ದಿನ ಭವಿಷ್ಯ, ಆಗಸ್ಟ್ 17, 2026: ಇಂದು ನಾಗರ ಪಂಚಮಿ: ಧನಾಗಮನ, ಶುಭ ಫಲ
Horoscope Today August 17th: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ಪಂಚಮಿ ತಿಥಿ, ಹಸ್ತ ನಕ್ಷತ್ರದ ಆಗಸ್ಟ್ 17ನೇ ತಾರೀಕಿನ ಈ ದಿನದ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಮಾಹಿತಿ ನೀಡಿದ್ದಾರೆ.
ಇಂಟರ್‌ನೆಟ್ ಚಿತ್ರ -
ಬೆಂಗಳೂರು: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ಹಸ್ತ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಗಳ ಭವಿಷ್ಯ ಹೇಗಿರಲಿದೆ ಎನ್ನುವ ಮಾಹಿತಿ ಇಲ್ಲಿದೆ.
ಮೇಷ ರಾಶಿ: ಇಂದು ಸಿಂಹ ಸಂಕ್ರಮಣವಾಗಿದ್ದು, ನಾಗರ ಪಂಚಮಿಯೂ ಹೌದು. ಹೀಗಾಗಿ ಕೆಲವು ರಾಶಿಯವರಿಗೆ ಶುಭದಾಯಕ ಫಲಗಳು ಗೋಚರವಾಗುತ್ತವೆ. ಈ ರಾಶಿಯವರಿಗೆ ಇಂದು ಮಿಶ್ರ ಫಲ ಇರಲಿದೆ. ಪ್ರೇಮ- ಪ್ರೀತಿ ಪ್ರಕರಣದಲ್ಲಿ ಸೋಲು ಉಂಟಾಗಬಹುದು. ಆದರೆ ಬುದ್ದಿವಂತಿಕೆ ಉಪಯೋಗಿಸಿ ಮಾಡುವ ಕೆಲಸದಲ್ಲಿ ಜಯ ಪ್ರಾಪ್ತಿಯಾಗುತ್ತದೆ.
ವೃಷಭ ರಾಶಿ: ಈ ರಾಶಿಯವರಿಗೆ ಚತುರ್ಥ ಭಾವಕ್ಕೆ ರವಿ ಪ್ರವೇಶ ಮಾಡುತ್ತಿದ್ದಾನೆ. ಹೀಗಾಗಿ ಇಂದು ಸ್ವಲ್ಪ ಕಷ್ಟದ ದಿನವಾಗಲಿದೆ. ಕೋರ್ಟ್, ಕಚೇರಿ ಹಾಗೂ ವ್ಯವಹಾರದಲ್ಲಿ ಇಂದು ತೊಂದರೆ ಎದುರಾಗುವ ಸಾಧ್ಯತೆ ಇದೆ.
ಮಿಥುನ ರಾಶಿ: ಇಂದು ಈ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಸೋಷಿಯಲ್ ಮೀಡಿಯಾ ಹಾಗೂ ಮಾಧ್ಯಮದಲ್ಲಿ ಕೆಲಸ ಮಾಡೋರಿಗೆ ಲಾಭದಾಯಕ ದಿನ. ಆಹ್ಲಾದಕರ ಕ್ಷಣದಲ್ಲಿ ನೀವು ಹಾದು ಹೋಗಲಿದ್ದೀರಿ.
ಕಟಕ ರಾಶಿ: ಕಟಕ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ತೊಂದರೆ ಎದುರಾಗುತ್ತದೆ. ಸಂಸಾರದ ತಾಪತ್ರಯಗಳು ಇಂದು ಹೆಚ್ಚಾಗಬಹುದು. ಮನೆಯಲ್ಲಿ ಜಗಳ ನಡೆಯಬಹುದು.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಕಷ್ಟದ ದಿನವಾಗಲಿದೆ. ವೈಯಕ್ತಿಕ ನಿರ್ಧಾರಗಳನ್ನು ಇಂದು ಬದಲಾಯಿಸಬೇಕಾಗುತ್ತದೆ. ಅದೇ ರೀತಿ ಮನಸ್ಸಿಗೆ ಕ್ಷೇಶವು ಉಂಟಾಗಬಹುದು.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಮುಖ್ಯವಾದ ವಿಚಾರದಲ್ಲಿ ಯಾರ ಸಹಕಾರ ಕೂಡ ನಿಮಗೆ ಪ್ರಾಪ್ತಿಯಾಗುವುದಿಲ್ಲ.
ತುಲಾ ರಾಶಿ: ತುಲಾ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಮನಸ್ಸಿಗೆ ನೆಮ್ಮದಿ ಇರುತ್ತದೆ. ಧನಾಗಮನದ ಸೂಚನೆಗಳು ಕೂಡ ಇವೆ. ಮಿತ್ರತ್ವದಲ್ಲಿ ಹೆಚ್ಚಿನ ಲಾಭ ಕಾಣುತ್ತೀರಿ.
ಜೇಡ್ ಸಸ್ಯವನ್ನು ಈ ದಿಕ್ಕಿನಲ್ಲಿ ಇಟ್ಟರೆ ಸಂಪತ್ತು ವೃದ್ಧಿ! ಫೆಂಗ್ ಶೂಯಿ ಹೇಳುವ ವಾಸ್ತು ನಿಯಮ ಇದು
ವೃಶ್ಚಿಕ ರಾಶಿ: ಈ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಇದ್ದು ಕೆಲಸ ಕಾರ್ಯದಲ್ಲಿ ಜಯ ಪ್ರಾಪ್ತಿಯಾಗುತ್ತದೆ. ಅಂದುಕೊಂಡ ಕೆಲಸ ಕಾರ್ಯದಲ್ಲಿ ಯಶಸ್ಸು ನಿಮ್ಮದಾಗುತ್ತದೆ
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಇಂದು ಭಾಗ್ಯ ಸ್ಥಾನಕ್ಕೆ ರವಿ ಬಂದಿದ್ದಾನೆ. ಹೀಗಾಗಿ ಉತ್ತಮ ದಿನ ನಿಮ್ಮದಾಗುತ್ತದೆ. ಆದರೆ ಇಂದು ಹಿರಿಯರ ಆಶೀರ್ವಾದ ಅಗತ್ಯ.
ಮಕರ ರಾಶಿ: ಮಕರ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಮುಖ್ಯವಾದ ಸಂಬಂಧದಲ್ಲಿ ಒಡಕು ಮೂಡಬಹುದು. ಹೀಗಾಗಿ ಮನಸ್ಸಿಗೆ ಬಹಳಷ್ಟು ಕ್ಷೇಶ ಇರುತ್ತದೆ.
ಕುಂಭ ರಾಶಿ: ಈ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಪ್ರೀತಿ ಪಾತ್ರರು ಹಾಗೂ ಮನೆಯಲ್ಲಿ ತೊಂದರೆ ಎದುರಾಗುತ್ತದೆ.
ಮೀನ ರಾಶಿ: ಮೀನ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಶತ್ರು ನಾಶವಾಗಲಿದೆ. ಕೆಲಸದಲ್ಲಿ ಅಡಚಣೆ ಹೆಚ್ಚಾಗಿದ್ದರೂ ಬುದ್ದಿವಂತಿಕೆಯಿಂದ ಯಶಸ್ಸು ಗಳಿಸುತ್ತೀರಿ.