ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ವಿಶಾಖ ನಕ್ಷತ್ರದ ಅಧಿಪತಿ ಗುರುವಿನಿಂದ ಇಂದು‌ ಈ ರಾಶಿಗೆ ಒಳಿತು

ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಶ್ವಯುಜ ಮಾಸದ ಶುಕ್ಷ ಪಕ್ಷದ, ಪಂಚಮಿ ತಿಥಿ, ವಿಶಾಖ ನಕ್ಷತ್ರದ ಸೆಪ್ಟೆಂಬರ್ 26ನೇ ತಾರೀಕಿನ ಈ ದಿನ ನವರಾತ್ರಿಯ ಐದನೇ ದಿನ. ಈ ದಿನದ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಇಂದು ಈ ರಾಶಿಗೆ ಗುರುವಿನಿಂದ ಒಳಿತು

Horoscope -

ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಶ್ವಯುಜ ಮಾಸದ ಶುಕ್ಷ ಪಕ್ಷದ, ಪಂಚಮಿ ತಿಥಿ, ವಿಶಾಖ ನಕ್ಷತ್ರದ ಸೆಪ್ಟೆಂಬರ್ 26ನೇ ತಾರೀಕಿನ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಮೇಷ ರಾಶಿ: ಇಂದು ವಿಶಾಖ ನಕ್ಷತ್ರ ಇದ್ದು, ಇದರ ಅಧಿಪತಿ ಗುರು ಆಗಿದ್ದಾನೆ. ಆದ್ದರಿಂದ ಎಲ್ಲ ರಾಶಿಯವರಿಗೂ ಅತೀ ಹೆಚ್ಚಾಗಿ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಮೇಷ ರಾಶಿಯವರಿಗೆ ಮಧ್ಯಾಹ್ನವರೆಗೂ ಅತ್ಯುತ್ತಮ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಇದ್ದು, ಎಲ್ಲರಿಂದ ಸಹಕಾರ ಪ್ರಾಪ್ತಿಯಾಗುತ್ತದೆ. ಮಧ್ಯಾಹ್ನ ಬಳಿಕ ನಿಮ್ಮ ಪ್ರೀತಿ ಪಾತ್ರರಿಂದ ಅಕ್ಕರೆ ಸಿಗದೇ ಇರಬಹುದು. ಮನಸ್ಸಿಗೆ ಕ್ಷೇಷ ಕೂಡ ಆಗಬಹುದು.

ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಇಂದು ಅತ್ಯುತ್ತಮ ದಿನವಾಗಿದ್ದು ಸಾಮಾಜಿಕ ಕೆಲಸದಲ್ಲಿ ಬ್ಯುಸಿಯಾಗಿ ಇರುತ್ತೀರಿ. ಮಧ್ಯಾಹ್ನ ಬಳಿಕ ಕೆಲಸ ಬಿಟ್ಟು ನಿಮ್ಮ ಸಂಸಾರದ ಕಡೆಗೆ ಹೆಚ್ಚಿನ ಗಮನ ನೀಡುತ್ತೀರಿ.‌ ಆದರೆ ಎಲ್ಲರಿಂದಲೂ ಸಹಕಾರ ಪ್ರಾಪ್ತಿಯಾಗಲಿದ್ದು, ದಾಂಪತ್ಯದಲ್ಲಿ ನೆಮ್ಮದಿ ಇರುತ್ತದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಮಧ್ಯಾಹ್ನವರೆಗೂ ಮನಸ್ಸಿಗೆ ಕಿರಿಕಿರಿ ಇರುತ್ತದೆ. ಪ್ರೇಮ, ಪ್ರೀತಿ, ದಾಂಪತ್ಯ ವಿಚಾರದಲ್ಲೂ ನಿಮಗೆ ನೋವಾಗಬಹುದು. ಆದರೆ ಮಧ್ಯಾಹ್ನ ಬಳಿಕ ಅನೇಕ ರೀತಿಯ ಕೆಲಸ ಚಟುವಟಿಕೆಯಲ್ಲಿ ಪಾಲ್ಗೋಳ್ಳುತ್ತೀರಿ. ಆರೋಗ್ಯದಲ್ಲೂ ಸುಧಾರಣೆ ಆಗಲಿದೆ.

