ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Astro Tips: ಆಮೆ ಉಂಗುರ ಯಾವ ರಾಶಿಗೆ ಲಾಭ, ಯಾವ ರಾಶಿಗೆ ಅಶುಭ? ಈ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಹೇಳೋದು ಏನು?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆಮೆ ಆಕೃತಿಯ ಉಂಗುರವನ್ನು ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಸರಿಯಾದ ವಿಧಾನದಲ್ಲಿ, ವಿಶೇಷವಾಗಿ ಬೆಳ್ಳಿಯ ಆಮೆ ಉಂಗುರವನ್ನು ಧರಿಸಿದರೆ ಧನಾಗಮನ, ಸಮೃದ್ಧಿ ಮತ್ತು ಮಾನಸಿಕ ಶಾಂತಿ ದೊರೆಯುತ್ತದೆ ಎಂಬ ನಂಬಿಕೆಯಿದೆ. ಆದರೆ ಕೆಲವು ರಾಶಿಯವರಿಗೆ ಇದು ಶುಭವಲ್ಲ ಎಂದು ಹೇಳಲಾಗಿದ್ದು, ಧರಿಸುವ ಮೊದಲು ನಿಯಮಗಳನ್ನು ಪಾಲಿಸುವುದು ಮುಖ್ಯ ಎಂದು ಜ್ಯೋತಿಷ್ಯರು ಸೂಚಿಸುತ್ತಾರೆ.

ಆಮೆ ಉಂಗುರ ಧರಿಸುವ ಮುನ್ನ ಈ ನಿಯಮದ ಬಗ್ಗೆ ತಿಳಿದುಕೊಳ್ಳಿ

ಆಮೆ ಉಂಗುರ -

Profile
Sushmitha Jain Feb 8, 2026 7:22 AM

ಬೆಂಗಳೂರು, ಫೆ. 8: ವೈದಿಕ ಹಾಗೂ ಜ್ಯೋತಿಷ್ಯ ಶಾಸ್ತ್ರಗಳಲ್ಲಿ (Astrology) ಆಮೆಯನ್ನು (Tortoise Ring) ಅತ್ಯಂತ ಪವಿತ್ರ ಹಾಗೂ ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ವಿಷ್ಣುವಿನ ದಶಾವತಾರಗಳಲ್ಲಿ ಒಂದಾದ ಕೂರ್ಮಾವತಾರದ ಪ್ರತೀಕವಾಗಿರುವುದರಿಂದ, ಆಮೆಗೆ ವಿಶೇಷ ಧಾರ್ಮಿಕ ಮಹತ್ವವಿದೆ. ಇದೇ ಕಾರಣದಿಂದಾಗಿ ಹಲವರು ಆಮೆಯ ಆಕೃತಿಯ ಉಂಗುರವನ್ನು ಧರಿಸುವುದನ್ನು ನಾವು ಕಾಣಬಹುದು. ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಆಮೆ ಉಂಗುರವನ್ನು ಧರಿಸುವುದರಿಂದ ಧನಾಗಮನ, ಸಮೃದ್ಧಿ ಹಾಗೂ ಜೀವನದಲ್ಲಿ ಸ್ಥಿರತೆ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ಸಂಪತ್ತಿನ ಅಧಿದೇವತೆ ಶ್ರೀ ಮಹಾಲಕ್ಷ್ಮಿಯ ಅನುಗ್ರಹ ಲಭಿಸುತ್ತದೆ ಎಂಬ ನಂಬಿಕೆಯೂ ಇದೆ.

ಶಾಸ್ತ್ರದ ಪ್ರಕಾರದ ಸಲಹೆಯಂತೆ ಆಮೆ ಉಂಗುರವು ಸಾಕಷ್ಟು ಸಕಾರಾತ್ಮಕ ಫಲಗಳನ್ನು ನೀಡುತ್ತದೆ. ಆದರೆ ಈ ಉಂಗುರವನ್ನು ಧರಿಸುವಾಗ ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಸರಿಯಾದ ವಿಧಾನದಲ್ಲಿ ಹಾಗೂ ನಿಗದಿತ ನಿಯಮಗಳಂತೆ ಧರಿಸಿದರೆ ಮಾತ್ರ ಆಮೆ ಉಂಗುರದಿಂದ ಲಭಿಸುವ ಪುಣ್ಯಫಲ ಮತ್ತು ಶುಭಫಲಗಳು ಸಂಪೂರ್ಣವಾಗಿ ದೊರೆಯುತ್ತವೆ. ತಪ್ಪಾದ ರೀತಿಯಲ್ಲಿ ಧರಿಸಿದರೆ ನಿರೀಕ್ಷಿತ ಫಲ ಸಿಗದೆ ತೊಂದರೆಗಳಿಗೂ ಕಾರಣವಾಗಬಹುದು ಎಂಬ ನಂಬಿಕೆ ಶಾಸ್ತ್ರಗಳಲ್ಲಿ ಇದೆ.

