವಾಬ್ದಾರಿ ಹೆಚ್ಚಾಗಬಹುದು

ಇಂಟರ್ ನೆಟ್ ಚಿತ್ರ -

Profile
Pushpa Kumari Sep 19, 2026 6:02 AM

ಬೆಂಗಳೂರು: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ಉತ್ತರಾಷಢ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ.

ಮೇಷ ರಾಶಿ: ಈ ರಾಶಿಯವರಿಗೆ ಇಂದು ಮಧ್ಯಾಹ್ನವರೆಗೂ ಅದೃಷ್ಟ ಪರೀಕ್ಷೆ ನಡೆಯುತ್ತದೆ. ಮಧ್ಯಾಹ್ನ ಬಳಿಕ ಕಾರ್ಯ ಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸು ಸಿಗುತ್ತದೆ‌. ಹಾಗೂ ಅಂದುಕೊಂಡದ್ದನ್ನು ನೀವು ನೆರವೇರಿಸಬಹುದು‌

ವೃಷಭ ರಾಶಿ: ಈ ರಾಶಿಯವರಿಗೆ ಇಂದು ಮಧ್ಯಾಹ್ನವರೆಗೂ ಮನಸ್ಸಿಗೆ ಕಿರಿಕಿರಿ ಎನಿಸಬಹುದು. ಮಧ್ಯಾಹ್ನ ಬಳಿಕ ಮನಸ್ಸಿಗೆ ನೆಮ್ಮದಿ ಪ್ರಾಪ್ತಿಯಾಗುತ್ತದೆ. ತೊಂದರೆ ಎಲ್ಲವೂ ಬಗೆಹರಿಯುತ್ತದೆ.

ಮಿಥುನ ರಾಶಿ: ಇಂದು ಈ ರಾಶಿಗೆ ಉತ್ತಮವಾದ ದಿನವಾಗಿದೆ. ಮಧ್ಯಾಹ್ನ ವರೆಗೂ ಎಲ್ಲವೂ ನಿಮ್ಮ ಪರವಾಗಿ ಇರುತ್ತದೆ. ಆದರೆ ಮಧ್ಯಾಹ್ನ ಬಳಿಕ ಹಲವು ರೀತಿಯ ತೊಂದರೆಯನ್ನು ಎದುರಿಸಬೇಕಾಗಿ ಬರಬಹುದು.

ಕಟಕ ರಾಶಿ: ಕಟಕ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಆತ್ಮವಿಶ್ವಾಸದಿಂದ ನೀವು ಅಂದುಕೊಂಡ ಕೆಲಸ ಸಾಧಿಸುತ್ತೀರಿ. ಆದರೆ ಮಾತಿನಲ್ಲಿ ನಿಗಾ ಇಡುವುದು ಉತ್ತಮ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಕಷ್ಟಕರವಾದ ದಿನವಾಗಿದೆ. ಮಧ್ಯಾಹ್ನ ವರೆಗೆ ನಾನಾ ರೀತಿ ತೊಂದರೆ ಎದುರಾಗಬಹುದು. ಮಧ್ಯಾಹ್ನ ಬಳಿಕ ಶತ್ರುಗಳು ಹಿಮ್ಮೆಟ್ಟಬಹುದು . ಪಾರ್ಟ್ನರ್ಸ್ ಶೀಪ್ ವ್ಯವಹಾರದಲ್ಲಿ ಯಶಸ್ಸು

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಮಧ್ಯಾಹ್ನವರೆಗೂ ತೊಂದರೆ ಎದುರಿಸಬೇಕಾಗುತ್ತದೆ. ಆಸ್ತಿ ಪಾಸ್ತಿ ವಿಚಾರವಾಗಿ ಕಷ್ಟ. ಆದರೆ ಮಧ್ಯಾಹ್ನ ಬಳಿಕ ಕಾರ್ಯಕ್ಷೇತ್ರದಲ್ಲಿ ಅಭಿವೃದ್ಧಿಯಾಗಲಿದೆ.

Vastu Tips: ಈ ವಸ್ತುಗಳನ್ನು ಉಡುಗೊರೆಗಳನ್ನು ನೀಡಬೇಡಿ ಎನ್ನುತ್ತದೆ ವಾಸ್ತು ಶಾಸ್ತ್ರ!

