ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Astro Tips: ಶನಿವಾರ ಈ ಪರಿಹಾರ ಮಾಡಿದರೆ ಶನಿ ದೋಷ ನಿವಾರಣೆ; ಇಲ್ಲಿದೆ ಜ್ಯೋತಿಷ್ಯ ಶಾಸ್ತ್ರದ ಸಲಹೆ

ಶನಿವಾರವನ್ನು ಶನಿದೇವನ ಆರಾಧನೆಗೆ ವಿಶೇಷ ದಿನವೆಂದು ಪರಿಗಣಿಸಲಾಗುತ್ತದೆ. ಶನಿಯ ದುಷ್ಪರಿಣಾಮಗಳು ಹಾಗೂ ಜೀವನದ ಅಡೆತಡೆಗಳು ದೂರವಾಗಲಿ ಎಂಬ ನಂಬಿಕೆಯಿಂದ ಪ್ರಾಣಿ–ಪಕ್ಷಿಗಳಿಗೆ ಆಹಾರ ನೀಡುವುದು, ದಾನ ಮಾಡುವುದು, ಹನುಮಾನ್ ಚಾಲೀಸಾ ಪಠಿಸುವುದು ಸೇರಿ ಹಲವು ಪರಿಹಾರ ಕ್ರಮಗಳನ್ನು ಈ ದಿನ ಕೈಗೊಳ್ಳಲಾಗುತ್ತದೆ.

ಶನಿವಾರ ಈ ಪರಿಹಾರ ಕ್ರಮ ಮಾಡಿ

ಸಾಂದರ್ಭಿಕ ಚಿತ್ರ -

Profile
Sushmitha Jain Oct 3, 2026 6:03 PM

ಬೆಂಗಳೂರು: ಶನಿವಾರವನ್ನು ಶನಿದೇವನ ಆರಾಧನೆಗೆ ವಿಶೇಷವಾದ ದಿನವೆಂದು ಹಿಂದೂ ಧಾರ್ಮಿಕ ನಂಬಿಕೆಗಳಲ್ಲಿ ಪರಿಗಣಿಸಲಾಗುತ್ತದೆ. ಶನಿಯ ಪ್ರಭಾವದಿಂದ ಎದುರಾಗುವ ತೊಂದರೆಗಳು, ವಿಳಂಬಗಳು ಹಾಗೂ ಜೀವನದ ಅಡೆತಡೆಗಳು ದೂರವಾಗಲಿ ಎಂಬ ಉದ್ದೇಶದಿಂದ ಈ ದಿನ ಹಲವರು ವಿವಿಧ ಪೂಜೆ, ದಾನ ಹಾಗೂ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ವಿಶೇಷವಾಗಿ ಕಪ್ಪು ಬಣ್ಣಕ್ಕೆ ಸಂಬಂಧಿಸಿದ ವಸ್ತುಗಳ ದಾನ, ಪ್ರಾಣಿ–ಪಕ್ಷಿಗಳಿಗೆ ಆಹಾರ ನೀಡುವುದು, ಹನುಮಂತನ ಆರಾಧನೆ ಸೇರಿ ಹಲವು ಕ್ರಮಗಳನ್ನು ಶನಿವಾರ ಮಾಡುವುದು ಶುಭಕರ ಎಂಬ ನಂಬಿಕೆ ಇದೆ. ಹಾಗಾದರೆ ಜ್ಯೋತಿಷ್ಯ ಶಾಸ್ತ್ರದ ಸಲಹೆಯಂತೆ (Astro Tips) ಶನಿವಾರದಂದು ಯಾವೆಲ್ಲ ಪರಿಹಾರ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದನ್ನು ನೋಡೋಣ.

ಪ್ರಾಣಿ–ಪಕ್ಷಿಗಳಿಗೆ ಆಹಾರ ನೀಡಿ

ಶನಿವಾರ ಕಪ್ಪು ನಾಯಿ, ಕಪ್ಪು ಹಸುಗಳಿಗೆ ಆಹಾರ ನೀಡುವುದು ಹಾಗೂ ಕಪ್ಪು ಹಕ್ಕಿಗಳಿಗೆ ಧಾನ್ಯ ನೀಡುವುದು ಶುಭವೆಂದು ನಂಬಲಾಗುತ್ತದೆ. ಇದರಿಂದ ಜೀವನದಲ್ಲಿರುವ ಅಡೆತಡೆಗಳು ಕಡಿಮೆಯಾಗುತ್ತವೆ ಎಂಬ ನಂಬಿಕೆ ಇದೆ.

ಕಾಗೆಗಳಿಗೆ ಆಹಾರ ಅರ್ಪಿಸಿ

ಎಣ್ಣೆಯಲ್ಲಿ ತಯಾರಿಸಿದ ಆಹಾರವನ್ನು ಬಡವರು ಅಥವಾ ಅಗತ್ಯವಿರುವವರಿಗೆ ದಾನ ಮಾಡಬಹುದು. ಅಲ್ಲದೆ, ನಾಲ್ಕು ಶನಿವಾರಗಳಂದು ಉದ್ದಿನ ಬೇಳೆಯನ್ನು ಕಾಗೆಗಳಿಗೆ ನೀಡುವ ಪದ್ಧತಿಯೂ ಕೆಲವು ಕಡೆಗಳಲ್ಲಿ ಇದೆ. ಇದರಿಂದ ಶನಿದೇವನ ಅನುಗ್ರಹ ದೊರೆಯುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ.

