ದಿನ ಭವಿಷ್ಯ, ಅಕ್ಟೋಬರ್ 20, 2026: ಯಾವುದೇ ಮುಖ್ಯ ನಿರ್ಧಾರ ಕೈಗೊಳ್ಳುವ ಮುನ್ನ ಯೋಚಿಸಿ
Horoscope Today October 20th: ಪರಾಭವ ಸಂವತ್ಸರ, ದಕ್ಷಿಣಾಯಣ, ವರ್ಷಋತು, ಅಶ್ವಯುಜ ಮಾಸ, ಶುಕ್ಲ ಪಕ್ಷದ, ನವಮಿ ತಿಥಿ, ಶ್ರವಣ ನಕ್ಷತ್ರದ ಅಕ್ಟೋಬರ್ 20ನೇ ತಾರೀಕಿನ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಅಶ್ವಯುಜ ಮಾಸ, ಶುಕ್ಲ ಪಕ್ಷದ, ಶ್ರವಣ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ.
ಮೇಷ ರಾಶಿ: ಈ ರಾಶಿಯವರಿಗೆ ಇಂದು ಕಷ್ಟದ ದಿನವಾಗಲಿದೆ. ಇಂದು ನೀವು ಹೆಚ್ಚಿನ ಭಾವುಕತೆಗೆ ಒಳಗಾಗುತ್ತೀರಿ. ಕೆಲವೊಂದು ನಿರ್ಧಾರ ಕೈಗೊಳ್ಳುವಾಗ ಜಾಗೃತರಾಗಿರಿ.
ವೃಷಭ ರಾಶಿ: ಇಂದು ಉತ್ತಮ ದಿನವಾಗಲಿದ್ದು, ಹಿಂದಿನ ಎರಡು ಮೂರು ದಿನಗಳ ತೊಂದರೆ ಎಲ್ಲವೂ ಮಾಯವಾಗುತ್ತದೆ. ಕಾರ್ಯಕ್ಷೇತ್ರದಲ್ಲೂ ನೀವು ಜಯವನ್ನು ಕಾಣುತ್ತೀರಿ.
ಮಿಥುನ ರಾಶಿ: ಇಂದು ಈ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಮುಖ್ಯವಾದ ನಿರ್ಧಾರ ಯಾವುದೂ ಬೇಡ. ನಿಮ್ಮ ಪ್ರೀತಿ ಪಾತ್ರರಿಂದ ಇಂದು ಸ್ವಲ್ಪ ದೂರವಿರಬೇಕಾಗಿ ಬರಬಹುದು.
ಕರ್ಕಾಟಕ ರಾಶಿ: ಇಂದು ಉತ್ತಮ ದಿನವಾಗಲಿದೆ. ಮನಸ್ಸಿಗೆ ಹೆಚ್ಚಿನ ನೆಮ್ಮದಿ ಸಿಗುತ್ತದೆ. ನಿಮ್ಮ ಪ್ರೀತಿ ಪಾತ್ರರಿಂದ ಕೂಡ ಸಹಕಾರ ಪ್ರಾಪ್ತಿಯಾಗುತ್ತದೆ.
ಸಿಂಹ ರಾಶಿ: ಇಂದು ಉತ್ತಮ ದಿನವಾಗಲಿದೆ. ಸೃಜನಶೀಲ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿಯೂ ಅಭಿವೃದ್ಧಿ ಕಾಣುತ್ತೀರಿ. ಶತ್ರುನಾಶ ನಿಶ್ಚಿತ.
ಮನೆಯಲ್ಲಿ ಇರುವೆಗಳು ಕಾಣಿಸಿದರೆ ಏನರ್ಥ? ಶುಭ-ಅಶುಭ ಸಂಕೇತಗಳು ಇವು
ಕನ್ಯಾ ರಾಶಿ: ಇಂದು ಕಷ್ಟದ ದಿನವಾಗಲಿದೆ. ಹಣಕಾಸಿನ ವಿಚಾರವಾಗಿ ತೊಂದರೆ ಎದುರಾಗುತ್ತದೆ. ಪ್ರೇಮ ಪ್ರೀತಿ ಪ್ರಕರಣದಲ್ಲಿ ಬೇಸರವಾಗಬಹುದು.
ತುಲಾ ರಾಶಿ: ಇಂದು ಉತ್ತಮ ದಿನವಾಗಲಿದೆ. ಕಾರ್ಯ ಕ್ಷೇತ್ರದಲ್ಲಿ ಹೆಚ್ಚಿನ ಜವಾಬ್ದಾರಿ ಇರಬೇಕಾಗುತ್ತದೆ. ಆದರೆ ಮನೆಯವರಿಂದ ದೂರ ಇರಬೇಕಾದ ಪರಿಸ್ಥಿತಿ ಬರಬಹುದು.
ವೃಶ್ಚಿಕ ರಾಶಿ: ಉತ್ತಮ ದಿನವಾಗಲಿದ್ದು, ಬಂಧು- ಬಾಂಧವರಿಂದ ನೆಮ್ಮದಿ ಕಾಣುತ್ತೀರಿ. ಸೋಷಿಯಲ್ ಮೀಡಿಯಾ ಹಾಗೂ ಸೇಲ್ಸ್ ಮಾರ್ಕೆಟಿಂಗ್ನಲ್ಲಿ ಇರೋರಿಗೆ ಶುಭ ಫಲ.
ಧನು ರಾಶಿ: ಇಂದು ಕಷ್ಟದ ದಿನ ನಿಮ್ಮದಾಗುತ್ತದೆ. ಮುಖ್ಯವಾದ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಮನೆಯ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ.
ಮಕರ ರಾಶಿ: ಇಂದು ಉತ್ತಮ ದಿನವಾಗಲಿದೆ. ಹಿಂದಿನ ಎರಡು ಮೂರು ದಿನಗಳ ತೊಂದರೆ ಎಲ್ಲವೂ ಮಾಯವಾಗುತ್ತದೆ. ಮುಂದಿನ ಕೆಲಸಗಳಿಗೆ ಸರಿಯಾದ ಮಾರ್ಗದರ್ಶನ ಕೂಡ ಸಿಗುತ್ತದೆ.
ಕುಂಭ ರಾಶಿ: ಕಷ್ಟದ ದಿನವಾಗಲಿದೆ. ಮುಖ್ಯವಾದ ನಿರ್ಧಾರ ಬೇಡ. ಕೆಲಸ ಕಾರ್ಯದಲ್ಲೂ ತೊಂದರೆ ಎದುರಾಗಬಹುದು. ನಿಮ್ಮ ಪರವಾಗಿ ಇಂದು ಯಾವುದೇ ಕೆಲಸ ನಡೆಯುವುದಿಲ್ಲ.
ಮೀನ ರಾಶಿ: ಉತ್ತಮ ದಿನವಾಗಲಿದ್ದು, ಕಾರ್ಯಕ್ಷೇತ್ರದಲ್ಲಿ ಯಶಸ್ಸು ಹಾಗೂ ನೆಮ್ಮದಿ ಸಿಗುತ್ತದೆ. ಗುಂಪು ಕೆಲಸದಿಂದ ಧನ ಲಾಭವಾಗುತ್ತದೆ.