Blood Moon: ನಿಮ್ಗೆ ಬ್ಲಡ್ ಮೂನ್ ನೋಡಲು ಆಗ್ಲಿಲ್ವಾ? ಕೆಂಪು ಚಂದಿರನ ಕಣ್ತುಂಬಿಕೊಳ್ಳಲು ಇಲ್ಲಿದೆ ಮತ್ತೊಂದು ಅವಕಾಶ
ಈ ವರ್ಷದ ಕೊನೆಯ ಚಂದ್ರಗ್ರಹಣ ಸೆಪ್ಟೆಂಬರ್ 7ರಂದು ಮುಗಿದಿದೆ. ಬ್ಲಡ್ ಮೂನ್ ಎಂದು ಕರೆಯಲ್ಪಡುವ ಈ ಚಂದ್ರಗ್ರಹಣ ಹಲವು ವಿಶೇಷತೆ ಹೊಂದಿದೆ. ಪೂರ್ಣ ಚಂದ್ರಗ್ರಹಣದ ವೇಳೆ ಚಂದ್ರ ಕೆಂಪಾಗಿ ಕಾಣುತ್ತಾನೆ. ಹೀಗಾಗಿ ಇದಕ್ಕೆ ಬ್ಲಡ್ ಮೂನ್ ಅಥವಾ ರಕ್ತ ಚಂದ್ರ ಎಂದು ಕರೆಯಲಾಗುತ್ತದೆ. ಇನ್ನು ಕೆಲವರಿಗೆ ನಾನಾ ಕಾರಣಗಳಿಂದ ಈ ವಿಸ್ಮಯವನ್ನು ಕಾಣಲು ಆಗಲಿಲ್ಲ, ಅಂತವರಿಗಾಗಿ ನಾವು ಹೊಸ ಸುದ್ದಿಯೊಂದನ್ನು ಹೊತ್ತು ತಂದಿದ್ದೇವೆ.

ಸಾಂದರ್ಭಿಕ ಚಿತ್ರ -

ನವದೆಹಲಿ: ಸೆಪ್ಟೆಂಬರ್ 7ರ ರಾತ್ರಿ ರಕ್ತ ಚಂದ್ರನ (Blood Moon) ಆಕರ್ಷಕ ದೃಶ್ಯವು ಭಾರತದ ಆಕಾಶದಲ್ಲಿ ಕಾಣಿಸಿಕೊಂಡಿತು. ಈ ಸಂಪೂರ್ಣ ಚಂದ್ರಗ್ರಹಣವು (Lunar Eclipse) ದೇಶಾದ್ಯಂತ ಜನರ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದೆ. ಆದರೆ, ಕೆಲವರಿಗೆ ನಾನಾ ಕಾರಣಗಳಿಂದ ಈ ವಿಸ್ಮಯವನ್ನು ಕಾಣಲು ಆಗಲಿಲ್ಲ, ಅಂತವರಿಗಾಗಿ ನಾವು ಹೊಸ ಸುದ್ದಿಯೊಂದನ್ನು ಹೊತ್ತು ತಂದಿದ್ದೇವೆ.
ಭಾರತದಲ್ಲಿ ಚಂದ್ರಗ್ರಹಣ
ಸೆಪ್ಟೆಂಬರ್ 7ರ ರಾತ್ರಿ 8:58 ರಿಂದ ಸೆಪ್ಟೆಂಬರ್ 8ರ ಬೆಳಗಿನ 2:25ರವರೆಗೆ ದೆಹಲಿಯಿಂದ ಬೆಂಗಳೂರಿನವರೆಗೆ ಈ ಚಂದ್ರಗ್ರಹಣ ದೇಶದಾದ್ಯಂತ ಕಾಣಿಸಿತು. ಏಷ್ಯಾ, ಆಫ್ರಿಕಾ, ಯುರೋಪ್, ಮತ್ತು ಆಸ್ಟ್ರೇಲಿಯಾದಲ್ಲೂ ಈ ದೃಶ್ಯ ಗೋಚರಿಸಿತು. ನಾಸಾದ ಪ್ರಕಾರ, ಇದು 2022ರ ನಂತರದ ಅತಿ ದೀರ್ಘ ಸಂಪೂರ್ಣ ಚಂದ್ರಗ್ರಹಣವಾಗಿದ್ದು, 2018ರ ನಂತರ ಭಾರತದಲ್ಲಿ ಎರಡನೇ ಸಂಪೂರ್ಣ ಕೆಂಪು ಚಂದಿರ ಕಂಡ ಘಟನೆಯಾಗಿದೆ. ಭೂಮಿಯು ಸೂರ್ಯ ಮತ್ತು ಚಂದ್ರನ ಮಧ್ಯೆ ಬಂದಾಗ, ಸೂರ್ಯನ ಬೆಳಕು ಭೂಮಿಯ ವಾತಾವರಣದ ಮೂಲಕ ಕೆಂಪು ಮತ್ತು ಕಿತ್ತಳೆ ಬಣ್ಣಗಳನ್ನು ಚಂದ್ರನ ಮೇಲೆ ಚೆಲ್ಲುತ್ತದೆ, ಇದರಿಂದ ಕೆಂಪು ಚಂದಿರ ಕಾಣಿಸಿಕೊಳ್ಳುತ್ತದೆ.