ಕಟಕ ರಾಶಿ: ಕಟಕ ರಾಶಿಯವರಿಗೆ ಮಧ್ಯಾಹ್ನವರೆಗೂ ಅನೇಕ ರೀತಿಯ ಯೋಚನೆಗಳು ಕಾಡುತ್ತಿರುತ್ತವೆ.‌ ಆಸ್ತಿ ಪಾಸ್ತಿ ಮುಂದಿನ ಭವಿಷ್ಯ, ತಾಯಿಯ ಆರೋಗ್ಯ ಬಗ್ಗೆ ಯೋಚನೆ ಇರುತ್ತದೆ. ಮಧ್ಯಾಹ್ನ ಬಳಿಕ ನಿಮ್ಮ ಮನಸ್ಸನ್ನು ಬದಲಾಯಿಸಿಕೊಂಡು ಕೆಲಸ ಕಾರ್ಯದಲ್ಲಿ ತೊಡಗಿಕೊಳ್ಳುತ್ತೀರಿ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಮಧ್ಯಾಹ್ನವರೆಗೂ ಮನಸ್ಸಿಗೆ ನೆಮ್ಮದಿ, ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಆದರೆ ಮಧ್ಯಾಹ್ನ ಬಳಿಕ ಮನಸ್ಸಿಗೆ ಕ್ಷೇಷ ಉಂಟಾಗಬಹುದು. ಕೋರ್ಟ್, ಆಸ್ತಿ ಪಾಸ್ತಿ ವಿಚಾರದಲ್ಲಿ ತೊಂದರೆ ಆಗಬಹುದು.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಮಧ್ಯಾಹ್ನವರೆಗೂ ಸಂಸಾರದ ಬಗ್ಗೆ ಅನೇಕ ಯೋಚನೆಗಳನ್ನು ಮಾಡುತ್ತೀರಿ.‌ ಮಧ್ಯಾಹ್ನ ಬಳಿಕ ಮನಸ್ಸಿಗೆ ನೆಮ್ಮದಿ ಸಿಗಲಿದ್ದು ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಇದರ ಜತೆ ನಿಮ್ಮ ಆತ್ಮವಿಶ್ವಾಸವನ್ನು ಚೆನ್ನಾಗಿ ಇಟ್ಟು ಕೊಳ್ಳುತ್ತೀರಿ.

ತುಲಾ ರಾಶಿ: ತುಲಾ ರಾಶಿಯವರಿಗೆ ಮಧ್ಯಾಹ್ನವರೆಗೂ ಮನಸ್ಸಿಗೆ ನೆಮ್ಮದಿ ಇರುತ್ತದೆ. ನೀವು ಹೇಳಿದ್ದೆಲ್ಲ ಅಂದುಕೊಂಡದೆಲ್ಲ ನಡೆಯುತ್ತ ಇರುತ್ತದೆ. ಮಧ್ಯಾಹ್ನ ಬಳಿಕ ಈ ಖುಷಿ ಕಾರ್ಯವನ್ನು ನಿಮ್ಮ ಕುಟುಂಬದ ಜತೆ ಹಂಚಿಕೊಂಡು ನೆಮ್ಮದಿ ಕಾಣುವೀರಿ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಮಧ್ಯಾಹ್ನವರೆಗೂ ನಾನಾ ಯೋಚನೆಗಳು ಕಾಡುತ್ತವೆ.‌ ಆರೋಗ್ಯದ ಬಗ್ಗೆಯೂ ಏರುಪೇರು ಆಗಬಹುದು. ನಿಮ್ಮ ಮಿತೃತ್ವದಲ್ಲೂ ಒಡಕು ಬರಬಹುದು. ಮಧ್ಯಾಹ್ನ ಬಳಿಕ ಮನಸ್ಸು ತಿಳಿಯಾಗಲಿದ್ದು, ಮುಂದೆ ಏನು ಮಾಡಬೇಕು ಎನ್ನುವ ಮಾರ್ಗ ದರ್ಶನ ಪ್ರಾಪ್ತಿಯಾಗಲಿದೆ.