ತುಲಾ ರಾಶಿ: ತುಲಾ ರಾಶಿ ಅವರಿಗೆ ಕಷ್ಟಕರವಾದ ದಿನವಾಗಿದೆ. ಕೆಲಸ ಕಾರ್ಯದಲ್ಲಿ  ದೊಡ್ಡದಾದ ತಿರುವು ಉಂಟಾಗುವ ಸಾಧ್ಯತೆ ಇರುತ್ತದೆ. ಮಧ್ಯಾಹ್ನ ಬಳಿಕ ನಾನಾ ರೀತಿಯ ತೊಂದರೆ ಎದುರಿಸಬೇಕಾಗಿ ಬರಬಹುದು.

ವೃಶ್ಚಿಕ ರಾಶಿ: ಈ ರಾಶಿಗೆ ಇಂದು ಮಧ್ಯಾಹ್ನವರೆಗೂ ನಾನಾ ರೀತಿಯ ಸಂಸಾರದ ತಾಪತ್ರಯಗಳು ಎದುರಾಗಬಹುದು. ಮಧ್ಯಾಹ್ನದ ಬಳಿಕ ಬಂಧು ಮಿತ್ರರ ಒಡನಾಟದಿಂದ ಯಶಸ್ಸು ಸಿಗುತ್ತದೆ‌.

ಧನಸ್ಸು ರಾಶಿ: ಧನಸ್ಸು ರಾಶಿಗೆ ಕಷ್ಟಕರವಾದ ದಿನವಾಗಿದೆ.  ಮನಸ್ಸಿಗೆ ನೆಮ್ಮದಿ ಇಲ್ಲ, ಆದರೆ ಮಧ್ಯಾಹ್ನ ಬಳಿಕ ಕೆಲವೊಂದು ಸಮಸ್ಯೆಗೆ ಪರಿಹಾರ ಸಿಗುತ್ತದೆ‌.

ಮಕರ ರಾಶಿ: ಮಕರ ರಾಶಿಯವರಿಗೆ ಮಧ್ಯಾಹ್ನ ವರೆಗೂ ನಾನಾ ರೀತಿಯ ಕಿರಿಕಿ ಉಂಟಾಗುವ ದಿನವಾಗಿದೆ. ಮಧ್ಯಾಹ್ನ ಬಳಿಕ ಕಾರ್ಯಕ್ಷೇತ್ರದಲ್ಲಿ ನೆಮ್ಮದಿ ಹಾಗೂ ಜಯ ಕಾಣುತ್ತೀರಿ‌

ಕುಂಭ ರಾಶಿ: ಈ ರಾಶಿಗೆ ಉತ್ತಮವಾದ ದಿನವಾಗಿದೆ. ಮಧ್ಯಾಹ್ನ ವರೆಗೂ ಕೆಲಸ ಕಾರ್ಯದಲ್ಲೂ ಹೆಚ್ಚಿನ ಯಶಸ್ಸು ಸಿಗುತ್ತದೆ. ಆದರೆ ಮಧ್ಯಾಹ್ನ ಬಳಿಕ ಕೆಲವು ಸಮಸ್ಯೆ ಎದುರಾಗಬಹುದು. ಸ್ನೇಹಿತರು ನಿಮ್ಮಿಂದ ದೂರ ವಾಗಬಹುದು

ಮೀನ ರಾಶಿ: ಮೀನ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಮಧ್ಯಾಹ್ನ ವರೆಗೂ ನಿಮ್ಮ ಕಾರ್ಯಕ್ಷೇತ್ರದಲ್ಲಿ ಹಾಗೂ ಕ್ರಿಯಾತ್ಮಕ ಕೆಲಸದಲ್ಲಿ ಯಶಸ್ಸು ಕಾಣುತ್ತೀರಿ. ಮಧ್ಯಾಹ್ನ ಬಳಿಕ ಕೆಲವೊಂದು ವಿಚಾರದಲ್ಲಿ ತೊಂದರೆ ಉಂಟಾಗಬಹುದು.