ಈ ಸುದ್ದಿಯನ್ನು ಓದಿ: Viral Video: ನಟ ಮಿಲಿಂದ್ ಸೋಮನ್ ಹಾಗೂ ತೇಜಸ್ವಿ ಸೂರ್ಯ ನಡುವೆ ಪುಷ್ ಅಪ್ ಸ್ಪರ್ದೆ..!; ಗೆದ್ದಿದ್ದು ಯಾರೂ ಗೊತ್ತಾ..?
ಮುಂದಿನ ಕೆಂಪು ಚಂದ್ರ ದರ್ಶನ ಯಾವಾಗ?
ಮುಂದಿನ ಸಂಪೂರ್ಣ ಚಂದ್ರಗ್ರಹಣವು ಮಾರ್ಚ್ 3, 2026ರಂದು ಕಾಣಿಸಲಿದ್ದು, ಭಾರತ, ಏಷ್ಯಾ, ಅಮೆರಿಕ, ಆಸ್ಟ್ರೇಲಿಯಾ, ಮತ್ತು ಪೆಸಿಫಿಕ್‌ನಲ್ಲಿ ಗೋಚರಿಸಲಿದೆ. ಇದಾದ ನಂತರ, ಡಿಸೆಂಬರ್ 31, 2028ರ ರಾತ್ರಿಯಿಂದ ಜನವರಿ 1, 2029ಕ್ಕೆ ವಿಸ್ತರಿಸುವ ಮತ್ತೊಂದು ಕೆಂಪು ಚಂದಿರ ಕಾಣಿಸಲಿದೆ, ಇದು ಭಾರತ ಸೇರಿದಂತೆ ಯುರೋಪ್, ಆಫ್ರಿಕಾ, ಮತ್ತು ಏಷ್ಯಾದಲ್ಲಿ ಗೋಚರವಾಗಲಿದೆ.
2026ರವರೆಗೆ, ಭಾಗಶಃ ಚಂದ್ರಗ್ರಹಣಗಳು ಕಾಣಿಸಿಕೊಳ್ಳಲಿವೆ. ಅಕ್ಟೋಬರ್ 28, 2023ರಂದು ಭಾರತದಲ್ಲಿ ಭಾಗಶಃ ಗ್ರಹಣ ಕಂಡುಬಂದಿತ್ತು, ಆದರೆ ಕೆಂಪು ಚಂದಿರನ ಆಕರ್ಷಣೆ ಇರಲಿಲ್ಲ. ಫೆಬ್ರವರಿ 20, 2027ರಂದು ಮತ್ತೊಂದು ಭಾಗಶಃ ಗ್ರಹಣ ಭಾರತದಲ್ಲಿ ಕಾಣಿಸಲಿದೆ. ಕೆಂಪು ಚಂದಿರ ಆಧುನಿಕ ಕಾಲದಲ್ಲಿ ಸಾಮೂಹಿಕ ವಿಸ್ಮಯವನ್ನು ಒಡಗೂಡಿಸುತ್ತದೆ. 2026ರ ಮಾರ್ಚ್‌ನಲ್ಲಿ ಮತ್ತೊಮ್ಮೆ ಕೆಂಪು ಚಂದಿರನ ಆಕರ್ಷಕ ದೃಶ್ಯವನ್ನು ಕಾಣಲು ತಯಾರಾಗಿರಿ.