ಉತ್ತರ ಪ್ರದೇಶದಲ್ಲಿ ಮನಕಲಕುವ ಘಟನೆ: ವಿಷಕಾರಿ ಹಾವಿನಿಂದ ಮನೆಯವರನ್ನು ರಕ್ಷಿಸಿ ಪ್ರಾಣ ಬಿಟ್ಟ ಶ್ವಾನ
Viral News: ಉತ್ತರ ಪ್ರದೇಶದಲ್ಲಿ ಮನಕುಲಕುವ ಘಟನೆಯೊಂದು ನಡೆದಿದೆ. ವಿಷಕಾರಿ ಹಾವಿನಿಂದ ಮನೆಯವರನ್ನು ರಕ್ಷಿಸಿ ಶ್ವಾನ ಬಳಿಕ ಪ್ರಾಣ ಬಿಟ್ಟಿದೆ. ಹಾವಿನ ಜತೆ ಹೋರಾಡಿ ಜೀವ ಕಳೆದುಕೊಂಡಿದೆ. ಈ ಭಾವುಕ ಘಟನೆ ನೆಟ್ಟಿಗರ ಕಣ್ನಂಚು ಒದ್ದೆ ಮಾಡಿದೆ.
ಉತ್ತರ ಪ್ರದೇಶದಲ್ಲಿ ಹಾವಿನೊಂದಿಗೆ ಹೋರಾಡಿ ಪ್ರಾಣ ಬಿಟ್ಟ ಶ್ವಾನ -
ಲಖನೌ, ಆ. 4: ಸಾಕು ಪ್ರಾಣಿಗಳನ್ನು ಪ್ರೀತಿಯಿಂದ ಆರೈಕೆ ಮಾಡಿದರೆ ಅವು ನಮಗೆ ದುಪ್ಪಟ್ಟು ಪ್ರೀತಿಯನ್ನು ನೀಡುತ್ತವೆ. ನಾವು ಕಷ್ಟದಲ್ಲಿದ್ದೇವೆ, ನೋವಿನಲ್ಲಿದ್ದೇವೆ ಎಂದು ಗೊತ್ತಾದಾಗ ಅದನ್ನು ಅರ್ಥೈಸಿಕೊಂಡು ಭಾವನೆಗಳ ಮೂಲಕ ಸ್ಪಂದಿಸುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಉತ್ತರ ಪ್ರದೇಶದಲ್ಲಿ ಮನಕುಲಕುವ ಘಟನೆಯೊಂದು (Viral News) ನಡೆದಿದೆ. ವಿಷಕಾರಿ ಹಾವಿನಿಂದ ಮನೆಯವರನ್ನು ರಕ್ಷಿಸಿ ಸಾಕಿ ನಾಯಿಯೊಂದು ಪ್ರಾಣ ಬಿಟ್ಟಿದೆ. ಈ ಭಾವುಕ ಘಟನೆ ನೆಟ್ಟಿಗರ ಕಣ್ಣಂಚು ಒದ್ದೆ ಮಾಡಿದೆ.
ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ವಿಷಪೂರಿತ ಹಾವಿನಿಂದ ಮನೆಯವರನ್ನು ರಕ್ಷಿಸುವ ಸಲುವಾಗಿ ಶ್ವಾನವೊಂದು ವಿಷಕಾರಿ ಹಾವಿನೊಂದಿಗೆ ಹೋರಾಡಿ ಕೊನೆಗೆ ಪ್ರಾಣ ಕಳೆದುಕೊಂಡಿದೆ. ಈ ಮುದ್ದಾದ ನಾಯಿಯ ಹೆಸರು ಟಾಮಿ. ಸುಮಾರು ಒಂದು ಗಂಟೆ ಕಾಲ ಹಾವಿನೊಂದಿಗೆ ಹೋರಾಡಿ ಮನೆ ಒಳಗೆ ಪ್ರವೇಶಿಸದಂತೆ ನೋಡಿಕೊಂಡಿದೆ. ನಾವು ಅವುಗಳನ್ನು ಪ್ರೀತಿಯಿಂದ ಸಾಕಿದರೆ ಪ್ರಾಣ ಕೊಡಲು ಸಿದ್ದವಾಗಿರುತ್ತವೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ.
