ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಅಪ್ಪಿತಪ್ಪಿಯೂ ಈ ಜಾಗಗಳಲ್ಲಿ ರಂಗೋಲಿ ಹಾಕಬೇಡಿ ಎನ್ನುತ್ತದೆ ವಾಸ್ತು; ಯಾಕೆ ಗೊತ್ತೇ?

ಸಾಮಾನ್ಯವಾಗಿ ಹಬ್ಬ, ಹರಿದಿನಗಳು, ವಿಶೇಷ ಸಂದರ್ಭದಲ್ಲಿ ಸಣ್ಣದು, ದೊಡ್ಡದು, ವಿವಿಧ ವಿನ್ಯಾಸದ ರಂಗೋಲಿಗಳನ್ನು ಹಾಕಲಾಗುತ್ತದೆ. ಆದರೆ ಇದು ಸರಿಯೇ? ಮನೆಯ ಒಳಾಂಗಣದಲ್ಲಿ ರಂಗೋಲಿ ಇಡಬಹುದೇ? ಇಡುವುದಾದರೆ ಅದು ಯಾವ ರೀತಿ ಇರಬೇಕು ? ಎನ್ನುವ ಕುರಿತು ಮಾಹಿತಿ ಇಲ್ಲಿದೆ.

ಬೆಂಗಳೂರು: ಹಬ್ಬ ಹರಿದಿನಗಳು, ವಿಶೇಷ ಶುಭ ಸಮಾರಂಭಗಳ ಸಮಯದಲ್ಲಿ ಮನೆಯ (vastu for home) ಒಳಾಂಗಣ, ಹೊರಾಂಗಣದಲ್ಲಿ ರಂಗೋಲಿ (Vastu for rangoli) ಹಾಕುವುದು ವಾಡಿಕೆ. ಆದರೆ ವಾಸ್ತು ಶಾಸ್ತ್ರವು (Vastu Shastra) ಮನೆಯ ಒಳಗೆ ರಂಗೋಲಿ ಹಾಕುವುದು ಸರಿಯಲ್ಲ ಎನ್ನುತ್ತದೆ. ಯಾಕೆಂದರೆ ಇದು ದುರದೃಷ್ಟವನ್ನು ಆಕರ್ಷಿಸುತ್ತದೆ. ಹಾಗಾದರೆ ಅಲಂಕಾರಕ್ಕೆ ಮನೆಯ ಒಳಾಂಗಣದಲ್ಲಿ ರಂಗೋಲಿ ಹಾಕಲೇಬಾರದೆ? ಒಂದು ವೇಳೆ ಅನಿವಾರ್ಯವಾದರೆ ಎಲ್ಲಿ, ಹೇಗೆ ಹಾಕಬೇಕು ಎನ್ನುವ ಪ್ರಶ್ನೆ ಕಾಡುವುದು ಸಹಜ. ಈ ಬಗ್ಗೆ ವಾಸ್ತು ಶಾಸ್ತ್ರಜ್ಞರು ಹೇಳುವುದು ಹೀಗೆ...

ಮನೆಯ ಒಳಾಂಗಣ ಅಥವಾ ಮೂಲೆಗಳಲ್ಲಿ ರಂಗೋಲಿ ಹಾಕಬಾರದು. ವಾಸ್ತು ನಿಯಮಕ್ಕೆ ಅನುಗುಣವಾಗಿ ಮನೆಯ ಪ್ರವೇಶ ದ್ವಾರದ ಬಳಿ ಹಾಕಬಹುದು. ಇದು ಲಕ್ಷ್ಮೀ ದೇವಿಯ ಆಶೀರ್ವಾದ ಮತ್ತು ಸಮೃದ್ಧಿಯನ್ನು ಆಹ್ವಾನಿಸುತ್ತದೆ.

ಎಲ್ಲಿ ರಂಗೋಲಿ ಹಾಕಬಾರದು?

ಸಾಮಾನ್ಯವಾಗಿ ಶುಭ ಸಮಾರಂಭಗಳ ವೇಳೆ ಮನೆಯನ್ನು ದೀಪಗಳು, ಹೂವುಗಳು, ರಂಗೋಲಿಗಳಿಂದ ಅಲಂಕರಿಸುವುದು ವಾಡಿಕೆ. ಇದು ಸಮೃದ್ಧಿಯ ಪ್ರತೀಕವೂ ಆಗಿರುತ್ತದೆ. ಮನೆಗೆ ಲಕ್ಷ್ಮೀ ದೇವಿಯನ್ನು ಆಹ್ವಾನಿಸಲು ಮನೆ ಸ್ವಚ್ಛಗೊಳಿಸಿ, ಅಲಂಕರಿಸಿ, ದೀಪಗಳನ್ನು ಬೆಳಗಿಸಿ, ರಂಗೋಲಿಯನ್ನು ಹಾಕಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ನಾವು ಮಾಡುವ ಪ್ರತಿಯೊಂದು ಕಾರ್ಯವೂ ಮನೆಯ ವಾಸ್ತುವಿನ ಮೇಲೆ ಪರಿಣಾಮ ಬೀರುತ್ತದೆ. ಹೀಗಿರುವಾಗ ಮನೆಯಲ್ಲಿ ನಾವಿಡುವ ರಂಗೋಲಿಯ ಸ್ಥಾನವು ಕೂಡ ಮನೆಯ ಶಕ್ತಿಯ ಮೇಲೆ ಪ್ರಭಾವ ಹೊಂದಿರುತ್ತದೆ. ತಪ್ಪಾದ ಜಾಗದಲ್ಲಿ ರಂಗೋಲಿ ಹಾಕುವುದರಿಂದ ಮನೆಗೆ ನಾವು ನಕಾರಾತ್ಮಕತೆಯನ್ನು ಆಹ್ವಾನಿಸಿದಂತಾಗುತ್ತದೆ.