ಆಮೆ ಉಂಗುರವನ್ನು ಸಾಮಾನ್ಯವಾಗಿ ಬೆಳ್ಳಿಯಿಂದ ತಯಾರಿಸಿಕೊಂಡು ಧರಿಸುವುದು ಅತ್ಯಂತ ಶುಭವೆಂದು ಹೇಳಲಾಗುತ್ತದೆ. ಬೆಳ್ಳಿಯ ಆಮೆ ಉಂಗುರವನ್ನು ಧರಿಸುವುದರಿಂದ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು, ಮಾನಸಿಕ ಶಾಂತಿ ಹಾಗೂ ಆರ್ಥಿಕ ಪ್ರಗತಿ ಕಂಡುಬರುತ್ತದೆ. ಆದರೆ ಒಂದು ಪ್ರಮುಖ ಅಂಶವನ್ನು ಗಮನದಲ್ಲಿಡಬೇಕು. ಅಂದರೆ, ಆಮೆಯ ಮುಖವು ಧರಿಸುವ ವ್ಯಕ್ತಿಯ ಮುಖದ ಕಡೆಗೆ ತಿರುಗಿರುವಂತೆ ಉಂಗುರವನ್ನು ಧರಿಸಬೇಕು. ಈ ರೀತಿಯಲ್ಲಿ ಧರಿಸಿದರೆ ಮಾತ್ರ ಶುಭಫಲಗಳು ದೊರೆಯುತ್ತವೆ ಎಂದು ನಂಬಲಾಗಿದೆ.

ವಜ್ರ ಧಾರಣೆ: ಯಾವ ರಾಶಿಗೆ ಶುಭ? ಯಾರಿಗೆ ಅಶುಭ? ಜ್ಯೋತಿಷ್ಯ ಹೇಳುವುದೇನು?

ಇನ್ನು ಆಮೆ ಉಂಗುರವನ್ನು ಯಾವ ಬೆರಳಿಗೆ ಧರಿಸಬೇಕು ಎಂಬುದೂ ಮಹತ್ವದ್ದಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಉಂಗುರವನ್ನು ಮಧ್ಯಮ ಬೆರಳಿನಲ್ಲಿ ಅಥವಾ ತೋರು ಬೆರಳಿನಲ್ಲಿ ಧರಿಸಬಹುದು. ಈ ಎರಡೂ ಬೆರಳುಗಳಲ್ಲಿ ಧರಿಸಿದರೆ ಉತ್ತಮ ಫಲ ನೀಡುತ್ತದೆ ಎಂದು ಹೇಳಲಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆಮೆ ಉಂಗುರವು ಸಂಪತ್ತು, ಸಮೃದ್ಧಿ, ಶಾಂತಿ ಹಾಗೂ ಅದೃಷ್ಟವನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆಯಿದೆ. ವಿಷ್ಣುವಿನ ಆಶೀರ್ವಾದ ದೊರೆತು ಜೀವನದ ಅನೇಕ ಸಮಸ್ಯೆಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ಆದರೆ,ಎಲ್ಲ ರಾಶಿಯವರಿಗೆ ಇದು ಶುಭವಲ್ಲ ಎಂಬುದನ್ನು ಗಮನಿಸಬೇಕು.

ಯಾವೆಲ್ಲ ರಾಶಿಯವರಿಗೆ ಸೂಕ್ತ?

ಶಾಸ್ತ್ರದ ಪ್ರಕಾರ, ಮೇಷ, ಕನ್ಯಾ, ವೃಶ್ಚಿಕ ಮತ್ತು ಮೀನ ರಾಶಿಯವರು ಆಮೆ ಉಂಗುರವನ್ನು ಧರಿಸುವುದು ಶುಭವಲ್ಲ. ಈ ರಾಶಿಗಳು ನೀರಿನ ಅಂಶದೊಂದಿಗೆ ಸಂಬಂಧ ಹೊಂದಿರುವುದರಿಂದ, ಆಮೆ ಉಂಗುರವು ಅಶುಭ ಫಲ ನೀಡಬಹುದು ಎಂದು ಜ್ಯೋತಿಷ್ಯ ಹೇಳುತ್ತದೆ. ಆದರೆ ವೃಷಭ ಮತ್ತು ಮಕರ ರಾಶಿಗಳಲ್ಲಿ ಜನಿಸಿದವರಿಗೆ ಆಮೆ ಉಂಗುರವನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ಈ ರಾಶಿಯವರು ಆಮೆ ಉಂಗುರವನ್ನು ಧರಿಸಿದರೆ ಸಂತೋಷ, ಸಮೃದ್ಧಿ, ಆತ್ಮವಿಶ್ವಾಸ ಮತ್ತು ಪ್ರೀತಿ ಜೀವನದಲ್ಲಿ ಸುಧಾರಣೆ ಕಾಣಬಹುದು ಎಂದು ನಂಬಲಾಗಿದೆ.

ಆಮೆ ಉಂಗುರ ಧರಿಸುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸದಾ ಬೆಳ್ಳಿಯ ಆಮೆ ಉಂಗುರವನ್ನೇ ಧರಿಸಬೇಕು. ಆಮೆಯ ಬೆನ್ನಿನ ಮೇಲೆ “ಶ್ರೀ” ಚಿಹ್ನೆ ಇದ್ದರೆ ಇನ್ನಷ್ಟು ಶುಭವೆಂದು ಹೇಳಲಾಗುತ್ತದೆ. ಉಂಗುರವನ್ನು ಧರಿಸುವ ಮೊದಲು ಗಂಗಾಜಲದಿಂದ ಶುದ್ಧೀಕರಿಸಬೇಕು. ಜತೆಗೆ ಆಮೆಯ ಬಾಯಿ ನಿಮ್ಮ ಕಡೆಗೆ ಇರುವಂತೆ ಧರಿಸುವುದು ಅತ್ಯಂತ ಮುಖ್ಯ.