ವಿಡಿಯೊ ನೋಡಿ:
वफादार कुत्ते ने मालिक को सांप से बचाकर खुद मर गया.....
— Ashish Paswan (@ashishpaswan0) August 4, 2026
आधी रात घर के बाहर एक खतरनाक कोबरा सांप आया। घर में पाले हुए लेब्राडॉग ने देखा और सांप का सामना करना लगे।
कुत्ते ने लगभग एक घंटे लड़ा और सांप को नोच-नोच मार डाला, सांप ने भी लड़ाई के समय कुत्ते को डस लिया।
कोबरा के डसने… pic.twitter.com/SwJSDSLgZi
ಕುಟುಂಬಸ್ಥರ ಪ್ರಕಾರ, ವಿಷಪೂರಿತ ಹಾವು ಮಧ್ಯ ರಾತ್ರಿ ಸುಮಾರು 2 ಗಂಟೆಗೆ ಮನೆಯ ಕಡೆಗೆ ಬಂದಿದೆ. ಒಂಬತ್ತು ವರ್ಷದ ಟಾಮಿ ಇದನ್ನು ಗ್ರಹಿಸಿ ಜೋರಾಗಿ ಬೊಗಳಲು ಪ್ರಾರಂಭಿಸಿದೆ. ಪ್ರವೇಶದ್ವಾರದ ಕಡೆ ಈ ವಿಷಕಾರಿ ಹಾವು ಬರುತ್ತಿದ್ದಂತೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಹಾವಿನೊಂದಿಗೆ ತೀವ್ರ ಹೋರಾಟ ನಡೆಸಿದೆ. ಕೊನೆಗೂ ಆ ವಿಷಕಾರಿ ಹಾವನ್ನು ಕೊಲ್ಲುವಲ್ಲಿ ಟಾಮಿ ಯಶಸ್ವಿಯಾಗಿದೆ
ನಿದ್ದೆಯ ಮಂಪರಿನಲ್ಲಿ ಬೈಕ್ ಸವಾರನನ್ನು ಅರ್ಧ ಕಿಲೋ ಮೀಟರ್ ಎಳೆದೊಯ್ದ ಉಬರ್ ಚಾಲಕ
ಕಾದಾಟದ ನಂತರ ನಾಯಿ ಕುಸಿದು ಬಿದ್ದಿದ್ದು ಸುಮಾರು ಒಂದು ಗಂಟೆಯ ನಂತರ ಹಾವಿನ ಕಡಿತದ ಪರಿಣಾಮದಿಂದ ಸಾವನ್ನಪ್ಪಿದೆ. 9 ವರ್ಷಗಳಿಂದ ಕುಟುಂಬದ ಜತೆ ಇದ್ದ ಟಾಮಿಯ ಆಗಲಿಕೆ ಎಲ್ಲರಿಗೂ ನೋವು ತಂದಿದೆ. ಟಾಮಿಯ ಅಂತ್ಯಕ್ರಿಯೆ ನಡೆಸುವ ಮೊದಲು ಕುಟುಂಬ ಸದಸ್ಯರು ಭಾವನಾತ್ಮಕ ವಿದಾಯ ಹೇಳಿದರು. ನೆರೆಹೊರೆಯವರು ಮತ್ತು ಸ್ಥಳೀಯರು ಶ್ವಾನದ ಧೈರ್ಯ, ಸಮರ್ಪಣಾ ಭಾವಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ನೆಟ್ಟಿಗರೊಬ್ಬರು ನಿಜಕ್ಕೂ ನಿಷ್ಠಾವಂತ ನಾಯಿ ಎಂದು ಬರೆದುಕೊಂಡಿದ್ದಾರೆ.