Daily Horoscope: ಸ್ವಾತಿ ನಕ್ಷತ್ರದ ಅಧಿಪತಿ ರಾಹುನಿಂದ ಇಂದು ಈ ರಾಶಿಯವರಿಗೆ ಅದೃಷ್ಟ
ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಶ್ವಯುಜ ಮಾಸದ ಶುಕ್ಷ ಪಕ್ಷದ, ಚತುರ್ದಶಿ ತಿಥಿ, ಸ್ವಾತಿ ನಕ್ಷತ್ರದ ಸೆಪ್ಟೆಂಬರ್ 25ನೇ ತಾರೀಕಿನ ಗುರುವಾರ ನವರಾತ್ರಿಯ ನಾಲ್ಕನೇ ದಿನ. ಈ ದಿನದ ಭವಿಷ್ಯ ಹೇಗಿರಲಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

Horoscope -

ಬೆಂಗಳೂರು: ವಿಶ್ವವಸುನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಶ್ವಯುಜ ಮಾಸದ ಶುಕ್ಷ ಪಕ್ಷದ, ಚತುರ್ದಶಿ ತಿಥಿ, ಸ್ವಾತಿ ನಕ್ಷತ್ರದ ಸೆಪ್ಟೆಂಬರ್ 25ನೇ ತಾರೀಕಿನ ಗುರುವಾರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.
ಮೇಷ ರಾಶಿ: ಇಂದು ಸ್ವಾತಿ ನಕ್ಷತ್ರ ಇದ್ದು ಇದರ ಅಧಿಪತಿ ರಾಹು. ಆದ್ದರಿಂದ ಎಲ್ಲ ರಾಶಿಯವರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಬಿಸಿನೆಸ್ ವ್ಯವಹಾರಗಳ ಬಗ್ಗೆ, ಮಿತ್ರರ ಬಗ್ಗೆ ಕೆಲವು ತಿಳಿಯದಿರುವ ವಿಚಾರಗಳು ನಿಮಗೆ ಗೊತ್ತಾಗಲಿದೆ. ಹಾಗಾಗಿ ಹುಷಾರಾಗಿ ಇರಬೇಕು. ಆದರೆ ನಂಬಿಕೆಯನ್ನು ಕಳೆದುಕೊಳ್ಳಬಾರದು.
ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಸಾಮಾಜಿಕ ಕೆಲಸ ವ್ಯವಹಾರಗಳಲ್ಲಿ ಮುಖ್ಯವಾದ ವಿಚಾರಗಳಲ್ಲಿ ಅಂದುಕೊಂಡದೆ ಇರುವಂತಹ ಬದಲಾವಣೆಗಳು ಆಗಲಿದೆ. ಮಿತ್ರರು ಮತ್ತು ಹಿತ ಶತ್ರುಗಳ ಕಡೆಗೆ ಗಮನ ನೀಡಬೇಕಾಗುತ್ತದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಹಣಕಾಸಿನ ವಿಚಾರದಲ್ಲಿ, ಪ್ರೀತಿ, ಪ್ರೇಮ ವಿಚಾರದಲ್ಲಿ ಮೋಸವಾಗುವ ಸಾಧ್ಯತೆ ಇದೆ. ಬಹಳಷ್ಟು ಜಾಗರೂಕರಾಗಿ ಇರಬೇಕಾಗುತ್ತದೆ.
ಕಟಕ ರಾಶಿ: ಕಟಕ ರಾಶಿವರಿಗೆ ಅವರ ತಾಯಿಯ ಜವಾಬ್ದಾರಿಯನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ. ನೀವು ಎಷ್ಟೇ ಪ್ರಯತ್ನ ಪಟ್ಟರೂ ತಾಯಿಯ ಮಾತಿನಂತೆ ಕೆಲಸಗಳನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಸೋಶಿಯಲ್ ಮೀಡಿಯಾ, ಟಿವಿ, ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿರುವವರಿಗೆ ಒಳಿತಾಗಲಿದೆ. ನಿಮ್ಮ ಕೆಲಸ ಕಾರ್ಯದಲ್ಲಿ ಇಂದು ಪ್ರಗತಿಯನ್ನು ಕಾಣಬಹುದು.
ಕನ್ಯಾ ರಾಶಿ: ಕನ್ಯಾ ರಾಶಿಯವರು ಮನೆಯ ಮುಖ್ಯವಾದ ವ್ಯವಹಾರದ ಬಗ್ಗೆ ಗಮನ ನೀಡಬೇಕಾಗುತ್ತದೆ. ನಿಮ್ಮ ಮುಖ್ಯವಾದ ವಸ್ತುಗಳನ್ನು ಇಂದು ಜೋಪಾನವಾಗಿ ಇಟ್ಟುಕೊಳ್ಳಿ.