ಇದನ್ನು ಓದಿ:Vastu Tips: ಮಲಗುವ ಕೋಣೆಯಲ್ಲಿ ರಾಧಾಕೃಷ್ಣರ ಚಿತ್ರ ಇಡಬಹುದೇ? ಏನು ಹೇಳುತ್ತದೆ ವಾಸ್ತು?

ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಮಧ್ಯಾಹ್ನವರೆಗೂ ದಿನ ಬಹಳವೇ ಚೆನ್ನಾಗಿ ಇರುತ್ತದೆ.‌ ಎಲ್ಲದರಲ್ಲೂ ಯಶಸ್ಸು ಜತೆಗೆ ಮಿತ್ರರಿಂದ ಧನ ಆಗಮನ‌ ಕೂಡ ಆಗಲಿದೆ. ಆದರೆ ಮಧ್ಯಾಹ್ನ ಬಳಿಕ ನಿಮ್ಮ ಮಿತ್ರರ ಜತೆ ಒಡಕು ಉಂಟಾಗಬಹುದು.

ಮಕರ ರಾಶಿ: ಮಕರ ರಾಶಿಯವರಿಗೂ ಮಧ್ಯಾಹ್ನವರೆಗೂ ಕಾರ್ಯ ಕ್ಷೇತ್ರದ ಜವಾಬ್ದಾರಿ ಹೆಚ್ಚಾಗಬಹುದು‌‌. ಜತೆಗೆ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗಬಹುದು. ಮಧ್ಯಾಹ್ನ ಬಳಿಕ ಇಷ್ಟಾರ್ಥ ಸಿದ್ದಿಯಾಗಿ ಧನ ಆಗಮನ‌ ಕೂಡ ಆಗಬಹುದು.

ಕುಂಭರಾಶಿ: ಕುಂಭ ರಾಶಿಯವರಿಗೆ ಮಧ್ಯಾಹ್ನವರೆಗೂ ಅದೃಷ್ಟ ಪರೀಕ್ಷೆ ನಡೆಯುತ್ತ ಇರುತ್ತದೆ. ಮಧ್ಯಾಹ್ನ ಬಳಿಕ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು, ಗೌರವ ಪ್ರಾಪ್ತಿಯಾಗುತ್ತದೆ. ಬಹಳ ಉತ್ತಮವಾಗಿ ಕೆಲಸವನ್ನು ಮುಗಿಸುತ್ತೀರಿ.

ಮೀನ ರಾಶಿ: ಮೀನ ರಾಶಿಯವರಿಗೆ ಮಧ್ಯಾಹ್ನವರೆಗೂ ನಾನಾ ರೀತಿಯ ಕಷ್ಟಗಳು ಕಾಡಬಹುದು. ಮುಖ್ಯವಾದ ವಿಚಾರಗಳಲ್ಲಿ ಯೋಚನೆ ಕಾಡಬಹುದು. ಮಧ್ಯಾಹ್ನ ಬಳಿಕ ಮನಸ್ಸಿಗೆ ನೆಮ್ಮದಿ‌ ಇರಲಿದ್ದು ಸಮಾಧಾನ ಪ್ರಾಪ್ತಿಯಾಗುತ್ತದೆ. ನವರಾತ್ರಿ ಉತ್ಸವದ ಈ ದಿನ ಎಲ್ಲ ರಾಶಿಯವರು ದೇವಿಯ ಆರಾಧನೆ ಮಾಡಿ.