ಇದನ್ನೂ ಓದಿ: Vastu Tips: ಚಪಾತಿ ತಯಾರಿಸುವಾಗ ಲೆಕ್ಕ ಮಾಡಬಾರದು ಯಾಕೆ ಗೊತ್ತೇ?

ವಾಸ್ತು ತಜ್ಞರ ಪ್ರಕಾರ ಮನೆಯ ಕೆಲವು ಮೂಲೆಗಳಲ್ಲಿ ರಂಗೋಲಿಗಳನ್ನು ಹಾಕಬಾರದು. ಇದು ಅಶುಭವೆಂದು ಪರಿಗಣಿಸಲಾಗುತ್ತದೆ. ಮುಖ್ಯವಾಗಿ ಮಲಗುವ ಕೋಣೆಗಳು, ಒಳಾಂಗಣದ ಮೂಲೆಗಳಲ್ಲಿ ರಂಗೋಲಿ ಹಾಕಕೂಡದು. ಮನೆಯ ಮುಖ್ಯ ದ್ವಾರದ ಬಳಿ ಅಥವಾ ಒಳಗೆ ಕೂಡ ರಂಗೋಲಿ ಬಿಡಿಸುವಂತಿಲ್ಲ. ಯಾಕೆಂದರೆ ಇದು ಸಕಾರಾತ್ಮಕ ಶಕ್ತಿಯ ಹರಿವನ್ನು ಅಡ್ಡಿಪಡಿಸುತ್ತದೆ ಎನ್ನಲಾಗುತ್ತದೆ.

ಎಲ್ಲಿ ರಂಗೋಲಿ ಬಿಡಿಸಬೇಕು?

ಮನೆಗೆ ಸುಖ, ಶಾಂತಿ, ಸಮೃದ್ಧಿಯನ್ನು ಆಕರ್ಷಿಸಲು ಮುಖ್ಯ ದ್ವಾರದ ಹೊರ ಪ್ರದೇಶ ಅಥವಾ ಅಂಗಳದಲ್ಲಿ ರಂಗೋಲಿಯನ್ನು ಬಿಡಿಸುವುದು ಒಳ್ಳೆಯದು. ಇದು ಸಂಪತ್ತು, ಸಂತೋಷ ಮತ್ತು ಸಕಾರಾತ್ಮಕ ಕಂಪನಗಳನ್ನು ಆಹ್ವಾನಿಸುತ್ತವೆ. ಹೂವುಗಳು, ಎಲೆಗಳು ಅಥವಾ ಲಕ್ಷ್ಮೀ ದೇವತೆ ಮತ್ತು ಅದೃಷ್ಟಕ್ಕೆ ಸಂಬಂಧಿಸಿದ ಸ್ವಸ್ತಿಕ ಮತ್ತು ಕಮಲದಂತಹ ಶುಭ ಚಿಹ್ನೆಗಳಿರುವ ರಂಗೋಲಿಯಿಂದ ಮನೆಯ ಪ್ರವೇಶದ್ವಾರವನ್ನು ಅಲಂಕರಿಸಬಹುದು.

ಇದನ್ನೂ ಓದಿ :Vastu Tips: ಮಕ್ಕಳ ಗಮನದ ಮೇಲೆ ಪರಿಣಾಮ ಬೀರುವ ಸಣ್ಣ ತಪ್ಪು ಯಾವುದು ಗೊತ್ತೇ?

ಸರಿಯಾದ ಸ್ಥಾನದಲ್ಲಿರುವ ರಂಗೋಲಿಯು ಮನೆಯನ್ನು ಸುಂದರಗೊಳಿಸುವುದಲ್ಲದೆ ವಾಸ್ತು ತತ್ತ್ವಗಳನ್ನು ಕೂಡ ಸಮತೋಲನದಲ್ಲಿ ಇರಿಸುತ್ತದೆ. ಹೀಗಾಗಿ ಮನೆಯಲ್ಲಿ ರಂಗೋಲಿ ಬಿಡಿಸುವಾಗ ಈ ಎಚ್ಚರಿಕೆಯ ಅಂಶಗಳ ಬಗ್ಗೆ ತಿಳಿದಿರುವುದು ಒಳ್ಳೆಯದು ಎನ್ನುತ್ತಾರೆ ವಾಸ್ತು ತಜ್ಞರು.

ವಿದ್ಯಾ ಇರ್ವತ್ತೂರು

View all posts by this author