ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಿನ ಭವಿಷ್ಯ, ಜೂನ್ 16, 2026: ಈ ರಾಶಿಯವರ ದುಃಖ ಇಂದು ದೂರವಾಗುವ ದಿನ!

Horoscope Today June 16th: ಇಂದು ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷದ ಪ್ರತಿಭಾ ತಿಥಿ, ಆರಿದ್ರಾ ನಕ್ಷತ್ರದ, ಜೂನ್ 16ನೇ ತಾರೀಖಿನ ಮಂಗಳವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಹೀಗಿದೆ..

ಈ ರಾಶಿಯವರಿಗೆ ಇಂದು ಅತೀ ಸುಖಕರವಾದ ದಿನ!

ಇಂಟರ್ ನೆಟ್ ಚಿತ್ರ -

Profile
Pushpa Kumari Jun 16, 2026 6:00 AM

ಬೆಂಗಳೂರು: ಇಂದು ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷದ, ಆರಿದ್ರಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಇಲ್ಲಿದೆ.

ಮೇಷ ರಾಶಿ: ಆರಿದ್ರಾ ನಕ್ಷತ್ರದ ಅಧಿಪತಿ ರಾಹು ಆಗಿದ್ದಾನೆ. ಹಾಗಾಗಿ ಹೆಚ್ಚಿನ ಜನರಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ..ಈ ರಾಶಿಗೆ ಇಂದು ಅತೀ ಉತ್ತಮವಾದ ದಿನವಾಗಿದೆ. ‌ಸೇಲ್ಸ್ ಮಾರ್ಕೆಟಿಂಗ್ ವ್ಯವಹಾರದಲ್ಲಿ ಹೆಚ್ಚಿನ ಯಶಸ್ಸು ಪ್ರಾಪ್ತಿ. ಸಹೋದರ ಹಾಗೂ ಸಹೋದರಿಯರಿಂದ ನೆಮ್ಮದಿ ಸಿಗುತ್ತದೆ.

ವೃಷಭ ರಾಶಿ: ಈ ರಾಶಿಯವರಿಗೆ ಇಂದು ಸಂಸಾರದ ತಾಪತ್ರಯ ಗಳು ಜಾಸ್ತಿಯಾಗುತ್ತವೆ. ಈ ಬಗ್ಗೆ ಹೆಚ್ಚಿನ ಗಮನವನ್ನು ನೀವು ನೀಡಬೇಕಾಗುತ್ತದೆ. ಅದೇ ರೀತಿ ಸಂಸಾರದ ಮುಖ್ಯವಾದ ನಿರ್ಧಾರಗಳನ್ನು ಇಂದು ನೀವು ತೆಗೆದುಕೊಳ್ಳಬೇಕಾಗುತ್ತದೆ.

ಮಿಥುನ ರಾಶಿ: ಇಂದು ನಿಮ್ಮ ರಾಶಿಗೆ ರವಿ ಪ್ರವೇಶ ಮಾಡುವುದರಿಂದ ಕಷ್ಟಕರವಾದ ದಿನವಾಗಿದೆ. ವೈಯಕ್ತಿಕವಾಗಿ ಕೆಲವು ಬದಲಾವಣೆ ಮಾಡಬೇಕಾಗುತ್ತದೆ. ಹೆಚ್ಚಿನ ಟೀಕೆಗಳು ಕೂಡ ಇಂದು ಕೇಳಿ ಬರಬಹುದು‌.