ಹರಿಯುವ ನೀರಿಗೆ ಇದನ್ನು ಹಾಕಿ

ಕೆಂಪು ರೇಷ್ಮೆ ದಾರವನ್ನು ತೆಗೆದುಕೊಂಡು ಅದರ ಉದ್ದಕ್ಕೆ ಅನುಗುಣವಾಗಿ ಕತ್ತರಿಸಿ, ಮಾವಿನ ಎಲೆಯೊಂದಿಗೆ ಶುದ್ಧ ನೀರಿನಿಂದ ತೊಳೆಯಬೇಕು. ಬಳಿಕ ‘ಓಂ ನಮಃ ಶಿವಾಯ’ ಮಂತ್ರವನ್ನು ಜಪಿಸುತ್ತಾ ದಾರವನ್ನು ಮಾವಿನ ಎಲೆಗೆ ಸುತ್ತಿ, ಶುದ್ಧವಾಗಿ ಹರಿಯುವ ನೀರಿಗೆ ಅರ್ಪಿಸುವ ಪದ್ಧತಿಯಿದೆ. ಇದರಿಂದ ಶನಿಯ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ ಎಂದು ನಂಬಲಾಗುತ್ತದೆ.

ಮನೆಯ ಪ್ರವೇಶದ್ವಾರದಲ್ಲಿ ಲಾಳ ಇರಿಸಿ

ಕಪ್ಪು ಕುದುರೆಯ ಹಿಂಭಾಗದ ಕಾಲಿನ ಲಾಳ ಅಥವಾ ಕುದುರೆಯ ಲಾಳವನ್ನು ಶನಿವಾರ ಮನೆಯ ಮುಖ್ಯ ಪ್ರವೇಶದ್ವಾರದಲ್ಲಿ ‘ಯು’ ಆಕಾರದಲ್ಲಿ ಇರಿಸುವ ಪದ್ಧತಿಯೂ ಇದೆ. ಇದರಿಂದ ನಕಾರಾತ್ಮಕತೆ ದೂರವಾಗಿ ಶುಭಫಲಗಳು ದೊರೆಯುತ್ತವೆ ಎಂಬ ನಂಬಿಕೆ ಇದೆ.

ಇರುವೆ ಮತ್ತು ಮೀನುಗಳಿಗೆ ಆಹಾರ ನೀಡಿ

ಶನಿವಾರ ಸಂಜೆ ಇರುವೆಗಳಿಗೆ ಹಿಟ್ಟು ಹಾಗೂ ಮೀನುಗಳಿಗೆ ಆಹಾರ ನೀಡುವುದನ್ನು ಸಹ ಧಾರ್ಮಿಕವಾಗಿ ಶುಭವೆಂದು ಪರಿಗಣಿಸಲಾಗುತ್ತದೆ. ಈ ಕ್ರಮದಿಂದ ಅದೃಷ್ಟದ ಬಾಗಿಲು ತೆರೆಯುತ್ತದೆ ಎಂಬ ನಂಬಿಕೆ ಕೆಲವು ಜ್ಯೋತಿಷ್ಯ ಪದ್ಧತಿಗಳಲ್ಲಿದೆ.

ಹಣಕಾಸಿನ ಸಮಸ್ಯೆ ದೂರವಾಗಬೇಕೇ? ಗುರುವಾರ ಈ 5 ಕೆಲಸ ಮಾಡಿ

ಕಪ್ಪು ವಸ್ತುಗಳನ್ನು ದಾನ ಮಾಡಿ

ಶನಿವಾರ ಸಂಜೆ ಬಡವರು ಅಥವಾ ನಿರ್ಗತಿಕರಿಗೆ ಕಪ್ಪು ಬಟ್ಟೆ, ಕಪ್ಪು ಎಳ್ಳು ಹಾಗೂ ಕಪ್ಪು ಕಾಳುಗಳನ್ನು ದಾನ ಮಾಡಬಹುದು. ಇಂತಹ ದಾನದಿಂದ ಶನಿದೇವನ ಕೃಪೆ ದೊರೆಯುತ್ತದೆ ಎಂಬ ನಂಬಿಕೆ ಇದೆ.

ಹನುಮಾನ್ ಚಾಲೀಸಾ ಪಠಿಸಿ

ಶನಿವಾರ ಸಂಜೆ ಹನುಮಾನ್ ಚಾಲೀಸಾವನ್ನು 11 ಬಾರಿ ಪಠಿಸುವುದರಿಂದ ಶನಿ ಸಂಬಂಧಿತ ತೊಂದರೆಗಳು ಕಡಿಮೆಯಾಗುತ್ತವೆ ಎಂಬ ಧಾರ್ಮಿಕ ನಂಬಿಕೆ ಇದೆ. ಶನಿದೇವನ ಆರಾಧನೆಯ ಜೊತೆಗೆ ಹನುಮಂತನ ಪೂಜೆಯನ್ನೂ ಈ ದಿನ ವಿಶೇಷವಾಗಿ ಮಾಡಲಾಗುತ್ತದೆ.

ಚಪ್ಪಲಿ ದಾನ ಮಾಡಿ

ಶನಿವಾರ ಬಳಸಿದ ಒಂದು ಜೊತೆ ಚಪ್ಪಲಿಯನ್ನು ಅಗತ್ಯವಿರುವವರಿಗೆ ದಾನ ಮಾಡುವ ಪದ್ಧತಿಯೂ ಇದೆ. ಜತೆಗೆ ಶನಿದೇವನಿಗೆ ಎಣ್ಣೆಯನ್ನು ಅರ್ಪಿಸುವುದನ್ನು ಶನಿಯ ಅನುಗ್ರಹಕ್ಕಾಗಿ ಕೈಗೊಳ್ಳುವ ಪರಿಹಾರವೆಂದು ಪರಿಗಣಿಸಲಾಗುತ್ತದೆ.