ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಿನ ಭವಿಷ್ಯ, ಸೆಪ್ಟೆಂಬರ್ 17, 2026: ನಿಮ್ಮ ನಿರೀಕ್ಷೆಯಂತೆ ಅಂದುಕೊಂಡ ಕೆಲಸ ಪೂರ್ಣಗೊಳ್ಳಲಿದೆ

Horoscope Today September 17th: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಕೃಷ್ಣೆ ಪಕ್ಷದ, ಷಷ್ಠಿ ತಿಥಿಯ, ಅನುರಾಧಾ ನಕ್ಷತ್ರದ ಸೆಪ್ಟೆಂಬರ್‌ 17ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿರಲಿದೆ ಎನ್ನುವ ಮಾಹಿತಿ ಇಲ್ಲಿದೆ.

ಇಂದು ನಿಮ್ಮ ಶ್ರಮಕ್ಕೆ ಉತ್ತಮ ಫಲಿತಾಂಶ ಸಿಗುವ ದಿನ

ಇಂಟರ್‌ನೆಟ್ ಚಿತ್ರ -

Profile
Pushpa Kumari Sep 17, 2026 6:00 AM

ಬೆಂಗಳೂರು: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ.

ಮೇಷ ರಾಶಿ: ಇಂದು ಉತ್ತಮ ದಿನವಾಗಿದ್ದು ಕೆಲಸದಲ್ಲಿ ಹೊಸ ಅವಕಾಶಗಳು ಸಿಗಬಹುದು. ಆದರೆ ಹಣಕಾಸಿನ ವಿಚಾರದಲ್ಲಿ ಎಚ್ಚರ ಅಗತ್ಯ.

ವೃಷಭ ರಾಶಿ: ನಿಮ್ಮ ಶ್ರಮಗಳಿಗೆ ಇಂದು ಉತ್ತಮ ಫಲಿತಾಂಶ ಸಿಗಲಿದೆ. ಉದ್ಯೋಗದಲ್ಲಿ ಬಾಸ್‌ಗಳ ಮೆಚ್ಚುಗೆ ಸಿಗಬಹುದು. ಆರ್ಥಿಕವಾಗಿಯೂ ಇಂದು ಬಹಳಷ್ಟು ಯಶಸ್ಸು ದೊರೆಯಲಿದೆ.

ಮಿಥುನ ರಾಶಿ: ಹೊಸ ಯೋಜನೆಗಳನ್ನು ಆರಂಭಿಸಲು ಉತ್ತಮ ದಿನವಾಗಲಿದೆ. ನಿಮ್ಮ ಬುದ್ಧಿವಂತಿಕೆ, ಕ್ರಿಯಾತ್ಮಕತೆ  ಎಲ್ಲರಿಗೂ ತಿಳಿಯುತ್ತದೆ.

ಕಟಕ ರಾಶಿ: ವೃತ್ತಿಯಲ್ಲಿ ಇಂದು ಜವಾಬ್ದಾರಿ ಹೆಚ್ಚಾಗಬಹುದು. ಅದರ ಜತೆ ಕುಟುಂಬದವರೊಂದಿಗೂ ಹೆಚ್ಚಿನ ಸಮಯ ನೀವು ಕಳೆಯಲಿದ್ದೀರಿ‌.

ಸಾಕುಪ್ರಾಣಿಗಳಿಗೂ ವಾಸ್ತು ಇದೆ! ಯಾವ ಪ್ರಾಣಿಗೆ ಯಾವ ದಿಕ್ಕು ಶುಭ ಗೊತ್ತಾ?

ಸಿಂಹ ರಾಶಿ: ಇಂದು ಆತ್ಮವಿಶ್ವಾಸದಿಂದ ಕೈಗೊಂಡ ಕೆಲಸಗಳು ಪೂರ್ಣಗೊಳ್ಳಬಹುದು. ನಿಮ್ಮ ಕೆಲಸಕ್ಕೆ ಸರಿಯಾದ ಪ್ರಶಂಸೆ ಕೂಡ ಸಿಗುತ್ತದೆ.

ಕನ್ಯಾ ರಾಶಿ: ಇಂದು ಉದ್ಯೋಗದಲ್ಲಿ ಬದಲಾವಣೆ ಅಥವಾ ಹೊಸ ಅವಕಾಶದ ಸೂಚನೆ ಇದೆ. ಆದರೆ ಕೆಲವು  ನಿರ್ಧಾರಗಳನ್ನು ಯೋಚಿಸಿ ತೆಗೆದುಕೊಳ್ಳಬೇಕಾಗುತ್ತದೆ.

ತುಲಾ ರಾಶಿ: ಇಂದು ನಿಮ್ಮ ಕೆಲಸದಲ್ಲಿ ಒತ್ತಡ ಹೆಚ್ಚಾಗಬಹುದು. ಆದರೆ ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಎಲ್ಲ ಕೆಲಸ ಕಾರ್ಯದಲ್ಲೂ ಜಯ ಕಾಣುತ್ತೀರಿ.

ವೃಶ್ಚಿಕ ರಾಶಿ: ನಿಮ್ಮ ರಾಶಿಗೆ ಇಂದು ರಾಜಯೋಗ ಇದೆ‌. ನೀವು ಅಂದುಕೊಂಡಿದ್ದೆಲ್ಲಾ ಸಾಧಿಸುತ್ತೀರಿ. ಬಾಕಿ ಕೆಲಸಗಳು ಪೂರ್ಣಗೊಳ್ಳಲಿವೆ.

ಧನು ರಾಶಿ: ಹೊಸ ಪರಿಚಯಗಳು ಭವಿಷ್ಯದಲ್ಲಿ ಸಹಾಯಕವಾಗಬಹುದು. ಉದ್ಯೋಗದಲ್ಲಿ ಪ್ರಗತಿ ಸಾಧ್ಯ.

ಮಕರ ರಾಶಿ: ವೃತ್ತಿಯಲ್ಲಿ ಉತ್ತಮ ಅವಕಾಶ ಸಿಗಲಿದೆ. ಆರ್ಥಿಕ ಸ್ಥಿತಿ ಸ್ಥಿರವಾಗಿರುತ್ತದೆ. ಆದರೆ ಹಿರಿಯರ ಆಶೀರ್ವಾದ ಬಹಳಷ್ಟು ಮುಖ್ಯ.

ಕುಂಭ ರಾಶಿ: ಹೊಸ ಕೆಲಸಗಳನ್ನು ಆರಂಭಿಸುವ ಮುನ್ನ ಬಹಳಷ್ಟು ಬಾರಿ ಯೋಚಿಸಿ. ಸ್ನೇಹಿತರ ನೆರವು ದೊರೆಯಲಿದೆ. ಮನಸ್ಸಿಗೆ ನೆಮ್ಮದಿ ಸಿಗುವ ದಿನ.

ಮೀನ ರಾಶಿ: ನಿಮ್ಮ ನಿರೀಕ್ಷೆಯಂತೆ ಅಂದುಕೊಂಡ ಕೆಲಸಗಳು ಪೂರ್ಣಗೊಳ್ಳಬಹುದು‌. ಹಣಕಾಸಿನಲ್ಲಿ ಲಾಭದ ಸಾಧ್ಯತೆ ಕೂಡ ಇಂದು ಇದೆ.