ತುಲಾ ರಾಶಿ: ತುಲಾ ರಾಶಿಯವರಿಗೆ ನಿಮ್ಮ ರಾಶಿಯಲ್ಲೆ ಚಂದ್ರ ಇರುವುದರಿಂದ ಏನೋ ಸಾಧನೆ ಮಾಡುತ್ತೀನಿ ಅನ್ನುವ ಗೋಜಿನಲ್ಲಿ ಇರುತ್ತೀರಿ. ಆದರೆ ನೀವು ಅಂದುಕೊಂಡದೆಲ್ಲವನ್ನು ಸುಲಭವಾಗಿ ಮಾಡಲು ಸಾಧ್ಯ ಆಗುವುದಿಲ್ಲ. ಹಾಗಾಗಿ ತಾಳ್ಮೆಯಿಂದ ಇಂದು ಧ್ಯಾನಾದಿಗಳನ್ನು ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.
ಇದನ್ನು ಓದಿ:Vastu Tips: ಪೂಜೆ ವೇಳೆ ಗಂಟೆ ಬಾರಿಸುವುದರಿಂದ ಏನು ಪ್ರಯೋಜನ?
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಇಂದು ಸ್ವಲ್ಪ ಕಷ್ಟದ ದಿನವಾಗಲಿದೆ. ಇಂದು ಮುಖ್ಯ ವಾದ ಯಾವುದೇ ನಿರ್ಧಾರ ಮಾಡಲು ಹೋಗಬೇಡಿ. ಯಾವುದೇ ವ್ಯವಹಾರ ಮಾಡುವವರು ಬಹಳ ಹುಷಾರಾಗಿ ಇರಬೇಕಾಗುತ್ತದೆ. ನಿಮ್ಮ ವ್ಯಯ ಭಾವಕ್ಕೆ ಚಂದ್ರ ಬರುವುದರಿಂದ ಇಂದು ಹಣಕಾಸಿನ ವೆಚ್ಚ ಕೂಡ ಹೆಚ್ಚಾಗಬಹುದು. ಪೂಜೆ ಇತ್ಯಾದಿ ಕೆಲಸಗಳಿಗೆ ಹಣ, ಪೂಜಾ ವಸ್ತುಗಳನ್ನು ದಾನ ಮಾಡಿದರೆ ಒಳಿತು.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಇಂದು ಅತ್ಯುತ್ತಮ ದಿನವಾಗಲಿದೆ. ಮಿತ್ರರಿಂದ ಧನ ಆಗಮನವಾಗಿ ಇಷ್ಟಾರ್ಥ ಸಿದ್ದಿಯಾಗಲಿದೆ. ಗುಂಪು ಕೆಲಸಗಳಿಂದ ಬಹಳಷ್ಟು ಲಾಭವನ್ನು ನೀವು ಗಳಿಸುತ್ತೀರಿ.
ಮಕರ ರಾಶಿ: ಮಕರ ರಾಶಿಯವರಿಗೆ ಕಾರ್ಯ ಕ್ಷೇತ್ರದ ಜವಾಬ್ದಾರಿಗಳು ತುಂಬಾನೇ ಹೆಚ್ಚಾಗಿ ಇರುತ್ತದೆ. ಆದರೂ ಕಾರ್ಯ ಕ್ಷೇತ್ರದಲ್ಲಿ ದೊಡ್ಡ ಯಶಸ್ಸು ಕಾಣುತ್ತೀರಿ.
ಕುಂಭರಾಶಿ: ಕುಂಭ ರಾಶಿಯವರಿಗೂ ನಿಮ್ಮ ಭಾಗ್ಯವನ್ನು ಪರೀಕ್ಷೆ ಮಾಡ್ತಾ ಇದ್ದಾರೆ ಎನ್ನುವ ಭಾವನೆ ಮೂಡಬಹುದು. ಆದರೆ ಭಗವಂತನ ಆಶೀರ್ವಾದದಿಂದ ಎಲ್ಲವೂ ಸರಿ ಹೋಗಲಿದೆ.
ಮೀನ ರಾಶಿ: ಮೀನ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಯಾವುದೇ ಮುಖ್ಯವಾದ ನಿರ್ಧಾರಗಳು ಇಂದು ಬೇಡ. ನಿಮ್ಮ ಪ್ರೀತಿ ಪಾತ್ರರಿಂದ ಯಾವುದೇ ಸಹಕಾರಗಳು ನಿಮಗೆ ಸಿಗದೇ ಹೋಗಬಹುದು. ಇದರಿಂದ ಮನಸ್ಸಿಗೆ ಬೇಸರ ಆಗಬಹುದು. ನವರಾತ್ರಿ ಉತ್ಸವದ ಈ ದಿನ ಎಲ್ಲ ರಾಶಿಯವರು ದೇವಿಯ ಆರಾಧನೆ ಮಾಡಿ.