ಕಟಕ ರಾಶಿ: ಕಟಕ ರಾಶಿ ಅವರಿಗೆ ಕಷ್ಟಕರವಾದ ಗೋಚರ ಇದೆ. ಉದ್ಯೋಗದಲ್ಲಿ ಹಾಗೂ ಬಿಸೆನೆಸ್ ವ್ಯವಹಾರದಲ್ಲೂ ತೊಂದರೆ ಉಂಟಾಗಬಹುದು. ಯಾರ ಸಹಕಾರ ಕೂಡ ನಿಮಗೆ ಪ್ರಾಪ್ತಿಯಾಗುವುದಿಲ್ಲ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಧನ ಆಗಮನದ ಸೂಚನೆಗಳು ಇವೆ. ಮುಖ್ಯವಾದ ನಿರ್ಧಾರದಲ್ಲಿ ಇಂದು ಯಶಸ್ಸು ಕಾಣಬಹುದು‌.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಭಾಗ್ಯೋದಯವಾದ ದಿನ ವಾಗಿದ್ದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಕಾರ್ಯಕ್ಷೇತ್ರದಲ್ಲಿ ದೊಡ್ಡದಾದ ಯಶಸ್ಸು ನೀವು ಕಾಣುತ್ತೀರಿ.

Vastu Tips: ಮನೆಯ ಬಣ್ಣ ಆಯ್ಕೆಯಲ್ಲಿ ಎಚ್ಚರ! ಈ 3 ಬಣ್ಣಗಳ ಅತಿಯಾದ ಬಳಕೆ ನಕಾರಾತ್ಮಕ ಶಕ್ತಿ ಹೆಚ್ಚಿಸಬಹುದು ಎನ್ನುತ್ತದೆ ವಾಸ್ತು ಶಾಸ್ತ್ರ

ತುಲಾ ರಾಶಿ: ತುಲಾ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಹಿಂದಿನ ಎರಡು ಮೂರು ದಿನಗಳಲ್ಲಿ ಮನಸ್ಸಿನ ತೊಂದರೆ ಬಗೆಹರಿಯುತ್ತದೆ.

ವೃಶ್ಚಿಕ ರಾಶಿ: ಈ ರಾಶಿಗೆ ಕಷ್ಟಕರವಾದ ದಿನವಾಗಿದೆ. ನಾನಾ ರೀತಿಯ ಯೋಚನೆಗಳು ಇಂದು ಕಾಡಬಹುದು. ದಾಂಪತ್ಯ ಹಾಗೂ ಪ್ರೇಮ ಪ್ರೀತಿ ವಿಚಾರವಾಗಿ ಬೇಸರ ಉಂಟಾಗಬಹುದು.

ಧನಸ್ಸು ರಾಶಿ: ಧನಸ್ಸು ರಾಶಿಗೆ ಇಂದು ಉತ್ತಮವಾದ ದಿನವಾಗಿದೆ. ಪಾರ್ಟ್ನರ್ಸ್ ಶೀಪ್ ವ್ಯವಹಾರದಲ್ಲಿ ನೆಮ್ಮದಿ ಇದ್ದು ದಾಂಪತ್ಯದಲ್ಲೂ ಖುಷಿ ಸಿಗಬಹುದು.

ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮವಾದ ದಿನವಾಗಿದೆ ‌ ಕಾರ್ಯಕ್ಷೇತ್ರದಲ್ಲಿ ಇಂದು ಯಶಸ್ಸು ಸಿಗುತ್ತದೆ. ಇಂದು ಶತ್ರು ನಾಶವಾಗಲಿದ್ದು ಪರಿಶ್ರಮಕ್ಕೆ ಪ್ರತಿಫಲ ಸಿಗುತ್ತದೆ.

ಕುಂಭರಾಶಿ: ಈ ರಾಶಿಯವರಿಗೆ ಕಷ್ಟಕರವಾದ ದಿನವಾಗಿದೆ. ಕಾರ್ಯಕ್ಷೇತ್ರದಲ್ಲಿ ಬುದ್ದಿ ವಂತಿಕೆಯಿಂದ ಯಶಸ್ಸು ಕಾಣಬಹುದು. ಮಕ್ಕಳಿಂದ ಹೆಚ್ಚಿನ ಕಿರಿ ಕಿರಿ ಇದ್ದು ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ.

ಮೀನ ರಾಶಿ: ಮೀನ ರಾಶಿಯವರು ಮನೆಯ ಬಗ್ಗೆ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕಾಗುತ್ತದೆ. ಸಂಸಾರದ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಸರಿದೂಗಿಸಿಕೊಂಡು ಹೋಗಬೇಕಾಗುತ್ತದೆ.