ದಿನ ಭವಿಷ್ಯ ಅಕ್ಟೋಬರ್ 21, 2026: ಇಂದು ಯಾವುದೇ ಆತುರದ ನಿರ್ಧಾರ ಬೇಡ
Horoscope Today October 21st: ಪರಾಭವ ಸಂವತ್ಸರ, ದಕ್ಷಿಣಾಯಣ, ವರ್ಷಋತು, ಅಶ್ವಯುಜ ಮಾಸ, ಶುಕ್ಲ ಪಕ್ಷದ, ಏಕಾದಶಿ ತಿಥಿ, ದನಿಷ್ಠ ನಕ್ಷತ್ರದ ಅಕ್ಟೋಬರ್ 21ನೇ ತಾರಿಕಿನ ಈ ದಿನದ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಅಶ್ವಯುಜ ಮಾಸ, ಶುಕ್ಲ ಪಕ್ಷದ, ಶ್ರವಣ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ.
ಮೇಷ ರಾಶಿ: ಈ ರಾಶಿಯವರಿಗೆ ಉತ್ತಮ ದಿನವಾಗಿದ್ದು, ಉದ್ಯೋಗದಲ್ಲಿ ಹೊಸ ಜವಾಬ್ದಾರಿ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು.
ವೃಷಭ ರಾಶಿ: ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಯತ್ನಕ್ಕೆ ತಕ್ಕ ಮನ್ನಣೆ ಸಿಗಬಹುದು. ಕುಟುಂಬದಲ್ಲಿಯೂ ಸಂತೋಷದ ವಾತಾವರಣ ಇದ್ದು, ನೀವು ಅಂದುಕೊಂಡಂತೆ ಎಲ್ಲವನ್ನು ಸಾಧಿಸಬಹುದು.
ಮಿಥುನ ರಾಶಿ: ಹೊಸ ಅವಕಾಶಗಳು ಸಿಕ್ಕಿ ವ್ಯವಹಾರಗಳಲ್ಲಿ ಲಾಭ ಗಳಿಸಬಹುದು. ಆದರೆ ಯಾವುದೇ ರೀತಿ ಆತುರ ಪಡದೆ ಸಂಯಮದಿಂದ ವರ್ತಿಸಿ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ.
ಕಟಕ ರಾಶಿ: ಇಂದು ಕುಟುಂಬದ ಜತೆ ಸೇರಿ ಸಮಯವನ್ನು ಕಳೆಯುತ್ತೀರಿ. ನಿಮ್ಮ ಕುಟುಂಬದ ಹಿರಿಯರ ಸಲಹೆ ಉಪಯುಕ್ತವಾಗಬಹುದು. ಅದೇ ರೀತಿ ವಿಶ್ರಾಂತಿಗೆ ಸಮಯ ಮೀಸಲಿಡಿ.
ಸಿಂಹ ರಾಶಿ: ಇಂದು ಉತ್ತಮ ದಿನವಾಗಲಿದ್ದು ಯಶಸ್ಸು ನಿಮ್ಮದಾಗುತ್ತದೆ. ನಿಮ್ಮ ಪ್ರತಿಭೆಯನ್ನು ತೋರಿಸಲು ಉತ್ತಮ ಅವಕಾಶಗಳು ಒದಗಿ ಬರಬಹುದು.
ಕನ್ಯಾ ರಾಶಿ: ಉತ್ತಮ ದಿನವಾಗಲಿದ್ದು ಹಿಂದಿನ ಎರಡು ಮೂರು ದಿನಗಳ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕುಟುಂಬದ ಸಣ್ಣಪುಟ್ಟ ಸಮಸ್ಯೆಗಳನ್ನು ಮಾತುಕತೆಯಿಂದ ಬಗೆಹರಿಸಿ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ.
ಈ ವಸ್ತುಗಳನ್ನು ಉಡುಗೊರೆಗಳನ್ನು ನೀಡಬೇಡಿ ಎನ್ನುತ್ತದೆ ವಾಸ್ತು ಶಾಸ್ತ್ರ!
ತುಲಾ ರಾಶಿ: ನಿಮ್ಮ ಸ್ನೇಹಿತ ವರ್ಗದಿಂದ ಇಂದು ಹೆಚ್ಚಿನ ಬೆಂಬಲ ಸಿಗಬಹುದು. ಆದರೆ ಆದಾಯ ಮತ್ತು ಖರ್ಚಿನ ನಡುವೆ ಸಮತೋಲನ ಇರಲಿ.
ವೃಶ್ಚಿಕ ರಾಶಿ: ಇಂದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಚ್ಚರಿಕೆ ಅಗತ್ಯ. ಹಣಕಾಸಿನ ವ್ಯವಹಾರಗಳತ್ತ ಗಮನ ಹರಿಸಿ.
ಧನು ರಾಶಿ: ಉತ್ತಮ ದಿನವಾಗಲಿದ್ದು, ಹೊಸ ವ್ಯವಹಾರದಲ್ಲಿ ಯಶಸ್ಸು ಕಾಣುತ್ತೀರಿ. ಸ್ನೇಹಿತರಿಂದ ಉತ್ತಮ ಸಲಹೆ ಸಿಗಬಹುದು. ಪ್ರಯಾಣ ಮಾಡುವಾಗ ಎಚ್ವಚರಿಕೆ ವಹಿಸಿ.
ಮಕರ ರಾಶಿ: ನಿಮ್ಮ ಪರಿಶ್ರಮದಿಂದ ಕೆಲಸದಲ್ಲಿ ಪ್ರಗತಿ ಸಾಧಿಸುವ ಸಾಧ್ಯತೆ ಇದೆ. ಉಳಿತಾಯಕ್ಕೆ ಆದ್ಯತೆ ನೀಡಿ. ಕುಟುಂಬದ ಜವಾಬ್ದಾರಿಗಳನ್ನು ಇಂದು ಸರಿಯಾಗಿ ನಿಭಾಯಿಸುತ್ತೀರಿ.
ಕುಂಭ ರಾಶಿ: ಉತ್ತಮವಾದ ದಿನವಾಗಲಿದ್ದು, ಕಾರ್ಯಕ್ಷೇತ್ರದಲ್ಲಿ ಯಶಸ್ಸು ಕಾಣುತ್ತೀರಿ. ಹಣಕಾಸಿನ ನಿರ್ಧಾರಗಳಲ್ಲಿ ಆತುರ ಬೇಡ.
ಮೀನ ರಾಶಿ: ಕೆಲಸದಲ್ಲಿ ತಾಳ್ಮೆ ಮತ್ತು ಏಕಾಗ್ರತೆ ಯಶಸ್ಸಿಗೆ ನೆರವಾಗಬಹುದು. ಯಾವುದೇ ಒತ್ತಡಕ್ಕೆ ಒಳಗಾಗಬೇಡಿ.